ಚರ್ಚೆಪುಟ:ಶಿವಮೊಗ್ಗ

ಪ್ರತಿಕ್ರಿಯೆ ಬದಲಾಯಿಸಿ

೧.ಕೆ. ವಿ. ಸುಬ್ಬಣ್ಣ್, ತಪ್ಪು. ಕೆ. ವಿ. ಸುಬ್ಬಣ್ಣ - ಸರಿಯಾದ ಹೆಸರು. ಕನ್ನಡದ ಹೆಚ್ಚಿನ ಪದಗಳು ಹಾಗೂ ಹೆಸರುಗಳು 'ಅ' 'ಇ' 'ಉ' ಉಚ್ಚಾರದಿ೦ದ ಕೊನೆಗೊಳ್ಳುತ್ತವೆ.. Bschandrasgr ೦೮:೫೯, ೩ ಜನವರಿ ೨೦೧೪ (UTC) -ಸದಸ್ಯ:Bschandrasgr ಬಿ.ಎಸ್ ಚಂದ್ರಶೇಖರ -ಸಾಗರ

ಸಾಗರ ಜಿಲ್ಲೆಯ ಒತ್ತಾಯ ಬದಲಾಯಿಸಿ

  1. ಈ ಭಾಗದಲ್ಲಿ ಬರೆದಿರುವ ಲೇಖನ ಮಾಹಿತಿಯ ರೀತಿಯಾಗಿರದೆ ವೈಯಕ್ತಿಕ ಅಭಿಪ್ರಾಯವಿದ್ದಹಾಗಿದೆ - "ಸಾಗರ ನಗರವನ್ನು ಕೇಂದ್ರವಾಗಿಟ್ಟುಕೊಂಡು ಸಾಗರ ಜಿಲ್ಲೆಯನ್ನು ರಚಿಸುವುದು ಅತ್ಯಂತ ಸೂಕ್ತ" ( ಸಾಗರ ಜಿಲ್ಲೆಯ ಒತ್ತಾಯ).
  2. ಹಾಗೇ, ಈ ಭಾಗದಲ್ಲಿ ಯಾವುದೇ ಉಲ್ಲೇಖಗಳಿಲ್ಲದಿರುವುದೂ ಮತ್ತಷ್ಟು ಗೊಂದಲಕ್ಕೀಡುಮಾಡುತ್ತದೆ.

--ವಿಶ್ವನಾಥ/Vishwanatha (ಚರ್ಚೆ) ೦೮:೫೨, ೧ ಫೆಬ್ರುವರಿ ೨೦೧೬ (UTC)

ಶಿವಮೊಗ್ಗ ಜಿಲ್ಲಾಪಂಚಾಯತಿ ಅಧ್ಯಕ್ಷ ಚುನಾವಣೆ ೨೦೧೬ ಮೇ ಬದಲಾಯಿಸಿ

  • ೪/೫-೫-೨೦೧೬:ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ: ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಿ ಭದ್ರಾವತಿ ತಾಲ್ಲೂಕು ಹಿರಿಯೂರು ಕ್ಷೇತ್ರದ ಜೆಡಿಎಸ್‌ ಸದಸ್ಯೆ ಜ್ಯೋತಿ ಕುಮಾರ್ ಹಾಗೂ ಉಪಾಧ್ಯಕ್ಷೆ ಯಾಗಿ ಶಿವಮೊಗ್ಗ ತಾಲ್ಲೂಕು ಹಸೂಡಿ ಕ್ಷೇತ್ರದ ವೇದಾ ವಿಜಯ ಕುಮಾರ್‌ ಗುರುವಾರ ಆಯ್ಕೆಯಾದರು.
  • ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್–ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಯಾಗಿ ಜ್ಯೋತಿ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ಶಿಕಾರಿಪುರ ತಾಲ್ಲೂಕು ಈಸೂರು ಕ್ಷೇತ್ರದ ಅರುಂಧತಿ ಸ್ಪರ್ಧಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್–ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಯಾಗಿ ವೇದಾ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ಆರಗ ಕ್ಷೇತ್ರದ ಅಪೂರ್ವ ಶರಧಿ ಸ್ಪರ್ಧಿಸಿದ್ದರು.
  • ಜ್ಯೋತಿ ಹಾಗೂ ವೇದಾ ಪರವಾಗಿ 16, ಅರುಂಧತಿ ಹಾಗೂ ಅಪೂರ್ವ ಶರಧಿ ಅವರ ಪರವಾಗಿ 15 ಮತಗಳು ಬಂದವು. ಎಲ್ಲ ಸದಸ್ಯರು ಕೈ ಎತ್ತುವ ಮೂಲಕ ಮತ ಚಲಾಯಿಸಿದರು. ಒಂದು ಮತಗಳ ಅಂತರದಿಂದ ಕಾಂಗ್ರೆಸ್–ಜೆಡಿಎಸ್ ಅಭ್ಯರ್ಥಿಗಳು ಜಯಗಳಿಸಿದ್ದಾರೆ ಎಂದು ಚುನಾವಣಾ ಅಧಿಕಾರಿ ಎಂ.ಎನ್‌.ಜಯಂತಿ ಘೋಷಿಸಿದರು. ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ, ಜಿಲ್ಲಾ ಪಂಚಾಯ್ತಿ ಸಿಇಒ ರಾಕೇಶ್‌ ಕುಮಾರ್ ಉಪಸ್ಥಿತರಿದ್ದರು.
  • ಜಿಲ್ಲಾ ಪಂಚಾಯ್ತಿ 31 ಸದಸ್ಯರಲ್ಲಿ ಬಿಜೆಪಿ 15, ಕಾಂಗ್ರೆಸ್‌ 8, ಜೆಡಿಎಸ್ 7 ಹಾಗೂ ಒಬ್ಬರು ಪಕ್ಷೇತರ ಅಭ್ಯರ್ಥಿ ಇದ್ದಾರೆ.[[೧]]
  • Bschandrasgr (ಚರ್ಚೆ) ೧೦:೫೮, ೯ ಮೇ ೨೦೧೬ (UTC)
Return to "ಶಿವಮೊಗ್ಗ" page.