ಚರ್ಚೆಪುಟ:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ-೨೦೧೫
ವಿಕಿಪೀಡಿಯಾದಲ್ಲಿ ಇಂತಹ ಪುಟಗಳನ್ನು ಹಾಕಲು ಅವಕಾಶವಿದೆಯೇ? ಇದು ಪತ್ರಿಕಾವರದಿಯಂತೆ ಇದೆ. --Vikas Hegde (ಚರ್ಚೆ) ೧೩:೧೬, ೧೩ ಜನವರಿ ೨೦೧೬ (UTC)
ವಿಚಾರ-ಮಾಡಿ
ಬದಲಾಯಿಸಿ- ಪತ್ರಿಕಾ ವರದಿಗಳನ್ನು ಸರಿಯಾಗಿ ನೋಡಿ -ಅದರಲ್ಲಿ ಸ್ವಂತ ಅಭಿಪ್ರಾಯಗಳು ಇರುತ್ತವೆ. ನೀವು ಯಾವುದೇ ಪ್ರಚಲಿತ ವಿಷಯ ಕಅನ-ವಿಕಿಗೆ ಸೆರಿಸಲು ಪತ್ರಿಕೆಯ ವರದಿಯನ್ನೇ ಅವಲಂಬಿಸ ಬೇಕಾಗುವುದು; ನಿಮಗೆ ಪ್ರಚಲಿತವಿಷಯ ಕನ್ನಡ ವಿಕಿಗೆ ಹಾಕಲು ತೀರ್ಮಾನಿಸಿದಂತೆ ನೆನಪು , ಆದರೆ ಅದು ನೆರವೇರಿದಂತೆ ಕಾಣಲಿಲ್ಲ. ವಿಧಅನ ಪರಿಷತ್ ಚುನಾವಣೆ ವಿಷಯ ಹಾಕಿದ್ದೇನೆ. ಸೈನಾ ನೆಹವಅಲ್ ರ ಈಚಿನ ಸಾಧನೆ ಹಅಕ ಬೇಕೆಂದಿದ್ದೇನೆ. ಪತ್ರಿಕಾವರದಿಯಲ್ಲದೆ ಬೇರೆಆಕರಗಞಳಿದ್ದರೆ ತಿಳಿಸಿ. ಒಂದು ಎನ್ಸೈಕ್ಲೋಪೀಡಿಯಾಕ್ಕೆ ವಿಷಯ ಹಾಕಿದರೆ ಅದು ನೋಡುಗರ ವಿಷಯ ಅರಿಯುವ ಬಯಕೆಯನ್ನು ತಕ್ಕಮಟ್ಟಿಗೆ ಸೃಪ್ತಿಕೊಡುವಂತಿರಬೇಕು- ಸಮಗ್ರವಅಗಿರಬೇಕು. ಇಲ್ಲಿ ಈಗ ಅನೇಕ ದಿನಗಳಿಂದ ಹೊಸಬರಿಂದ ಬರುತ್ತಿರುವ ಅನೇಕ ಪುಟಗಳು ಕಳಪೆ ಭಾಷೆ-ಅಸಂಬದ್ಧ ವಾಕ್ಯಜೋಡಣೆಯಿಂದ ಕೂಡಿದೆ. ಅವು ಕನ್ನಡ ಭಾಷೆಗೆ ಕುಂದು ತರುವಂತಿವೆ. ತಾವು ತಜ್ಞರು ಅವನ್ನು ಸರಪಡಿಸಿ ಕನ್ನಡವಿಕಿಯ ಮರ್ಯಾದೆ ಯಾಕೆ ಉಳಿಸಬಾರದು.
- (ಉದಾ:--ಗ್ರೀಕ್ ಬಿಕ್ಕಟ್ಟು ಒಬ್ಬನೇ ಮಾಲೀಕ> broken Language --ಲೆಕ್ಕ ಪರಿಶೋಧನೆNo correct ref --ಅಕ್ಕಮಹಾದೇವಿ content Deleted; &--ಡಿಬೆಂಚರ್- Language is defective and faulty, (hopelessly bad) ; some sentence do not make sense)
- ಉಲ್ಲೇಖದ ಅಗತ್ಯವಿದೆ : ವಜ್ರಕಾಯ (ಚಲನಚಿತ್ರ) //ಬಿ. ಎಸ್. ಲಿಂಗದೇವರು //ಚಕ್ಕುಲಿ //ಸಬ್ಬಕ್ಕಿ ಈ ಪುಟಗಲನ್ನು ಉಲ್ಲೇಖವಿಲ್ಲದೆ ಹಾಕಿದವರು ಯಾರು?
- ಹೀಗೆ ಎಲ್ಲವನ್ನೂ ತಿಲಿದವರಂತೆ ಅನಗತ್ಯ ಟೀಕೆ ಮಾಡುವ ಕೆಲವು ತಜ್ಞರಿಂದ, ಉತ್ತಮ ಲೇಖನ ಹಾಕುವ ಕೆಲವರು ಕನ್ನಡ-ವಿಕಿಯಿಂದ ದೂರ ಸರಿದಿದ್ದಾರೆ. ಈ ಕಾರಣಕ್ಕಾಗಿಯೇ ನಾನು ಕನ್ನಡ-ವಿಕಿ ಕೆಲಸಮಾಡವುದನ್ನ ೭-೮ ತಿಂಗಳಿಂದ ನಿಲ್ಲಿಸಿದ್ದೆ. ಕೆಲವರ ಅಪೇಕ್ಷೆಯಂತೆ ಪುನಃ ಇದರಲ್ಲಿ ಕೆಲಸ ಆರಂಭಿಸಿದೆ.
- ಕನ್ನಡ ವಿಕಿ ಅಭವೃದ್ಧಿ ಪಡಿಸಲು ಹೊಣೆ ಹೊತ್ತ ತಾವು ಇದುವರೆಗೂ ಏಕೆ ಪ್ರಚಲಿತ ವಿಷಯ ಒಂದನ್ನಾದರೂ ಹಾಕಿಲ್ಲ -ಏಕೆ ಎಂದು ಕೇಳಬಹುದೇ??Bschandrasgr (ಚರ್ಚೆ) ೧೪:೦೬, ೧೩ ಜನವರಿ ೨೦೧೬ (UTC)
- ಹೊಂಗಸಂದ್ರ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಭಾರತಿ ರಾಮಚಂದ್ರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ - ಇಂತಹ ವಾಕ್ಯಗಳ ಬಗ್ಗೆ ನಾನು ಹೇಳುತ್ತಿದ್ದೇನೆ. ನಿಮ್ಮ ಲೇಖನದ ಫಾರ್ಮ್ಯಾಟಿಂಗ್ ಕೂಡ ಬಹಳ ಗೊಂದಲಮಯವಾಗಿದೆ. ಯಾವುದು ಹೆಡ್ದಿಂಗ್, ಯಾವುದು ಸಬ್ ಹೆಡ್ಡಿಂಗ್, ಎಲ್ಲೆಲ್ಲೋ ಲೈನ್ ಕೊನೆಯಾಗುವುದು, ಇದ್ದಕ್ಕಿಂದ್ದಂತೆ ಕೆಳಗಿನ ಸಾಲಿಗೆ ಬಂದಿರುವುದು, ನಡುನಡುವೆ ಅನಗತ್ಯ ದಪ್ಪ ಅಕ್ಷರಗಳು, ಸುಮ್ಮನೇ 'ನೋಡಿ' ಎಂಬ ಉಪಶೀರ್ಷಿಕೆ ಕೊಟ್ಟಿರುವುದು, ಅಕ್ಷರ ಹಾಗೂ punctuation ದೋಷಗಳು..ಇತ್ಯಾದಿ ಇತ್ಯಾದಿ ಎಲ್ಲವೂ ವಿಕಿಶೈಲಿಗೆ ವಿರುದ್ಧ. ಇದು ಈ ಪುಟದ ವಿಷಯಕ್ಕೆ ಚರ್ಚೆ ಮಾಡುವ ಪುಟ ಮಾತ್ರ. ಇನ್ನು ಬೇರೆ ಪುಟಗಳ ಬಗ್ಗೆ ನಿಮ್ಮ 'ಚರ್ಚೆ' ಇದ್ದರೆ ಆ ಲೇಖನದ ಚರ್ಚಾಪುಟದಲ್ಲಿ ಹಾಕಿ. ಅದು ನಾನು ರಚಿಸಿದ ಪುಟವಾದರೂ ಆದೀತು, ಯಾರಾದರೂ ಆದೀತು. ಇನ್ನಿತರ ವೈಯಕ್ತಿಕ ಚರ್ಚೆಗಳಿಗೆ ಈ ಪುಟ ಸೂಕ್ತವಲ್ಲ. --Vikas Hegde (ಚರ್ಚೆ) ೧೪:೧೬, ೧೩ ಜನವರಿ ೨೦೧೬ (UTC)
ಉತ್ತರ
ಬದಲಾಯಿಸಿನೀವು ಬಹಳ ಬುದ್ದಿವಂತೆರು, ಈ ಪುಟವನ್ನು ಈಗಷ್ಟೆ ಆರಂಭಿಸಿದ್ದೇನೆ ಅದನ್ನು ಮತ್ತೊಮ್ಮೆ ಓದಿ ಸರಿಪಡಿದಸಬೇಕಿದೆ. ಆಗಲೆ ನೀವು ತಕರಾರು ತೆಗೆದ್ದೀರಿ. ಅದು ಇನ್ನೂ ಪೂರ್ವಾಗಿಲ್ಲ. ಕನ್ನಡ-ವಿಕಿ ಜವಾಬ್ದಾರಿಯನ್ನು ಪೂರ್ಣ ವಹಿಸಿಕೊಂಡಂತೆ ಎಲ್ಲಾತಿಳಿದವರಂತೆ ಟೀಕೆ ಮಾಡುವ ನೀವು ಅದರಲ್ಲಾಗಿರುವ ತಪ್ಪನು ಸರಿಯಾಗಿ ಗುರುತಿಸಬೇಕಿತ್ತು; ಲೇಖನ ಪೂರ್ಣ ಆಗುವವರೆಗೆ ಕಾಯಬೇಕಿತ್ತು. "ಭಾರತಿ ರಾಮಚಂದ್ರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ", ಎನ್ನುವುದು ಬಹಳ ಮುಖ್ಯ. ಏಕೆಂದರೆ ಅಲ್ಲಿ ಇರುವುದು ೧೯೮ ಸ್ಥಾನಗಳು ; ಚುನಾವಣೆ ಮತ್ತು ಫಲಿತಾಂಶ ೧೯೭ ಕ್ಕೆ ಮಾತ್ರಾ ಬಂದಿದೆ. ಉಳಿದ ಒಂದು ಸ್ಥಾನದ ವಿಷಯ ಏನು ಎಂದು ತಿಳಿಸಬೇಕು -ಅದು ಅವಶ್ಯ ಎಂದು ನನಗೆ ತೋರಿದ್ದರಿಂದ ಹಾಕಿದ್ದೇನೆ; ನಿಮಗೆ ಅದು ಅವಶ್ಯವಲ್ಲ ಎಂದಿರಬಹುದು-ಅದು ನನಗೆ ತಿಳಿಯದು ; ತಿಳಿದರೂ ಅದನ್ನು ನಾನು ಒಪ್ಪದಿರಬಹುದು. ನನಗೆ ಮುಖ್ಯವೆಂದು ಕಂಡಲ್ಲಿ ದಪ್ಪ ಅಕ್ಷರ ಹಾಕಿದ್ದೇನೆ. ನಿಮಗೆ ಅದು ಅಮುಖ್ಯವಾಗಿರಬಹುದು. ನಿಮ್ಮ ಅಭಿಪ್ರಾಯದಂತೆ ಯಾರೂ ಲೇಖನ ಬರೆಯಲು ಬರುವುದಿಲ್ಲ. ಫಾರ್ಮ್ಯಾಟಿಂಗ್ -ಅಕ್ಷರ ಹಾಗೂ punctuation ದೋಷಗಳು,ದಪ್ಪ ಅಕ್ಷರಗಳು,-ಇವು ನಿಮ್ಮ ಅಭಿಪ್ರಾಯ.punctuation ದೋಷಗಳು-ನಾನು ಮತ್ತೊಮ್ಮೆ ಓದಿ ಸರಿಪಡಿಸ ಬೇಕು (ನನ್ನ ಟೈಪಿಂಗನಲ್ಲಿ ದೋಷಗಳಾಗುತ್ತವೆ; ನೀವು ಪರಿಣತಿ ಹೊಂದಿರಬಹುದು). ಅದರಲ್ಲೂ punctuation & ಫಾರ್ಮ್ಯಾಟಿಂಗ್ ನನಗೆ ಸರಿ ಕಂಡಿದ್ದು, ನಿಮಗೆ ಸರಿ ಕಾಣದಿರಬಹುದು. ನೀವು punctuation ಬಗೆಗೆ ತಜ್ಞರಿದ್ದಿರಬಹುದು. ನಾನು ಇಂಗ್ಲಿಷ್ punctuation ಪದ್ದತಿಯನ್ನು ಅನುಸರಿಸುತ್ತೇನೆ ಅಗತ್ಯ ಬಿದ್ದಲ್ಲಿ ಈ - & , &: ಈ ಚಿನ್ಹೆ ಗಳನ್ನು ಅರ್ಥಕ್ಕೆ ತಕ್ಕಂತೆ ಉಪಯೋಗಿಸುತ್ತೇನೆ , ಆದರೂ ಟೈಪಿಂಗ್ನಲ್ಲಿ ಮತ್ತು ಇತರೆ ಕೆಲವು ತಪ್ಪುಗಳು ಆಗಬಹುದು ಅದನ್ನು ಪದೇ ಪದೆ ನೋಡಿ ಸರಪಡಿಸಬೇಕಾಗುವುದು. ದಯವಿಟ್ಟು ಕತ್ತಿ ದೊಣ್ಣೆಯ ಕೆಲಸ ಬಿಟ್ಟು, ಕುಂಬಾರನ ಕಾರ್ಯದ,ತೋಟಗಾರನ ಕೆಲಸ ಮಾಡಿ."ಈಗಾಗಲೇ ಉಲ್ಲೇಖಗಳಿಲ್ಲದ ನೂರಾರು ಭಾಷಾದೋಷಗಳ ಅಸಂಬದ್ದ,ಅಲ್ಪ ಜ್ಞಾನದ ಲೇಖನಗಳು ಕನ್ನಡ-ವಿಕಿಯಲ್ಲಿ ತುಂಬಿಹೋಗಿದೆ." - ತಾವು ಅವನ್ನು ಮೊದಲು ಸರಿಪಡಿಸಿ, - ಕೇವಲ ತಕರಾರು ತೆಗೆಯುವುದರಲ್ಲಿ ನಿಮ್ಮ ಜಾಣತನ ತೋರಿದರೆ ಕನ್ನಡ-ವಿಕಿ ಬೆಳೆಯುವುದಿಲ್ಲ.ನನ್ನ ಅಭಿಪ್ರಾಯದಲ್ಲಿ - ಒಂದು ವಿಷಯದ ಲೇಖನದಲ್ಲಿ ಸಮಗ್ರತೆ ಇರಬೇಕು. ಓದುಗನಿಗೆ ಅರ್ಧ-ಅಲ್ಪ ಜ್ಞಾನ ಕೊಡುವ ಸಂಕ್ಷಿಪ್ತತೆ ಸರಿಯಲ್ಲ-ಅನಗತ್ಯ -ಪುಟದ ಕೊರತೆ ಇಲ್ಲ.. ದಯವಿಟ್ಟು ಸರ್ವಜ್ಞರಂತೆ ಇತರರ ತಪ್ಪು ತೋರಿಸುತ್ತಾ ಕೆಲಸ ಮಾಡುವವರಿಗೆ ತೊಡರುಗಾಲು ಕೊಡಬೇಡಿ. (ಕೇವಲ ಬೇರೆಯರ ತಪ್ಪು ಹುಡುಕುವುದು ದೊಡ್ಡ ಕೆಲಸವಲ್ಲ. ಯಜಮಾನಿಕೆಯಿಂದ ಕನ್ನಡ-ವಿಕಿ ಬೆಳೆಯುವುದಿಲ್ಲ.) ತಪ್ಪಿದ್ದರೆ ಚರ್ಚಿಸಿ ಸರಿಪಡಿಸಿ. ನೀವು ಬಿ.ಇ. ಪಧವೀಧರರೆಂದು ಭಾವಿಸುತ್ತೇನೆ. ಕನ್ನಡ-ವಿಕಿಯಲ್ಲಿ ನಿಮಗೆ ತಿಳಿದಂತೆ ವಿಜ್ಞಾನ ಲೇಖನಗಳ ಕೊರತೆ ಇದೆ.ಇಲ್ಲಿ ಅಗತ್ಯ ಲೇಖನಗಳ ಪಟ್ಟಿ ಕೊಟ್ಟಿದ್ದಾರೆ. ನೀವು ಬರೆದು ತೋರಿಸಿ .ಬಿ.ಇ. ಅಃವಾ ಪಿಎಚ್.ಡಿ ಆದ ಮಾತ್ರಕ್ಕೆ ಯಾರೂ ಸರ್ವಜ್ಞರೆಂದು ಭಾವಿಸಬಾರದು. ನನಗ ತಿಳಿದಿದ್ದೇ ಸರಿ ಎನ್ನುವುದೂ ಸರಿ ಅಲ್ಲ.ಎಷ್ಟೋ ಅಸಂಬದ್ಧ ಲೇಖನಗಳನ್ನು ಬಿಟ್ಟು, ಅಷ್ಟೆ ಪ್ರಾರಂಭಿಸಿದ ಲೇಖನಕ್ಕೆ ನಿಮ್ಮ ತಕರಾರು ನೋಡಿ ಬೇಸರವಾಯಿತು. ನೀವೇ ಈ ಲೇಖನ ಬರೆಯಬಹುದಿತ್ತು; ಆರು ತಿಂಗಳಿನಿಂದ--? //Bschandrasgr (ಚರ್ಚೆ) ೧೬:೫೮, ೧೩ ಜನವರಿ ೨೦೧೬ (UTC)
- ನೀವು ಇನ್ನೂ ಲೇಖನ ಮುಗಿಸಿರದಿದ್ದರೆ under construction ಟೆಂಪ್ಲೇಟ್ ಹಾಕಿ. ಇಷ್ಟೆಲ್ಲಾ ತಿಳಿದಿರುವ ನಿಮಗೆ ಈ ಟೆಂಪ್ಲೇಟ್ ಹಾಕುವುದು ಗೊತ್ತಿಲ್ಲದೇ ಇರುವುದಿಲ್ಲ ಎಂದುಕೊಳ್ಳುತ್ತೇನೆ. ನೀವು ಹಾಕುವ ಯಾವ ಲೇಖನವೂ ನಿಮ್ಮ ಹಕ್ಕಲ್ಲ, ನೀವು ಅದರ ಹಕ್ಕುಸ್ವಾಮ್ಯ ಹೊಂದಿರುವುದಿಲ್ಲ. ವಿಕಿಸಮುದಾಯ ಅದನ್ನು ಎಡಿಟ್ ಮಾಡಬಹುದು. ಅವರಿಗನಿಸಿದ ಟ್ಯಾಗ್ ಹಾಕಬಹುದು. ಚರ್ಚೆ ಮಾಡಬಹುದು. ವಿಕಿಪೀಡಿಯಾ ಎನ್ನುವುದು ಸಮುದಾಯದ ಕೆಲಸ. ನಮ್ಮದು ನಿಮ್ಮದು ವೈಯಕ್ತಿಕ ಅಲ್ಲ. ವಿಕಿಪೀಡಿಯಾದ ಗುಣಮಟ್ಟ ಉಳಿಸಿಕೊಳ್ಳೋಣ. ನಾನು ವಿಕಿಸಮುದಾಯದ ಒಬ್ಬ ಸದಸ್ಯ ಮಾತ್ರ. ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎನ್ನುವುದು present continuous ಕಾಲ. ಇನ್ನು ಐದು ವರ್ಷದ ನಂತರ ಇದನ್ನು ನೋಡಿದರೆ ಇನ್ನೂ ಆಯ್ಕೆಯಾಗಿದ್ದಾರೆ ಎಂದೇ ಇದ್ದರೆ ಅದು ವಿಕಿಮಾಹಿತಿ ಪುಟದಂತೆ ಇರುವುದಿಲ್ಲ ಬದಲಾಗಿ ಆ ದಿನದ ಪತ್ರಿಕಾ ವರದಿಯಂತೆ ಇರುತ್ತದೆ. ಇನ್ನು ಫಾರ್ಮ್ಯಾಟಿಂಗ್ ಅನ್ನುವುದು ನನ್ನ ವೈಯಕ್ತಿಕ ಆಯ್ಕೆ ಅಲ್ಲ. ವಿಕಿಯಲ್ಲಿ ಕೆಲವು ನೀತಿನಿಯಮಗಳಿವೆ. ವಿಶ್ವಕೋಶ ಬರವಣಿಗೆಗೆ ಒಂದು ಕ್ರಮ ಇರುತ್ತದೆ. ಪ್ರಬಂಧದಂತೆ, ವರದಿಯಂತೆ ಬರೆಯುವುದಲ್ಲ. ಇದು ಸಾಮಾನ್ಯ ತಿಳಿವಳಿಕೆ. ಇಂತಹ ಸೂಕ್ಷಗಳನ್ನು ತಿಳಿದುಕೊಳ್ಳೋಣ. ಇದೊಂದೇ ಅಲ್ಲದೇ ನೀವು ರಚಿಸಿದ ಬಹುತೇಕ ಪುಟಗಳೂ ಇಂತಹುದರಿಂದಲೇ ತುಂಬಿವೆ. ವಿಕಿಯಲ್ಲಿ ಬೇರೆ ಪುಟಗಳು ಸರಿಯಿಲ್ಲ ಎನ್ನಿಸಿದರೆ ನೀವೂ ಸರಿಮಾಡಬಹುದು. ನಮಗೆ ಕಂಡರೆ ನಾನೂ ಮಾಡುತ್ತೇನೆ. ನಿಮ್ಮ ಪುಟ 'ಇತ್ತೀಚೆಗಿನ ಬದಲಾವಣೆಗಳು' ಎಂಬಲ್ಲಿ ಮೇಲೆ ಕಂಡಿತು ಹಾಗಾಗಿ ಈ ಪುಟಕ್ಕೆ ಬಂದಿದ್ದು. ಇನ್ನುಳಿದಂತೆ ವೈಯಕ್ತಿಕ ಚರ್ಚೆಗಳು ಇಲ್ಲಿ ಸರಿಯಲ್ಲ. ಹಾಗೇನಾದರೂ ಇದ್ದಲ್ಲಿ ನನ್ನ ಚರ್ಚಾಪುಟದಲ್ಲಿ ಹಾಕಿ. ಇಲ್ಲಿ ಈ ಲೇಖನದ ಬಗ್ಗೆ ಚರ್ಚೆ ಮಾತ್ರ. --Vikas Hegde (ಚರ್ಚೆ) ೦೬:೦೬, ೧೪ ಜನವರಿ ೨೦೧೬ (UTC)
- ಉತ್ತರ:
ಅದನ್ನು ಹಾಕುವುದಕ್ಕೂಮೊದಲು ನಿಮ್ಮ ಪ್ರತಿಕ್ರಿಯೆ ಬಂದಿದೆ, ಅದೇ ಲೇಖನ ಮುಗಿಸುವ ಕೆಲಸದಲ್ಲಿದ್ದೆ; ಅಕಸ್ಮಾತ್ ನಿಮ್ಮ ಪ್ರತಿಕ್ರಿಯೆ ನೋಡಿದೆ. ಈ ವಿಕಿ ಕಾವಲುಗಾರರಲ್ಲಿ ಯಾರೂ ಪ್ರಚಲಿತ ವಿಷಯಗಳನ್ನು ಕನ್ನಡ-ವಿಕಿಗೆ ಹಾಕುವವರಿಲ್ಲವೇ? ನೂರಾರು ಲೇಖನಗಳು ಉಲ್ಲೇಖವಿಲ್ಲದೆ ಭಾಷೆಯ ಶುದ್ಧತೆ ಇಲ್ಲದೆ ಪ್ರಕಟವಾಗುತ್ತಿದ್ದರೆ ,ನೀವೆಲ್ಲಾ ಅಷ್ಟು ಕಾಳಜಿ ಉಳ್ಳವರು ಸುಮ್ಮನಿರುವುದೇಕೆ? ನಿಮಗೆ ಅವುಗಳ ಪಟ್ಟಿ ಬೇಕಾದರೆ ತಯಾರಿಸಿ ಕೊಡುತ್ತೇನೆ. ತಿಳಿಸಿ. ಇನ್ನು ವೈಯುಕ್ತಿಕ ವಿಷಯ- ಈ ವಿಷಯದಿಂದ ಬೇರೆ ಇಲ್ಲ. ಹೇಳುವಾಗ ಎಲ್ಲಾ ಒಟ್ಟಿಗೆ ಹೇಳಬೇಕಅಗುವುದು. ಇಲ್ಲಿ ಸ್ವಲ್ಪ -ಅಲ್ಲಿ ಸ್ವಲ್ಪ ಹೇಳಲು ಬರುವಿದಿಲ್ಲ. ನನ್ನ ಕನ್ನಡ ಭಾಷೆ ನಿಮಗೆ ಅಷ್ಟು ಕೆಟ್ಟದಾಗಿ ಕಾಣಿಸಿತೆ!! ಇನ್ನೂ ನಾನು ಈ ಲೇಖನವನ್ನು ಪುನಹ ಗಮನಿಸಿ ಓದಿಲ್ಲ. ಆದರೂ ಅಭಿಪ್ರಾಯ ಬೇಧ ಸಹಜ.
- ಬಿಹಾರದ ಇತ್ತೀಚಿನ ೨೦೧೫ ರ ಚುನಾವಣೆ ಬಹಳ ಪ್ರಮುಖವಾದುದು; ರಾಷ್ಟ್ರಮಟ್ಟದ ಪ್ರಭಾವವುಳ್ಳದ್ದು. ಅದನ್ನು ನೀವು ಕನ್ನಡ-ವಿಕಿಗೆ ಹಾಕುವುದಿದ್ದರೆ ಹಾಕಿ, ಈ ಬಗೆಗೆ ಇಂಗ್ಲಿಷ್ ವಿಕಿಯನ್ನು ದಯವಿಟ್ಟು ಒಮ್ಮೆ ನೋಡಿ. ಅಷ್ಟು ವಿವರ ಹಾಕಲು ಕಷ್ಟ.ಅದರಲ್ಲಿ ಒಂದು ತಿಂಗಳ ಪತ್ರಿಕಾ ವರದಿಯ ಸಾರಾಂಶವಿದೆ. ಅದಕ್ಕೆ ನಾನೂ ಕೆಲವು ವಿವರ ಹಾಕಿದ್ದೇನೆ. ಕನ್ನಡ-ವಿಕಿ ಸಹವಾಸವೇ ಬೇಡವೆಂದು ಭಾವಿಸಿದ್ದೆ. ಆದರೆ ೮-೯ ತಿಂಗಳಾದರೂ ಯಾರೂ ಪ್ರಚಲಿತ ವಿಷಯ ಹಾಕದಿರುವುದನ್ನು ನೋಡಿ, ಕೆಲವು ಅಭಿಮಾನಿಗಳ ಕೋರಿಕೆ ಮೇರೆ ಇಲ್ಲಿ ಪ್ರವೇಶ ಮಾಡಿದೆ. ಇದನ್ನು ತೊರೆಯಲೇ -ಹೇಗೆ-ವಿಚಾರಮಾಡಬೇಕು.
- ಬಿಹಾರ ಚುನಾವಣೆ ೨೦೧೫ (ಇಂ.)[[೧]] Bschandrasgr (ಚರ್ಚೆ) ೦೭:೧೭, ೧೪ ಜನವರಿ ೨೦೧೬ (UTC)
- Bihar_Legislative_Assembly_election,_2015 ಅಥವಾ ಬಿಹಾರ ವಿಧಾನಸಭಾ ಚುನಾವಣೆ, 2015 - ಇಂಗ್ಲೀಷ್ ವಿಕಿ ಪುಟಕ್ಕೆ ಲಿಂಕ್ ಮಾಡುವುದು ಹೀಗೆ. ಸುಮ್ಮನೇ ಹೇಗೇಗೋ ಮಾಡುವುದಲ್ಲ. ನೋಡಿ ಕಲಿತುಕೊಳ್ಳಿ.--Vikas Hegde (ಚರ್ಚೆ) ೧೨:೨೮, ೧೪ ಜನವರಿ ೨೦೧೬ (UTC)
ಮಾನ್ಯರೇ,ತಜ್ಞರಾದ ನಿಮಗೆ ಸುಲಭಕ್ಕೆ ಲಿಂಕ್ ಸಿಗಲಿ ಎಂದು ಸಂಕ್ಷಿಪ್ತವಾಗಿ ತಿಳಿಸಿದೆ. ಅದು ಗೂಗಲ್ ಉಪಯೋಗಿಸುವವರಿಗೆಲ್ಲಾ ಗೊತ್ತು. ನಿಮಗೆ ಅಷ್ಟು ವಿವರ ಬೇಕಿಲ್ಲವೆಂದು ಭಾವಿಸಿದೆ; ತೀಳಿಸಿದ್ದಕ್ಕೆ ಧನ್ಯವಾದಗಳು. ಬಿಹಾರ ವಿಧಾನಸಭಾ ಚುನಾವಣೆ, 2015:ಇದನ್ನು ನೀವು ಕನ್ನಡ ವಿಕಿಗೆ ತುಂಬಿದರೆ ನೋಡಿ ಕೃತಾರ್ಥನಾಗುತ್ತೇನೆ. (ನಾನು ಅಲ್ಲಿಯವರೆಗೆ ಈಗಿನ ಬರ್ಮಾ/ಮಯನ್ಮಾರ್ ಕಡೆ ಗಮನಿಸುತ್ತೇನೆ. (ಯಾರೋ ತಜ್ಞರು ಚುಟುಕ ಮಾಡಿ ಬಿಟ್ಟಿದ್ದಾರೆ)- ಅದು ಜಗತ್ತ್-ಪ್ರಸಿದ್ಧ ಚುನಾವಣೆ) ಕನ್ನಡ ವಿಕಿಗೆ ಆದಷ್ಟು ಪ್ರಚಲಿತ ವಿಷಯ ತುಂಬಲಿ/Bschandrasgr (ಚರ್ಚೆ) ೧೩:೨೫, ೧೪ ಜನವರಿ ೨೦೧೬ (UTC)