ದ್ರೌಪದಿ

ಬದಲಾಯಿಸಿ

(only for reference : ಬಹು ರೂಪ: ಭಾರತದಲ್ಲಿ ದ್ರೌಪದಿ ಕಥನದ ಪರಂಪರೆ;Jul 27, 2014, 04.00AM IST ವಿಜಯ ಕರ್ನಾಟಕ ಪುರುಷೋತ್ತಮ ಬಿಳಿಮಲೆ)

  • ನಿರಂತರವಾಗಿ ಕಾಡಿದ ಒಂದು ಪಾತ್ರವೆಂದರೆ ದ್ರೌಪದಿ. ಕಷ್ಣೆ ಪಾಂಚಾಲಿ, ಯಾಜ್ಞ ಸೇನಿ, ಸೈರೇಂದ್ರಿ, ಇತ್ಯಾದಿ ಹೆಸರುಗಳಿಂದ ಅವಳು ಪ್ರಸಿದ್ಧಳು. ಆಕೆಯ ಹೆಸರಿನ ವೈವಿಧ್ಯಗಳೇ ಆಕೆಯ ಬದುಕಿನ ಭಿನ್ನ ನೆಲೆಗಳನ್ನು ಸಂಕೇತಿಸುತ್ತದೆ.
  • ಈಕೆ ಪಾಂಚಾಲ ದೇಶದ ಅರಸ ದ್ರುಪದನ ಮಗಳು. ಕಷ್ಣ ಸುಂದರಿಯಾದ ಈಕೆಯನ್ನು ಅರ್ಜುನನು ಸ್ವಯಂವರದಲ್ಲಿ ಗೆದ್ದಿರುವುದು ಹೌದಾದರೂ ಐವರು ಪಾಂಡವರೊಡನೆ ಆಕೆ ಸಂಸಾರ ಮಾಡಬೇಕಾಯಿತು. ನಕುಲನ ಚೆಲುವು ಮತ್ತು ಸಹದೇವನ ಬುದ್ಧಿವಂತಿಕೆ ಈಕೆಗೆ ಇಷ್ಟವಂತೆ. ಪ್ರತಿವರ್ಷ ಆಕೆ ಒಬ್ಬ ಗಂಡನೊಡನೆ ಸಂಸಾರ ಹೂಡಬೇಕೆಂಬುದು ನಾರದರ ನಿರ್ಣಯ. ಆದರೂ ಒಮ್ಮೆ ಮಾತ್ರ ದ್ರೌಪದಿಯು ಧರ್ಮರಾಯನೊಡನಿರುವಾಗ, ಅರ್ಜುನನು ಶಯ್ಯಾಗಹಕ್ಕೆ ಹೊಗುತ್ತಾನೆ. ಅದರ ಫಲವಾಗಿ ಆತ ಒಂದು ವರ್ಷ ತೀರ್ಥಯಾತ್ರೆಗೆ ಹೋಗಬೇಕಾಗುತ್ತದೆ. ದ್ರೌಪದಿಗೆ ಮಕ್ಕಳೂ ಐವರೇ. ಲೋಹಿಯಾ ಈಕೆಯನ್ನು ಕಷ್ಣನ ಚತುರಮತಿಗೆ ಹೋಲಿಸಿ, ಮಹಾಭಾರತದಲ್ಲಿ ಎರಡೇ ಮುಖ್ಯಪಾತ್ರಗಳು-ಕಷ್ಣ ಮತ್ತು ಕಷ್ಣೆ ಎಂದು ಹೇಳಿದ್ದಾರೆ. ಈಕೆಯ ಕೋಪದಿಂದ ಇಡೀ ಕುರು ವಂಶವೇ ನಾಶವಾಯಿತು ಎಂದು ಪಂಪ, ಕುಮಾರವ್ಯಾಸರಾದಿಯಾಗಿ ಎಲ್ಲರೂ ಬರೆದಿದ್ದಾರೆ. ಅನೇಕ ಪುರಾಣಗಳು ಆಕೆಯನ್ನು ಭಿನ್ನವಾಗಿ ಕಡೆದು ನಿಲ್ಲಿಸಲು ಪ್ರಯತ್ನಿಸಿವೆ. ಗರುಡ ಪುರಾಣದ ಪ್ರಕಾರ ಈಕೆಯು ವಾಯುವಿನ ಮಡದಿಯಾದ ಭಾರತೀ ದೇವಿಯ ಅವತಾರ. ನಾರದ ಮತ್ತು ವಾಯು ಪುರಾಣಗಳ ಪ್ರಕಾರ ಈಕೆಯು ಶ್ಯಾಮಲಾ, ಭಾರತಿ, ಶಚಿ ಮತ್ತು ಉಷಾ ದೇವಿಯರ ಪ್ರಭಾವದಿಂದ ಜನಿಸಿದವಳು. ಪೂರ್ವಜನ್ಮದಲ್ಲಿ ಈಕೆ ವೇದಾವತಿ, ಮಾಯಾ ಸೀತಾ, ದಮಯಂತಿ, ಎಂದೆಲ್ಲಾ ಆಗಿದ್ದಳು ಎಂದು ಕೀರ್ತಿಸುವ ಪುರಾಣಗಳೂ ಇವೆ.
  • ದ್ರೌಪದಿಯು ಜೀವನದಲ್ಲಿ ಸುಖ ಕಂಡದ್ದು ಕಡಿಮೆಯೇ. ಇಂದ್ರಪ್ರಸ್ಥದ ಸುಂದರ ಬದುಕು ಅಲ್ಪಕಾಲದ್ದು. ಅಲ್ಲಿ ಆಕೆ ಕೌರವನ್ನು ಕಂಡು ನಕ್ಕದ್ದು ಬಹುಶಃ ಅವಳ ಕೊನೇ ನಗು. 'ಅಂಧಸ್ಯ ಪುತ್ರ' ನೂ ಅಂಧನೇ ಎಂಬ ಅವಳ ಸ್ವಲ್ಪ ಕುಚೋದ್ಯದ ಮತ್ತು ಅಹಂಕಾರದ ಮಾತನ್ನು ಮಹಾಭಾರತದ ಎಲ್ಲ ಪಠ್ಯಗಳೂ ಹೇಳುವುದಿಲ್ಲ. ಜಯದ್ರಥನ ತೊಂದರೆ, ದೂರ್ವಾಸರ ಶಾಪದ ಭಯ, ಜಟಾಸುರನ ಅಪಹರಣ, ಕೀಚಕನ ಕಿರುಕುಳ, ವಸ್ತ್ರಾಪಹರಣ, ಜಯ ದೊರಕಿದರೂ ಎಳೆಯ ಮಕ್ಕಳನ್ನು ಕಳಕೊಂಡ ದು:ಖ, ಹೀಗೆ ಉದ್ದಕ್ಕೂ ಆಕೆ ಅತ್ತದ್ದೇ ಹೆಚ್ಚು. ಆದರೆ ಅಳು ಅವಳ ಮನಸ್ಥಿತಿಯನ್ನು ಹಾಳುಗೆಡವಲಿಲ್ಲ. ಮಕ್ಕಳನ್ನು ಕೊಂದ ಅಶ್ವತ್ಥಾಮನನ್ನು ಶಿಕ್ಷಿಸಹೊರಟ ಗಂಡಂದಿರಿಗೆ ಆಕೆ? ದ್ರೋಣರು ಈಗಿಲ್ಲ. ಅವರ ಪತ್ನಿಯಾದ ಕೃಪಿಗೆ ಇವನೊಬ್ಬನೇ ಮಗ, ಕೊಲ್ಲಬೇಡಿ ಎಂದು ಹೇಳಿ, ತನ್ನ ನೋವನ್ನು ಮರೆಯುತ್ತಾಳೆ, ಮಕ್ಕಳನ್ನು ಕಳಕೊಂಡ ಗಾಂಧಾರಿಯ ಸೇವೆಯನ್ನೂ ಮಾಡುತ್ತಾಳೆ.
  • ಗೌರವಾನ್ವಿತತವರು, ಅಸಾಧಾರಣ ಚೆಲುವು, ಪರಾಕ್ರಮೀ ಗಂಡಂದಿರು? ಇವೆಲ್ಲಾ ಇದ್ದಾಗಲೂ ಪುನರಾವರ್ತನೆಗೊಳ್ಳುವ ಅವಮಾನಗಳಿಂದ ತಪ್ಪಿಸಿಕೊಳ್ಳಲು ಆಕೆಗೆ ಭೀಮನ ಸಹಾಯ ಬೇಕೇ ಬೇಕು.ಆದರೆ ವಸ್ತ್ರಾಪಹಾರ ಕಾಲದ ಅತ್ಯಂತ ಕ್ಲಿಷ್ಟ ಮತ್ತು ಬಿಕ್ಕಟ್ಟಿನ ಕ್ಷಣದಲ್ಲಿ ಆಕೆಗೆ ಭೀಮನ ಸಹಾಯ ದೊರಕುವುದಿಲ್ಲ. ಆಗ ಆಕೆ ಅಸಹಾಯಕಳಾಗದೆ, ಮುಟ್ಟಿನ ರಕ್ತದ ಬಟ್ಟೆಯಲ್ಲಿ ಮಲಿನಳಾಗಿ ನಿಂತು ಪ್ರಾತಿಕಾಮಿಯಲ್ಲಿ ಕೇಳಿದ ಪ್ರಶ್ನೆ- ಧರ್ಮರಾಜನು ಮೊದಲು ತನ್ನನ್ನು ಸೋತು, ಆನಂತರ ನನ್ನನ್ನು ಪಣಕ್ಕಿಟ್ಟನೇ? ಸೋತು ದಾಸನಾದವನಿಗೆ ಹೆಂಡತಿಯನ್ನು ಪಣಕ್ಕಿಡುವ ಅಧಿಕಾರವಿದೆಯೇ?ಈ ಪ್ರಶ್ನೆಗೆ ಭೀಷ್ಮರೇ ಮೊದಲಾಗಿಯಾರೂ ಉತ್ತರಿಸುವುದಿಲ್ಲ. ಸ್ವತಃ ಯುಧಿಷ್ಠಿರನೇ ಮೌನವಾಗುತ್ತಾನೆ ಒಂದು ಕ್ಷಣಕ್ಕೆ ಕೌರವನೂ ಆಕೆಯ ಪ್ರಶ್ನೆಗೆ ದಂಗಾಗುತ್ತಾನೆ. ದ್ರೌಪದಿ ಏಕಾಂಗಿಯಗಿ ಕುರು ಪಾಂಡವರನ್ನು ಗೆದ್ದ ಅಪೂರ್ವ ಕ್ಷಣವದು. ಕೊನೆಯಲ್ಲಿ ಪಾಂಡವರು ಸ್ವರ್ಗಾರೋಹಣ ಮಾಡಿದಾಗ ಎಲ್ಲರಿಗಿಂತ ಕೊನೆಯಲ್ಲಿ ಇದ್ದ ದ್ರೌಪದಿಯು ಎಲ್ಲರಿಗಿಂತ ಮೊದಲೇ ಸಾಯುತ್ತಾಳೆ. ಆಗ ಹೆಚ್ಚು ಕಣ್ಣೀರಿಟ್ಟವನು ಭೀಮ.
  • ದ್ರೌಪದಿಯ ಕತೆಯನ್ನು ವ್ಯಾಸರು ತಮ್ಮ ಅಸಾಧಾರಣ ಪ್ರತಿಭೆಯಲ್ಲಿ ಅದ್ಭುತವಾಗಿ ನಿರೂಪಿಸಿದರು. ಅವರು ಹೇಳಿದ ಕತೆಯನ್ನು ಭಾರತ ದೇಶವು ಮತ್ತೆ ಮತ್ತೆ ಬರೆದುಕೊಳ್ಳುತ್ತಲೇ ಬಂದಿದೆ.
  • ಉತ್ತರದ ಪಾಂಚಾಲ ದೇಶದಲ್ಲಿ ಹುಟ್ಟಿ, ಕುರುಕ್ಷೇತ್ರ ಯುದ್ಧದಲ್ಲಿ ಭಾಗವಹಿಸಿ, ಕೆಲಕಾಲ ಹಸ್ತಿನಾಪುರದಲ್ಲಿ ನೆಲೆಸಿ, ಕೊನೆಗೆ ಹಿಮಾಲಯದಲ್ಲಿ ಸತ್ತು ಹೋದ ದ್ರೌಪದಿಯ ಕತೆಯು ವಿಂಧ್ಯಾ ಪರ್ವತ ದಾಟಿ, ದಕ್ಷಿಣದ ಕಡೆಗೆ ಹೇಗೆ ಬಂತೋ ತಿಳಿಯದು.ಅಥವಾ ದಕ್ಷಿಣದ ಈಕೆ ಉತ್ತರದ ಕತೆಯಾದಳೋ ಅದೂ ತಿಳಿಯದು. ತಮಿಳುನಾಡಿನಲ್ಲಿ ಆಕೆಯು ದ್ರೌಪದಿ ಅಮ್ಮನ್ ಆಗಿ ಸರ್ವರನ್ನೂ ರಕ್ಸಿಸಬಲ್ಲ ಮತ್ತು ಸಿಟ್ಟು ಬಂದರೆ ಎಲ್ಲರನ್ನೂ ನಾಶ ಮಾಡಬಲ್ಲ, ಸದಾ ಕನ್ಯೆಯಾಗಿಯೇ ಇರುವದೈವ. ಆಕೆಯ ಗುಡಿಗಳಲ್ಲಿ ಪ್ರತಿ ವರ್ಷ ನಡೆಯುವ ಜಾತ್ರೆಯಲ್ಲಿ ಭಕ್ತರು ಮಹಾಭಾರತದ ಕತೆಯನ್ನೇ ಹಾಡಿನ ಮೂಲಕ ಆಕೆಗೆ ಅರ್ಪಿಸುತ್ತಾರೆ, ಬೆಂಕಿಯ ಮೇಲೆ ನಡೆಯುತ್ತಾರೆ. ಜನಪ್ರಿಯವಾದ ಕರಗ ಜಾತ್ರೆಯು ದ್ರೌಪದಿ ಕೇಂದ್ರಿತವಾಗಿದೆ. ಹೀಗೆ ದಕ್ಷಿಣ ಭಾರತೀಯರಿಗೆ ದ್ರೌಪದಿ ಕೇವಲ ಒಂದು ಪಾತ್ರವಲ್ಲ, ಬದಲು ಹಲವು ಆಯಾಮಗಳಿರುವ ಒಂದು ಸಂಪ್ರದಾಯವೂ ಹೌದು. ಉದಾಹರಣೆಗೆ, ಆಜ್ಞಾತವಾಸದ ಕಾಲದಲ್ಲಿ ದ್ರೌಪದಿಯು ಬಡತನದಲ್ಲಿ ಒದ್ದಾಡುವ ರೀತಿಯನ್ನು ತೆರುಕೂತ್ತುವಿನಲ್ಲಿ ಮನಮುಟ್ಟುವಂತೆ ಅಭಿನಯಿಸಲಾಗುತ್ತದೆ.ಊಟಕ್ಕೆ ಯಾವುದೇ ದವಸ ಧಾನ್ಯಗಳು ಸಿಗದಾಗ, ದ್ರೌಪದಿಯು ಭವಿಷ್ಯ ಹೇಳುವ ಕೊರವಂಜಿಯ ರೂಪದಲ್ಲಿ ಕೌರವನ ಮನೆಗೇ ಹೋಗಿ ಗಾಂಧಾರಿಯನ್ನು ಭೇಟಿ ಮಾಡುತ್ತಾಳೆ. ಕೊರವಂಜಿಯನ್ನು ಪರೀಕ್ಷಿಸ ಬಯಸಿದ ಗಾಂಧಾರಿಯು ತನಗೆ ಮಾತ್ರ ಗೊತ್ತಿರುವ ಘಟನೆಯೊಂದನ್ನು ಹೇಳು ಎಂದು ಸವಾಲು ಒಡ್ಡಿದಾಗ ಕೊರವಂಜಿಯು ಗಾಂಧಾರಿಗೆ ಆಡಿನೊಡನೆ ಮದುವೆಯಾದ ಘಟನೆಯೊಂದನ್ನು ಹೇಳುತ್ತಾಳೆ. ಬೆಚ್ಚಿದ ಗಾಂಧಾರಿಯು ಭವಿಷ್ಯದ ಬಗ್ಗೆ ಹೇಳು ಎಂದಾಗ ಮುಂದಾಗುವ ಅವಳ ಮಕ್ಕಳ ಸಾವಿನ ಬಗ್ಗೆ ವಿವರಿಸುತ್ತಾಳೆ. ಸುದ್ದಿ ತಿಳಿದ ಕೌರವ ಅಲ್ಲಿಗೆ ಬಂದು ಅದು ವೇಷ ಬದಲಿಸಿದ ದ್ರೌಪದಿಯೇ ಇರಬೇಕೆಂದು ಊಹಿಸುತ್ತಾನೆ. ವಿಷಯ ತಿಳಿದು ಅರ್ಜುನ ಕೊರವಂಜಿಯ ವೇಷದಲ್ಲಿ ಬಂದು ಆಕೆ ತನ್ನ ಹೆಂಡತಿ ಎಂದು ಹೇಳಿ ಬಿಡಿಸಿಕೊಂಡು ಹೋಗುತ್ತಾನೆ. ಭೂತ ಮತ್ತು ಭವಿಷ್ಯತ್ ಕಾಲಗಳು ಸಂಧಿಸಿದ ಅಪೂರ್ವ ನಿರೂಪಣೆಯಿದು.
  • ತೆರುಕೂತ್ತುವಿನ ದ್ರೌಪದಿ ವಸ್ತ್ರಾಪಹಾರ ಪ್ರಸಂಗದಲ್ಲಿ, ಅಬ್ಬರದಿಂದ ರಂಗ ಪ್ರವೇಶ ಮಾಡುವ ದುಶ್ಯಾಸನನು ಆಕೆಯ ಸೆರಗಿಗೆ ಕೈ ಹಾಕುವ ಮುನ್ನ ಅವಳ ಕಾಲಿಗೆ ಬಿದ್ದು ಕ್ಷಮೆ ಯಾಚಿಸಿ, ಮತ್ತೆಎದ್ದು ನಿಂತುಬೊಬ್ಬಿರಿಯುತ್ತಾನೆ. ಯಕ್ಷಗಾನದಲ್ಲಿಅದರಲ್ಲೂ ಮುಖ್ಯವಾಗಿ ತಾಳಮದ್ದಳೆಯಲ್ಲಿ ಜನಪ್ರಿಯವಾಗಿರುವ ಕಷ್ಣ ಸಂಧಾನ ಪ್ರಸಂಗದಲ್ಲಿಯುದ್ಧ ಬೇಡವೆಂದು ನಿರಾಸಕ್ತಿಯಿಂದ ಕುಳಿತಿದ್ದ ಪಾಂಡವರನ್ನು ದ್ರೌಪದಿಯು ಯುದ್ಧಕ್ಕೆ ಪ್ರೇರೇಪಿಸುವ ಭಾಗ ಅನ್ಯಾದಶವಾದುದು. ಶ್ರೀ ಮಲ್ಪೆ ರಾಮದಾಸ ಸಾಮಗ, ಶೇಣಿ ಗೋಪಾಲಕಷ್ಣ ಭಟ್ಟ, ಕೋಳ್ಯೂರು ರಾಮಚಂದ್ರರಾವ್ ಮೊದಲಾದವರು ರಂಗದ ಮೇಲೆ ದ್ರೌಪದಿಯನ್ನು ಕಟ್ಟಿದ ರೀತಿ ಇತಿಹಾಸ ಪ್ರಸಿದ್ಧವಾಗಿದೆ. ದ್ರೌಪದಿ ಪ್ರತಾಪ ಎಂಬ ಪ್ರಸಂಗದಲ್ಲಿ ಆಕೆಯು ಪಾಂಡವರನ್ನೂ, ಕಷ್ಣನನ್ನೂ, ತ್ರಿಮೂರ್ತಿಗಳನ್ನೂ ಹೀಗೆ ಎಲ್ಲರನ್ನೂ ಯುದ್ಧದಲ್ಲಿ ಸೋಲಿಸಿಬಿಡುತ್ತಾಳೆ.
  • ತೆಲುಗಿನಲ್ಲಿ ದೊರೆಯುವ ಕಥನವೊಂದರಲ್ಲಿ ದ್ರೌಪದಿಯು ಕಾಲಿನ ಬೆರಳಲ್ಲಿ ದ್ಯೂತವಾಡಿ ದುರ‌್ಯೋಧನನ್ನು ಸೋಲಿಸುತ್ತಾಳೆ. ಉತ್ತರ ಭಾರತದ ಪಂಡ್ವಾನಿ, ಪಾಂಡವಲೀಲಾ ಮೊದಲಾದ ಪ್ರದರ್ಶನಗಳಲ್ಲಿ ಕಂಡು ಬರುವ ದ್ರೌಪದಿಯು ಸೆಗಣಿ ಹೆಕ್ಕುವ, ಕೋತಿಗಳನ್ನು ಓಡಿಸುವ ಸಾಮಾನ್ಯ ಮಹಿಳೆ. ಆಕೆಗೆ ಪಾಂಡವರ ತಾಯಿ ಕಾತಮ ಮತ್ತು ಕೌರವರ ತಾಯಿ ನಿತಿನಿಯ ಮೇಲೆ ಎಲ್ಲಿಲ್ಲದ ಗೌರವ. ಗಢವಾಲಾದಲ್ಲಿನ ಪಾಂಡವ ಲೀಲಾದಲ್ಲಿ ದ್ರೌಪದಿ ಪಾತ್ರ ಮಾಡುವವನ ಮೇಲೆ ದ್ರೌಪದಿ ಆವೇಶಿತಳಾಗಿ ಪ್ರೇಕ್ಷಕರನ್ನು ಹರಸುತ್ತಾಳೆ.
  • ಮಧ್ಯ ಭಾರತದ ಬುಡಕಟ್ಟು ಜನರು ದ್ರೌಪದಿ-ಕಷ್ಣರ ನಡವಣ ಸಂಬಂಧವನ್ನು ನಾಜೂಕಾಗಿ ವಿವರಿಸುತ್ತಾರೆ. ಗಾಯವೊಂದರಲ್ಲಿ ಕಷ್ಣನ ಕೈಯಿಂದ ರಕ್ತ ಒಸರಿದಾಗಸೆರಗು ಹರಿದು ರಕ್ತ ನಿಲ್ಲಿಸುವುದು ದ್ರೌಪದಿ. ಕೊಳವೊಂದರಲ್ಲಿ ಕಷ್ಣನ ಲಂಗೋಟಿ ಕಾಣೆಯಾದಾಗ ಆತನ ಮಾನ ರಕ್ಷಿಸುವುದೂ ಆಕೆಯೇ. ಬೆರಳು, ರಕ್ತ, ಸೆರಗು ಮತ್ತು ಲಂಗೋಟಿಗಳ ಸುತ್ತ ಹೆಣೆಯಲಾದ ಈ ಕತೆಯು ಕಷ್ಣ ದ್ರೌಪದಿಯರ ಸಂಬಂಧವನ್ನು ಹೊಸದಾಗಿ ನೋಡಲು ಪ್ರಚೋದಿಸುತ್ತದೆ.
  • ದ್ರೌಪದಿಯ ಈ ಕಥನ ಪರಂಪರೆಗೆ ಈಚಿನ ಸೇರ್ಪಡೆ ವೀರಪ್ಪ ಮೊಯಿಲಿ ಅವರ ಸಿರಿಮುಡಿ ಪರಿಕ್ರಮಣ ಮಹಾಕಾವ್ಯ. ಮೊಯಿಲಿ ಅವರು ಸಂಸ್ಕೃತ ಪಠ್ಯಗಳ ಜೊತೆಗೆ, ಭಾರತೀಯ ಭಾಷೆಗಳಲ್ಲಿ ರಚಿತವಾದ ಅನೇಕ ಪಠ್ಯಗಳನ್ನು ಅಭ್ಯಸಿಸಿ, ಮೌಖಿಕ ನಿರೂಪಣೆಗಳಿಗೆ ಕಿವಿಗೊಟ್ಟು, ಇವೆಲ್ಲಕ್ಕಿಂತ ಭಿನ್ನವಾದ ಮತ್ತು ಅನನ್ಯವಾದ ದ್ರೌಪದಿಯ ಪಾತ್ರಕಲ್ಪನೆಯೊಂದನ್ನು ಕೊಟ್ಟಿದ್ದಾರೆ. ಎಳವೆಯಲ್ಲಿಯೇ ಕಷ್ಣನನ್ನು ಮದುವೆಯಾಗಬಯಸಿದ ಆಕೆ ಯುಗಕ್ಷೇಮದ ಗುರಿಯೊಂದಿಗೆ ಅರ್ಜುನನ್ನು ಮದುವೆಯಾಗುವುದು, ಕರ್ಣನ ಬಗ್ಗೆ ಆಕೆಯಲ್ಲಿ ಮೂಡುವ ನವಿರಾದ ಭಾವನೆಗಳು, ನಾಡೊಂದರ ನಿರ್ಮಿತಿಯಲ್ಲಿ ಆಕೆ ವಹಿಸುವ ಪಾತ್ರ ಮೊದಲಾದುವುಗಳನ್ನು ಸಿರಿಮುಡಿ ಪರಿಕ್ರಮಣಹಂತ ಹಂತವಾಗಿ ದಾಖಲಿಸಿಸುತ್ತಾ ಹೋಗುತ್ತದೆ. 'ನಾರಿಯತ್ಯಾಚಾರ ಪುರುಷರ್ಗೆ ಹೆಮ್ಮೆಯೇ' ಎಂಬ ಪ್ರಶ್ನೆಯನ್ನು ಕೇಳುವ ಈ ಕಾವ್ಯವು ದ್ರೌಪದಿಯ ಮೂಲಕ ಭಾರತೀಯ ಮಹಿಳೆಯ ಶೋಷಣೆ, ಕ್ರಿಯಾಶೀಲತೆ, ಹೋರಾಟ, ಯುಗ ನಿರ್ಮಾಣದಲ್ಲಿ ಅವಳ ಪಾತ್ರ ಮತ್ತಿತರ ಅಂಶಗಳನ್ನು ಆಧುನಿಕ ಅರಿವಿನಲ್ಲಿ ಕಟ್ಟಿಕೊಡುತ್ತದೆ.

ಹೀಗೆ ದ್ರೌಪದಿಯು ಇವತ್ತು ಒಂದು ಪಾತ್ರವಾಗಿ ಉಳಿದಿಲ್ಲ. ಬದಲು ಪ್ರಶ್ನೆಯಾಗಿದ್ದಾಳೆ. ಸದಸ್ಯ:Bschandrasgr :Bschandrasgr .ಬಿ.ಎಸ್ ಚಂದ್ರಶೇಖರ೨೮-೭-೨೦೧೪ ಸಾಗರ Bschandrasgr

ಮಹಾಭಾರತದಲ್ಲಿ ಮುಖ್ಯ ಪಾತ್ರ ದ್ರೌಪದಿ

ಬದಲಾಯಿಸಿ

ದ್ರೌಪದಿ ಬಗ್ಗೆ

2401:4900:16F6:C6DC:2:2:661F:6941 ೦೭:೨೦, ೨೯ ಅಕ್ಟೋಬರ್ ೨೦೨೩ (IST)Reply

Mahabharata dropadi Patra 2409:408C:8282:CE2A:0:0:1CCB:20A5 ೧೮:೪೫, ೨೯ ಅಕ್ಟೋಬರ್ ೨೦೨೩ (IST)Reply

Return to "ದ್ರೌಪದಿ" page.