ಚರ್ಚೆಪುಟ:ಜ್ಯೋತಿಷ ಮತ್ತು ವಿಜ್ಞಾನ

Active discussions

ಜ್ಯೋತಿಷ್ಯ ಮತ್ತು ವಿಜ್ಞಾನ -ಜ್ಯೋತಿಷ್ಯ ನಂಬಬಹುದೇ? ಹಿಂದಿನ ಪ್ರಶ್ನೆ - ಸಾಮಾಜಿಕವಾಗಿ ಒಳ್ಳೆಯದೇ?ಸಂಪಾದಿಸಿ

 • ಸದಸ್ಯರ ಚರ್ಚೆಪುಟ:Csarva-ಸೀಸರ್ವ
 • ಜ್ಯೋತಿಷ್ಯ ನಂಬಬಹುದೇ? ಹಿಂದಿನ ಪ್ರಶ್ನೆ - ಜ್ಯೋತಿಷ್ಯ ಸಾಮಾಜಿಕವಾಗಿ ಒಳ್ಳೆಯದೇ?
 • ಈ ಲೇಖನದಲ್ಲಿ ಉತ್ತರ ಸಿಗಬಹುದು.
 • ಜ್ಯೋತಿಷ್ಯ ಮತ್ತು ವಿಜ್ಞಾನ ವಿಷಯ ವನ್ನು ತುಂಬಿದ್ದೇನೆ.. ಪರಿಶೀಲಿಸಿ. ಸಲಹೆ ಗಳಿದ್ದರೆ ಕೊಡಿ.
 • ಈಗ ಟಿ.ವಿ.ಯಲ್ಲಿ ಬರುತ್ತಿರುವ ಭವಿಷ್ಯ ಸಲಹೆಗಳು ಸಮೂಹ ಸನ್ನಿ ಗೆ ಸೇರಿದೆ. ಎಂದು ನನ್ನ ನಂಬುಗೆ. :
 • ಬಿ.ಎಸ್. ಚಂದ್ರಶೇಖರ ೨೩-೫-೨೦೧೨/ ೨೩.೫೪.

ಸಾಯನ ಕುಂಡಲಿ- ಸಾಯನ ಸಂಕ್ರಾಂತಿಸಂಪಾದಿಸಿ


 • ಸಾಯನ ಕುಂಡಲಿ ತಯಾರಿಸಲು ನಿರಯನ ಕುಂಡಲಿ ಸ್ಪುಟ ಗ್ರಹಗಳಿಗೆ ಅಯನಾಂಶ ೨೪ಡಿಗ್ರಿಗಳನ್ನು ಸೇರಿಸಿ ಕೊಳ್ಳ ಬೇಕೆಂದು, ಆಗ ಸಾಯನ ಸ್ಪುಟ ಗ್ರಹಗಳು ಸಿಗುತ್ತವೆ ಎಂದು,ವಿಜ್ಞಾನ ಮತ್ತು ಪಂಚಾಂಗಗಳು ಹೇಳುತ್ತವೆ. ಆದರೆ ಸಂಕ್ರಾಂತಿಯ ವಿ‍ಷಯದಲ್ಲಿ ಈಗ ಆಚರಿಸುತ್ತಿರುವ ಜನವರಿ ೧೪ ಮಕರ ಸಂಕ್ರಾಂತಿ ಯು, ವಿಜ್ಞಾನ ರೀತಿಯಲ್ಲಿ ಡಿಸೆಂಬರ್ ೨೧ ಕ್ಕೇ ಸಾಯನ ಲೆಕ್ಕದಲ್ಲಿ ಆಗುತ್ತದೆ (ನಿರಯನಕ್ಕಿಂತ ೨೩,೨೪ ದಿನ - ಡಿಗ್ರಿ ಹಿಂದೆ). ಅಂದರೆ ನಿರಯನ ಲೆಕ್ಕದಲ್ಲಿ ೨೪ ಡಿಗ್ರಿಗಳನ್ನು ಕಳೆದಂತೆ ಆಯಿತು ಇದೇಕೆ ಹೀಗೆ ? ಯಾರಿಗಾದರೂ ಉತ್ತರ ಗೊತ್ತಿದ್ದರೆ ದಯವಿಟ್ಟು ತಿಳಿಸಿ.( ಸದಸ್ಯ:Bschandrasgr/ಪರಿಚಯ | [[< ಸದಸ್ಯ:Bschandrasgr]]ನಿರ್ದೇಶಿತ ; ಬಿ.ಎಸ್ ಚಂದ್ರಶೇಖರ ಸಾಗರ

ಪ್ರಖ್ಯಾತರ ಕುಂಡಲಿ-೧ಸಂಪಾದಿಸಿ

 • ವೆಬ್ ಸೈಟಿನಿಂದ ತೆಗೆದು ಕೊಂಡಿದೆ.([[೧]])


ರಾಶಿ ಗ್ರಹಗಳು ನವಾಂಶ ನಿರಯನ
ಮೀನ/ - ಮೇಷ/Kuja /cha ವೃಷಭ/ - ಮಿಥುನ/Ne-Ke-SU-budha
ಕುಂಭ/ ನಿರಯನ ದಿ. 17-9-1950 ದಲ್ಲಿ ಬೆಳಿಗ್ಗೆ 11-00ಗಂಜನನ ಕಟಕ/Shani/Shukra
ಮಕರ ಸ್ಥಳ.Aksha23.37N-Rekha72.28E ಹೆಸರು N.Modi ಸಿಂಹ/ pluto ೫
ಧನು/rahu ವೃಶ್ಚಿಕ/lagna?/ ಚಂದ್ರ ೧೧ ತುಲಾ ಕನ್ಯಾ/yuranus
ರಾಶಿ ಗ್ರಹಗಳು ರಾಶಿ ಕುಂಡಲಿ ನಿರಯನ
ಮೀನ/Ra - ಮೇಷ/Kuja /cha ವೃಷಭ/ - ಮಿಥುನ/Ur
ಕುಂಭ/Guru ನಿರಯನ/Time Zone5.5 ದಿ. 17-9-1950 ದಲ್ಲಿ ಬೆಳಿಗ್ಗೆ 11-00ಗಂ.ಜನನ ಕಟಕ/Pluto
ಮಕರ ಸ್ಥಳ.Aksha23.37 N-Rekha72.28E ಹೆಸರು N.Modi ಸಿಂಹ/ Shani-Shukra
ಧನು/rahu ವೃಶ್ಚಿಕ/lagna/ ಚಂದ್ರ /Kuja ತುಲಾ ಕನ್ಯಾ/budha/kEtu/

Surya/Nept

Bschandrasgr ೧೩:೨೪, ೨೬ ಸೆಪ್ಟೆಂಬರ್ ೨೦೧೪ (UTC)

ಪ್ರಖ್ಯಾತರ ಕುಂಡಲಿ-೨ಸಂಪಾದಿಸಿ

ರಾಶಿ ಗ್ರಹಗಳು ನವಾಂಶ ನಿರಯನ
ಮೀನ/Ra - ಮೇಷ - ವೃಷಭ - ಮಿಥುನ/chandra/Nept
ಕುಂಭ/Guru ನಿರಯನ ದಿ.18-6-1970 ದಲ್ಲಿTime Zone /ಜನನ21.52 ಕಟಕ/Guru
ಮಕರ/Shani ಸ್ಥಳ.Aksha28.39N-Rekh77.13E ಹೆಸರು,Rahul Gandhi ಸಿಂಹ/ Ura/Plu
ಧನು/Budha ವೃಶ್ಚಿಕ/Ravi/Kuja ತುಲಾ/Shukra ಕನ್ಯಾ/ketu
ರಾಶಿ ಗ್ರಹಗಳು ರಾಶಿ ಕುಂಡಲಿ ನಿರಯನ
ಮೀನ/- ಮೇಷ -Shani ವೃಷಭ -Budha ಮಿಥುನ/Kuja/Ravi
ಕುಂಭ/Rahu ನಿರಯನ ದಿ.18-6-1970 ದಲ್ಲಿTime Zone /ಜನನ21.52 ಕಟಕ/Shukra
ಮಕರ/Lagna ಸ್ಥಳ.Aksha28.39N-Rekh77.13E ಹೆಸರು,Rahul Gandhi ಸಿಂಹ/ ketu
ಧನು/ ವೃಶ್ಚಿಕ/Neptune Chandra ತುಲಾ/Guru ಕನ್ಯಾ/Pluto /Uranus

ರಾಜಯೋಗ-ಜಾತಕಸಂಪಾದಿಸಿ

ಈ ಮೇಲಿನ ಕುಂಡಲಿಗಳು - ೨೦೧೪ ರಲ್ಲಿ ಭಾರತದ ಪ್ರಧಾನಿಯಾದ ಶ್ರೀ ಮೋದಿಯವರದು ಮತ್ತ ಭಾರತದ ದೊಡ್ಡ ರಾಜಕೀಯ ಪಕ್ಷವಾದ ಭಾರತದ ರಾಷ್ಟ್ರೀಯ ಕಾಂಗ್ರೆಸ್ ನ ಉಪಾಧ್ಯಕ್ಷರಾದ ಶ್ರೀ ರಾಜೀವ್ ಗಾಂಧಿ ಮಗ ರಾಹುಲ್ ಗಾಂಧಿ ಯವರದು ; ಆದರೆ ಅದರಲ್ಲಿ ನನಗೆ ತಿಳಿದಂತೆ ಯಾವುದೇ ಅತಿ ಹೆಚ್ಚಿನ ರಾಜಯೋಗ ಕಾಣಿಸುವುದಿಲ್ಲ. ಇನ್ನು ಅವರು ಆ ಹುದ್ದೆಗಳಿಗೆ ಏರಿದ್ದರಿಂದ ಕಾಣದ ರಾಜಯೋಗಗಳನ್ನು ಆವಕ್ಕೆ ಆರೋಪಿಸಬೇಕಾಗುತ್ತದೆ. ಈಹಿಂದೆ ಘಂಟಘೋಷವಾಗಿ ಅವರು ಮುಂದೆ ಆಹುದ್ದೆಗಳಿಗೆ ಏರುವರೆಂದು ಯಾವ ಜ್ಯೋತಿಷಿಗಳೂ ಹೇಳಿರುವ ದಾಖಲೆ ಇಲ್ಲ. Bschandrasgr ೧೧:೧೫, ೧೦ ನವೆಂಬರ್ ೨೦೧೪ (UTC)(ಸದಸ್ಯ:Bschandrasgr/ಪರಿಚಯ)

ಜ್ಯೋತಿಷ ಮತ್ತು ವಿಜ್ಞಾನಲೇಖನಕ್ಕೆ ವಿಕಾಸಹೆಗಡೆಯವರ ತಕರಾರು ಕುರಿತುಸಂಪಾದಿಸಿ

ಈ ಪುಟವನ್ನು ಆರು ವರ್ಷಗಳ ಹಿಂದೆ ಆರಂಭಿಸಲಾಗಿದೆ. ಸಾವಿರಾರು ಜನರು ಓದಿದ್ದಾರೆ. ಅವರು ಯಾರಿಗೂ ಕಾಣದ ದೋಷ ವಿಕಾಸ ಹೆಗಡೆಯವರಿಗೆ ಕಾಣುತ್ತದೆ- ಇದು ಅವರ ಪೂರ್ವಾಗ್ರಹದ ದೊಷವಿರಬುದೆಂದು ಅನುಮಾನವಾಗುತ್ತದೆ. ಅದೇರೀತಿ ವಿಕಿಸೋರ್ಸ್ನಲ್ಲಿ ಸರ್ಕಾರದ ಹಕ್ಕಿನಲ್ಲಿರವ "ಮಂಕುತಿಮ್ಮನ ಕಗ್ಗ" ಪುಟಕ್ಕೆ ಸರಿಯಾಗಿ ಕಾಪಿರೈಟ್ ಜ್ನಾಬವಿಲ್ಲದೆ ತಕರಾಯು ಹಾಕಿ ಆ ಪುಟವನ್ನು ರದ್ದು ಮಾಡಿಸಿದರು.

ಉದಾಹರಣೆಗೆ
ಕೃತಿಸ್ವಾಮ್ಯ ವಿಚಾರ- (ಸರ್ಕಾರದ ಕಾಪಿರೈಟ್-ವಿಕಿಸೋರ್ಸಿಗೆ ಹಾಕಿದ ಪಠ್ಯ-ಗ್ರಂಥ;
 • ಕರ್ನಾಟಕ ಸರ್ಕಾರ:
 • ಪುಟ:ಅರಮನೆ.pdf/೨
 • ಪುಟ:ಯಶೋಧರ ಚರಿತೆ.pdf/೨
 • ii ARAMANE A Novel, written by Kum. Veerabhadrappa, Published by Manu Baligar, Director, Department of Kannada and Culture, Kannada Bhavana, J.C.Road, Bengaluru ­ 560 002. ಈ ಆವೃತ್ತಿಯ ಹಕ್ಕು : ಕರ್ನಾಟಕ ಸರ್ಕಾರ ಮುದ್ರಿತ ವರ್ಷ ಪ್ರತಿಗಳು ಪುಟಗಳು ಬೆಲೆ 2011 1000 XXXII + 714 ರೂ. 150/-
 • ರಕ್ಷಾಪುಟ ವಿನ್ಯಾಸ : ಕೆ. ಚಂದ್ರನಾಥ ಆಚಾರ್ಯ ಮುದ್ರಕರು : ಮೆ|| ಮಯೂರ ಪ್ರಿಂಟ್ ಆ್ಯಡ್ಸ್ ನಂ. 69, ಸುಬೇದಾರ್‍ಛತ್ರಂ ರೋಡ್ ಬೆಂಗಳೂರು - 560 020 ದೂ : 23342724
 • ಇದನ್ನು ವಿಕಿಸೋರ್ಸಿಗೆ ಹಾಕಲು ಅವಕಾಶವಿದ್ದರೆ.,ನಾನು ಹಾಕಿದ- 'ಮಂಕುತಿಮ್ಮನ ಪದ್ಯ ಮತ್ತು ಅರ್ಥ'ವಿರುವ ಅದೇ ಕರ್ನಾಟಕ ಸರ್ಕಾರದ ಸ್ವಾಮ್ಯದ ಪಠ್ಯಗಳಿಗೆ ವಿ.ಹೆಗಡೆಯವರು ತಕರಾರು ಹಾಕಲು ಕಾರನವೇನು? ಅದರ ಮೊದಲ ಪುಟವನ್ನು ರದ್ದು ಮಾಡಿದೆ ಏಕೆ? ವಿಕಾಸ ಹೆಗಡೆಯವರು ಅಪರೂಪಕ್ಕೆ ಎಚ್ಚರಗೊಂಡು ಅನಗತ್ಯ ತಕರಾರು ತೆಗೆಯುವ (ಕಲ್ಲು ಹೊಡೆಯುವ)ಕೆಲಸವನ್ನು ಏಕೆ ಮಾಡುತ್ತಿದ್ದಾರೆ. ದಯವಿಟ್ಟು ಅವರು ವಿಕಿಪೀಡಿಯಾಕ್ಕೆ ಹೆಚ್ಚು ಲೇಖನ ಹಾಕಿ ಅಭಿವೃದ್ಧಿ ಪಡಿಸಲಿ. ದಯವಿಟ್ಟು ಅವರು ಅಸೂಯೆಯನ್ನು ಬಿಡಲಿ ಎಂದು ಆಶಿಸುತ್ತೇನೆ.
 • ಸದಸ್ಯ:Omshivaprakash ಅವರೇ ಈ ಲೇಕನ ನೋಡಿ ಒಪ್ಪಿರುತ್ತಾರೆ. ವಿಕಾಸ ಹೆಗಡೆಯವರು ದಯವಿಟ್ಟು ಆ ರದ್ದು ನೋಟಿಸನ್ನು ತೆಗೆಯಬೇಕು - ಇಲ್ಲದಿದ್ದರೆ ನಾನೇ ಅದನ್ನು ತೆಗೆಯಬೇಕಾಗುವದು. ಸಾವಿರಾರು ಚುಟುಕಗಳು - ಅನಗತ್ಯ ಲೇಖನಗಳು ಉಲ್ಲೇಕವಿಲ್ಲದ ಲೇಖನಗಳು ಇವೆ ದಯವಿಟ್ಟು ಅವನ್ನು ಅಭಿವೃದ್ಧಿಪಡಿಸಿ. ಅಸೂಯೆಯ ಕೆಲಸ ಬಿಡಿ. ಅದಕ್ಕೆ ಉದಾಹರಣೆ ಮೇಲಿನ ಸರ್ಕಾರಿ ಸ್ವಾಮ್ಯದ ಗ್ರಂಥಗಳನ್ನು ವಿಕಿಸೋರ್ಸಿಗೆ ಹಾಕಿರುವುದು. ನೀವು ಕಂ.ತಜ್ಞರೆಂದು ನಿಮ್ಮ ಬುದ್ಧಿಗೆ ನಿಲುಕದ ವಿಷಯದ ಬಗೆಗೆ ದಯವಿಟ್ಟು ತಲೆಹಾಕಬೇಡಿ. ನಿಮ್ಮವ Bschandrasgr (ಚರ್ಚೆ) ೧೩:೫೨, ೭ ಡಿಸೆಂಬರ್ ೨೦೧೮ (UTC)

ಪುಟದ ಶೀರ್ಷಿಕೆ ಕುರಿತುಸಂಪಾದಿಸಿ

ಈ ಪುಟಕ್ಕೆ ಜ್ಯೋತಿಷ ಮತ್ತು ವಿಜ್ಞಾನ ಎಂಬ ಹೆಸರು ಏಕಿಡಲಾಗಿದೆ? ಇದರಲ್ಲಿ ವಿಜ್ಞಾನದ ವಿಷಯಗಳೇ ಇಲ್ಲ! ಜ್ಯೋತಿಷ್ಯವು ಯಾವ ರೀತಿ ವಿಜ್ಞಾನ ಎಂಬುದನ್ನೂ ವಿವರವಾಗಿ ಹೇಳಿಲ್ಲ. ಬರೀ ಜ್ಯೋತಿಷದ ಬಗ್ಗೆ ಬರೆಯಲಾಗಿದೆ. --ವಿಕಾಸ್ ಹೆಗಡೆ/ Vikas Hegde (ಚರ್ಚೆ) ೦೭:೦೮, ೧೪ ಜನವರಿ ೨೦೧೯ (UTC)

 • ಉತ್ತರ-
 • ಜ್ಯೊತಿಷವನ್ನು ಭಾರತದಲ್ಲಿ ಅನೇಕರು ವಿಜ್ಞಾನವೆಂದೇ ಹೇಳುತ್ತಾರೆ; ಹಾಗೆಯೇ ಬೋಧಿಸುತ್ತಾರೆ. ಆದರೆ ಆಧುನಿಕ ಖಭೌತ ವಿಜ್ಞಾನಿಗಳು ಇತರ ವಿಜ್ಞಾನಿಗಳು ಅದನ್ನು ಸೂಡೋ/ ಕಲ್ಪಿತ ವಿಜ್ಞಾನವೆನ್ನುತ್ತಾರೆ. ಇಲ್ಲಿ ಆಧುನಿಕ ವಿಜ್ಞಾನಿಗಳು ವೈಜ್ಞಾನಿಕವಾಗಿ ಎತ್ತುವ ಪ್ರಶ್ನೆಗಳನ್ನು ಹಾಕಿಕೊಂಡು ವಿಜ್ಞಾನದ ದೃಷ್ಟಿಕೋನವನ್ನು ತೋರಿಸಿದೆ.
 • ನೊಡಿ.Astrology and science
 • Tests of astrology:
 • Astrologers often avoid making verifiable predictions, and instead rely on vague statements that let them try to avoid falsification.[18]:48–49 Across several centuries of testing, the predictions of astrology have never been more accurate than that expected by chance alone.[3] One approach used in testing astrology quantitatively is through blind experiment. When specific predictions from astrologers were tested in rigorous experimental procedures in the Carlson test, the predictions were falsified.[1] All controlled experiments have failed to show any effect. (Pigliucci, Massimo; Boudry, Maarten (2013). Philosophy of pseudoscience : reconsidering the demarcation problem. Chicago [u.a.]: Univ. of Chicago Press.)
 • ಅಲ್ಲಿ ಹೇಳಿರುವುದನ್ನು ಸರಳವಾಗಿ ಅರ್ಥವಾಗುವಮತೆ ಇಲ್ಲಿ ಹೇಳಿದ್ದೇನೆ. ನಿಮಗೆ ಇಂಗ್ಲಿಷನವರು ಬರೆದರೆ ಪಥ್ಯ- ಕನ್ನಡದಲ್ಲಿ ಬರೆದರೆ ಅಪಥ್ಯ: ನಾವು ನಕಲು ಮಾಡಿದರೆ ಮಾತ್ರಾ ಸರಿ. ಸ್ವಲ್ಪ ಸ್ವಂತಿಕೆ ಇದ್ದರೆ ಅಪರಾಧ; ಏನು ಹೇಳೋಣ: ಮೇಲಾಗಿ ತಕರಾರೇ ಮುಖ್ಯವಾಗಿರುವವರಿಗೆ ಸಕಾರಣವಾಗಿ ಹೇಳಿದರೂ ಒಪ್ಪುವರೇ?Bschandrasgr (ಚರ್ಚೆ) ೧೧:೧೩, ೧೪ ಜನವರಿ ೨೦೧೯ (UTC)
ಸರಿಯಾಗಿ ಮಂಡಿಸಿದರೆ ಎಲ್ಲವೂ ಪಥ್ಯವೇ. ಇಂಗ್ಲೀಶಿನ ಪುಟದಲ್ಲಿ ಎಷ್ಟು ನೀಟಾಗಿ ವಿಷಯ ಮಂಡಿಸಿದ್ದಾರೆ ನೋಡಿ. ನೀವು ರಚಿಸಿದ ಈ ಪುಟ ನಿಮಗೇ ಪ್ರಿಯ! ವಿಷಯದಿಂದ ಎತ್ತೆತ್ತಲೋ ಹೋಗಿದೆ. ಅಡ್ಡಾದಿಡ್ಡಿ ಕಾಪಿ ಪೇಸ್ಟ್ ಮಾಡುವುದನ್ನೇ ವಿಕಿಪಿಡಿಯಾ ಸಂಪಾದನೆ ಅಂದುಕೊಂಡಿರುವವರಿಗೆ ಏನು ಹೇಳಲು ಸಾಧ್ಯ! ಮುಂದುವರೆಸಿ, ಶುಭವಾಗಲಿ --ವಿಕಾಸ್ ಹೆಗಡೆ/ Vikas Hegde (ಚರ್ಚೆ) ೧೧:೪೧, ೧೪ ಜನವರಿ ೨೦೧೯ (UTC)
 • ಮಾನ್ಯರೇ, ನೀವು ಸರಿಯಾಗಿ ಗಮನಿಸಿಲ್ಲ - ಅದನ್ನು ಬರೆದವರಿಗೆ ಜ್ಯೊತಿಷ ಶಾಸ್ತ್ರದ ಪರಿಚಯವೇ ಇದ್ದಂತೆ ಕಾನುವುದಿಲ್ಲ, ಏಕೆಂದರೆ ಜ್ಯೋತಿಷ ಶಾಸ್ತ್ರದ ಪ್ರತಿ ಅಂಶವನ್ನು ಎತ್ತಿ ತೋರಿಸಿ ಅದರ ದೋಷಗಳನ್ನು ಸರಿಯಾಗಿ ಮನವರಿಕೆಯಾಗುವಂತೆ ಉದಾಹರಣೆ ಸಹಿತ ತೋರಿಸಬೇಕಿತ್ತು. ಅದರ ಬದಲು ಬೇರೆಯವರು ಹೇಳಿದ ಮಾತುಗಳನ್ನು ತುಂಬಿ, ಜ್ಯೋತಿಷ ಶಾಸ್ರದಲ್ಲಿ ಎಲ್ಲಿ ದೋXವಿದೆ ಎಂದು ಸ್ಪಷ್ಟವಾಗಿ ತೋರಿಸದಿದ್ದರೆ ೧೦ ಪುಟದ ಉದ್ದಕ್ಕೂ ಅಭಿಪ್ರಾಯ ಬರೆದರೆ ಅದು ವೈಜ್ಞಾನಿಕ ತರ್ಕವೇ? ನಿಮಗೆ ಇಂಗ್ಷಿಷಿನವರು ಉಗುಳಿದರೂ ಅದು ಗಂಗಾಮೃತ - ಉಳಿದವರು ಗಂಗಾಜಲ ಕೊಟ್ಟರೂ ಅದು ಗಂಜಲ!! ಅವರು ಚಿತ್ರ ಸಹಿತ ರಾಹು ಕೇತುಗಳ ಅರ್ಥವನ್ನು ವಿವರಿಸಬೇಕಿತ್ತು. ಜೋತಿಷ ಶಾಸ್ತರದಲ್ಲಿ ನಕ್ಷತ್ರವೆಂದರೆ ಏನು, ರಾಶಿ ಎಂದರೆ ಏನು ಫಲವನ್ನು ಹೇಗೆ ಗುಣಿಸಿ ಹೇಳುವರು, ಅವುಗಳಲ್ಲಿ ವೈಜ್ಞಾನಿಕವಾಗಿ ಏನು ದೋಷವಿದೆ ಎಂದು ಸಾಮಾನ್ಯರಿಗೆ ಅರ್ಥವಾಗುವಂತೆ ವಿವರಿಸಿದ್ದಾರೆಯೇ? ತಪ್ಪನ್ನು ತೋರಿಸುವಾಗ ಉದಾಹರಣೆ ಸಹಿತ ತೋರಿಸಬೇಕು. ಸುಮ್ಮನೆ ಯಾರೋ ಹೇಳಿದ್ದಾರೆಂದು ಉಲ್ಲೇಖ ಹಾಕುವುದಲ್ಲ. ಯಾವ ಆಧಾರ ಮೇಲೆ ವಿರೋಧಿಸಿದ್ದಾರೆ - ಅದು ಬೇಕು, ಅದು ವಿಜ್ಞಾನ; ಫಲಜ್ಯೊತಿಷ ಆಧಾರ ಕೊಡುವುದಾದರೆ ವರಾಹ ಮಿಹರ ಹೇಳಿದ್ದಾನೆ ಎಂದರೆ ಆಯಿತು- ಅದೇ ವಿಜ್ಞಾನ. ಈ ಲೇಖನವೂ ಹಾಗೇ ಇದೆ. ನೀವು ವಿಜ್ಞಾನದ ವಿದ್ಯಾರ್ಥಿಯಲ್ಲವೇ?
 • ನಿಮಗೆ ಅದರಲ್ಲಿ ದೋಷಕಾಣಲಿಲ್ಲ, ಏಕೆಂದರೆ ನಿಮಗೆ ಜ್ಯೋತಿಷ ಶಾಸ್ತ್ರದ ಮೂಲ ಪರಿಚಯ ಇದ್ದಂತಿಲ್ಲ. ಅದಲ್ಲದೆ ವೈಜ್ಞಾನಿಕವಾಗಿ 'ದತ್ತ' 'ಪ್ತಯೋಗ' 'ಪರಿಶೀಲನೆ' 'ಸಾಧನೆ' 'ಸಾಧಿತ,' ತೀರ್ಮಾನ/ 'ಫಲಿತಾಂಶ/ ರಿಸುಲ್ಟ್- ಕನ್ಕ್ಲೂಶನ್" ಇವು ವಿಜ್ಞಾನದ ತಳಹದಿ- ಅದು ನಿಮಗೆ ಗೊತ್ತಿರಬಹುದು; ನೀವು ಹೊಗಳಿದ ಲೇಖನದಲ್ಲಿ ಅವು ಇವೆಯೇ? ಅದನ್ನು ಬರೆದವರಿಗೆ ಪಾಶ್ಚಿಮಾತ್ಯ ಪದ್ದತಿಯ ಜ್ಯೋತಿಷದ ಸಾಮಾನ್ಯ ಪರಿಚಯ ಮಾತ್ರಾ ಇದ್ದಂತಿದೆ. ಫಲ ಜ್ಯೋತಿಷ್ಯದ ಮೂಲ ತತ್ವವನ್ನು ಹೇಳದೆ, ಸಕಾರಣ ತೊರಿಸದೆ ಖಂಡಿಸಿದರೆ - ಸುಮ್ಮನೆ ತೆಗಳಿದಂತೆ, ಅದು ವೈಜ್ಞಾನಿಕವೇ? ಸುಮ್ಮನೇ ವಿಜ್ಞಾನಿಗಳ ಅಭಿಪ್ರಾಯ ಸಂಗ್ರಹಿಸಿದರೆ ಅದು ಅಭಿಪ್ರಾಯ ಸಂಗ್ರಹ ಲೇಖನ, ಸ್ವಂತ ಅಬಿಪ್ರಾಯದ ಯಾ ಬ್ಲಾಗ್. ನಿಮಗೆ ಏನೂ ಹೇಳಿದರೂ ಪ್ರಯೊಜನವಿಲ್ಲವೆಂದು ತೋರುವುದು. ಏಕೆಂದರೆ ತಾನು ಹಿಡಿದ ಕೋಳಿಗೆ ಮೂರು ಕಾಲು ಎಂದರೆ, ಉತ್ತರಿಸುವುದು ಹೇಗೆ? ಖಗೋಳಶಾಸ್ತ್ರದ ಆಧಾರ ಇಟ್ಟು ಜ್ಯೋತಿಷ ಹೇಗೆ ಕಾಲ್ಪನಿಕ-ವಿಜ್ಞಾನ ಎಂದು ಉದಾಹರಣೆ ಸಹಿತ ಸಾಧಿಸಬೇಕಿತ್ತು. ಅದಿಲ್ಲದೆ ೧೦- ೨೦ ಪುಟ ಬರೆದರೆ ನಿಮಗೆ ಅದು ಸರಿ ಕಂಡಿದ್ದು, ನಾವೆಲ್ಲಾ ದಡ್ಡರು ಅವರು ಮಾತ್ರಾ ಜಾಣರು, ಎಂಬ ಪೂರ್ವಾಗ್ರಹ- ಮತ್ತೇನು? ದಯವಿಟ್ಟು ಗಮನಿಸಿ- ಅತ್ಯಂತ ಪ್ರಮುಖವಾದ ಭೌತಶಾಸ್ತ್ರದ ಪಟಕ್ಕೆ ಕನ್ನಡದಲ್ಲಿ ಒಂದೇ ವಾಕ್ಯ ಬರೆದಿದ್ದರು. ನಾನು ಅದರ ವ್ಯಾಖ್ಯೆಯನ್ನು ಮಾತ್ರಾ ಹಾಕಿದ್ದೇನೆ. ಆ ವಿಜ್ಞಾನದ ಲೇಖನವನ್ನು ದಯವಿಟ್ಟು ನೀವು ಪೂರ್ತಿ ಮಾಡಿ. ವಿಜ್ಞಾನ ಎಂದರೆ ಏನು ಎಂದು ಅರ್ಥವಾಗಬಹುದು. ನಿಮ್ಮವ:Bschandrasgr (ಚರ್ಚೆ) ೧೪:೦೩, ೧೪ ಜನವರಿ ೨೦೧೯ (UTC)
ಉದಾಹರಣೆ ಸಮೇತ ಸಾಧಿಸಲು, ತರ್ಕ ಮಂಡಿಸಲು ಇದು ವೇದಿಕೆಯಲ್ಲ. ನೀವು ಸಂಶೋಧನಾ ಪ್ರಬಂಧ ಬರೆಯುತ್ತಿಲ್ಲ. ಇದು ವಿಕಿಪೀಡಿಯಾ. ಇಲ್ಲಿ ಮಾಹಿತಿಗಳು ನಿಖರವಾಗಿ ಇರಬೇಕು. ಆ ಇಂಗ್ಲೀಶ್ ಪುಟ ಸರಿಯಿಲ್ಲ ಎಂದಮೇಲೆ ಅದೇ ಪುಟವನ್ನು ಯಥಾವತ್ತಾಗಿ ಶೀರ್ಷಿಕೆ ಅನುವಾದ ಮಾಡಿ ವಿಷಯವನ್ನು ಬರೆಯಲು ಆಯ್ದುಕೊಂಡದ್ದೇಕೆ? ಜ್ಯೋತಿಷ್ಯ ಮತ್ತು ವಿಜ್ನಾನ ಎಂದಿದ್ದ ಮೇಲೆ ಜ್ಯೋತಿಷ್ಯ ಶಾಸ್ತ್ರದ ವೈಜ್ನಾನಿಕತೆಯನ್ನು ವಿವರಿಸಬೇಕು ಅಥವಾ ಎರಡರ ಹೋಲಿಕೆ ಮಾಡುತ್ತಾ ಮಂಡಿಸಬೇಕು. ಬರೀ ಜ್ಯೋತಿಷ್ಯದ ಬಗ್ಗೆ ಕೊರೆದರೆ, ಎಲ್ಲಿಂದಲೋ ತಂದು ಕಸ ತುಂಬಿದಂತೆ ತುಂಬುತ್ತಾ ತಮ್ಮದೇ ವಿಶ್ಲೇಷಣೆಗಳನ್ಜು ಸೇರಿಸುತ್ತಾ ಕೂತರೆ ಅಸಂಬದ್ಧ.--ವಿಕಾಸ್ ಹೆಗಡೆ/ Vikas Hegde (ಚರ್ಚೆ) ೦೬:೦೮, ೧೫ ಜನವರಿ ೨೦೧೯ (UTC)

-

 • ಮಾನ್ಯರೇ= ಯಾವುದೇ ವಿಷಯವು ವಿಜ್ಞಾನವಲ್ಲ ಅಥವಾ ಸೂಡೊ ವಿಜ್ನಾನವೆಂದು ಹೇಳಬೇಕಾದರೆ ಅದರಲ್ಲಿರುವ ದೋಷವನ್ನು ಎತ್ತಿ ತೋರಿಸಿ ಹೇಳಬೇಕು, ಅದಿಲ್ಲದೆ ಮತ್ತೊಬ್ಬರು ಹೇಳಿದ್ದಾರೆ , ವಿಜ್ಞಾನಿ ಹೇಳಿದ್ದಾರೆ ಎಂದಷ್ಟೇ ಹೇಳಿದರೆ ಅದನ್ನೆ ಉದ್ದಕ್ಕೂ ಹೇಳಿ ೧೦ ಪುಟ ಬರೆದರೆ ಅದು ವೈಜ್ಞಾನಿಕ ವಿಚಾರದ ಹೋಲಿಕೆ ಆಗುವುದೆ? ಫಲ ಜ್ಯೋತಿಷ ವಿಜ್ಞಾನವಲ್ಲ ಎಂದು ಹೇಳಬೇಕಾದರೆ ಅದನ್ನು ವಿರೋಧಿಸಿದವರು ಏಕೆ ಅದು ವಿಜ್ಞಾನವಲ್ಲ ಎಂದಿದ್ದಾರೆ ಎಂದು ಹೇಳದೆ, ಕೇವಲ ಐನಸ್ಟೀನ ಹೇಳಿದರು, ಗೆಲಿಲಿಯೋ ಹೇಳಿದ ಎಂದು ಪಟ್ಟಿ ಮಾಡಿದರೆ ಅದಕ್ಕೆ ಅರ್ಥವಿದೆಯೇ? ಅವರು ಯಾವ ಕಾರಣಕ್ಕೆ ಹಾಗೆ ಹೇಳಿದರು ಎಂದಾದರೂ ತಿಳಿಸಬೇಕು. ಇಲ್ಲದಿದ್ದರೆ ಅದು ವೈಜ್ಞಾನಿಕ ನಿರಾಕರಣೆ ಆಗುವುದಿಲ್ಲ. ಆ ಲೇಖನ ಬರೆದವನಿಗೆ ಫಲಜೋತಿಷದ ಜ್ಞಾನವೂ ಇಲ್ಲ - ಖಗೋಳವಿಜ್ಞಾನದ ಜ್ನಾನವೂ ಇದ್ದಂತೆ ಕಾಣುವುದಿಲ್ಲ, ಕಾರಣ ಇಡೀ ಲೇಖನದಲ್ಲಿ ಅವುಗಳ ಪ್ರಸ್ತಾಪವೇ ಇಲ್ಲ. ಆ ಬಗೆಯ ಲೇಖನ ಯಾರೂ ಬರೆಯಬಹುದು - ಅವರಿವರು ಹೇಳಿದ್ದಾರೆಂದು- ವೈಜ್ಞಾನಿಕವಾಗಿ ನಿರಾಕೆರಣೆ ಮಾಡಬೇಕಾದರೆ ಸಂಶೋದನಾ ಲೇಖನವಾಗ ಬೇಕಿಲ್ಲ; ಆದರೆ ನಿರಾಕರಣೆಗೆ ರುಜುವಾತು ಇರಬೇಕು. ಉದಾಹರಣೆಗೆ: ಹಿಂದೆ ಭೂಮಿ ಚಪ್ಪಟೆಯಾಗಿದೆ ಎಂದು ನಂಬಿದ್ದರು. ಕುರಾನಿನಲ್ಲೂ ಇದೆ, ಪುರಾಣದಲ್ಲೂ ಇದೆ, ಹಿರಣ್ಯಾಕ್ಷ ಭೂಮಿಯನ್ನು ಚಾಪೆಯಂತೆ ಸುತ್ತಿಕೊಂಡು ಸಮುದ್ರದೊಳಗೆ ಹೋದ ವಿಷಯ ನಿಮಗೆ ಗೊತ್ತಿರಬಹುದು. ಅದನ್ನು ಅಲ್ಲ- ಭೂಮಿ ದುಂಡಗಿದೆ ಎಂದು ಹೇಳಲು ಗೆಲಿಲಿಯೋ ಹೇಳಿದ, ಕೊಲಂಬಸ್ ಹೇಳಿದ ಎಂದರೆ ಸಾಕೆ? ಯಾವ ಆಧಾರ ಎಂದು ಮಕ್ಕಳೇ ಕೇಳಬಹುದು; ನಿಮ್ಮತಂಹವರು ಅವರ ತಲೆ ಮೇಲೆ ಹೊಡೆದು ಹಾಗೆ ಕೇಳಬಾರದು. ಅವರು ಹೇಳಿದಮೇಲೆ ಮುಗಿಯಿತು ಎನ್ನಬಹುದು. ಆದರೆ ಅದಕ್ಕೆ ವೈಜ್ಞಾನಿಕ ಕಾರಣಗಳನ್ನು ಪ್ರಾಥಮಿಕ ಪಠ್ಯದಲ್ಲೆ ಬರೆದಿದ್ದಾರೆ. ಹಾಗೆ ಬೆರದವರು ನಿಮ್ಮಷ್ಟು ಜಾಣರು ಅಲ್ಲದಿರಬಹುದು.
 • ನೀವು ಆ ಇಂಗ್ಲಿಷ್ ಲೇಖನ ಓದಿ ಅದರ ಆಧಾರದ ಮೇಲೆ ಯಾರಿಗಾದರೂ ಸಕಾರಣವಾಗಿ ಫಲಜೋತಿಷ ವೈಜ್ಞಾನಿಕ ಅಲ್ಲ ಎಂದು ಮನದಟ್ಟು ಮಾಡಲು ಸಾಧ್ಯವೇ/ ಅಥವಾ ಯಾರೇ ಅದನ್ನು ಓದಿದರೂ ಫಲಜ್ಯೋತಿಷದಲ್ಲಿ ಅವೈಜ್ಞಾನಿಕವಾದುದು ಏನಿದೆ ಎಂದು ತಿಳಿಯುವುದೇ? ಅದು ತಿಳಿಯುವುದು ಬೇಡವೇ? ಅದು ತಿಳಿಯದಿದ್ದರೆ ಆ ಲೇಖನವೇ ವ್ಯರ್ಥ!! ನಿಮಗೆ ಮಾತ್ರಾ ಪಥ್ಯ. ಚಂದ್ರನು ದೊಡ್ಡ ನಕ್ಷತ್ರ ಎಂದು ಭಗವದ್ಗಿತೆಯಲ್ಲೇ ಇದೆ. ಪುರಾಣಗಳಲ್ಲೂ ಇದೆ. ಅಲ್ಲ ಅದು ಗ್ರಹ ಎಂದು ಹೇಳಲು ಯಾವುದೋ ವಿಜ್ಞಾನಿಯ ಹೆಸರು ಹೇಳಿದರೆ ಸಾಕೆ? ಅದೂ ಪುರಾಣವೇ ಆಯಿತು. ಯಾವುದನ್ನೇ ಆಗಲಿ ವೈಜ್ಞಾನಿಕವಾಗಿ ವಿಚಾರ ಮಾಡುವ ಬಗೆ ಇದೆ. ಅದು ಸಂಶೋಧನಾ ಲೇಖನವೇ ಆಗಬೇಕಿಲ್ಲ. ವಿಜ್ಞಾನ ಮತ್ತು ಫಲಜ್ಯೋತಿಷ ಇವಗಳ ಬಗೆಗೆ ಬರೆಯುವಾಗ ಅವು ಏನು ಹೇಳುತ್ತವೆ ಎಂದು ವಿಚಾರ ಮಾಡುವುದು ಬೇಡವೇ? ನಾನು ಅನೇಕ ಇಂಗ್ಲಿಷ್ ಲೇಖನಗಳನ್ನು ಓದಿದ್ದೇನೆ. ಅವುಗಳಲ್ಲಿ ಅನೇಕ ತಪ್ಪುಗಳೂ ಇವೆ. ಉದಾ: ಭಾರತದ ಆದುನಿಕ ಇತಿಹಾಸದಲ್ಲೇ ಅನೇಕ (ಕಾಲಕ್ಕೆ ಸಂಬಂಧಿಸಿದಂತೆ) ತಪ್ಪುಗಳನ್ನು ಮಾಡಿದ್ದಾರೆ. ವಿಕಿಪೀಡಿಯಾಕ್ಕೆ ಬರೆಯುವವರು ವಿದ್ವಾಂಸರಲ್ಲ. ಸಾಮಾನ್ಯರು- ಇಂಗ್ಲಿಷ್‍ಗೂ ಅದು ಅನ್ವಯ. ತಿಳಿಯಿರಿ. "ನಾನು ಹೇಳಿದ್ದೇ ಸರಿ", ಎಂದು ವಾದಿಸುವ ನಿಮಗೆ ಬಹಳ ಬರೆಯಬೇಕಾಯಿತು. ವಿಶ್ವ ಕೋಶದಂತೆ ಬರೆದಿರುವ ಶಿವರಾಮ ಕಾರಂತರ ಗ್ರಂಥಗಳನ್ನು ಓದಿ, ಆರ್. ಎಲ್. ನರಸಿಂಹಯ್ಯನವರ ಗ್ರಂಥಗಳನ್ನು ಓದಿ. ವೈಜ್ಞಾನಿಕವಾಗಿ ವಿಚಾರ ಮಾಡುವುದು ಹೇಗೆ ಎಂದು ತಿಳಿಯುವುದು. ನಿಮ್ಮವ-Bschandrasgr (ಚರ್ಚೆ) ೦೭:೪೮, ೧೫ ಜನವರಿ ೨೦೧೯ (UTC)
Return to "ಜ್ಯೋತಿಷ ಮತ್ತು ವಿಜ್ಞಾನ" page.