ಚರ್ಚೆಪುಟ:ಐಎನ್ಎಸ್ ಖಾಂಡೇರಿ

ಜಲಾಂತರ್ಗಾಮಿ ನೌಕೆ ‘ಖಾಂಡೇರಿ,ಯ ವಿವರ

ಬದಲಾಯಿಸಿ
  • ರಹಸ್ಯವಾಗಿ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ.
  • ನಿಖರ ದಾಳಿ ನಡೆಸುವ ಶಸ್ತ್ರಾಸ್ತ್ರ ಬಳಸಿ ವೈರಿಗೆ ಭಾರಿ ಹಾನಿ ಉಂಟು ಮಾಡುವುದು.
  • ನೌಕೆಗಳನ್ನು ಧ್ವಂಸಗೊಳಿಸುವ ಕ್ಷಿಪಣಿ, ಸ್ಫೋಟಕ ಬಳಸುವ ಸಾಮರ್ಥ್ಯ.
  • ಈ ಜಲಾಂತರ್ಗಾಮಿ ಎಲ್ಲಿದೆ ಎಂದು ಪತ್ತೆ ಮಾಡುವುದು ತೀರಾ ಕಷ್ಟ.
  • ಶತ್ರು ದೇಶದ ಕಡೆಯಿಂದ ನುಗ್ಗುವ ಜಲಾಂತರ್ಗಾಮಿಗಳನ್ನು ಹಿಮ್ಮೆಟ್ಟಿಸಲು ಸಹ ಈ ಜಲಾಂತರ್ಗಾಮಿಗಳನ್ನು ಬಳಸಿಕೊಳ್ಳಬಹುದು.
  • ಗುಪ್ತವಾಗಿ ಮಾಹಿತಿ ಕಲೆಹಾಕುವ ಕೆಲಸಕ್ಕೆ ಈ ನೌಕೆ ಹೇಳಿ ಮಾಡಿಸಿದಂತಿದೆ.

೫೦ ವರ್ಷದ ಆಚರಣೆ

ಬದಲಾಯಿಸಿ
  • ಭಾರತೀಯ ನೌಕಾಪಡೆಯ ಜಲಾಂತರ್ಗಾಮಿ ವಿಭಾಗವು ಈ ವರ್ಷದ ಡಿಸೆಂಬರ್ 8ರಂದು 50 ವರ್ಷಗಳನ್ನು ಪೂರೈಸಲಿದೆ. 1967ರ ಡಿಸೆಂಬರ್‌ 8ರಂದು ನೌಕಾಪಡೆಗೆ ಐಎನ್‌ಎಸ್‌ ಕಲ್ವರಿ ಜಲಾಂತರ್ಗಾಮಿಯನ್ನು ಹಸ್ತಾಂತರಿಸಲಾಯಿತು. ಅಂದಿನಿಂದ ಪ್ರತಿವರ್ಷ ಡಿಸೆಂಬರ್‌ 8ರಂದು ಜಲಾಂತರ್ಗಾಮಿ ದಿನ ಆಚರಿಸಲಾಗುತ್ತಿದೆ. ಭಾರತದ ನೌಕಾಪಡೆಯ ಶಕ್ತಿ –15. ಭಾರತೀಯ ನೌಕಾದಳದ ಬಳಿ ಈಗ ಇರುವ ಜಲಾಂತರ್ಗಾಮಿಗಳು. 7 ಜಲಾಂತರ್ಗಾಮಿಗಳು ನಿರ್ಮಾಣ ಮತ್ತು ಪರೀಕ್ಷಾ ಹಂತದಲ್ಲಿವೆ.


@Bschandrasgr ಈ ರೀತಿಯಲ್ಲಿ ಪ್ರಜಾವಾಣಿಯಿಂದ ನಕಲು ಮಾಡಿ ಬರೆಯುವುದು ಸೂಕ್ತವೇ? ವಿಶ್ವಕೋಶಕ್ಕೆ ಮಾಹಿತಿ ಹಾಕುವಾಗ ಅದು ವಿಶ್ವಕೋಶದ ಮಾದರಿಯಲ್ಲಿ ಇರಲಿ. ಕನ್ನಡ ವಿಕಿಪೀಡಿಯ ಬೇರೆ ದಿನಪತ್ರಿಕೆಗಳಿಂದ ಪಡೆದ ಮಾಹಿತಿಯನ್ನು ತುಂಬಿಸುವ ಡಂಪಿಂಗ್ ಯಾರ್ಡ್ ಆಗದಿರಲಿ ಎಂಬುದು ನನ್ನ ಆಶಯ--ಗೋಪಾಲಕೃಷ್ಣ (ಚರ್ಚೆ) ೦೯:೧೯, ೧೧ ಆಗಸ್ಟ್ ೨೦೧೭ (UTC)

  • ಕೇವಲ ಮಾಹಿತಿಗಳಿದ್ದಲ್ಲಿ ಅದನ್ನೇ ಹಾಕುವುದರಲ್ಲಿ ತಪ್ಪೇನು?? ಈ ವಿಷಯವನ್ನು ಹಾಕಬೇಕೆಂದರೆ ಅದರ ಮಾಹಿತಿಯ ವಾಕ್ಯಗಳನ್ನು ಬದಲಿಸಲು ಸಾದ್ಯವೇ?
  • ಇನ್ನು ಮುಂದೆ ಯಾವುದೇ ವಿಜ್ಞಾನ , ತಾಂತ್ರಿಕ ವಿಷಯದ ಮಾಹಿತಿಗಳನ್ನು ಹಾಕುವುದನ್ನು ಕೈಬಿಡಬೇಕಷ್ಟೆ!! ಏಕೆಂದರೆ ಆ ವಾಕ್ಯಗಳನ್ನು ಬದಲಿಸಿ ಬರೆಯಲು ಅಥವಾ ಸಂಕ್ಷೇಪಿಸಲು ಬರುವುದಿಲ್ಲ. ಆ ಮಾಹಿತಿಗಳನ್ನು ಪತ್ರಿಕೆಯವರು ಸರ್ಕಾರಿ ಅಥವಾ ಇಲಾಖೆ ಯಾ ಕಂಪನಿಯಿಂದ ಪಡೆದಿರುವುದರಿಂದ ಅದಕ್ಕೆ ಕಾಪಿರೈಟ್ ಇರುವುದಿಲ್ಲ.
  • ನಿಮ್ಮದು ಪ್ರಬಲ ವಿರೋಧವಿದ್ದಲ್ಲಿ ಮುಖ್ಯವಾದ ಮಾಹಿತಿಗಳನ್ನು ತುಂಬುವುದನ್ನು ನಿಲ್ಲಿಸುತ್ತೇನೆ.
  • ಹಾಗೆಯೇ, ಈ ದಿನ 13ನೇ ಉಪರಾಷ್ಟ್ರಪತಿಯಾಗಿ ವೆಂಕಯ್ಯ ನಾಯ್ಡು ಪ್ರಮಾಣವಚನ ಸ್ವೀಕರಿಸಿದ ವಿಷಯ ಮತ್ತು ಅವರ ವ್ಯಕ್ತಿ ಚಿತ್ರಣವನ್ನು ನಾನು ಸ್ವಂತ ಯೋಚಿಸಿ ಬರೆಲು ಸಾದ್ಯವಿಲ್ಲ. ಮೇಲಾಗಿ ಆಧಾರವಿಲ್ಲದೆ ಬರೆಯುವಂತೆಯೂ ಇಲ್ಲ.
  • ಈಗ ಐಎನ್‌ಎಸ್ ಕಲ್ವರಿ ಲೇಖನಕ್ಕೆ ಮುಂದಿನ ವಿಶೇಷ ವಿವರಗಳು ಪತ್ರಿಕೆಯಲ್ಲಿ ಬಂದುದನ್ನೇ ಹಾಕಬೇಕಾಗುವುದು; ಏಕೆಂದರೆ ಅದು ತುಂಬಾ ಸಂಕ್ಷಿಪ್ತವಾಗಿದೆ. ಎರಡನಯದಾಗಿ ನೀವು ಹೆಸರು ಬದಲಾಯಿಸಿದುದು ಸರಯಲ್ಲ. ಹುಡುಕುವವರು ಜಲಾಂತರ್ಗಾಮಿ ಎಂದೇ ಹುದುಕುವರು. ಅದೂ ನಾನು ಸಂಪಾದನೆ ಮಾಡುತ್ತಿರುವಾಗ ಬದಲಾಯಿಸಿ ಘರ್ಷಣೆಗೆ ಕಾರಣವಾಯಿತು. ಮುಂದಿನ ಮುಖ್ಯ ವಿವರ ತುಂಬಬೇಕಿತ್ತು ನಿಲ್ಲಿಸಿದ್ದೇನೆ. ಮಾಹಿತಿ ವಿವರಗಳು ಅಪೂರ್ಣವಾಯಿತು, ಇದು ಕನ್ನಡ ವಿಕಿಯ ಹಣೇಬರಹ. ವಂದನೆಗಳುBschandrasgr (ಚರ್ಚೆ) ೧೦:೧೪, ೧೧ ಆಗಸ್ಟ್ ೨೦೧೭ (UTC)
  • ಕಾಪಿರೈಟ್ ಇಲ್ಲದಿದ್ದರೆ ಅದನ್ನು ನಮಗೆ ಬೇಕಾದ ರೀತಿಯಲ್ಲಿ (ವಿಕಿಗೆ) ವಾಕ್ಯವನ್ನು ಬದಲಾಯಿಸಬಹುದು. ಪತ್ರಿಕೆಯು ಒಂದು ದಿನಕ್ಕಷ್ಟೇ ಸೀಮಿತ. ಉದಾಹರಣೆಗೆ ಪತ್ರಿಕೆಯಲ್ಲಿ ಐಎನ್ಎಸ್ ಕಲ್ಪರಿ ಇಂದು ಲೋಕಾರ್ಪಣೆಯಾಯಿತು ಎಂದಿದ್ದರೆ ನೀವು ಅದನ್ನೇ ಕಾಪಿ ಹೊಡೆದರೆ ನಾನು ಒಂದು ವರ್ಷದ ನಂತರ ಬಂದು ವಿಕಿಯಲ್ಲಿ ಐಎನ್ಎಸ್ ಕಲ್ಪರಿ ಎಂದು ಹುಡುಕುತ್ತೇನೆ. ಆಗ ಇಂದು ಲೋಕಾರ್ಪಣೆ ಆಯಿತು ಎಂದು ಇದ್ದರೆ ಅದು ನಾನು ಓದುವ ದಿನ ಲೋಕಾರ್ಪಣೆ ಆಯಿತು ಎಂದು ಅಂದುಕೊಳ್ಳುತ್ತೇನೆ.
  • ಶೀರ್ಷಿಕೆ ಬಹಲಾಯಿಸಿದ್ದು ಏಕೆಂದರೆ ಹುಡುಕುವವರಿಗೆ ಕಲ್ಪರಿ ಎಂದರೆ ಅದು ಜಲಾಂತರ್ಗಾಮಿ ಎಂದೇ ಹೇಗೆ ತಿಳಿದಿರುತ್ತದೆ? ಎಲ್ಲಿಯೋ ಜಲಾಂತರ್ಗಾಮಿಯ ಹೆಸರು ಐಎನ್ಎಸ್ ಕಲ್ಪರಿ(ಸೇನೆ ಇಟ್ಟ ಹೆಸರು) ಎಂದು ತಿಳಿದು ಇಲ್ಲಿ ಹುಡುಕುತ್ತಾರೆ. ಆಗ ಅವರಿಗೆ ಮಾಹಿತಿ ಸಿಗಲೂಬಹುದು ಅಥವಾ ಸಿಗದಿರಲೂಬಹುದು. ಅದಕ್ಕೋಸ್ಕರ ಬದಲಾಯಿಸುತ್ತಿದ್ದೇನೆ. ನಿಮಗೆ ಅದು ಜಲಾಂತರ್ಗಾಮಿ ಎಂದು ತಿಳಿದಿದ್ದರೆ ಇತರ ಎಲ್ಲರಿಗೂ ತಿಳಿದಿರಬೇಕೆಂದಿಲ್ಲ. --ಗೋಪಾಲಕೃಷ್ಣ (ಚರ್ಚೆ) ೧೧:೫೨, ೧೧ ಆಗಸ್ಟ್ ೨೦೧೭ (UTC)
Return to "ಐಎನ್ಎಸ್ ಖಾಂಡೇರಿ" page.