ಚರ್ಚೆಪುಟ:ಅಬ್ದುಲ್ ಕರೀಂ ಖಾನ್

ಪ್ರಿಯ ಶುಶ್ರುತರೆ,

"ಅಬ್ದುಲ್ ಕರೀಮ ಖಾನ ಲೇಖನವನ್ನು ಅಬ್ದುಲ್ ಕರೀಂ ಖಾನ್‍‍ಗೆ ಹೊರಳಿಸಿದ್ದೀರಿ. ಹೆಸರುಗಳನ್ನು ಬರೆಯುವದರ ಬಗೆಗೆ ನಾನೊಮ್ಮೆ ಮನ | Mana ಅವರಿಗೆ ಒಂದು ಸಲಹೆ ಕೊಟ್ಟಿದ್ದೆ. ಯಾರು ತಮ್ಮ ಹೆಸರನ್ನು ಯಾವ ರೀತಿಯಲ್ಲಿ ಬರೆಯುತ್ತಾರೊ, ಅದೇ ರೀತಿಯಲ್ಲಿ ನಾವೂ ಸಹ ದಾಖಲಿಸಬೇಕು ಎಂದು. ಮನ | Mana ಅದಕ್ಕೆ ಒಪ್ಪಿಕೊಂಡಿದ್ದರು. ಉದಾಹರಣೆಗೆ ಶಂಕರ ಮೊಕಾಶಿ ಪುಣೇಕರ ತಮ್ಮ ಹೆಸರನ್ನು ಶಂಕರ್ ಮೊಕಾಶಿ ಪುಣೇಕರ್ ಎಂದು ಬರೆಯುವದಿಲ್ಲ; ಭೀಮಸೇನ ಜೋಶಿಯವರು ತಮ್ಮ ಹೆಸರನ್ನು ಭೀಮಸೇನ್ ಜೋಷಿ ಎಂದು ಬರೆಯುವದಿಲ್ಲ; ಗಿರೀಶ ಕಾರ್ನಾಡರು ತಮ್ಮ ಹೆಸರನ್ನು ಗಿರೀಶ್ ಕಾರ್ನಾಡ್ ಎಂದು ಬರೆಯುವದಿಲ್ಲ. ಅದರಂತೆ ಅಬ್ದುಲ ಕರೀಮ ಖಾನರ ಹೆಸರನ್ನು ಹಿಂದಿಯಲ್ಲಿ ನೋಡಿರಿ.ಅಲ್ಲಿ करीम ಎಂದು ಬರೆಯುತ್ತಾರೆ;ಆದರೆ करीं ಎಂದು ಬರೆಯುವದಿಲ್ಲ.ಆದರೆ ಇಂದು ಕನ್ನಡ ವಿಕಿಪೀಡಿಯಾದಲ್ಲಿ ನಾವು ತಪ್ಪು ಹೆಸರುಗಳನ್ನು ಹೇರಳವಾಗಿ ಕಾಣುತ್ತಿದ್ದೇವೆ. ಆದುದರಿಂದ ನಾವು ಇಂತಹ ತಪ್ಪುಗಳನ್ನು ಮಾಡುವದು ಬೇಡವೆಂದು ತಮ್ಮಲ್ಲಿ ವಿನಮ್ರವಾಗಿ ಸೂಚಿಸುತ್ತೇನೆ

Sunaath ೧೫:೪೬, ೧೭ December ೨೦೦೬ (UTC)ಸುನಾಥ

ಕ್ಷಮಿಸಿ. ಎರಡು ಲೇಖನಗಳು duplicate ಆಗಿತ್ತು...ಹಿಂದಿಯಲ್ಲಿ करीम ಎಂಬುವುದು ಕನ್ನಡದಲ್ಲಿ ಕರೀಮ್ ಎಂದಾಗುತ್ತದಲ್ಲವೆ (ಹಿಂದಿಯಲ್ಲಿ ಕೊನೆ ಅಕ್ಷರ ಯಾವಾಗಲು ಅರ್ಧಾಕ್ಷರವಾಗಿರುವುದರಿಂದ)? ಆದ್ದರಿಂದ ಹೊಸ ಅಬುಲ್ ಕರೀಮ್ ಖಾನ್ ಎಂಬ ಪುಟವನ್ನು ಸೃಷ್ಟಿಸಬೇಕಾಗಿತ್ತು. ಆಷ್ಟು ಮಾಡುವಷ್ಟು ನನಗೆ ಸಮಯ ಮತ್ತು inclination ಇರಲ್ಲಿಲ್ಲ.. ಅದಕ್ಕೆ ಸಮೀಪವಾದ ಅಬ್ದುಲ್ ಕರೀಂ ಖಾನ್ಗೆ ಬೇರೆ ಲೇಖನವನ್ನು merge ಮಾಡಿದೆ... ಚರ್ಚೆಪುಟದಲ್ಲಿ ಮೊದಲು ನಾನು ಕೇಳಬೇಕಿತ್ತು....ನನ್ನ ತಪ್ಪು. ಮತ್ತೊಮ್ಮೆ ಕ್ಷಮಿಸಿ. ಶುಶ್ರುತ \ಮಾತು \ಕತೆ ೧೬:೩೪, ೧೭ December ೨೦೦೬ (UTC)

Start a discussion about ಅಬ್ದುಲ್ ಕರೀಂ ಖಾನ್

Start a discussion
Return to "ಅಬ್ದುಲ್ ಕರೀಂ ಖಾನ್" page.