ಚಮಕ್ (ಚಲನಚಿತ್ರ)

ಕನ್ನಡ ಚಲನಚಿತ್ರ

ಸಿಂಪಲ್ ಸುನಿ ನಿರ್ದೇಶನ ಹಾಗು ಟಿ.ಅರ್.ಚಂದ್ರಶೇಖರ್ ಅವರ ನಿರ್ಮಾಣದಲ್ಲಿ[], ೨೦೧೭ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರ, ಚಮಕ್. ಗಣೇಶ್ ಹಾಗು ರಶ್ಮಿಕಾ ಮಂದಣ್ಣ ಮುಖ್ಯಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದ ಮೊದಲನೆ ಕಿರುನೋಟವನ್ನು ೧೮ ಮೇ ೨೦೧೭ರಂದು ಬಿಡುಗಡೆ ಮಾಡಲಾಯಿತು[]. ಸಂತೋಷ್ ರೈ ಪತಾಜೆ ಛಾಯಾಗ್ರಹಣದಲ್ಲಿ ಮೂಡಿಬಂದ ಈ ಚಿತ್ರದ ಸಂಗೀತ ನಿರ್ದೇಶನವನ್ನು ಜುಡಾಹ್ ಸ್ಯಾಂಡಿಯವರು ನಿರ್ವಹಿಸಿದ್ದಾರೆ.

ಚಮಕ್
ಚಮಕ್ ಕನ್ನಡ ಚಲನಚಿತ್ರ
Directed byಸಿಂಪಲ್ ಸುನಿ
Written byಸಿಂಪಲ್ ಸುನಿ, ಅಭಿಶೇಕ್ ಸವಳಗಿ, ವೆಂಕಟೇಶ್ ಶರ್ಮ
Produced byಟಿ.ಆರ್.ಚಂದ್ರಶೇಖರ್
Starringಗಣೇಶ್, ರಶ್ಮಿಕಾ ಮಂದಣ್ಣ
Cinematographyಸಂತೋಷ್ ರೈ ಪತಾಜೆ
Music byಜುಡಾಹ್ ಸ್ಯಾಂಡಿ
Production
company
ಕ್ರಿಸ್ಟಲ್ ಪಾರ್ಕ್ ಸಿನೆಮಾಸ್
Release date
೨೯ ಡಿಸೆಂಬರ್ ೨೦೧೭
Languageಕನ್ನಡ

ಈ ಚಿತ್ರವು ಸುನಿ ಹಾಗು ಗಣೇಶ್ ಜೋಡಿಯ ಮೊತ್ತಮೊದಲನೆ ಚಿತ್ರವಾಗಿದೆ[]. ಚಿತ್ರದ ಚಿತ್ರೀಕರಣವು ೧೪ ಏಪ್ರಿಲ್ ೨೦೧೭ ರಂದು ಬೆಂಗಳೂರಿನಲ್ಲಿ ಆರಂಭವಾಯಿತು. ಚಿತ್ರದ ಪ್ರಚಾರ ಕಾರ್ಯದ ಅಂಗವಾಗಿ ಚಿತ್ರತಂಡವು ೨೪ ಹಾಗು ೨೭ ಮೇ ತಿಂಗಳ ನಡುವೆ, ಚಿತ್ರದ ಹೋಳಿ ಹಾಡಿನ ಚಿತ್ರಿಕರಣದಲ್ಲಿ ಪಾಲ್ಗೊಳ್ಳಲು ಯುವಜನರಿಗೆ ಮುಕ್ತ ಅಹ್ವಾನ ನೀಡಿತ್ತು. ಚಿತ್ರದ ಕೆಲವು ಹಾಡುಗಳನ್ನು ಐರ್ಲೆಂಡಿನಲ್ಲಿ ಚಿತ್ರೀಕರಿಸಲಾಗಿದೆ.

ಕಥೆಯ ಸಾರಾಂಶ

ಬದಲಾಯಿಸಿ

ಸ್ತ್ರೀರೋಗ ತಜ್ಞನಾದ ಖುಷ್(ಗಣೇಶ್) ಹಾಗೂ ಕಾರ್ಯಕ್ರಮಗಳನ್ನು ಸಂಯೋಜಿಸುವ ಕೆಲಸವುಳ್ಳ ಖುಷಿ(ರಶ್ಮಿಕಾ)ಯ ಮದುವೆ ಹಾಗು ಸಂಸಾರದ ಕಥೆ.

ತಾರಾಗಣ

ಬದಲಾಯಿಸಿ

ಹಾಡುಗಳು

ಬದಲಾಯಿಸಿ

ಜುಡಾಹ್ ಸ್ಯಾಂಡಿಯವರು ಈ ಚಿತ್ರಕ್ಕಾಗಿ ೫ ಹಾಡುಗಳನ್ನು ರಚಿಸಿದ್ದಾರೆ.

ಹಾಡುಗಳ ಪಟ್ಟಿ
No. ಶೀರ್ಷಿಕೆ ಸಾಹಿತ್ಯ ಹಾಡುಗಾರ(ರು) ಅವಧಿ
1. "ಖುಶ್ ಖುಶ್" ವಿಶ್ವ ವಿಜೇತ್ ಸಂಜಿತ್ ಹೆಗಡೆ ಹಾಗೂ ದೀಕ್ಷಾ ರಾಮಕೃಷ್ಣ ೩:೫೮
2. "ನೀ ನನ್ನ ಒಲವು" ಅರ್ಜುನ್ ಲೂಯಿಸ್ ಅಭಿನಂದನ್ ಮಹಿಶಾಲೆ ಹಾಗೂ ಸುಪ್ರಿಯ ಲೋಹಿತ್ ೩:೭೬
3. "ಅವಲಕ್ಕಿ ಬುವಲಕ್ಕಿ" ಧೀರಜ್ ಶೆಟ್ಟಿ ಚೇತನ್ ನಾಯ್ಕ್ ಹಾಗೂ ಈಶಾ ಸುಚಿ ೩:೦೬
4. "ಓ ಸಂಜೆಯ ಹೂವೆ" ವಿಶ್ವಜಿತ್ ಹರಿಚರಣ್ ಹಾಗೂ ಪ್ರಿಯ ಹಿಮೆಶ್ ೩:೧೫
5. "ಓ ಸಂಜೆಯ ಹೂವೆ(ಅಕೌಸ್ಟಿಕ್)" ವಿಶ್ವಜಿತ್ ನಾರಾಯಣ್ ಶರ್ಮ ಹಾಗೂ ಸ್ಪರ್ಶ ಅರ್.ಕೆ. ೩:೭೫
ಓಟ್ಟು ಅವಧಿ: ೧೭:೩೦

ಪ್ರತಿಕ್ರಿಯೆ

ಬದಲಾಯಿಸಿ

ವಿಮರ್ಶಕರು ಹಾಗು ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಗಳಿಸಿದ ಚಿತ್ರವು, ಕೆಲವು ಚಿತ್ರಮಂದಿರಗಳಲ್ಲಿ ಶತದಿನೋತ್ಸವವನ್ನು ಸಹ ಆಚರಿಸಿತು. ಓಟ್ಟು ತನ್ನ ಕಾಲಮಾನದಲ್ಲಿ, ಸುಮಾರು ೩೦ ಕೋಟಿಯಷ್ಟು ಸಂಪಾದನೆ ಮಾಡಿದ ಚಮಕ್ ಚಿತ್ರವು "ಬ್ಲಾಕ್ ಬಸ್ಟರ್" ಏಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಬಾಹ್ಯ ಕೊಂಡಿಗಳು

ಬದಲಾಯಿಸಿ
  1. 808. "simple suni, - chitraloka.com | Kannada Movie News, Reviews | Image". www.chitraloka.com (in ಇಂಗ್ಲಿಷ್). Archived from the original on 2018-07-30. Retrieved 2018-04-20. {{cite web}}: |last= has numeric name (help)
  2. "ಕಣ್ಣು ಕುಕ್ಕುತ್ತಿದೆ 'ಚಮಕ್' ಜೋಡಿಯ ಸ್ಟೈಲಿಶ್ ಲುಕ್". https://kannada.filmibeat.com. 2017-05-18. Retrieved 2018-04-20. {{cite news}}: External link in |work= (help)
  3. "Ganesh teams up with Simple Suni for #Chamak - Times of India". The Times of India. Retrieved 2018-04-20.