ಚತುರ್ಭುಜ ದೇವಾಲಯವು ಭಾರತದ ಮಧ್ಯಪ್ರದೇಶ ರಾಜ್ಯದ ಓರ್ಛಾದಲ್ಲಿ ಸ್ಥಿತವಾಗಿದ್ದು ವಿಷ್ಣುವಿಗೆ ಸಮರ್ಪಿತವಾಗಿದೆ. ಚತುರ್ಭುಜ್ ಹೆಸರು ಎರಡು ಶಬ್ದಗಳ ಸಂಯೋಜನೆಯಾಗಿದೆ, ಚತುರ್ ಎಂದರೆ ನಾಲ್ಕು ಮತ್ತು ಭುಜ್ ಎಂದರೆ ತೋಳುಗಳು. ಹಾಗಾಗಿ ಇದರ ಅಕ್ಷರಶಃ ಅರ್ಥ ನಾಲ್ಕು ತೋಳುಗಳುಳ್ಳವನು ಎಂದಾಗಿದೆ ಮತ್ತು ವಿಷ್ಣುವಿನ ಅವತಾರನಾದ ರಾಮನನ್ನು ಸೂಚಿಸುತ್ತದೆ.[] ಈ ದೇವಾಲಯವು ಸಂಕೀರ್ಣವಾದ ಬಹು ಅಂತಸ್ತಿನ ರಾಚನಿಕ ನೋಟವನ್ನು ಹೊಂದಿದ್ದು ದೇವಾಲಯ, ಕೋಟೆ ಮತ್ತು ಅರಮನೆ ವಾಸ್ತುಕಲಾ ಲಕ್ಷಣಗಳ ಮಿಶ್ರಣವಾಗಿದೆ.[][]

ಮೂಲತಃ ಈ ದೇವಾಲಯವನ್ನು ಮುಖ್ಯ ದೇವತೆಯಾಗಿ ರಾಮನ ವಿಗ್ರಹವನ್ನು ಪೂಜಿಸಲು ನಿರ್ಮಿಸಲಾಗಿತ್ತು. ಇದನ್ನು ಓರ್ಛಾ ಕೋಟೆ ಸಂಕೀರ್ಣದೊಳಗಿನ ರಾಮ ರಾಜ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿತ್ತು. ವರ್ತಮಾನದಲ್ಲಿ ಈ ದೇವಾಲಯದಲ್ಲಿ ರಾಧಾ ಕೃಷ್ಣರ ವಿಗ್ರಹವನ್ನು ಪೂಜಿಸಲಾಗುತ್ತದೆ.[] ಈ ದೇವಾಲಯವು ಹಿಂದೂ ದೇವಸ್ಥಾನಗಳ ಪೈಕಿ ಅತ್ಯಂತ ಎತ್ತರದ ವಿಮಾನಗಳಲ್ಲಿ ಒಂದನ್ನು ಹೊಂದಿರುವುದಕ್ಕೆ ಪ್ರಸಿದ್ಧವಾಗಿದೆ. ಇದರ ವಿಮಾನವು ೩೪೪ ಅಡಿ ಎತ್ತರವಿದೆ.

ಉಲ್ಲೇಖಗಳು

ಬದಲಾಯಿಸಿ


ಗ್ರಂಥಸೂಚಿ

  • Asher, Frederick M. (2003). Art of India: Prehistory to the Present. Encyclopædia Britannica. ISBN 978-0-85229-813-8. {{cite book}}: Invalid |ref=harv (help)
  • Mitra, Swati (2009). Orchha, Travel Guide. Goodearth Publications. ISBN 978-81-87780-91-5. {{cite book}}: Invalid |ref=harv (help)
  • Singh, Ajai Pal; Singh, Shiv Pal (1991). Monuments of Orchha. Agam Kala Prakasharef=harv.