ಚಕ್ರವರ್ತಿ
ಚಕ್ರವರ್ತಿಯು (ಸಂಸ್ಕೃತ: चक्रवर्ति) ಅಥವಾ ಸಾಮ್ರಾಟವು (ಸಂಸ್ಕೃತ: सम्राट) ಅಥವಾ ಸಾರ್ವಭೌಮವು (ಸಂಸ್ಕೃತ:सार्वभौम) ಒಂದು ಸಾಮ್ರಾಜ್ಯ ಅಥವಾ ಚಕ್ರಾಧಿಪತ್ಯವನ್ನು ಆಳುವ ಪ್ರಭುವಿನ ಬಿರುದು. ಅದರ ಸ್ತ್ರೀಲಿಂಗದ ಸಮಾನ ಚಕ್ರವರ್ತಿನಿಯು ಅಥವಾ ಸಾಮ್ರಾಜ್ಞಿಯು ಚಕ್ರವರ್ತಿಯಾಗಿಯೇ ತನ್ನದೇ ಭೂಮಿಯನ್ನು ಆಳುವ ಒಂದು ಸ್ತ್ರೀ ಅಧಿಕಾರಿಗೆ ಅಥವಾ ಒಬ್ಬ ಚಕ್ರವರ್ತಿಯ ಹೆಂಡತಿಯನ್ನು ಉಲೇಖಿಸಲು ಬಳಸಲಾಗುತ್ತವೆ. ಚಕ್ರವರ್ತಿ ಮತ್ತು ಮೇಲೆ ಉಲ್ಲೇಖಿಸಲಾದ ಇತ್ಯಾದಿ ಬರುದುಗಳು ರಾಜಪ್ರಭುತ್ವದಲ್ಲಿ ಅರಸನ ಅಥವಾ ರಾಜನ ಸ್ಥಾನಮಾನಗಳಿಂತಲೂ ಸರ್ವೋಚ್ಛವಾದ ಸ್ಥಾನಮಾನ ಮತ್ತು ದರ್ಜೆಯನ್ನು ಪರಿಗಣಿಸಲಾಗುತ್ತದೆ. ಭಾರತದಲ್ಲಿ ಸಾಮ್ರಾಟ ಬಿರುದನ್ನು ಆರಂಭಿಕ ವೈದಿಕ ಕಾಲದ ಋಗ್ವೇದ ಗ್ರಂಥದಲ್ಲಿ ಸಿಗುತ್ತದೆ. ಚಕ್ರವರ್ತಿ ಬಿರುದು ಉತ್ತರ ವೈದಿಕ ಕಾಲದಲ್ಲಿನ ಅಥರ್ವವೇದದಲ್ಲಿ "ಸಾರ್ವತ್ರಿಕ ರಾಜಪ್ರಭುತ್ವದ ಅಧಿಕಾರ" ವನ್ನು ಉಲ್ಲೇಖಿಸಲು ಬಳಸಲಾಗುತ್ತದೆ.
ಈ ಪದಗಳು ಆಂಗ್ಲ ಪದ ಎಂಪರರ್ (ಆಂಗ್ಲ: Emperor) ಅನ್ನು ಅನುವಾದಿಸಲು, ಮತ್ತು ಉಲ್ಲೇಖಿಸಲು ಬಳಸಲಾಗುತ್ತದೆ.
ಚಕ್ರವರ್ತಿ ಮತ್ತು ಮೇಲೆ ಉಲ್ಲೇಖಿಸಲಾದ ಪದದ ಪರಿಕಲ್ಪನೆಗಳು ಹಲವಾರು ದೇಶಗಳ ಸಂಸ್ಕೃತಿಗಳಲ್ಲಿ ವಿವಿಧ ವ್ಯಾಖ್ಯಾನಗಳನ್ನು ಮತ್ತು ವಿವಿಧ ಬಳಕೆಗಳನ್ನು ಹೊಂದಿದೆ.