ಚಂದ್ರಿಕಾ ಪುರಾಣಿಕ
ಚಂದ್ರಿಕಾ ಪುರಾಣಿಕ- ಕನ್ನಡದ ಲೇಖಕಿಯರಲ್ಲಿ ಒಬ್ಬರು. ಇವರ ಜನನ ೨೯ ನವೆಂಬರ್ ೧೯೬೦ರಂದು,ಬೆಂಗಳೂರಿನಲ್ಲಿ ಆಯಿತು.ಇವರ ತಂದೆ ಅನ್ನದಾನಯ್ಯ ಪುರಾಣಿಕ ಮತ್ತು ದೊಡ್ಡಪ್ಪ ಸಿದ್ದಯ್ಯ ಪುರಾಣಿಕ.
ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಆಕಾಶವಾಣಿ ಕಲಾವಿದರು ಮತ್ತು ಮಹಿಳಾ ಸಾಹಿತಿಯಾಗಿದ್ದಾರೆ. ಈಗ ಬೆಂಗಳೂರಿನ ಶೇಷಾದ್ರಿಪುರ ಸಂಜೆ ಕಾಲೇಜಿನಲ್ಲಿ ಕನ್ನಡ ವಿಭಾಗ ಮುಖ್ಯಸ್ಥರಾಗಿದ್ದಾರೆ. ಕರ್ನಾಟಕ ಲೇಖಕಿಯರ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ಬಸವ ಸಮಿತಿ ಯ ಸದಸ್ಯೆ ಆಗಿದ್ದಾರೆ. ಬಸವ ಪಥ ಮಾಸಿಕ ಪತ್ರಿಕೆಯ ಸಹ ಸಂಪಾದಕರಾಗಿ ಕೆಲಸ ಮಾಡಿದ್ದಾರೆ.ರಾಜ್ಯದಲ್ಲಿ ನೆಡೆಯುತ್ತಿರುವ ಸ್ತ್ರೀ ಸ್ವಾತಂತ್ರ್ಯ ಮತ್ತು ದಲಿತ ಪರ ಚಳುವಳಿಗಳಲ್ಲಿ ಇವರು ಸಕ್ರೀಯ ಪಾತ್ರ ವಹಿಸುತ್ತಿದ್ದಾರೆ.
ಕೃತಿಗಳು
ಬದಲಾಯಿಸಿ- ಎಡೆಯೂರು ಯತೀಶ್ವರ ಶ್ರೀ ಸಿದ್ಧಲಿಂಗೇಶ್ವರ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |