ಕರ್ನಾಟಕ ಲೇಖಕಿಯರ ಸಂಘ

ಕರ್ನಾಟಕ ಲೇಖಕಿಯರ ಸಂಘವನ್ನು [] ಮಹಿಳಾ ಸಾಹಿತ್ಯ ಗಟ್ಟಿಯಾಗಿ ನೆಲೆ ನಿಲ್ಲಲು ೧೯೭೯ ರಲ್ಲಿ ಜಿ.ನಾರಾಯಣ ಅವರ ಬೆಂಬಲದೊಡನೆ,ಹಾಗೂ ಇತರ ಕೆಲವು ಲೇಖಕಿಯರ ಜೊತೆಗೂಡಿ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಸ್ಥಾಪಿಸಲಾಯಿತು. ಅಂದಿನಿಂದ ಅದು ತನ್ನದೇ ಆದ ರೀತಿಯಲ್ಲಿ ಹಲವಾರು ಸತ್ವಯುತ ಕಾರ್ಯಕ್ರಮಗಳನ್ನು ಯೋಜಿಸಿ ನಡೆಸಿಕೊಂಡು ಬಂದಿದೆ. ಈ ಸದಸ್ಯರು ಜವಾಬ್ದಾರಿಯುತವಾದ ಹುದ್ದೆಗಳನ್ನು ತೆಗೆದುಕೊಂಡು ಲೇಖಕಿಯ ಸಂಘಕ್ಕೆ ಮಹತ್ವದ ದಿಶೆಯನ್ನು ಕೊಡುವಲ್ಲಿ ನೆರವಾಗಿದ್ದಾರೆ.

  • ಡಾ. ನಿರುಪಮಾ,
  • ಚಿ.ನ.ಮಂಗಳಾ,
  • ಎಚ್.ಎಸ್.ಪಾರ್ವತಿ,
  • ನಾಗಮಣಿ ಎಸ್ ರಾವ್,
  • ಟಿ.ಸುನಂದಮ್ಮ

ಚಟುವಟಿಕೆಗಳು

ಬದಲಾಯಿಸಿ
  1. ಮಹಿಳಾ ಸಾಹಿತ್ಯ ಚರಿತ್ರೆ ರಚನೆಯಾಗಬೇಕು; ಮಹಿಳೆಯರ ಸಾಹಿತ್ಯ ಕಾಣಿಕೆಗಳು ಸೂಕ್ತವಾಗಿ ದಾಖಲೆಯಾಗಬೇಕು, ಎಂಬಿತ್ಯಾದಿ ಸಂಘದ ಹಿರಿಯಾಸೆ. ಈ ದಿಕ್ಕಿನಲ್ಲಿ ಪೂರಕ ಸಾಹಿತ್ಯವನ್ನು ಭದ್ರಗೊಳಿಸುವ ಕಾರ್ಯವನ್ನು ಸಂಘವು ತನ್ನ ಇತಿ-ಮಿತಿಗಳಿಗೆ ಒಳಪಟ್ಟು ಮಾಡುತ್ತಾ ಬಂದಿದೆ. ಈಗಾಗಲೇ ಹಲವಾರು ಹಿರಿಯ ಲೇಖಕಿಯರು ಮತ್ತು ಅವರ ಕೃತಿಗಳನ್ನು ಕುರಿತ ಪುಸ್ತಕಗಳನ್ನು ಪ್ರಕಟಿಸಲಾಗಿದೆ.
  2. ಮಹಿಳೆಯರ ಸಾಹಿತ್ಯ ಕೃತಿಗಳನ್ನು ಪ್ರಕಾಶಪಡಿಸುವದಲ್ಲದೆ, ಲೇಖಕಿಯರ ಆತ್ಮಕತೆಗಳನ್ನೂ ಪ್ರಕಟಿಸಬೇಕೆಂಬ ಉದ್ದೇಶದಿಂದ ಮಹಿಳೆ-ಪರಿಸರ-ಸಾಹಿತ್ಯ ಎಂಬ ಯೋಜನೆಯನ್ನು ಹಮ್ಮಿಕೊಂಡು, ಹಲವಾರು ಲೇಖಕಿಯರನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಪರಿಚಯಿಸಲಾಗಿದೆ. ಲೇಖಕಿಯರ ಮಾಹಿತಿಕೋಶ, ಅವರ ಆತ್ಮಕಥನ ರೂಪಕಗಳು, ಅಲ್ಲದೆ ಹಲವಾರು ಕವಯಿತ್ರಿಯರ ಕವನ ಸಂಕಲನಗಳು, ಬೆಳ್ಳಿಹಬ್ಬದ ಸಂಚಿಕೆ, ಮೊದಲಾದವುಗಳನ್ನು ಪ್ರಕಟಿಸಲಾಗಿದೆ.

ಉಲ್ಲೇಖಗಳು

ಬದಲಾಯಿಸಿ
  1. "ಕರ್ನಾಟಕ ಲೇಖಕಿಯರ ಸಂಘ.ಬೆಂಗಳೂರು'". Archived from the original on 2015-09-26. Retrieved 2015-03-20.