ಚಂದ್ರನ ಕಲೆ ಎಂದರೆ ಭೂಮಿಯಿಂದ ವೀಕ್ಷಿಸಿದಾಗ ನೇರವಾಗಿ ಸೂರ್ಯನಿಂದ ಪ್ರಕಾಶಿತವಾದ ಚಂದ್ರನ ಭಾಗದ ಆಕಾರ. ಒಂದು ಸಂಯುತಿ ತಿಂಗಳ ಅವಧಿಯಲ್ಲಿ (ಸುಮಾರು ೨೯.೫೩ ದಿನಗಳು), ಭೂಮಿಯ ಸುತ್ತ ಚಂದ್ರನ ಮತ್ತು ಸೂರ್ಯನ ಸುತ್ತ ಭೂಮಿಯ ಕಕ್ಷೀಯ ಸ್ಥಾನಗಳು ಸ್ಥಳಾಂತರವಾದಂತೆ, ಚಂದ್ರನ ಕಲೆಗಳು ಕ್ರಮೇಣವಾಗಿ ಬದಲಾಗುತ್ತವೆ.

ಉತ್ತರ ಗೋಲಾರ್ಧದಿಂದ ೨೦೨೦ರಲ್ಲಿ ಗಂಟೆಯ ಅಂತರಗಳಲ್ಲಿ ನೋಡಿದಾಗ ಕಂಡುಬಂದ ಚಂದ್ರನ ಕಲೆಗಳು ಮತ್ತು ಓಲಾಟಗಳು

ಚಂದ್ರನ ಪರಿಭ್ರಮಣವು ಭೂಮಿಯ ಗುರುತ್ವ ಶಕ್ತಿಯಿಂದ ಉಬ್ಬರವಿಳಿತ ರೀತ್ಯ ಬಂಧಿತವಾಗಿರುತ್ತದೆ; ಹಾಗಾಗಿ, ಚಂದ್ರನ ಅದೇ ಬದಿಯ ಬಹುತೇಕ ಭಾಗವು ಯಾವಾಗಲೂ ಭೂಮಿಯ ಕಡೆ ಮುಖಮಾಡಿರುತ್ತದೆ. ಈ ಹತ್ತಿರದ ಬದಿಯು ತನ್ನ ಕಕ್ಷದಲ್ಲಿ ಚಂದ್ರನ ಸ್ಥಾನವನ್ನು ಅವಲಂಬಿಸಿ ವಿವಿಧ ರೀತಿಯಿಂದ ಸೂರ್ಯನಿಂದ ಪ್ರಕಾಶಗೊಂಡಿರುತ್ತದೆ. ಹಾಗಾಗಿ, ಈ ಮುಖದ ಸೂರ್ಯ ಪ್ರಕಾಶಿತ ಭಾಗವು ೦% ನಿಂದ (ಅಮಾವಾಸ್ಯೆ) ೧೦೦% ವರೆಗೆ (ಹುಣ್ಣಿಮೆ) ಬದಲಾಗುತ್ತದೆ.

ಬಾಹ್ಯ ಸಂಪರ್ಕಗಳು ಬದಲಾಯಿಸಿ