ಗ್ವಾಕಮೋಲೆ
ಒಂದು ಆವಕಾಡೊ ಆಧಾರಿತ ಆಹಾರ
ಗ್ವಾಕಮೋಲೆ ಈಗಿನ ಮೆಕ್ಸಿಕೊದಲ್ಲಿ ಆಜ಼್ಟೆಕ್‍ರಿಂದ ಮೊದಲು ಸೃಷ್ಟಿಸಲಾದ ಒಂದು ಆವಕಾಡೊ ಆಧಾರಿತ ಡಿಪ್ (ಆಹಾರ) ಅಥವಾ ಸ್ಯಾಲಡ್. ಗ್ವಾಕಮೋಲೆ ಡಿಪ್ ಅನ್ನು ಸಾಂಪ್ರದಾಯಿಕವಾಗಿ ಪಕ್ವವಾದ ಆವಕಾಡೊಗಳು ಮತ್ತು ಕಡಲುಪ್ಪನ್ನು ಮೋಲ್ಕಾಹೆಟೆಯಿಂದ (ಕಲಾಬತ್ತು ಮತ್ತು ಕುಟ್ಟಾಣಿ) ಅರೆದು ತಯಾರಿಸಲಾಗುತ್ತದೆ. ಕೆಲವು ಪಾಕವಿಧಾನಗಳಿಗೆ ಟೊಮೇಟೊ, ಈರುಳ್ಳಿ, ಬೆಳ್ಳುಳ್ಳಿ, ನಿಂಬೆಹಣ್ಣು ಅಥವಾ ಲೈಮ್ ರಸ, ಖಾರದ ಪುಡಿ ಅಥವಾ ಕಾಯೆನ್, ಕೊತ್ತಂಬರಿ ಅಥವಾ ಬೇಸಿಲ್, ಹ್ಯಾಲಪೇನ್ಯೊ, ಮತ್ತು/ಅಥವಾ ಹೆಚ್ಚುವರಿ ಮಸಾಲೆಗಳು ಬೇಕಾಗುತ್ತದೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |