ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ

ಇಂಜಿನಿಯರಿಂಗ್ ಕಾಲೇಜು

ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ (GAT) ಕರ್ನಾಟಕದ ಬೆಂಗಳೂರಿನಲ್ಲಿರುವ ಒಂದು ಖಾಸಗಿ ಸ್ವಾಯತ್ತ ಅಭಿಯಾಂತ್ರಿಕ (ಎಂಜಿನಿಯರಿಂಗ್) ಮತ್ತು ನಿರ್ವಹಣಾ (ಮ್ಯಾನೆಜ್ಮೆಂಟ) ಮಹಾವಿದ್ಯಾಲಯ. ಇದನ್ನು 2001 ರಲ್ಲಿ ಸ್ಥಾಪಿಸಲಾಯಿತು. ಮಹಾವಿದ್ಯಾಲಯದಲ್ಲಿ 3000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಸುಮಾರು 300 ಅಧ್ಯಾಪಕರು ಮತ್ತು ಸಿಬ್ಬಂದಿ ಇದ್ದಾರೆ.

Global Academy of Technology
File:GAT 3.jpg
ಧ್ಯೇಯGrowing Ahead Of Time[ಸೂಕ್ತ ಉಲ್ಲೇಖನ ಬೇಕು]
ಸ್ಥಾಪನೆ2001
ಪ್ರಕಾರPrivate un-aided Autonomous engineering college
ಸ್ಥಳBangalore, Karnataka, India
ಆವರಣUrban
ಅಂತರಜಾಲ ತಾಣhttp://www.gat.ac.in

ಮಾಜಿ ಸಚಿವರು ಹಾಗೂ ಹಾಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಈ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ.[]

ಇತಿಹಾಸ

ಬದಲಾಯಿಸಿ

ನ್ಯಾಷನಲ್ ಎಜುಕೇಶನ್ ಫೌಂಡೇಶನ್ (NEF) ಅನ್ನು 2000 ರಲ್ಲಿ ಭಾರತದ ಐಟಿ ರಾಜಧಾನಿ ಬೆಂಗಳೂರಿನಲ್ಲಿ ಸ್ಥಾಪಿಸಲಾಯಿತು. ಸ್ಥಾಪನೆಯ ಪ್ರಾಥಮಿಕ ಉದ್ದೇಶ ದೇಶದಾದ್ಯಂತ ಎಲ್ಲಾ ಸ್ತರಗಳ ವಿದ್ಯಾರ್ಥಿಗಳಿಗೆ, ಪ್ರಾಥಮಿಕದಿಂದ ಪ್ರಾರಂಭಿಸಿ ಸ್ನಾತಕೋತ್ತರ ಶಿಕ್ಷಣದವರೆಗೆ ಎಲ್ಲಾ ವಿಭಾಗಗಳಲ್ಲಿ ಶಿಕ್ಷಣ ನೀಡುವುದಾಗಿತ್ತು. NEF ವಿವಿಧ ಶಿಕ್ಷಣ ಸಂಸ್ಥೆಗಳನ್ನು ಹೊಂದಿದೆ  - ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಸ್ಕೂಲ್ (NHVPS), ಗ್ಲೋಬಲ್ ಕಾಲೇಜ್ ಆಫ್ ನರ್ಸಿಂಗ್ (GCN) ಮತ್ತು ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯು (GAT) ಇಂಜಿನಿಯರಿಂಗ್, ಸ್ನಾತಕೋತ್ತರ MBA, M.Tech., M.Sc. ಮತ್ತು ಪಿಎಚ್.ಡಿ. ಕಾರ್ಯಕ್ರಮಗಳನ್ನು ಹೊಂದಿದೆ.

 
ಕಾಲೇಜಿನ ಮುಂಭಾಗದ ನೋಟ

ಕ್ಯಾಂಪಸ್

ಬದಲಾಯಿಸಿ

ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ, ರಾಜರಾಜೇಶ್ವರಿ ನಗರದಲ್ಲಿ 10 ಎಕರೆ ಮರ-ಗಿಡಗಳಿಂದ ತುಂಬಿದ ಕ್ಯಾಂಪಸ್ ಹೊಂದಿದೆ. GAT ಸಮಕಾಲೀನ ಮಲ್ಟಿಮೀಡಿಯಾ ಸ್ಮಾರ್ಟ್ ಕ್ಲಾಸ್ ಕೊಠಡಿಗಳು, ಆಧುನಿಕ ಪ್ರಯೋಗಾಲಯಗಳು, ಸೆಮಿನಾರ್ ಹಾಲ್‌ಗಳು, ಆಡಿಟೋರಿಯಂ ಇ-ಜರ್ನಲ್‌ಗಳು ಮತ್ತು ಸುಸಜ್ಜಿತ ಕಂಪ್ಯೂಟರ್ ಕೇಂದ್ರಗಳ ಜೊತೆಗೆ ಶಿಫಾರಸು ಮತ್ತು ಉಲ್ಲೇಖ ಪುಸ್ತಕಗಳ ಸಂಪುಟಗಳೊಂದಿಗೆ ನವೀಕೃತ ಗ್ರಂಥಾಲಯವನ್ನು ಹೊಂದಿದೆ. GAT, ಕಲಿಕೆಯ ಅವಿಭಾಜ್ಯ ಅಂಗವಾಗಿರುವ ವೀಡಿಯೊ ಸ್ಟ್ರೀಮಿಂಗ್‌ಗಾಗಿ 24 x 7 ಹೈಸ್ಪೀಡ್ ವೈ-ಫೈ ಸೌಲಭ್ಯಗಳನ್ನು ಮತ್ತು ವೆಬ್ ಆಧಾರಿತ CMS ಅನ್ನು ಒದಗಿಸುತ್ತದೆ. ಶಿಕ್ಷಣಕ್ಕಾಗಿ ಪೂರಕ ವಾತಾವರಣವನ್ನು ಒದಗಿಸಲು ಪ್ರತ್ಯೇಕ ನಿರ್ವಹಣಾ ತಂಡವು ಕ್ಯಾಂಪಸ್‌ನಲ್ಲಿ ಲಭ್ಯವಿದೆ.

ಶೈಕ್ಷಣಿಕ ಕೋರ್ಸಗಳು

ಬದಲಾಯಿಸಿ

ಪದವಿ ಕೋರ್ಸ್‌ಗಳು (UG)

ಬದಲಾಯಿಸಿ

ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ, ಪದವಿ ಮಟ್ಟದಲ್ಲಿ ಬ್ಯಾಚುಲರ್ ಆಫ್ ಇಂಜಿನಿಯರಿಂಗ್ (BE) ಕಾರ್ಯಕ್ರಮಗಳನ್ನು ನೀಡುತ್ತದೆ. ಕಾರ್ಯಕ್ರಮವು 4 ವರ್ಷಗಳ ಅವಧಿಯದಾಗಿದ್ದು 8 ವಿವಿಧ ಇಂಜಿನಿಯರಿಂಗ್ ಶಾಖೆಗಳಲ್ಲಿ ಶಿಕ್ಷಣ ನೀಡುತ್ತಿದೆ. ವಿಟಿಯು ಮತ್ತು ಐಐಎಸ್‌ಸಿಯಲ್ಲಿನ ಅಧ್ಯಾಪಕರ ಸಮಾಲೋಚನೆಯೊಂದಿಗೆ ಕಾಲೇಜಿನ ಅಧ್ಯಾಪಕರು ಕೋರ್ಸ್ ರಚನೆಯನ್ನು ವಿನ್ಯಾಸಗೊಳಿಸಿದ್ದಾರೆ.

GAT ಈ ಕೆಳಗಿನ ಶಾಖೆಗಳಲ್ಲಿ ಕೋರ್ಸ್‌ಗಳನ್ನು ನೀಡುತ್ತದೆ:

ಸ್ನಾತಕೋತ್ತರ ಕೋರ್ಸ್‌ಗಳು (ಪಿಜಿ)

ಬದಲಾಯಿಸಿ

ಮಾಸ್ಟರ್ ಆಫ್ ಟೆಕ್ನಾಲಜಿ

ಸಂಸ್ಥೆಯು ಈ ಕೆಳಗಿನ ಶಾಖೆಗಳಲ್ಲಿ 2-ವರ್ಷದ ಮಾಸ್ಟರ್ ಆಫ್ ಟೆಕ್ನಾಲಜಿ (M.Tech) ಅನ್ನು ನೀಡುತ್ತದೆ:

  • ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್
  • ಸ್ಟ್ರಕ್ಚರಲ್ ಇಂಜಿನಿಯರಿಂಗ್
  • ಥರ್ಮಲ್ ಎಂಜಿನಿಯರಿಂಗ್
  • ಡಿಜಿಟಲ್ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ

ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ

ಸಂಸ್ಥೆಯು ಈ ಕೆಳಗಿನ ಶಾಖೆಗಳಲ್ಲಿ 2-ವರ್ಷದ ಮಾಸ್ಟರ್ ಆಫ್ ಸೈನ್ಸ್ (M.Sc) ಅನ್ನು ನೀಡುತ್ತದೆ:

ಎಂಬಿಎ

GAT, 2-ವರ್ಷದ ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಪ್ರೋಗ್ರಾಂ ಅನ್ನು ಸಹ ನೀಡುತ್ತದೆ.

2004 ರಲ್ಲಿ 60 ವಿದ್ಯಾರ್ಥಿಗಳ ದಾಖಲಾತಿಯೊಂದಿಗೆ ಸ್ಥಾಪಿತವಾದ ವಿಭಾಗವು ಮಾರುಕಟ್ಟೆ, ಹಣಕಾಸು ಮತ್ತು ಮಾನವ ಸಂಪನ್ಮೂಲ ನಿರ್ವಹಣೆಯ ಕ್ಷೇತ್ರಗಳಲ್ಲಿ ಪ್ರಸ್ತುತ 120 ವಿದ್ಯಾರ್ಥಿಗಳಿಗೆ ಪ್ರತಿವರ್ಷ ಶಿಕ್ಷಣ ನೀಡುತ್ತಿದೆ.

ಸಂಶೋಧನಾ ಸೌಲಭ್ಯಗಳು

ಬದಲಾಯಿಸಿ

ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಸಂಶೋಧನೆ ಮತ್ತು ಸಲಹಾ ಕೇಂದ್ರವನ್ನು ಹೊಂದಿದೆ.

ಸಂಶೋಧನಾ ಕ್ಷೇತ್ರಗಳು

  • ಜಲ ಸಂಪನ್ಮೂಲ, ಭೂವಿಜ್ಞಾನ ಮತ್ತು ಹೈಡ್ರೋಜಿಯಾಲಜಿ
  • ರಿಮೋಟ್ ಸೆನ್ಸಿಂಗ್, ಭೌಗೋಳಿಕ ಮಾಹಿತಿ ವ್ಯವಸ್ಥೆಗಳು ಮತ್ತು ಜಿಯೋಫಿಸಿಕಲ್ ಇನ್ವೆಸ್ಟಿಗೇಷನ್ಸ್ ಮತ್ತು ಸುಧಾರಿತ ಎಂಜಿನಿಯರಿಂಗ್ ಸಮೀಕ್ಷೆ
  • ಪರ್ಯಾಯ ಮತ್ತು ನವೀಕರಿಸಬಹುದಾದ ಶಕ್ತಿ ಮೂಲಗಳು
  • ಜಲವಿದ್ಯುತ್ ಯೋಜನೆಗಳು, ಸುರಂಗ ಮತ್ತು ಪರಿಸರ ಪ್ರಭಾವದ ಮೌಲ್ಯಮಾಪನ
  • ವಸ್ತು ಗುಣಲಕ್ಷಣ, ಉಷ್ಣ ನಿರ್ವಹಣೆ ಮತ್ತು ಸಂಯುಕ್ತಗಳ ಟ್ರೈಬಲಾಜಿಕಲ್ ಅಧ್ಯಯನಗಳು
  • ಯಂತ್ರ ಕಲಿಕೆ ಮತ್ತು ಕೃತಕ ಬುದ್ಧಿಮತ್ತೆ
  • ಅಂತರಜಾಲ ಆಧಾರಿತ ಐಟಿ ಸೇವೆಗಳು
  • UWB ಆಂಟೆನಾ ಸಂವಹನ ಮತ್ತು RFID ಅಪ್ಲಿಕೇಶನ್‌ಗಳು
  • ಚಿತ್ರ ಸಂಸ್ಕರಣೆ
  • ಸಗಟು, ಚಿಲ್ಲರೆ ಮತ್ತು ಗ್ರಾಮೀಣ ಮಾರುಕಟ್ಟೆ

ವಿದ್ಯಾರ್ಥಿ ವಿಭಾಗ

ಬದಲಾಯಿಸಿ
 
ಕಾಲೇಜಿನ ವಾರ್ಷೀಕೋತ್ಸವದ ಸಂಗೀತ ಕಛೇರಿ ಕಾರ್ಯಕ್ರಮದಲ್ಲಿ ರಘು ದೀಕ್ಷಿತ್ ಪ್ರದರ್ಶನ ನೀಡುತ್ತಿರುವುದು.

ವಿದ್ಯಾರ್ಥಿ ಕ್ಲಬ್ ಗಳು

ಬದಲಾಯಿಸಿ

ಅಂತರ ವಿಭಾಗೀಯ ಸ್ಪರ್ಧೆಗಳು ಮತ್ತು ಸಂಸ್ಥೆಯ ಮಟ್ಟದ ಸ್ಪರ್ಧೆಗಳನ್ನು ಆಯೋಜಿಸುವುದರ ಜೊತೆಗೆ ಶೈಕ್ಷಣಿಕ ವಿಭಾಗಗಳಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ನಿರ್ಮಿಸಿ ನಿರ್ವಹಿಸಲು ಪ್ರತಿಯೊಂದು ವಿಭಾಗವು ತನ್ನದೇ ಆದ ವಿದ್ಯಾರ್ಥಿ ಕ್ಲಬ್ ಅನ್ನು ಹೊಂದಿದೆ.

ಕೆಲವು ವಿದ್ಯಾರ್ಥಿ ಸಂಘಗಳು:

  • ಐಟಿ-ವರ್ಚುಸೋ - CSE ವಿಭಾಗ
  • ಸ್ಫೂರ್ತಿ - ISE ವಿಭಾಗ
  • ಹಿಸ್ಟರೆಸಿಸ್ - ಇಇಇ ವಿಭಾಗ
  • ಅನುರಣನ -ಇಸಿಇ ವಿಭಾಗ

ಈ ಸಂಸ್ಥೆಯಲ್ಲಿ CSE ಸ್ಟೂಡೆಂಟ್ ಕ್ಲಬ್ - IT-Virtuoso ಅತ್ಯಂತ ಹಳೆಯ ಮತ್ತು ಅತಿದೊಡ್ಡ ವಿದ್ಯಾರ್ಥಿ ಕ್ಲಬ್ ಆಗಿದೆ, ಇದು ವಿದ್ಯಾರ್ಥಿಗಳಿಂದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಪ್ರೋಗ್ರಾಮಿಂಗ್, ಗೇಮಿಂಗ್, ಪೇಪರ್ ಪ್ರೆಸೆಂಟೇಶನ್‌ಗಳು, ರಸಪ್ರಶ್ನೆ ಇತ್ಯಾದಿ ಚಟುವಟಿಕೆಗಳನ್ನು ನಡೆಸುತ್ತದೆ. ಐಟಿ-ಕ್ಲಬ್ ಚಟುವಟಿಕೆಯ ಭಾಗವಾಗಿ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮಾಸಿಕ ಇ-ಸುದ್ದಿಪತ್ರ ಮತ್ತು ದ್ವೈಮಾಸಿಕ ಇ-ಪತ್ರಿಕೆಯನ್ನು ಕಾಲೇಜು ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿ ಪ್ರಕಟಿಸುತ್ತದೆ.[]

ಕ್ರೀಡೆ

ಬದಲಾಯಿಸಿ

ಕ್ರಿಕೆಟ್ ಫೀಲ್ಡ್, ಬಾಸ್ಕೆಟ್ ಬಾಲ್ ಕೋರ್ಟ್, ವಾಲಿ ಬಾಲ್ ಕೋರ್ಟ್ ಮತ್ತು ಟೆನ್ನಿಸ್ ಕೋರ್ಟ್‌ಗಳು ಕ್ರೀಡಾ ಸೌಲಭ್ಯಗಳಾಗಿವೆ.[]

ಗ್ಯಾಲರಿ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "Events". Brickwork India. Archived from the original on 26 March 2011. Retrieved 26 June 2011.
  2. "It Virtuoso". Archived from the original on 29 April 2014. Retrieved 29 April 2014.
  3. "Gat.ac.in - Sports@GAT". Archived from the original on 29 April 2014. Retrieved 29 April 2014.