ಟೆಂಪ್ಲೇಟು:Launching/Proton (Khrunichev)

ಚಿತ್ರ:Glonass logo.jpg
ಗ್ಲೋನಾಸ್ ಲೋಗೊ
ಗ್ಲೋನಾಸ್

ಗ್ಲೋನಾಸ್ (Russian: ГЛОНАСС,[] IPA: [ɡlɐˈnas]) ರೇಡಿಯೊ ಆಧಾರಿತಉಪಗ್ರಹ ಸಂಚಾರ ನಿರ್ದೇಶಿಸುವ ವ್ಯವಸ್ಥೆಯಾಗಿದ್ದು,ರಷ್ಯಾದ ಬಾಹ್ಯಾಕಾಶ ಶಕ್ತಿಗಳಿಂದ ರಷ್ಯನ್ ಸರ್ಕಾರಕ್ಕೆ ನಿರ್ವಹಿಸಲಾಗುತ್ತದೆ. ಅಮೆರಿಕಜಾಗತಿಕ ಸ್ಥಾನಿಕವ್ಯವಸ್ಥೆ, ಚೀನಾದ ಕಂಪ್ಯಾಸ್ ಸಂಚಾರ ನಿರ್ದೇಶನ ವ್ಯವಸ್ಥೆ ಮತ್ತು ಐರೋಪ್ಯ ಒಕ್ಕೂಟದ ಯೋಜಿತ ಗೆಲಿಲಿಯೊ ಸ್ಥಾನಿಕ ವ್ಯವಸ್ಥೆ ಮತ್ತು ಭಾರತದ ಪ್ರಾದೇಶಿಕ ಸಂಚಾರ ನಿರ್ದೇಶನ ಉಪಗ್ರಹ ವ್ಯವಸ್ಥೆಗೆ ಪರ್ಯಾಯ ಮತ್ತು ಪೂರಕವಾಗಿದೆ.

ಗ್ಲೋನಾಸ್ ಕುರಿತ ಅಭಿವೃದ್ಧಿಯು ೧೯೭೬ರಲ್ಲಿ ಸೋವಿಯಟ್ ಒಕ್ಕೂಟದಲ್ಲಿ ಆರಂಭವಾಯಿತು. ೧೯೮೨ರ ಅಕ್ಟೋಬರ್ ೧೨ರಂದು ಆರಂಭವಾದ ಇದು, ಅಸಂಖ್ಯಾತ ರಾಕೆಟ್‌ ಉಡಾವಣೆಗಳು ೧೯೯೫ರಲ್ಲಿ ಸಮೂಹವು ಪೂರ್ಣಗೊಳ್ಳುವ ತನಕ ವ್ಯವಸ್ಥೆಗೆ ಉಪಗ್ರಹಗಳನ್ನು ಇರಿಸಿದವು. ಪೂರ್ಣಗೊಂಡ ನಂತರ, ರಷ್ಯಾದ ಆರ್ಥಿಕ ವ್ಯವಸ್ಥೆ ಕುಸಿತದಿಂದ ವ್ಯವಸ್ಥೆಯು ದುರಸ್ತಿಯಾಗದ ಸ್ಥಿತಿ ತಲುಪಿತು. ೨೦೦೦ದ ದಶಕದ ಆರಂಭದಲ್ಲಿ ವ್ಲಾಡಿಮಿರ್ ಪುಟಿನ್ ಅಧ್ಯಕ್ಷಗಿರಿಯಲ್ಲಿ ವ್ಯವಸ್ಥೆಯ ಮರುಸ್ಥಾಪನೆಯನ್ನು ಸರ್ಕಾರದ ಉನ್ನತ ಆದ್ಯತೆಯನ್ನಾಗಿ ಮಾಡಲಾಯಿತು ಮತ್ತು ಅದಕ್ಕೆ ಆರ್ಥಿಕ ನೆರವನ್ನು ಗಣನೀಯವಾಗಿ ಹೆಚ್ಚಿಸಲಾಯಿತು. ಗ್ಲೋನಾಸ್ ಪ್ರಸಕ್ತ ರಷ್ಯನ್ ಫೆಡರಲ್ ಸ್ಪೇಸ್ ಏಜನ್ಸಿಯ ಅತ್ಯಂತ ದುಬಾರಿ ಕಾರ್ಯಕ್ರಮವಾಗಿದ್ದು, ೨೦೧೦ರಲ್ಲಿ ಅದರ ಬಜೆಟ್‌ನ ಮೂರನೇ ಒಂದರಷ್ಟು ಬಳಕೆಯಾಯಿತು.

೨೦೧೦ರಲ್ಲಿ ಗ್ಲೋನಾಸ್ ರಷ್ಯಾದ ಪ್ರದೇಶದ ಶೇಕಡ ೧೦೦ ಕಾರ್ಯವ್ಯಾಪ್ತಿಯನ್ನು ಸಾಧಿಸಿತು. ೨೦೧೧ ಫೆಬ್ರವರಿಯಲ್ಲಿ ಉಪಗ್ರಹದ ಗುಂಪು ೨೨ ಕಾರ್ಯಸಮರ್ಥ ಉಪಗ್ರಹಗಳನ್ನು ಹೊಂದಿದ್ದವು. ಸತತ ಜಾಗತಿಕ ವ್ಯಾಪ್ತಿ ಒದಗಿಸಲು ೨೪ ಉಪಗ್ರಹಗಳ ಅಗತ್ಯವಿತ್ತು ಮತ್ತು ೨೦೧೧ರೊಳಗೆ ಪೂರ್ಣಗೊಳ್ಳುವುದೆಂದು ನಿರೀಕ್ಷಿಸಲಾಗಿತ್ತು. ಗ್ಲೋನಾಸ್ ಉಪಗ್ರಹಗಳ ವಿನ್ಯಾಸಗಳು ಅನೇಕ ಪರಿಷ್ಕರಣೆಗಳಿಗೆ ಒಳಗಾಯಿತು. ಇತ್ತೀಚಿನ ಆವೃತ್ತಿಯು ಗ್ಲೋನಾಸ್-ಕೆ.

ಇತಿಹಾಸ

ಬದಲಾಯಿಸಿ

ಉಪಕ್ರಮ ಮತ್ತು ವಿನ್ಯಾಸ

ಬದಲಾಯಿಸಿ

ಸೋವಿಯಟ್ ಒಕ್ಕೂಟದಲ್ಲಿ ಅಭಿವೃದ್ಧಿಪಡಿಸಿದ ಪ್ರಥಮ ಉಪಗ್ರಹ ಆಧಾರಿತ ರೇಡಿಯೊ ಸಂಚಾರ ನಿರ್ದೇಶನ ವ್ಯವಸ್ಥೆಯು ಸೈಕ್ಲೋನ್. ಖಂಡಾಂತರ ಕ್ಷಿಪಣಿ ಜಲಾಂತರ್ಗಾಮಿಗೆ ನಿಖರವಾದ ಸ್ಥಾನಿಕ ವಿಧಾನವನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ. ೩೧ ಸೈಕ್ಲೋನ್ ಉಪಗ್ರಹಗಳನ್ನು ೧೯೬೭ ಮತ್ತು ೧೯೭೮ರ ನಡುವೆ ಉಡಾವಣೆ ಮಾಡಲಾಯಿತು. ಈ ವ್ಯವಸ್ಥೆಯ ಮುಖ್ಯ ಸಮಸ್ಯೆಯೇನೆಂದರೆ, ಇದು ನಿಧಾನವಾಗಿ ಚಲಿಸುವ ಅಥವಾ ನಿಂತಿರುವ ಹಡಗುಗಳಿಗೆ ಅತ್ಯಂತ ನಿಖರವಾಗಿದ್ದರೂ, ಸ್ವೀಕಾರ ಕೇಂದ್ರದಲ್ಲಿ ಸ್ಥಾನವನ್ನು ಸ್ಥಿರಪಡಿಸಲು ಅನೇಕ ಗಂಟೆಗಳ ಅವಲೋಕನ ಅಗತ್ಯವಿರುತ್ತದೆ. ಅನೇಕ ಸಂಚಾರ ನಿರ್ದೇಶನ ಉದ್ದೇಶಗಳಿಗೆ ಮತ್ತು ಹೊಸ ತಲೆಮಾರಿನ ಖಂಡಾಂತರ ಕ್ಷಿಪಣಿಗಳ ಮಾರ್ಗದರ್ಶನಕ್ಕೆ ಇದು ಉಪಯುಕ್ತವಲ್ಲ.[] ೧೯೬೮-೧೯೬೯ರಲ್ಲಿ,ನೌಕಾದಳ ವಾಯುದಳ, ಭೂ ಮತ್ತು ಬಾಹ್ಯಾಕಾಶ ಶಕ್ತಿಗಳಿಗೆ ಬೆಂಬಲಿಸುವ ಹೊಸ ಸಂಚಾರ ನಿರ್ದೇಶನ ವ್ಯವಸ್ಥೆಯನ್ನು ಕಲ್ಪಿಸಲಾಯಿತು. ಔಪಚಾರಿಕ ಅಗತ್ಯಗಳನ್ನು ೧೯೭೦ರಲ್ಲಿ ಮುಗಿಸಲಾಯಿತು. ಸರ್ಕಾರವು ಏಕೀಕೃತ ಸ್ಪೇಸ್ ನ್ಯಾವಿಗೇಷನ್ ಸಿಸ್ಟಮ್ ಗ್ಲೋನಾಸ್ ಅಭಿವೃದ್ಧಿಯನ್ನು ಆರಂಭಿಸುವ ನಿರ್ಧಾರವನ್ನು ಕೈಗೊಂಡಿತು.[]

ಗ್ಲೋನಾಸ್ ವಿನ್ಯಾಸಗೊಳಿಸುವ ಕೆಲಸವನ್ನು ಕ್ರಾಸ್ನೋಯಾರ್ಸ್ಕ್-೨೬(ಇಂದು ಜೆಲೆಜೆನೊಗಾರ್ಸ್ಕ್ ಎಂದು ಕರೆಯಲಾಗುತ್ತದೆ) ನಗರದ NPO PMನ ಯುವ ತಜ್ಞರ ಗುಂಪಿಗೆ ವಹಿಸಲಾಯಿತು. ವ್ಲಾಡಿಮಿರ್ ಚೆರೆಮಿಸಿನ್ ನಾಯಕತ್ವದಲ್ಲಿ ಅವರು ವಿವಿಧ ಪ್ರಸ್ತಾವನೆಗಳನ್ನು ಅಭಿವೃದ್ಧಿಪಡಿಸಿದರು. ಅವುಗಳಿಂದ ಸಂಸ್ಥೆಯ ನಿರ್ದೇಶಕ ಗ್ರೆಗರಿ ಚೆರ್ನಾಯವ್‌ಸ್ಕಿ ಅಂತಿಮವಾದುದನ್ನು ಆಯ್ಕೆಮಾಡಿದರು. ೧೯೭೦ರ ದಶಕದ ಕೊನೆಯಲ್ಲಿ ಕೆಲಸವನ್ನು ಪೂರ್ಣಗೊಳಿಸಲಾಯಿತು. ೨೪ ಉಪಗ್ರಹಗಳು ಮಧ್ಯಮ ವರ್ತುಲದ ಕಕ್ಷೆಯಲ್ಲಿ ೨೦,೦೦೦ ಕಿಮೀ ಎತ್ತರದಲ್ಲಿ ಕಾರ್ಯಾಚರಣೆ ನಿರ್ವಹಿಸುವ ವ್ಯವಸ್ಥೆಯನ್ನು ಹೊಂದಿತ್ತು. ೪ ಉಪಗ್ರಹಗಳ ಸಂಕೇತಗಳ ಆಧಾರದ ಮೇಲೆ ಸ್ವೀಕಾರ ಕೇಂದ್ರದ ಸ್ಥಾನವನ್ನು ಸೂಕ್ತವಾಗಿ ಸ್ಥಿರಪಡಿಸಲು ಅದು ಸಮರ್ಥವಾಗಿತ್ತು ಮತ್ತು ವಸ್ತುವಿನ ವೇಗ ಮತ್ತು ದಿಕ್ಕನ್ನು ಬಹಿರಂಗಪಡಿಸಲು ಸಮರ್ಥವಾಗಿತ್ತು. ಉಪಗ್ರಹವನ್ನು ಒಂದು ಬಾರಿಗೆ ಮೂರರಂತೆ ಭಾರವನ್ನು ಎತ್ತುವ ಪ್ರೋಟೊನ್ ರಾಕೆಟ್‌ನಿಂದ ಉಡಾವಣೆ ಮಾಡಲಾಯಿತು. ಕಾರ್ಯಕ್ರಮಕ್ಕೆ ಅನೇಕ ಸಂಖ್ಯೆಯ ಉಪಗ್ರಹಗಳು ಅಗತ್ಯವಾಗಿದ್ದರಿಂದ, NPO PM ಓಮ್ಸ್ಕ್‌ನ PO ಪಾಲ್ಯೋಟ್‌ಗೆ ಉಪಗ್ರಹಗಳ ಉತ್ಪಾದನೆಯನ್ನು ನಿಯೋಜಿಸಿತು. ಅದು ಉತ್ತಮ ಉತ್ಪಾದನೆ ಸಾಮರ್ಥ್ಯಗಳನ್ನು ಹೊಂದಿತ್ತು.[][]

ಮೂಲತಃ ಗ್ಲೋನಾಸ್ ೬೫ಎಂ ನಿಖರತೆ ಹೊಂದಿರುವಂತೆ ವಿನ್ಯಾಸಗೊಳಿಸಲಾಗಿತ್ತು. ಆದರೆ ವಾಸ್ತವವಾಗಿ ನಾಗರಿಕ ಸಂಕೇತದಲ್ಲಿ ೨೦ ಎಂ ನಿಖರತೆ ಮತ್ತು ಮಿಲಿಟರಿ ಸಂಕೇತದಲ್ಲಿ ೧೦ ಎಂ ನಿಖರತೆಯನ್ನು ಹೊಂದಿತ್ತು.[] ಮೊದಲ ತಲೆಮಾರಿನ ಗ್ಲೋನಾಸ್ ಉಪಗ್ರಹಗಳು ೭.೮ಎಂ ಎತ್ತರವನ್ನು ಅವರ ಸೌರ ಫಲಕಗಳ ಉದ್ದಕ್ಕೂ ೭.೨ಎಂ ಅಗಲದ ಅಳತೆಯನ್ನು ಮತ್ತು ೧೨೬೦ ಕೆಜಿ ತೂಕವನ್ನು ಹೊಂದಿದ್ದವು.[]

ಪೂರ್ಣ ಕಕ್ಷೆಯ ಸಮೂಹದ ಸಾಧನೆ

ಬದಲಾಯಿಸಿ

೧೯೮೦ರ ಪೂರ್ವದಲ್ಲಿ, NPO PMಪ್ರಥಮ ಪ್ರೊಟೊಟೈಪ್ ಉಪಗ್ರಹಗಳನ್ನು ಪಿಟೊ ಪಾಲಿಯಟ್‌ನಿಂದ ಭೂಪರೀಕ್ಷೆಗಳಿಗೆ ಸ್ವೀಕರಿಸಿತು. ಉತ್ಪಾದಿತವಾದ ಅನೇಕ ಭಾಗಗಳು ಕೆಳ ದರ್ಜೆಯಿಂದ ಕೂಡಿದ್ದು, NPO PMಎಂಜಿನಿಯರುಗಳು ಗಣನೀಯ ಮರುವಿನ್ಯಾಸ ಕೈಗೊಂಡಿದ್ದರಿಂದ ವಿಳಂಬಕ್ಕೆ ಕಾರಣವಾಯಿತು.[] ೧೯೮೨ರ ಅಕ್ಬೋಬರ್ ೧೨ರಂದು ಕಾಸ್ಮೋಸ್-೧೪೧೩, ಕಾಸ್ಮೋಸ್-೧೪೧೪ ಮತ್ತು ಕಾಸ್ಮೋಸ್-೧೪೧೫ ಹೆಸರಿನ ಮೂರು ಉಪಗ್ರಹಗಳನ್ನು ಪ್ರೊಟೋನ್ ರಾಕೆಟ್‌ನಿಂದ ಉಡಾವಣೆ ಮಾಡಲಾಯಿತು. ನಿರೀಕ್ಷಿತ ಮೂರರ ಬದಲಿಗೆ ಉಡಾವಣೆಗೆ ಕೇವಲ ಒಂದು ಗ್ಲೋನಾಸ್ ಉಪಗ್ರಹವು ಸಕಾಲದಲ್ಲಿ ಸಿದ್ಧವಾಯಿತು. ಅದನ್ನು ಎರಡು ಅಣಕ ಉಪಗ್ರಹಗಳ ಜತೆ ಉಡಾವಣೆಗೆ ನಿರ್ಧರಿಸಲಾಯಿತು. ಅಮೆರಿಕದ ಮಾಧ್ಯಮವು ಈ ಘಟನೆಯನ್ನು ಒಂದು ಉಪಗ್ರಹ ಮತ್ತು ಎರಡು ಗೋಪ್ಯ ವಸ್ತುಗಳ ಉಡಾವಣೆ ಎಂದು ವರದಿ ಮಾಡಿತು. ಸುದೀರ್ಘ ಕಾಲದವರೆಗೆ ಅಮೆರಿಕನ್ನರಿಗೆ ಈ ವಸ್ತುಗಳ ಸ್ವರೂಪವನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ. ಸೋವಿಯಟ್ ಒಕ್ಕೂಟದ ಟೆಲಿಗ್ರಾಫ್ ಏಜನ್ಸಿ(TASS)ಈ ಉಡಾವಣೆಯನ್ನು ಪ್ರಸಾರ ಮಾಡಿತು. ಸೋವಿಯಟ್ ಒಕ್ಕೂಟದ ನಾಗರಿಕ ಏವಿಯೇಷನ್ ವಿಮಾನ, ನೌಕಾ ಸಾರಿಗೆ ಮತ್ತು ಮೀನುಗಾರಿಕೆ ದೋಣಿಗಳ ಸ್ಥಾನವನ್ನು ನಿರ್ಧರಿಸುವ ವ್ಯವಸ್ಥೆ ಎಂದು ಗ್ಲೋನಾಸ್‌ ಕುರಿತು ವರ್ಣಿಸಿತು.[]

೧೯೮೨ರಿಂದ ೧೯೯೧ರವರೆಗೆ, ಸೋವಿಯಟ್ ಒಕ್ಕೂಟವು ಯಶಸ್ವಿಯಾಗಿ ಒಟ್ಟು ೪೩ ಗ್ಲೋನಾಸ್ ಸಂಬಂಧಿತ ಉಪಗ್ರಹಗಳು ಜತೆಗೆ ಐದು ಪರೀಕ್ಷೆ ಉಪಗ್ರಹಗಳನ್ನು ಉಡಾವಣೆ ಮಾಡಿತು. ೧೯೯೧ರಲ್ಲಿ ಸೋವಿಯಟ್ ಒಕ್ಕೂಟವು ಒಡೆದಾಗ, ೧೨ ಕ್ರಿಯಾತ್ಮಕ ಗ್ಲೋನಾಸ್ ಉಪಗ್ರಹಗಳು ಎರಡು ಸಮತಲಗಳಲ್ಲಿ ಕಾರ್ಯಾಚರಣೆಗೆ ಸಮರ್ಥವಾಗಿದ್ದವು. ವ್ಯವಸ್ಥೆಯ ಸೀಮಿತ ಬಳಕೆಗೆ ಅವಕಾಶ ನೀಡಲು ಸಾಕಷ್ಟಿತ್ತು.(ದೇಶದ ಇಡೀ ಪ್ರದೇಶದ ವ್ಯಾಪ್ತಿಯನ್ನು ಹೊಂದಲು, ೧೮ ಉಪಗ್ರಹಗಳು ಅಗತ್ಯವಾಗಿತ್ತು). ರಷ್ಯನ್ ಫೆಡರೇಷನ್ ಗುಂಪಿನ ನಿಯಂತ್ರಣವನ್ನು ತೆಗೆದುಕೊಂಡು ಅದರ ಅಭಿವೃದ್ಧಿಯನ್ನು ಮುಂದುವರಿಸಿತು.[] ೧೯೯೩ರಲ್ಲಿ ೧೨ ಉಪಗ್ರಹಗಳನ್ನು ಹೊಂದಿರುವ ವ್ಯವಸ್ಥೆಯನ್ನು ಔಪಚಾರಿಕವಾಗಿ ಕಾರ್ಯಸಮರ್ಥವೆಂದು ಘೋಷಿಸಲಾಯಿತು ಮತ್ತು ೧೯೯೫ರ ಡಿಸೆಂಬರ್‌ನಲ್ಲಿ ಗುಂಪಿನಲ್ಲಿ ಅಂತಿಮವಾಗಿ ಅದರ ಗರಿಷ್ಠ ಸ್ಥಿತಿಗತಿಯಾದ ೨೪ ಕಾರ್ಯಾಚರಣೆ ಸಮರ್ಥ ಉಪಗ್ರಹಗಳಿಗೆ ತರಲಾಯಿತು.[] ಇದು ಅಮೆರಿಕನ್ ಜಿಪಿಎಸ್ ವ್ಯವಸ್ಥೆಗೆ ಸಮಾನವಾಗಿ ಗ್ಲೋನಾಸ್ ನಿಖರತೆಯನ್ನು ತಂದಿತು. ಜಿಪಿಎಸ್ ವ್ಯವಸ್ಥೆಯು ಎರಡು ವರ್ಷಗಳ ಮುಂಚೆ ಪೂರ್ಣ ಕಾರ್ಯಾಚರಣೆ ಸಾಮರ್ಥ್ಯವನ್ನು ಸಾಧಿಸಿತ್ತು.[]

ಆರ್ಥಿಕ ಬಿಕ್ಕಟ್ಟು ಮತ್ತು ದುರಸ್ತಿಮಾಡಲಾಗದ ಸ್ಥಿತಿ

ಬದಲಾಯಿಸಿ

ಪ್ರಥಮ ತಲೆಮಾರಿನ ಉಪಗ್ರಹಗಳು ತಲಾ ಮೂರು ವರ್ಷಗಳವರೆಗೆ ಕಾರ್ಯನಿರ್ವಹಿಸಿದಾಗಿನಿಂದ, ವ್ಯವಸ್ಥೆಯನ್ನು ಪೂರ್ಣ ಸಾಮರ್ಥ್ಯದಲ್ಲಿಡಲು, ೨೪ ಉಪಗ್ರಹಗಳ ಪೂರ್ಣ ಜಾಲವನ್ನು ನಿರ್ವಹಿಸಲು ಪ್ರತಿ ವರ್ಷಕ್ಕೆ ಎರಡು ಉಡಾವಣೆಗಳು ಅವಶ್ಯಕವಾಗಿತ್ತು. ಆದಾಗ್ಯೂ, ಆರ್ಥಿಕ ದುಸ್ಥಿತಿಯ ಅವಧಿಯಾದ ೧೯೮೯-೧೯೯೯ರಲ್ಲಿ, ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಆರ್ಥಿಕ ನೆರವನ್ನು ಶೇಕಡ ೮೦ ಕಡಿತಗೊಳಿಸಲಾಯಿತು ಮತ್ತು ರಷ್ಯಾ ತರುವಾಯ ತನ್ನ ಉಡಾವಣೆ ವೆಚ್ಚವನ್ನು ನಿಭಾಯಿಸಲು ಅಸಮರ್ಥವಾಯಿತು. ಪೂರ್ಣ ಸಂಖ್ಯೆಯನ್ನು ೧೯೯೫ರ ಡಿಸೆಂಬರ್‌ನಲ್ಲಿ ಸಾಧಿಸಿದ ನಂತರ, ೧೯೯೯ ಡಿಸೆಂಬರ್‌ವರೆಗೆ ಯಾವುದೇ ಇನ್ನಷ್ಟು ಉಡಾವಣೆಗಳು ಇರಲಿಲ್ಲ. ಇದರ ಫಲವಾಗಿ, ಉಪಗ್ರಹಗಳ ಸಮೂಹವು ೨೦೦೧ರಲ್ಲಿ ಕೇವಲ ೬ ಕಾರ್ಯಸಮರ್ಥ ಉಪಗ್ರಹಗಳೊಂದಿಗೆ ಕನಿಷ್ಠ ಹಂತವನ್ನು ಮುಟ್ಟಿತ್ತು. ನಿಸ್ಸೈನ್ಯೀಕರಣಕ್ಕೆ ಪೀಠಿಕೆಯಾಗಿ, ಕಾರ್ಯಕ್ರಮದ ಜವಾಬ್ದಾರಿಯನ್ನು ಮಿನಿಸ್ಟ್ರಿ ಆಫ್ ಡಿಫೆನ್ಸ್‌ನಿಂದ ರಷ್ಯಾದ ನಾಗರಿಕ ಬಾಹ್ಯಾಕಾಶ ಏಜನ್ಸಿ ರೋಸ್‌ಕಾಸ್ಮಾಸ್‌ಗೆ ವರ್ಗಾಯಿಸಲಾಯಿತು.[]

ನವೀಕೃತ ಪ್ರಯತ್ನಗಳು ಮತ್ತು ಆಧುನೀಕರಣ

ಬದಲಾಯಿಸಿ
 
ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಗ್ಲೋನಾಸ್ ಕಾರು ಸಂಚಾರ ನಿರ್ದೇಶನ ಉಪಕರಣದೊಂದಿಗೆ.ಅಧ್ಯಕ್ಷರಾಗಿ, ಪುಟಿನ್ ಗ್ಲೋನಾಸ್ ಅಭಿವೃದ್ಧಿಗೆ ವಿಶೇಷ ಗಮನವನ್ನು ನೀಡಿದರು.

೨೦೦೦ದ ಪೂರ್ವದಲ್ಲಿ ವ್ಲಾಡಿಮಿರ್ ಪುಟಿನ್ ಅಧ್ಯಕ್ಷಗಿರಿಯಲ್ಲಿ, ರಷ್ಯಾದ ಆರ್ಥಿಕತೆ ಚೇತರಿಸಿಕೊಂಡಿತು ಮತ್ತು ರಾಷ್ಟ್ರದ ಹಣಕಾಸು ಸ್ಥಿತಿ ಗಣನೀಯ ಸುಧಾರಣೆ ಕಂಡಿತು. ಪುಟಿನ್ ಸ್ವತಃ ಗ್ಲೋನಾಸ್‌ ಬಗ್ಗೆ ವಿಶೇಷ ಆಸಕ್ತಿ ವಹಿಸಿ,[] ವ್ಯವಸ್ಥೆಯ ಮರುಸ್ಥಾಪನೆಯನ್ನು ಸರ್ಕಾರದ ಉನ್ನತ ಆದ್ಯತೆಗಳಲ್ಲಿ ಒಂದನ್ನಾಗಿ ಮಾಡಿದರು.[] ಈ ಉದ್ದೇಶಕ್ಕಾಗಿ, ೨೦೦೧ ಆಗಸ್ಟ್‌ನಲ್ಲಿ, ಫೆಡರಲ್ ಗುರಿಯ ಕಾರ್ಯಕ್ರಮ ಗ್ಲೋಬಲ್ ನ್ಯಾವಿಗೇಷನ್ ಸಿಸ್ಟಂ ೨೦೦೨-೨೦೧೧ನ್ನು(ಗವರ್ನ್‌ಮೆಂಟ್ ಡಿಸಿಷನ್ ನಂ.೫೮೭) ಆರಂಭಿಸಲಾಯಿತು. ಈ ಕಾರ್ಯಕ್ರಮಕ್ಕೆ ೪೨೦ ದಶಲಕ್ಷ ಡಾಲರ್ ಬಜೆಟ್ ನೀಡಲಾಯಿತು[] ಮತ್ತು ೨೦೦೯ರೊಳಗೆ ಪೂರ್ಣ ಗುಂಪನ್ನು ಮರುಸ್ಥಾಪಿಸುವ ಗುರಿಯನ್ನು ಹೊಂದಲಾಯಿತು.

೨೦೦೩ರ ಡಿಸೆಂಬರ್ ೧೦ರಂದು, ಎರಡನೇ ತಲೆಮಾರಿನ ಉಪಗ್ರಹದ ವಿನ್ಯಾಸ, ಗ್ಲೋನಾಸ್-ಎಂ ಅನ್ನು ಮೊದಲ ಬಾರಿಗೆ ಉಡಾವಣೆ ಮಾಡಲಾಯಿತು. ಇದು ಬೇಸ್‌ಲೈನ್ ಗ್ಲೋನಾಸ್‌ಗಿಂತ ಸ್ವಲ್ಪ ದೊಡ್ಡ ದ್ರವ್ಯರಾಶಿಯಿದ್ದು, ೧೪೧೫ ಕೇಜಿ ತೂಕವಿದೆ. ಆದರೆ ಮೂಲ ಜೀವಿತಾವಧಿಗಿಂತ ಎರಡು ಪಟ್ಟು ಹೊಂದಿದ್ದು, ಅಗತ್ಯ ಬದಲಾವಣೆ ದರವನ್ನು ಶೇಕಡ ೫೦ರಷ್ಟು ಕುಂಠಿತಗೊಳಿಸುತ್ತದೆ. ಹೊಸ ಉಪಗ್ರಹವು ಎರಡು ಪ್ರತ್ಯೇಕ ನಾಗರಿಕ ಸಂಕೇತಗಳ ಪ್ರಸಾರದ ಉತ್ತಮ ನಿಖರತೆ ಮತ್ತು ಸಾಮರ್ಥ್ಯವನ್ನು ಹೊಂದಿರುತ್ತದೆ.

೨೦೦೬ರಲ್ಲಿ, ರಕ್ಷಣಾ ಸಚಿವ ಸರ್ಗೇವ್ ಐವಾನೋವ್ ಒಂದು ಸಂಕೇತವನ್ನು(೩೦ಎಂ ನಿಖರತೆ)ನಾಗರಿಕ ಬಳಕೆಗೆ ಲಭ್ಯವಾಗುವಂತೆ ಮಾಡಿದರು. ಪುಟಿನ್ ಆದಾಗ್ಯೂ, ಇದರಿಂದ ತೃಪ್ತರಾಗಲಿಲ್ಲ. ಇಡೀ ವ್ಯವಸ್ಥೆಯನ್ನು ಪ್ರತಿಯೊಬ್ಬರಿಗೆ ಪೂರ್ಣವಾಗಿ ಲಭ್ಯವಾಗುವಂತೆ ಮಾಡಬೇಕೆಂದು ಒತ್ತಾಯಿಸಿದರು. ತರುವಾಯ ೨೦೦೭ರ ಮೇಲೆ ೧೮ರಂದು, ಎಲ್ಲಾ ನಿರ್ಬಂಧಗಳನ್ನು ತೆಗೆಯಲಾಯಿತು.[][೧೦] ನಿಖರವಾದ, ಮುಂಚಿನ ಮಿಲಿಟರಿ ಸಂಕೇತವು ೧೦ ಎಂ ನಿಖರತೆಯೊಂದಿಗೆ ನಾಗರಿಕ ಬಳಕೆದಾರರಿಗೆ ಮುಕ್ತವಾಗಿ ಲಭ್ಯವಾಗಿದೆ.

೨೦೦೦ನೇ ದಶಕದ ಪ್ರಥಮ ದಶಕದ ಮಧ್ಯಾವಧಿಯಲ್ಲಿ, ರಷ್ಯಾದ ಆರ್ಥಿಕ ವ್ಯವಸ್ಥೆ ಉತ್ಕರ್ಷ ಸ್ಥಿತಿ ಮುಟ್ಟಿತು. ಇದರಿಂದ ರಾಷ್ಟ್ರದ ಬಾಹ್ಯಾಕಾಶ ಬಜೆಟ್‌ನಲ್ಲಿ ಗಣನೀಯ ಸುಧಾರಣೆ ಉಂಟಾಯಿತು. ೨೦೦೭ರಲ್ಲಿ ಗ್ಲೋನಾಸ್ ಕಾರ್ಯಕ್ರಮದ ಆರ್ಥಿಕ ನೆರವನ್ನು ಗಣನೀಯವಾಗಿ ಹೆಚ್ಚಿಸಲಾಯಿತು.ಅಂದರೆ ಬಜೆಟ್ ಎರಡು ಪಟ್ಟಿಗಿಂತ ಹೆಚ್ಚಾಯಿತು. ೨೦೦೬ರಲ್ಲಿ ಗ್ಲೋನಾಸ್ ಫೆಡರಲ್ ಬಜೆಟ್‌ನಿಂದ ೧೮೧ ದಶಲಕ್ಷ ಡಾಲರ್ ಸ್ವೀಕರಿಸಿದರೆ, ೨೦೦೭ರಲ್ಲಿ ಅದರ ಮೊತ್ತವನ್ನು ೩೮೦ ದಶಲಕ್ಷ ಡಾಲರ್‌ಗಳಿಗೆ ಹೆಚ್ಚಿಸಲಾಯಿತು.[]

ಕೊನೆಯಲ್ಲಿ, ೨೦೦೧-೨೦೧೧ ಕಾರ್ಯಕ್ರಮಕ್ಕೆ ೧೪೦.೧ ಶತಕೋಟಿ ರೂಬಲ್ಸ್‌ಗಳನ್ನು(೪.೭ ಶತಕೋಟಿ ಡಾಲರ್) ಖರ್ಚಾಯಿತು ಮತ್ತು ಇದನ್ನು ರೋಸ್ಕೋಮಾಸ್ ಅತೀ ದೊಡ್ಡ ಯೋಜನೆಯನ್ನಾಗಿ ಮಾಡಲಾಯಿತು. ೨೦೧೦ರ ಬಜೆಟ್‌ನ ೮೪.೫ ಶತಕೋಟಿ ರೂಬಲ್‌ಗಳ ಪೈಕಿ ಮೂರನೇ ಒಂದು ಭಾಗವನ್ನು ಅದು ಬಳಸಿಕೊಂಡಿತು.[೧೧]

ಪೂರ್ಣ ಸಾಮರ್ಥ್ಯದ ಮರುಸ್ಥಾಪನೆ

ಬದಲಾಯಿಸಿ

೨೦೦೮ ಜೂನ್‌ನಲ್ಲಿ ವ್ಯವಸ್ಥೆಯು ೧೬ ಉಪಗ್ರಹಗಳನ್ನು ಹೊಂದಿತ್ತು. ಅವುಗಳಲ್ಲಿ ೧೨ ಉಪಗ್ರಹಗಳು ಕಾರ್ಯಸಾಮರ್ಥ್ಯವನ್ನು ಆ ಸಂದರ್ಭದಲ್ಲಿ ಹೊಂದಿದ್ದವು. ಈ ಹಂತದಲ್ಲಿ, ೨೦೧೦ರೊಳಗೆ ಮುಂಚೆ ಯೋಜಿಸಿದ್ದಕ್ಕಿಂತ ಒಂದು ವರ್ಷದ ನಂತರ ೨೪ ಉಪಗ್ರಹಗಳ ಪೂರ್ಣ ಗುಂಪನ್ನು ಹೊಂದುವ ಗುರಿಯನ್ನು ರೊಸ್ಕೊಮೋಸ್ ಹೊಂದಿತ್ತು.[೧೨]

ಸ್ಥಳೀಯ, ಸ್ವತಂತ್ರ ಉಪಗ್ರಹ ಸಂಚಾರ ನಿರ್ದೇಶನವನ್ನು ಹೊಂದುವ ಮಿಲಿಟರಿ ಪ್ರಾಮುಖ್ಯತೆಯು ೨೦೦೮ರ ಆಗಸ್ಟ್‌ನ ೨೦೦೮ ಸೌತ್ ಒಸೆಟಿಯ ಯುದ್ಧದಿಂದ ಗಮನಸೆಳೆಯಿತು. ಈ ವೈರತ್ವದ ಅವಧಿಯಲ್ಲಿ ಅಮೆರಿಕದ ಜಿಪಿಎಸ್ ವ್ಯವಸ್ಥೆಯು ಸಂಪೂರ್ಣವಾಗಿ ಆ ಪ್ರದೇಶದಲ್ಲಿ ಸ್ಥಗಿತಗೊಂಡಿತ್ತು.[೧೩] ೨೦೦೮ರ ಸೆಪ್ಟೆಂಬರ್‌ನಲ್ಲಿ, ಪ್ರಧಾನ ಮಂತ್ರಿ ವ್ಲಾಡಿಮಿರ್ ಪುಟಿನ್ ಫೆಡರಲ್ ಬಜೆಟ್‌ನಿಂದ ಗ್ಲೋನಾಸ್‌ಗೆ ಹೆಚ್ಚುವರಿ ೬೭ ಶತಕೋಟಿ ರೂಬಲ್ಸ್ ಮೀಸಲಿಡುವ ಡಿಕ್ರಿಗೆ ಸಹಿ ಹಾಕಿದರು.[೧೪]

ವಾಣಿಜ್ಯ ಬಳಕೆಗೆ ಉತ್ತೇಜನ

ಬದಲಾಯಿಸಿ

ಗ್ಲೋನಾಸ್ ಗುಂಪು ಜಾಗತಿಕ ವ್ಯಾಪ್ತಿ ಸಮೀಪಿಸಿದ್ದರೂ, ಅದರ ವಾಣಿಜ್ಯೀಕರಣ, ವಿಶೇಷವಾಗಿ ಬಳಕೆದಾರ ವಿಭಾಗದ ಅಭಿವೃದ್ಧಿ ಅಮೆರಿಕದ ಜಿಪಿಎಸ್ ವ್ಯವಸ್ಥೆಗೆ ಹೋಲಿಸಿದರೆ ಕೊರತೆಯನ್ನು ಹೊಂದಿತ್ತು. ಉದಾಹರಣೆಗೆ, ಕಾರುಗಳಿಗೆ ಪ್ರಥಮ ವಾಣಿಜ್ಯ ರಷ್ಯಾ ನಿರ್ಮಿತ ಗ್ಲೋನಾಸ್ ಸಂಚಾರ ನಿರ್ದೇಶನ ಉಪಕರಣವಾದ ಗ್ಲೋಸ್ಪೇಸ್ SGK-೭೦ಯನ್ನು ೨೦೦೭ರಲ್ಲಿ ಪರಿಚಯಿಸಲಾಯಿತು. ಆದರೆ ಅದು ಅದೇರೀತಿಯ ಜಿಪಿಎಸ್ ಗ್ರಾಹಕಕ್ಕಿಂತ ಹೆಚ್ಚು ದೊಡ್ಡದಾಗಿತ್ತು ಮತ್ತು ಹೆಚ್ಚು ವೆಚ್ಚದಾಯಕವಾಗಿತ್ತು.[] ೨೦೧೦ರ ಕೊನೆಯಲ್ಲಿ, ಮಾರುಕಟ್ಟೆಯಲ್ಲಿ ಕೇವಲ ಕೈಬೆರಳೆಣಿಕೆಯಷ್ಟು ಗ್ಲೋನಾಸ್ ಗ್ರಾಹಕಗಳು ಇದ್ದವು. ಅವುಗಳಲ್ಲಿ ಕೆಲವು ಸಾಮಾನ್ಯ ಗ್ರಾಹಕರಿಗೆ ಮೀಸಲಾಗಿತ್ತು. ಪರಿಸ್ಥಿತಿಯ ಸುಧಾರಣೆಗೆ, ರಷ್ಯಾ ಸರ್ಕಾರವು ಸಕ್ರಿಯವಾಗಿ ನಾಗರಿಕ ಬಳಕೆಗಾಗಿ ಗ್ಲೋನಾಸ್ ಉತ್ತೇಜಿಸುತ್ತಿದೆ.[೧೫]

ಬಳಕೆದಾರ ವಿಭಾಗದ ಅಭಿವೃದ್ಧಿ ಸುಧಾರಣೆಗೆ, ೨೦೧೦ ಆಗಸ್ಟ್ ೧೧ರಂದು ಸರ್ಗೈ ಐವಾನೋವ್ ಮೊಬೈಲ್ ಫೋನ್‌ಗಳು ಸೇರಿದಂತೆ ಎಲ್ಲ ಜಿಪಿಎಸ್ ಸಾಮರ್ಥ್ಯದ ಉಪಕರಣಗಳಿಗೆ ಅವುಗಳು ಗ್ಲೋನಾಸ್ ಜತೆ ಹೊಂದಾಣಿಕೆಯಿಲ್ಲದಿದ್ದರೆ ಶೇಕಡ ೨೫ ಆಮದು ಸುಂಕವನ್ನು ಪರಿಚಯಿಸುವ ಯೋಜನೆಯನ್ನು ಪ್ರಕಟಿಸಿದರು. ಇಷ್ಟೇ ಅಲ್ಲದೇ, ೨೦೧೧ರಿಂದ ಆರಂಭವಾಗಿ ರಷ್ಯಾದ ಎಲ್ಲ ಕಾರು ಉತ್ಪಾದಕರು ಗ್ಲೋನಾಸ್‌ವೊಂದಿಗೆ ಕಾರು ತಯಾರಿಸುವಂತೆ ಯೋಜಿಸಿದೆ. ಇದು ಎಲ್ಲ ಕಾರು ತಯಾರಿಕರಿಗೆ ಪರಿಣಾಮ ಬೀರಲಿದ್ದು, ವಿದೇಶಿ ಬ್ರಾಂಡ್‌ಗಳಾದ ಫೋರ್ಡ್ ಮತ್ತು ಟೊಯೊಟಾ ಕೂಡ ಒಳಗೊಂಡಿದೆ. ಅವು ರಷ್ಯಾದಲ್ಲಿ ಕಾರು ಜೋಡಣೆ ಸೌಲಭ್ಯಗಳನ್ನು ಹೊಂದಿದೆ.[೧೬]

ಪ್ರಮುಖ ಮಾರಾಟಗಾರರಾದ ST-ಎರಿಕ್‌ಸನ್,[೧೭] ಬ್ರಾಡ್‌ಕ್ಯಾಂ[೧೮] ಮತ್ತು ಕ್ವಾಲ್‌ಕಾಂನಿಂದ ಪ್ರಸಕ್ತ ಜಿಪಿಎಸ್ ಮತ್ತು ಫೋನ್ ಬೇಸ್‌ಬ್ಯಾಂಡ್ ಚಿಪ್ಸ್‌ಗಳು ಎಲ್ಲವೂ ಜಿಪಿಎಸ್ ಜತೆ ಸಂಯೋಜನೆಯಿಂದ ಗ್ಲೋನಾಸ್‌ಗೆ ಬೆಂಬಲಿಸುತ್ತವೆ. ವಿಶ್ವವ್ಯಾಪಿ ಸಾಗಣೆಯಾಗುವ ಬಹುತೇಕ ಉಪಕರಣಗಳು ಗ್ಲೋನಾಸ್‌ಗೆ ಬೆಂಬಲಿಸುವುದರಿಂದ ಯಾವುದೇ ಆಮದು ನಿರ್ಬಂಧದಿಂದ ಕಡಿಮೆ ಬದಲಾವಣೆ ಸಂಭವವಿರುತ್ತದೆ.

ಮೀಟರ್ ನಿಖರತೆಯಿಂದ ವಾಸ್ತವ ಕಾಲದ ಸ್ಥಾನಕ್ಕೆ ದತ್ತಾಂಶ ಒದಗಿಸುವ ಉಪಗ್ರಹ ಉಲ್ಲೇಖ ನಿಲ್ದಾಣಗಳ ರಾಷ್ಟ್ರೀಯ ಜಾಲವಾದ ಸ್ವೀಡನ್‌ನ ಸ್ವೆಪೋಸ್, ೨೦೧೧ ಏಪ್ರಿಲ್‌ನಲ್ಲಿ ಪ್ರಥಮ ಪರಿಚಿತ ವಿದೇಶಿ ಕಂಪೆನಿಯಾಗಿದ್ದು, ಗ್ಲೋನಾಸ್ ಬಳಕೆ ಮಾಡಿತು.[೧೯]

ಸಮೂಹದ ಪೂರ್ಣಗೊಳಿಸುವಿಕೆ

ಬದಲಾಯಿಸಿ

೨೦೧೦ರಲ್ಲಿ ಸಮೂಹವನ್ನು ಪೂರ್ಣಗೊಳಿಸುವ ರಷ್ಯಾದ ಗುರಿ ಹಿನ್ನಡೆ ಅನುಭವಿಸಿತು. ಏಕೆಂದರೆ ಮೂರು ಗ್ಲೋನಾಸ್-ಎಂ ಉಪಗ್ರಹಗಳ ಉಡಾವಣೆಯು ೨೦೧೦ ಡಿಸೆಂಬರ್‌ನಲ್ಲಿ ವಿಫಲವಾಯಿತು. ಪ್ರೋಟೊನ್-ಎಂ ರಾಕೆಟ್ ಸ್ವತಃ ದೋಷವಿಲ್ಲದೇ ಕಾರ್ಯನಿರ್ವಹಿಸಿತು. ಆದರೆ ಮೇಲಿನ ಹಂತ ಬ್ಲಾಕ್ DM೩(ಚೊಚ್ಚಲ ಹಾರಾಟವನ್ನು ಮಾಡುವ ಹೊಸ ರೂಪ) ಸಂವೇದಕದ ವೈಫಲ್ಯದಿಂದ ಅತೀ ಹೆಚ್ಚು ಇಂಧನದಿಂದ ತುಂಬಿತ್ತು. ಇದರ ಫಲವಾಗಿ, ಮೇಲಿನ ಹಂತ ಮತ್ತು ಮೂರು ಉಪಗ್ರಹಗಳುಪೆಸಿಫಿಕ್ ಸಾಗರಕ್ಕೆ ಅಪ್ಪಳಿಸಿದವು. ಉಡಾವಣೆ ವೈಫಲ್ಯದಿಂದ ೧೬೦ ದಶಲಕ್ಷ ಡಾಲರ್‌ ವೆಚ್ಚವಾಯಿತು ಎಂದು ಕೋಮ್ಮರ್‌ಸ್ಯಾಂಟ್ ಅಂದಾಜು ಮಾಡಿತು.[೨೦] ರಷ್ಯಾದ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೇವ್ ಇಡೀ ಕಾರ್ಯಕ್ರಮದ ಪೂರ್ಣ ಲೆಕ್ಕಪರಿಶೋಧನೆಗೆ ಮತ್ತು ವೈಫಲ್ಯದ ತನಿಖೆಗೆ ಆದೇಶಿಸಿದರು.[೨೧]

ಅಪಘಾತದ ಹಿನ್ನೆಲೆಯಲ್ಲಿ, ರೋಸ್ಕೋಸ್‌ಮಾಸ್ ಎರಡು ಮೀಸಲು ಉಪಗ್ರಹಗಳನ್ನು ಸಕ್ರಿಯಗೊಳಿಸಿತು ಮತ್ತು ೨೦೧೧ ಫೆಬ್ರವರಿಯಲ್ಲಿ ಉಡಾವಣೆಗೆ ಪ್ರಥಮ ಸುಧಾರಿತ ಗ್ಲೋನಾಸ್-ಕೆ ಉಪಗ್ರಹವನ್ನು ನಿರ್ಮಿಸಲು ನಿರ್ಧರಿಸಿತು. ಇದು ಮೂಲತಃ ಯೋಜಿಸಿದಂತೆ ಮುಖ್ಯವಾಗಿ ಪರೀಕ್ಷೆಗೆ ಬದಲಾಗಿ ಕಾರ್ಯಸಮರ್ಥ ಸಮೂಹದ ಭಾಗವಾಗಿತ್ತು. ಇದು ಉಪಗ್ರಹಗಳ ಒಟ್ಟು ಸಂಖ್ಯೆಯನ್ನು ೨೩ಕ್ಕೆ ತಂದಿತು. ಬಹುತೇಕ ವಿಶ್ವವ್ಯಾಪಿ ಸಂಪೂರ್ಣ ಪ್ರಸಾರ ವ್ಯಾಪ್ತಿಯನ್ನು ಹೊಂದಿತ್ತು. ಎರಡನೇ ಗ್ಲೋನಾಸ್-K ಮೂರದಿಂದ ನಾಲ್ಕು ತಿಂಗಳಲ್ಲಿ ಸಿದ್ಧವಾಗಲಿದೆ.[೨೨]

೨೦೧೦ರಲ್ಲಿ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್ ಗ್ಲೋನಾಸ್‌ಗೆ ೨೦೧೨-೨೦೨೦ ವರ್ಷಗಳನ್ನು ಒಳಗೊಂಡ ಹೊಸ ಫೆಡರಲ್ ಗುರಿಯ ಕಾರ್ಯಕ್ರಮವನ್ನು ಸಿದ್ಧಪಡಿಸಿದರು. ಮೂಲ ೨೦೦೧ನೇ ಕಾರ್ಯಕ್ರಮವು ೨೦೧೧ರಲ್ಲಿ ಪೂರ್ಣಗೊಳ್ಳಲು ನಿಗದಿಯಾಗಿದೆ.[೨೦]

ವ್ಯವಸ್ಥೆ ವಿವರಣೆ

ಬದಲಾಯಿಸಿ

ಗ್ಲೋನಾಸ್ ಜಾಗತಿಕ ಉಪಗ್ರಹ ಸಂಚಾರ ನಿರ್ದೇಶನ ವ್ಯವಸ್ಥೆಯಾಗಿದ್ದು, ಮಿಲಿಟರಿ ಮತ್ತು ನಾಗರಿಕ ಬಳಕೆದಾರರಿಗೆ ವಾಸ್ತವ ಕಾಲದ ಸ್ಥಾನ ಮತ್ತು ವೇಗದ ತೀರ್ಮಾನವನ್ನು ಒದಗಿಸುತ್ತದೆ. ಉಪಗ್ರಹಗಳು ಮಧ್ಯಮ ವೃತ್ತಾಕಾರದ ಕಕ್ಷೆಯಲ್ಲಿ ೧೯೧೦೦ಕಿಮೀ ಎತ್ತರದಲ್ಲಿ ೬೪.೮ ಡಿಗ್ರಿ ಬಾಗುವಿಕೆಯಿಂದ ಮತ್ತು ೧೧ ಗಂಟೆಗಳು ಮತ್ತು ೧೫ ನಿಮಿಷಗಳ ಅವಧಿಯಲ್ಲಿ ನೆಲೆಗೊಂಡಿವೆ.[೨೩][೨೪] ಗ್ಲೋನಾಸ್ ಕಕ್ಷೆಯು ಉತ್ತರ ಅಕ್ಷಾಂಶದಲ್ಲಿ ಬಳಕೆಗೆ ವಿಶೇಷವಾಗಿ ಉಪಯುಕ್ತವಾಗಿದೆ. ಅಲ್ಲಿ ಜಿಪಿಎಸ್ ಸಂಕೇತವನ್ನು ಪಡೆಯುವುದು ಸಮಸ್ಯಾತ್ಮಕವಾಗಿದೆ.[][] ಸಮೂಹವು ಮೂರು ಕಕ್ಷೀಯ ಸಮಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತದೆ. ಪ್ರತಿಯೊಂದರಲ್ಲಿ ೮ ಸಮಾನ ಅಂತರದ ಉಪಗ್ರಹಗಳಿರುತ್ತವೆ.[೨೪] ಪೂರ್ಣ ಕಾರ್ಯಸಮರ್ಥ ಸಮೂಹವು ಜಾಗತಿಕ ಕಾರ್ಯವ್ಯಾಪ್ತಿಯೊಂದಿಗೆ ೨೪ ಉಪಗ್ರಹಗಳನ್ನು ಹೊಂದಿದೆ. ೧೮ ಉಪಗ್ರಹಗಳು ರಷ್ಯಾದ ಪ್ರದೇಶದ ಕಾರ್ಯವ್ಯಾಪ್ತಿಗೆ ಅವಶ್ಯಕವಾಗಿದೆ. ಸ್ಥಾನ ನಿಗದಿಗೆ, ಗ್ರಾಹಕವು ಕನಿಷ್ಟ ನಾಲ್ಕು ಉಪಗ್ರಹಗಳ ವ್ಯಾಪ್ತಿಯಲ್ಲಿರಬೇಕು. ಅವುಗಳಲ್ಲಿ ಮೂರನ್ನು ಬಳಕೆದಾರನ ಸ್ಥಳವನ್ನು ತೀರ್ಮಾನಿಸಲು ಬಳಸಲಾಗುತ್ತದೆ ಮತ್ತು ನಾಲ್ಕನೆಯದನ್ನು ಗ್ರಾಹಕರ ಗಡಿಯಾರಗಳನ್ನು ಮತ್ತು ಅಂತರಿಕ್ಷನೌಕೆಯ ಮೂರು ಗಡಿಯಾರಗಳನ್ನು ಹೊಂದಾಣಿಕೆ ಮಾಡಲು ಬಳಸಲಾಗುತ್ತದೆ.[೨೩]

ಸಂಕೇತಗಳು

ಬದಲಾಯಿಸಿ
 
ರಷ್ಯಾದ ಮಿಲಿಟರಿ ಗ್ಲೋನಾಸ್/GPS ಗ್ರಾಹಕವನ್ನು ಒಂದುಗೂಡಿಸಿದೆ.

ಗ್ಲೋನಾಸ್ ಉಪಗ್ರಹಗಳು ಎರಡು ರೀತಿಯ ಸಂಕೇತಗಳನ್ನು ರವಾನಿಸುತ್ತದೆ: ಪ್ರಮಾಣಿತ ನಿಖರ (SP)ಸಂಕೇತ ಮತ್ತು ಜಟಿಲ ಅಧಿಕ ನಿಖರತೆಯ (HP)ಸಂಕೇತ.

ಸಂಕೇತಗಳು ಒಂದೇ ತೆರನಾದ DSSS ಸಂಕೇತ ಬಿಡಿಸುವಿಕೆ ಮತ್ತು ಜಿಪಿಎಸ್ ಸಂಕೇತಗಳ ರೀತಿಯಲ್ಲಿ ಬೈನರಿ-ಫೇಸ್ ಶಿಪ್ಟ್ ಕೀಯಿಂಗ್(BPSK)ತರಂಗಾಂತರತೆಯನ್ನು ಬಳಸುತ್ತವೆ. ಎಲ್ಲ ಗ್ಲೋನಾಸ್ ಉಪಗ್ರಹಗಳು SP ಸಂಕೇತದ ರೀತಿಯಲ್ಲಿ ಒಂದೇ ಸಂಕೇತವನ್ನು ರವಾನಿಸಿದರೂ, ಪ್ರತಿಯೊಂದೂ ಭಿನ್ನ ಆವರ್ತಾಂಕದಲ್ಲಿ ೧೫-ಚಾನೆಲ್ ಫ್ರೀಕ್ವೆನ್ಸಿ ಡಿವಿಷನ್ ಮಲ್ಟಿಪಲ್ ಅಕ್ಸೆಸ್(FDMA) ತಂತ್ರವನ್ನು ಬಳಸಿಕೊಂಡು, ಎರಡೂ ಕಡೆ ೧೬೦೨.೦ MHzವ್ಯಾಪಿಸಿದೆ. ಇದನ್ನು ಎಲ್ ೧ ಬ್ಯಾಂಡ್ ಎಂದು ಕರೆಯಲಾಗುತ್ತದೆ. ಕೇಂದ್ರ ಆವರ್ತಾಂಕವು ೧೬೦೨ MHz + n × ೦.೫೬೨೫ MHz, ಅದರಲ್ಲಿ n ಉಪಗ್ರಹದ ಆವರ್ತಾಂಕ ಚಾನೆಲ್ ಸಂಖ್ಯೆಯಾಗಿದೆ(n =−೭,−೬,−೫,...೦,...,೬, ಮುಂಚೆ n ==−೭,...೦,...,೧೩). ಸಂಕೇತಗಳನ್ನು ೩೮° ಶಂಕುವಿನಲ್ಲಿ ಬಲಗೈನ ವರ್ತುಲ ಧ್ರುವೀಕರಣವನ್ನು ಬಳಸಿಕೊಂಡು EIRPಯಲ್ಲಿ ೨೫ರಿಂದ ೨೭ dBW ನಡುವೆ(೩೧೬ರಿಂದ ೫೦೦ ವಾಟ್ಸ್ನಲ್ಲಿ ರವಾನಿಸಲಾಗುತ್ತದೆ. ೨೪ಉಪಗ್ರಹ ಸಮೂಹವನ್ನು ಕೇವಲ ೧೫ ಚಾನೆಲ್‌ಗಳೊಂದಿಗೆ ಹೋಲಿಕೆಯ ಆವರ್ತಾಂಕ ಚಾನೆಲ್‌ಗಳ ಬಳಕೆಯಿಂದ ಪ್ರತಿಕಕ್ಷೆಯ(ಕಕ್ಷೆಯಲ್ಲಿ ಗ್ರಹದ ವಿರುದ್ಧ ದಿಕ್ಕು) ಉಪಗ್ರಹ ಜೋಡಿಗಳಿಗೆ ಬೆಂಬಲಿಸಲು ಎಡೆಮಾಡಿಕೊಡಲಾಗಿದೆ. ಈ ಉಪಗ್ರಹಗಳು ಭೂ ನೆಲೆಯ ಬಳಕೆದಾರನಿಂದ ಒಂದೇ ಸಮಯದಲ್ಲಿ ವೀಕ್ಷಿಸಲು ಸಾಧ್ಯವಾಗುವುದಿಲ್ಲ.

ಎಚ್‌ಪಿ ಸಂಕೇತವನ್ನು ಎಸ್‌ಪಿ ಸಂಕೇತದೊಂದಿಗೆ ಹಂತ ರಚನೆಯಲ್ಲಿ ಪ್ರಸಾರ ಮಾಡಲಾಗುತ್ತದೆ. ಎಸ್‌ಪಿ ಸಂಕೇತದ ಸಮಾನ ವಾಹಕ ತರಂಗವನ್ನು ಪರಿಣಾಮಕಾರಿಯಾಗಿ ಹಂಚಿಕೊಳ್ಳುತ್ತದೆ. ಆದರೆ ಎಸ್‌ಪಿ ಸಂಕೇತಕ್ಕಿಂತ ೧೦ ಪಟ್ಟು ಹೆಚ್ಚು ಬ್ಯಾಂಡ್ ಅಗಲವನ್ನು ಹೊಂದಿರುತ್ತದೆ.

L೨ಸಂಕೇತಗಳು L೧ ಬ್ಯಾಂಡ್ ಸಂಕೇತಗಳ ರೀತಿಯಲ್ಲಿ ಸಮಾನ FDMAಯನ್ನು ಬಳಸುತ್ತದೆ. ಆದರೆ ವ್ಯಾಪಿಸಿರುವ ೧೨೪೬ MHz ರವಾನಿಸುತ್ತದೆ. ಇದರ ಕೇಂದ್ರ ಆವರ್ತಾಂಕವು ಸಮೀಕರಣ ೧೨೪೬ MHz + n ×೦.೪೩೭೫ MHzನಿಂದ ನಿರ್ಧರಿತವಾಗುತ್ತದೆ.ಅದರಲ್ಲಿ n L೧ರೀತಿಯಲ್ಲಿ ಸಮಾನ ವ್ಯಾಪ್ತಿಯನ್ನು ಕ್ರಮಿಸುತ್ತದೆ.[೨೫] HPಸಂಕೇತದ ಇತರೆ ವಿವರಗಳನ್ನು ಬಹಿರಂಗಪಡಿಸಿಲ್ಲ.

 
ಸಂಯೋಜಿತ ಗ್ಲೋನಾಸ್/GPS ವೈಯಕ್ತಿಕ ರೇಡಿಯೊ ಸಂಜ್ಞೆ

ಶೃಂಗ ಸಾಮರ್ಥ್ಯದಲ್ಲಿ, SP ಸಂಕೇತವು ಸಮತಲ ಸ್ಥಾನಿಕ ನಿಖರತೆಯನ್ನು ೫-೧೦ ಮೀಟರುಗಳಲ್ಲಿ ನೀಡುತ್ತದೆ. ಲಂಬ ಸ್ಥಾನಿಕವನ್ನು ೧೫ ಮೀಟರುಗಳಲ್ಲಿ ನೀಡುತ್ತದೆ, ವೇಗ ವೆಕ್ಟರ್ ಅಳತೆಯನ್ನು ೧೦ ಸೆಂಮೀನೊಳಗೆ ನೀಡುತ್ತದೆ ಮತ್ತು ಕಾಲಯೋಜನೆಯನ್ನು ೨೦೦ nsನಲ್ಲಿ ನೀಡುತ್ತದೆ. ಎಲ್ಲವೂ ಏಕಕಾಲದಲ್ಲಿ ನಾಲ್ಕು ಪ್ರಥಮ ತಲೆಮಾರಿನ ಉಪಗ್ರಹಗಳ ಅಳತೆಗಳನ್ನು ಆಧರಿಸಿದೆ.[೨೬] ಗ್ಲೋನಾಸ್-ಎಂ ಮುಂತಾದ ಹೊಸ ಉಪಗ್ರಹಗಳು ಇವುಗಳಿಂದ ಸುಧಾರಣೆಯಾಗುತ್ತದೆ.[೨೬] ಹೆಚ್ಚು ನಿಖರ HPಸಂಕೇತವು ಅಧಿಕೃತ ಬಳಕೆದಾರರಿಗೆ ಲಭ್ಯವಿದೆ. ಉದಾಹರಣೆಗೆ ರಷ್ಯನ್ ಮಿಲಿಟರಿ, ಗೂಢಲಿಪಿಕರಣದ ಡಬ್ಲು ಕೋಡ್‌ನಿಂದ ಬದಲಾವಣೆಯಾಗುವ US P(Y) ಕೋಡ್ ರೀತಿಯಲ್ಲಿಲ್ಲದೇ, ಗ್ಲೋನಾಸ್ ಪಿ ಕೋಡ್‌ಗಳನ್ನು ಅಸ್ಪಷ್ಟತೆ ಮೂಲಕ ಭದ್ರತೆಯನ್ನು ಬಳಸಿ ಸ್ಪಷ್ಟವಾಗಿ ಪ್ರಸಾರ ಮಾಡಲಾಗುತ್ತದೆ. ಈ ಸಂಕೇತದ ಬಳಕೆಯು ಅಪಾಯವನ್ನು ಹೊಂದಿರುತ್ತದೆ.ಆದಾಗ್ಯೂ L೨Pಕೋಡ್‌ನಲ್ಲಿ ದತ್ತಾಂಶ ಚೂರುಗಳ ತರಾಂಗಂತರತೆಯು(ಆದ್ದರಿಂದ ಟ್ರಾಕಿಂಗ್ ಕಾರ್ಯತಂತ್ರ) ಯಾದೃಚ್ಛಿಕ ಅವಧಿಗಳಲ್ಲಿ ಏರಿಳಿತಗಳ ಕೊರತೆಯ ೨೫೦ಬಿಪಿಎಸ್ ಸಿಡಿತದವರೆಗೆ ಇತ್ತೀಚೆಗೆ ಬದಲಾಗಿದೆ. ಗ್ಲೋನಾಸ್ L೧P ಕೋಡ್ ೫೦ ಬಿಪಿಎಸ್‌ನಲ್ಲಿ ಮ್ಯಾಂಚೆಸ್ಟರ್ ವಕ್ರಗತಿಯ ಕೋಡ್‌ಯಿಲ್ಲದೇ ಬದಲಾಗುತ್ತದೆ.ಇದು ಸಿಎ ಕೋಡ್ ರೀತಿಯಲ್ಲಿ ಒಂದೇ ಕಕ್ಷೆಯ ಅಂಶಗಳನ್ನು ಒಯ್ದರೂ, ಇದು ಗಂಭೀರ ಚಂದ್ರ-ಸೌರ ವೇಗವರ್ಧನೆ ಪ್ರಮಿತಿಗಳಿಗೆ ಮತ್ತು ಗಡಿಯಾರ ಸರಿಪಡಿಸುವಿಕೆ ನಿಯಮಗಳಿಗೆ ಹೆಚ್ಚು ಚೂರುಗಳನ್ನು ಮೀಸಲಿಡುತ್ತದೆ.

ಪ್ರಸಕ್ತ ಹೆಚ್ಚುವರಿ ನಾಗರಿಕ ಉಲ್ಲೇಖ ಸಂಕೇತವು ಎಲ್‌೨ ಬ್ಯಾಂಡ್‌ನಲ್ಲಿ ಎಲ್‍ ಬ್ಯಾಂಡ್ ಸಂಕೇತಕ್ಕೆ ಹೋಲಿಕೆಯ ಎಸ್‌ಪಿ ಕೋಡ್‍ನೊಂದಿಗೆ ಪ್ರಸಾರವಾಗುತ್ತದೆ. ಪ್ರಸಕ್ತ ಸಮೂಹದಲ್ಲಿ ಉಪಗ್ರಹ ಸಂಖ್ಯೆ ೭೯೫ ಹೊರತುಪಡಿಸಿ ಎಲ್ಲ ಉಪಗ್ರಹಗಳಿಂದ ಇದು ಲಭ್ಯವಿರುತ್ತದೆ.ಇದು ಮೂಲ ಗ್ಲೋನಾಸ್ ವಿನ್ಯಾಸದ ಕೊನೆಯದಾಗಿದೆ. ಒಂದು ಆಂಶಿಕ ಕಾರ್ಯನಿರ್ವಹಿಸದ ಗ್ಲೋನಾಸ್-ಎಂ ಉಪಗ್ರಹವು ಎಲ್‌‍೧ ಬ್ಯಾಂಡ್‌ನಲ್ಲಿ ಮಾತ್ರ ಪ್ರಸಾರವಾಗುತ್ತದೆ.(ನೋಡಿ www.glonass-ianc.rsa.ru Archived 2006-10-12 ವೇಬ್ಯಾಕ್ ಮೆಷಿನ್ ನಲ್ಲಿ. ಸಮೂಹ ಸ್ಥಿತಿಗತಿಯ ದಿನನಿತ್ಯದ ಪರಿಷ್ಕರಣೆಗೆ.)

ಗ್ಲೋನಾಸ್ "PZ-೯೦"ಹೆಸರಿನ ಸುಸಂಘಟಿತ ದತ್ತಾಂಶ ಬಳಸುತ್ತದೆ(ಭೂಮಿಯ ಪ್ರಮಿತಿ ೧೯೯೦-ಪ್ಯಾರಾಮಿಟ್ರಿ ಜೆಮಿಲ್ ೧೯೯೦)ಅದರಲ್ಲಿ ಉತ್ತರ ಧ್ರುವದ ನಿಖರ ಸ್ಥಳವನ್ನು ೧೯೦೦ರಿಂದ ೧೯೦೫ರ ಅದರ ಸ್ಥಾನದ ಸರಾಸರಿ ಎಂದು ನೀಡಲಾಗುತ್ತದೆ. ಇದು ಜಿಪಿಎಸ್ ಸುಸಂಘಟಿತ ದತ್ತಾಂಶ WGS ೮೪ಕ್ಕೆ ವಿರುದ್ಧವಾಗಿದ್ದು, ಅದು ೧೯೮೪ರಲ್ಲಿ ಉತ್ತರ ಧ್ರುವದ ಸ್ಥಳವನ್ನು ಬಳಸಿಕೊಳ್ಳುತ್ತದೆ. ೨೦೦೭ರ ಸೆಪ್ಟೆಂಬರ್ ೧೭ರಲ್ಲಿದ್ದಂತೆ, PZ-೯೦ ದತ್ತಾಂಶವನ್ನು ಯಾವುದೇ ದಿಕ್ಕಿನಲ್ಲಿ 40 cm (16 in)ಗಿಂತ ಕಡಿಮೆ WGS ೮೪ನಿಂದ ವ್ಯತ್ಯಾಸ ಹೊಂದುವಂತೆ ಪರಿಷ್ಕರಿಸಲಾಗುತ್ತದೆ.40 cm (16 in)

CDMA ಸಂಕೇತಗಳು

ಬದಲಾಯಿಸಿ

೨೦೦೮ರಿಂದೀಚೆಗೆ, ಹೊಸ CDMA ಸಂಕೇತಗಳನ್ನು ಗ್ಲೋನಾಸ್ ಜತೆ ಬಳಕೆಗಾಗಿ ಸಂಶೋಧಿಸಲಾಗುತ್ತಿದೆ.

ಟೆಂಪ್ಲೇಟು:GLONASS satellites roadmap

ಇತ್ತೀಚಿನ ೨೦೦೧-೨೦೧೨ರಂದು ಉಡಾವಣೆ ಮಾಡಲಾಗುವ ಗ್ಲೋನಾಸ್-ಕೆ೧ ಉಪಗ್ರಹಗಳು ಹೆಚ್ಚುವರಿ ಮುಕ್ತ CDMA ಸಂಕೇತವನ್ನು ಪರೀಕ್ಷೆ ಉದ್ದೇಶಗಳಿಗಾಗಿ ಪರಿಚಯಿಸಲಿದೆ. ಇದು ೧೨೦೨.೦೨೫ MHzನ ಎಲ್‌೩ ಬ್ಯಾಂಡ್‌ನಲ್ಲಿ ನೆಲೆಹೊಂದಿದೆ. ೨೦೧೩-೨೦೧೫ರಲ್ಲಿ ಉಡಾವಣೆ ಮಾಡಲಾಗುವ ಗ್ಲೋನಾಸ್-ಕೆ೨ ಉಪಗ್ರಹಗಳು ಎಲ್೨ ಸಂಕೇತವನ್ನು ೧೨೦೭.೧೭ MHzಗೆ ಮರುಸ್ಥಳಾಂತರಿಸುತ್ತದೆ ಮತ್ತು ಎಲ್‌೧ ಬ್ಯಾಂಡ್‌ನಲ್ಲಿ ೧೫೭೫.೪೨ MHzನೆಲೆಗೊಂಡಿರುವ ಸಿಡಿಎಂಎ ಹೆಚ್ಚುವರಿ ಮುಕ್ತ ಸಂಕೇತವನ್ನು ಸೇರ್ಪಡೆ ಮಾಡುತ್ತದೆ. ತರುವಾಯ ೨೦೧೫ರ ನಂತರ ಉಡಾವಣೆ ಮಾಡುವ ಗ್ಲೋನಾಸ್-KM ಉಪಗ್ರಹಗಳು ಒಂದು ಅಸ್ತಿತ್ವದಲ್ಲಿರುವ ಎಲ್೧ ಆವರ್ತಾಂಕ, ಒಂದು ಎಲ್‌೨ ಬ್ಯಾಂಡ್‌ನಲ್ಲಿ ೧೨೪೨ MHz ಮತ್ತು ಒಂದು ಎಲ್‌೫ ಬ್ಯಾಂಡ್‌ನ ೧೧೭೬.೪೫ MHz ಹೆಚ್ಚುವರಿ ಮುಕ್ತ CDMAಸಂಕೇತಗಳ ಲಕ್ಷಣವನ್ನು ಹೊಂದಿದೆ. ಗ್ಲೋನಾಸ್-ಕೆಎಂ ಬಹುಶಃ ಜಟಿಲ ಸಿಡಿಎಂಎ ಸಂಕೇತಗಳನ್ನು ಅಸ್ತಿತ್ವದಲ್ಲಿರುವ ಎಲ್ ೧, ಎಲ್‌೨ ಮತ್ತು ಎಲ್‌೩ ಬ್ಯಾಂಡ್‌ಗಳಲ್ಲಿ ಪ್ರಸಾರ ಮಾಡುತ್ತದೆ.[೨೭][೨೮][೨೯][೩೦][೩೧][೩೨]

ಗ್ಲೋನಾಸ್ ಸಿಡಿಎಂಎ ಸಂಕೇತಗಳ ಕ್ರಮವ್ಯವಸ್ಥೆ ಮತ್ತು ತರಂಗಾಂತರತೆಯು ಅಂತಿಮಗೊಳ್ಳದಿದ್ದರೂ, ಅಭಿವೃದ್ಧಿದಾರರ ಪೂರ್ವಭಾವಿ ಹೇಳಿಕೆಗಳು ಹೊಸ ಸಂಕೇತಗಳು ಅವಶ್ಯಕವಾಗಿ ಒಂದೇ ಆವರ್ತಾಂಕಗಳಲ್ಲಿ ಇರಿಸಿದ GPS/ಗೆಲಿಲಿಯೊ೧/COMPASSಶೈಲಿಯ ಸಂಕೇತಗಳು ಎಂದು ಸೂಚಿಸುತ್ತವೆ. ಎಲ್‌೧ ಬ್ಯಾಂಡ್‌ನ ಮುಕ್ತ ಸಂಕೇತವು BOC(೧,೧) ತರಂಗಾಂತರತೆಯನ್ನು ಬಳಸುತ್ತದೆ. ಇದು ೧೫೭೫.೪೨ MHzನಲ್ಲಿ ಕೇಂದ್ರೀಕೃತವಾಗಿದೆ. ಇದೇ ರೀತಿ ಸಂಬಂಧಿಸಿದ ಆಧುನೀಕೃತ ಜಿಪಿಎಸ್ ಸಂಕೇತಗಳು ಎಲ್‌೧ ಬ್ಯಾಂಡ್‌ನಲ್ಲಿ ಮತ್ತು ಗೆಲಿಲಿಯೊ/COMPASS ಸಂಕೇತ E೧. ಎಲ್ ೫ ಬ್ಯಾಂಡ್‌ನ ಮುಕ್ತ ಸಂಕೇತವು ೧೧೭೬.೬೫ MHzನಲ್ಲಿ ಕೇಂದ್ರೀಕೃತವಾದ ಬಿಒಸಿ(೪,೪)ತರಂಗಾಂತರತೆಯನ್ನು ಬಳಸುತ್ತದೆ. ಆಧುನೀಕೃತ ಜಿಪಿಎಸ್ ಸಂಕೇತ ಸೇಫ್ಟಿ ಆಫ್ ಲೈಫ್ ಮತ್ತು ಗೆಲಿಲಿಯೊ ಸಂಕೇತ E೫ಗೆ ಸಮಾನವಾಗಿ.[೩೦][೩೩] ಎಲ್‌೩ ಬ್ಯಾಂಡ್‌ನ ಮುಕ್ತ ಸಂಕೇತವು ೧೨೦೭.೧೪ MHzನಲ್ಲಿ ಕೇಂದ್ರಿತವಾದ QPSK(೧೦) ತರಂಗಾಂತರತೆಯನ್ನು ಬಳಸುತ್ತದೆ. ಇದು ಗೆಲಿಲಿಯೊ/COMPASS ಸಂಕೇತ E೫bನ ಒಂದೇ ಆವರ್ತಾಂಕವನ್ನು ಹೊಂದಿರುತ್ತದೆ ಮತ್ತು ಮಾಹಿತಿ ಮತ್ತು ಬೃಹತ್ ಬಿಡಿಭಾಗಗಳನ್ನು ಹೊಂದಿರುತ್ತದೆ. ಇಂತಹ ವ್ಯವಸ್ಥೆಯು ಬಹು ಗುಣಮಟ್ಟದGNSS ಗ್ರಾಹಕಗಳ ಅಗ್ಗದ ಮತ್ತು ಸುಲಭದ ಅನುಷ್ಠಾನಕ್ಕೆ ಅವಕಾಶ ಕಲ್ಪಿಸುತ್ತದೆ.[೩೧]

ಬೈನರಿ ಫೇಸ್-ಶಿಫ್ಟ್ ಕೀಯಿಂಗ್ (BPSK)ಅನ್ನು ಪ್ರಮಾಣಕ ಜಿಪಿಎಸ್ ಮತ್ತು ಗ್ಲೋನಾಸ್ ಸಂಕೇತಗಳು ಬಳಸುತ್ತವೆ. ಆದಾಗ್ಯೂ, ಬಿಪಿಎಸ್‌ಕೆ ಮತ್ತು ಕ್ವಾಡ್ರೇಚರ್ ಫೇಸ್-ಶಿಫ್ಟ್ ಕೀಯಿಂಗ್(QPSK) ಕ್ವಾಡ್ರೇಚರ್ ವೈಶಾಲ್ಯ ತರಂಗಾಂತರತೆ(QAM)ಯ ಪರಿವರ್ತನೆಗಳೆಂದು ಪರಿಗಣಿಸಲಾಗುತ್ತದೆ. ನಿರ್ದಿಷ್ಟವಾಗಿ QAM-೨ and QAM-೪. ಬೈನರಿ ಆಫ್‌ಸೆಟ್ ಕ್ಯಾರಿಯರ್(BOC) ಗೆಲಿಲಿಯೊ, ಆಧುನೀಕೃತ ಜಿಪಿಎಸ್ ಮತ್ತು COMPASS ಬಳಸಿದ ತರಂಗಾಂತರವಾಗಿದೆ.

ಸಿಡಿಎಂಎ ಸಂಕೇತಗಳ ಪರಿಚಯದಿಂದ, ೨೦೨೦ರೊಳಗೆ ಸಮೂಹವನ್ನು ೩೦ ಸಕ್ರಿಯ ಉಪಗ್ರಹಗಳಿಗೆ ವಿಸ್ತರಿಸಲಾಗುತ್ತದೆ. ಇದು FDMA ಸಂಕೇತಗಳ ಕಟ್ಟಕಡೆಯ ಅಸಮ್ಮತಿ ಸೂಚನೆಯಾಗಿದೆ.[೩೪] ಹೆಚ್ಚುವರಿ ಉಪಗ್ರಹಗಳು ಮಾಲ್ನಿಯ ಕಕ್ಷೆ ಅಥವಾ ಟಂಡ್ರಾ ಕಕ್ಷೆಯನ್ನು ಜಪಾನ್ನೀಸ್ QZSS ವ್ಯವಸ್ಥೆ ರೀತಿಯಲ್ಲಿ ಹೆಚ್ಚುವರಿ ಪ್ರಾದೇಶಿಕ ಲಭ್ಯತೆಗಾಗಿ ಬಳಸಬಹುದು.[೩೧]

ಉಪಗ್ರಹಗಳು

ಬದಲಾಯಿಸಿ

ಗ್ಲೋನಾಸ್ ಕಾರ್ಯಕ್ರಮದ ಮುಖ್ಯ ಗುತ್ತಿಗೆದಾರ ಜಂಟಿ ಶೇರು ಕಂಪೆನಿ ರೆಶೆ‌ಟ್‌ನೆವ್ ಇನ್ಫರ್ಮೇಶನ್ ಸೆಟಲೈಟ್ ಸಿಸ್ಟಮ್ಸ್(ಮುಂಚೆ NPO-PM ಎಂದು ಕರೆಯಲಾಗುತ್ತಿತ್ತು) ಕಂಪೆನಿಯು ಜೆಲೆಜ್‌ನೊಗಾರ್ಸ್ಕ್‌ನಲ್ಲಿ ನೆಲೆಗೊಂಡಿದ್ದು, ಇನ್‌ಸ್ಟಿಟ್ಯೂಟ್ ಫಾರ್ ಸ್ಪೇಸ್ ಡಿವೈಸ್ ಎಂಜಿನಿಯರಿಂಗ್ ಮತ್ತು ರಷ್ಯನ್ ಇನ್‌ಸ್ಟಿಟ್ಯೂಟ್ ಆಫ್ ರೇಡಿಯೊ ನ್ಯಾವಿಗೇಷನ್ ಎಂಡ್ ಟೈಮ್ ಸಹಕಾರದೊಂದಿಗೆ ಎಲ್ಲ ಗ್ಲೋನಾಸ್ ಉಪಗ್ರಹಗಳ ವಿನ್ಯಾಸಕವಾಗಿದೆ.ru:РНИИ КП ಉಪಗ್ರಹಗಳ ಸರಣಿ ಉತ್ಪಾದನೆಯನ್ನು ಓಮ್ಸ್‌ಸ್ಕ್‌ನಲ್ಲಿ ಪಿಸಿ ಪಾಲ್ಯಾಟ್ಕಂಪೆನಿ ಸಾಧಿಸಿದೆ.

ಅಭಿವೃದ್ಧಿಯ ಮೂರು ದಶಕಗಳಾವಧಿಯಲ್ಲಿ, ಉಪಗ್ರಹ ವಿನ್ಯಾಸಗಳು ಅಸಂಖ್ಯಾತ ಸುಧಾರಣೆಗಳನ್ನು ಕಂಡಿದೆ. ಮೂರು ತಲೆಮಾರುಗಳಾಗಿ ಅದನ್ನು ವಿಂಗಡಿಸಬಹುದು: ಮೂಲ ಗ್ಲೋನಾಸ್(೧೯೮೨ರಿಂದೀಚೆಗೆ) ಗ್ಲೋನಾಸ್-ಎಂ(೨೦೦೩ರಿಂದ)ಮತ್ತು ಗ್ಲೋನಾಸ್-ಕೆ(೨೦೧೧ರಿಂದ). ಪ್ರತಿಯೊಂದು ಗ್ಲೋನಾಸ್ ಉಪಗ್ರಹವು GRAUಅಂಕಿತ ೧೧F೬೫೪ಹೊಂದಿದೆ. ಅವುಗಳಲ್ಲಿ ಪ್ರತಿಯೊಂದು ಮಿಲಿಟರಿ ಕಾಸ್ಮೋಸ್-NNNN" ಅಂಕಿತವನ್ನು ಹೊಂದಿದೆ.[೩೫]

ಪ್ರಥಮ ತಲೆಮಾರು

ಬದಲಾಯಿಸಿ

ನೈಜ ಪ್ರಥಮ ತಲೆಮಾರಿನ ಗ್ಲೋನಾಸ್(ಉರಗನ್ ಎಂದು ಕೂಡ ಕರೆಯಲಾಗುತ್ತದೆ)ಉಪಗ್ರಹಗಳು ಎಲ್ಲವೂ ೩ ಅಕ್ಷದ ಸ್ಥಿರವಾದ ವಾಹನಗಳಾಗಿದ್ದು, ಸಾಮಾನ್ಯವಾಗಿ ೧೨೫೦ ಕೇಜಿ ತೂಗುತ್ತದೆ. ಸಮೂಹದಲ್ಲಿ ಮರುನೆಲೆಗೆ ಅವಕಾಶವಾಗಲು ಮೂನ್ನೂಕುವಿಕೆ(ಪ್ರಪಲ್ಶನ್)ವ್ಯವಸ್ಥೆಯೊಂದಿಗೆ ಸಜ್ಜಾಗಿದೆ. ಕಾಲಾಂತರದಲ್ಲಿ ಅವುಗಳು ಬ್ಲಾಕ್ IIa, IIb, and IIv ವಾಹನಗಳಾಗಿ ಮೇಲ್ದರ್ಜೆಗೇರಿತು. ಪ್ರತಿಯೊಂದು ಬ್ಲಾಕ್ ವಿಕಸನೀಯ ಸುಧಾರಣೆಗಳನ್ನು ಹೊಂದಿತ್ತು.

೬ ಬ್ಲಾಕ್ IIa ಉಪಗ್ರಹಗಳನ್ನು ೧೯೮೫-೧೯೮೬ರಲ್ಲಿ ಆರಂಭಿಸಲಾಯಿತು. ಮಾತೃಕೆಗಳಿಗಿಂತ ಸುಧಾರಿತ ಅವಧಿ ಮತ್ತು ಆವರ್ತಾಂಕ ಪ್ರಮಾಣಕಗಳನ್ನು ಹೊಂದಿತ್ತು ಮತ್ತು ಹೆಚ್ಚಿದ ಆವರ್ತಾಂಕ ಸ್ಥಿರತೆಯನ್ನು ಒಳಗೊಂಡಿತ್ತು. ಈ ಬಾಹ್ಯಾಕಾಶ ನೌಕೆಯು ೧೬ ತಿಂಗಳ ಸರಾಸರಿ ಕಾರ್ಯಸಮರ್ಥ ಜೀವಿತಾವಧಿಯನ್ನು ಕೂಡ ಪ್ರದರ್ಶಿಸಿತು. ಬ್ಲಾಕ್ IIb ಬಾಹ್ಯಾಕಾಶ ನೌಕೆಯು ೨ ವರ್ಷದ ವಿನ್ಯಾಸ ಜೀವಿತಾವಧಿಗಳೊಂದಿಗೆ, ೧೯೮೭ರಲ್ಲಿ ಕಾಣಿಸಿಕೊಂಡಿತು. ಅವುಗಳಲ್ಲಿ ಒಟ್ಟು ೧೨ನ್ನು ಉಡಾವಣೆ ಮಾಡಲಾಯಿತು ಮತ್ತು ಅರ್ಧದಷ್ಟು ಉಡಾವಣೆ ವಾಹನ ಅಪಘಾತಗಳಲ್ಲಿ ಕಳೆದುಹೋದವು. ಅಕ್ಷವನ್ನು ತಲುಪಿದ ಆರು ಬಾಹ್ಯಾಕಾಶ ನೌಕೆಯು ಚೆನ್ನಾಗಿ ಕೆಲಸ ಮಾಡಿದವು ಮತ್ತು ಸುಮಾರು ಸರಾಸರಿ ೨೨ ತಿಂಗಳವರೆಗೆ ಕಾರ್ಯನಿರ್ವಹಿಸಿದವು.

ಬ್ಲಾಕ್ IIv ಪ್ರಥಮ ತಲೆಮಾರಿನ ಅತ್ಯಂತ ಸಮೃದ್ಧವಾಗಿತ್ತು. ೧೯೮೮ರಿಂದ ೨೦೦೦ದವರೆಗೆ ವಿಶೇಷವಾಗಿ ಬಳಕೆಯಾದ ಇದು, ೨೦೦೫ರವರೆಗೆ ಉಡಾವಣೆಗಳಲ್ಲಿ ಒಳಗೊಂಡಿತು ಮತ್ತು ಒಟ್ಟು ೨೫ ಉಪಗ್ರಹಗಳನ್ನು ಉಡಾವಣೆ ಮಾಡಲಾಯಿತು. ವಿನ್ಯಾಸ ಅವಧಿಯು ಮೂರು ವರ್ಷಗಳಾಗಿದ್ದು, ಅಸಂಖ್ಯಾತ ಬಾಹ್ಯಾಕಾಶ ನೌಕೆಗಳು ಅದನ್ನು ಮೀರಿದ್ದವು. ಒಂದು ಇತ್ತೀಚಿನ ಮಾದರಿಯು ೬೮ ತಿಂಗಳ ಜೀವಿತಾವಧಿ ತನಕ ಉಳಿಯಿತು.[೩೬]

ಬ್ಲಾಕ್ II ಉಪಗ್ರಹಗಳನ್ನು ಅವಧಿಗೆ ಮೂರು ಬಾರಿ ಬೈಕನೂರು ಕಾಸ್ಮೋಡ್ರೋಮ್‌ನಿಂದ ಉಡಾವಣೆ ಮಾಡಲಾಯಿತು.ಪ್ರೋಟೊನ್-K ಬ್ಲಾಕ್-DM-೨ ಅಥವಾ ಪ್ರೋಟೊನ್-K ಬ್ರಿಜ್-M ಬಲವರ್ಧಕಗಳನ್ನು ಬಳಸಿಕೊಂಡು ಉಡಾವಣೆ ಮಾಡಲಾಯಿತು. ಅಪವಾದವೆಂದರೆ, ಎರಡು ಉಡಾವಣೆಗಳಲ್ಲಿ ಗ್ಲೋನಾಸ್ ಉಪಗ್ರಹದ ಬದಲಾಗಿ ಎಟಲಾನ್ ಜಿಯೋಡೆಟಿಕ್ ರಿಫ್ಲೆಕ್ಟರ್ ಉಪಗ್ರಹವನ್ನು ಬಳಸಲಾಯಿತು.

ಎರಡನೇ ತಲೆಮಾರು

ಬದಲಾಯಿಸಿ

ಗ್ಲೋನಾಸ್-ಎಂ ಎಂದು ಹೆಸರಾದ ಎರಡನೇ ತಲೆಮಾರಿನ ಉಪಗ್ರಹಗಳು ೧೯೯೦ರ ಆರಂಭದಲ್ಲಿ ಅಭಿವೃದ್ಧಿಪಡಿಸಲಾಯಿತು ಮತ್ತು ೨೦೦೩ರಲ್ಲಿ ಮೊದಲಿಗೆ ಉಡಾವಣೆ ಮಾಡಲಾಯಿತು. ಈ ಉಪಗ್ರಹಗಳು ಗಣನೀಯ ಏಳು ವರ್ಷಗಳ ಹೆಚ್ಚಿದ ಜೀವಿತಾವಧಿಯನ್ನು ಹೊಂದಿದ್ದು, ೧೪೮೦ ಕೇಜಿಗಿಂತ ಸ್ವಲ್ಪ ಹೆಚ್ಚು ತೂಗುತ್ತದೆ. ಅವು ಅಂದಾಜು2.4 m (7 ft 10 in) ವ್ಯಾಸ ಮತ್ತು3.7 m (12 ft) ಎತ್ತರವನ್ನು ಹೊಂದಿದ್ದು,7.2 m (24 ft) ಅವಧಿಯ ಸೌರ ವ್ಯವಸ್ಥೆಯನ್ನು ಹೊಂದಿರುತ್ತದೆ. ಇದು ಉಡಾವಣೆ ಸಮಯದಲ್ಲಿ ೧೬೦೦ ವ್ಯಾಟ್ಸ್ ಸಾಮರ್ಥ್ಯದ ವಿದ್ಯುತ್ ಶಕ್ತಿ ಉತ್ಪಾದನೆಗೆ ಅಗತ್ಯವಿರುತ್ತದೆ. ಹಿಂಬದಿಯ ಉಪಕರಣ ರಚನೆಯು ಎಲ್-ಬ್ಯಾಂಡ್ ರವಾನೆಗಳಿಗೆ ೧೨ ಮುಖ್ಯ ಆಂಟೆನಾಗಳನ್ನು ಹೊಂದಿರುತ್ತದೆ. ಲೇಸರ್ ಮೂಲೆಯ ಕ್ಯೂಬ್ ಪ್ರತಿಫಲಕಗಳನ್ನು ಕೂಡ ಒಯ್ಯಲಾಗುತ್ತದೆ. ಇದು ನಿಖರ ಕಕ್ಷೆಯ ತೀರ್ಮಾನ ಮತ್ತು ಭೂಮಿತೀಯ ಸಂಶೋಧನೆಗೆ ನೆರವಾಗುತ್ತದೆ. ಸೆಸಿಯಂ ಕ್ಲಾಕ್ಸ್ ಸ್ಥಳೀಯ ಗಡಿಯಾರದ ಮೂಲವನ್ನು ಒದಗಿಸುತ್ತದೆ.

೨೦೦೭ರ ಕೊನೆಯಲ್ಲಿ ಒಟ್ಟು ಹದಿನಾಲ್ಕು ಎರಡನೇ ತಲೆಮಾರಿನ ಉಪಗ್ರಹಗಳನ್ನು ಉಡಾವಣೆ ಮಾಡಲಾಯಿತು. ಮುಂಚಿನ ತಲೆಮಾರಿನ ರೀತಿಯಲ್ಲಿ, ಎರಡನೇ ತಲೆಮಾರಿನ ಬಾಹ್ಯಾಕಾಶ ನೌಕೆಯು ಮೂರು ಬಲವರ್ಧಕಗಳಾದ ಪ್ರೊಟೋನ್-K ಬ್ಲಾಕ್-DM-೨ ಅಥವಾ ಪ್ರೊಟೋನ್-K ಬ್ರಿಜ್ -M ಬಲವರ್ಧಕಗಳನ್ನು ಬಳಸಿಕೊಂಡು ಉಡಾವಣೆ ಮಾಡಲಾಯಿತು.

ಮೂರನೇ ತಲೆಮಾರು

ಬದಲಾಯಿಸಿ
 
A ಗ್ಲೋನಾಸ್-K ಉಪಗ್ರಹ ಮಾದರಿಯು CeBIT 2011ಯಲ್ಲಿ ಪ್ರದರ್ಶನ

ಗ್ಲೋನಾಸ್-ಕೆ ಮುಂಚಿನ ತಲೆಮಾರಿನ ಗಣನೀಯ ಸುಧಾರಣೆಯಾಗಿದೆ. ಇದು ಪ್ರಥಮ ಒತ್ತಡವಿಲ್ಲದ ಗ್ಲೋನಾಸ್ ಉಪಗ್ರಹವಾಗಿದ್ದು, ಅತ್ಯಂತ ಕಡಿಮೆ ದ್ರವ್ಯರಾಶಿಯನ್ನು ಹೊಂದಿದೆ.(೭೫೦ ಕೇಜಿ ವಿರುದ್ಧ ೧೪೫೦ ಕೇಜಿ ಗ್ಲೋನಾಸ್-ಎಂ) ಇದು ೭ ವರ್ಷಗಳ ಎರಡನೇ ತಲೆಮಾರಿನ ಗ್ಲೋನಾಸ್-ಎಂ ಜೀವಿತಾವಧಿಗೆ ಹೋಲಿಸಿದರೆ ೧೦ ವರ್ಷಗಳ ಕಾರ್ಯಸಮರ್ಥ ಜೀವಿತಾವಧಿಯನ್ನು ಹೊಂದಿದೆ. ವ್ಯವಸ್ಥೆಯ ನಿಖರತೆಯನ್ನು ಸುಧಾರಿಸಲು ಇದು ಹೆಚ್ಚು ಸಂಚಾರ ನಿರ್ದೇಶನ ಸಂಕೇತಗಳನ್ನು ರವಾನಿಸುತ್ತದೆ. ಎಲ್ ೩ಮತ್ತು ಎಲ್ ೫ ಬ್ಯಾಂಡ್‌ಗಳಲ್ಲಿ ಹೊಸ ಸಿಡಿಎಂಎ ಸಂಕೇತಗಳೂ ಸೇರಿವೆ. ಅವು ಆಧುನಿಕ ಜಿಪಿಎಸ್, ಗೆಲಿಲಿಯೊ ಮತ್ತು ಕಂಪಾಸ್ ರೀತಿಯಲ್ಲಿ ತರಂಗಾಂತರತೆಯನ್ನು ಬಳಸುತ್ತದೆ.[೩೭][೩೮][೩೯] ಹೊಸ ಉಪಗ್ರಹದ ಸುಧಾರಿತ ಉಪಕರಣವನ್ನು ರಷ್ಯಾದ ಬಿಡಿಭಾಗಗಳಿಂದ ತಯಾರಿಸಲಾಗುತ್ತದೆ-ಇದು ಗ್ಲೋನಾಸ್ ನಿಖರತೆಯ ಎರಡುಪಟ್ಟಿಗೆ ಅವಕಾಶ ನೀಡುತ್ತದೆ.[೨೩] ಮುಂಚಿನ ಉಪಗ್ರಹಗಳ ರೀತಿ, ಇವು ೩ ಅಕ್ಷದ ಸ್ಥಿರಗೊಳಿಸಿದ ನಾಡಿರ್ ಪಾಯಿಂಟಿಂಗ್ ಜತೆಗೆ ದ್ವಿ ಸೌರ ಪಟ್ಟಿಗಳನ್ನು ಹೊಂದಿದೆ.[ಸೂಕ್ತ ಉಲ್ಲೇಖನ ಬೇಕು] ಪ್ರಥಮ ಗ್ಲೋನಾಸ್-K ಉಪಗ್ರಹವನ್ನು ೨೦೧೧ರ ಫೆಬ್ರವರಿ ೨೬ರಂದು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.[೩೭][೪೦]

ತೂಕದ ಇಳಿಕೆ ಕಾರಣದಿಂದಾಗಿ, ಗ್ಲೋನಾಸ್-ಕೆ ಬಾಹ್ಯಾಕಾಶ ನೌಕೆಯನ್ನು ಪ್ಲೆಸೆಟ್ಕ್ಸ್‌ ಕಾಸ್ಮೋಡ್ರೋಮ್ ಉಡಾವಣೆ ನೆಲೆಯಿಂದ ಗಣನೀಯವಾಗಿ ಕಡಿಮೆ ವೆಚ್ಚದ ಸೋಯುಜ್-೨.೧ಬಿ ಬಲವರ್ಧಕಗಳನ್ನು ಬಳಸಿ ಜೋಡಿಯಾಗಿ ಉಡಾವಣೆ ಮಾಡಬಹುದು. ಅಥವಾ ಒಂದೇ ಬಾರಿಗೆ ೬ನ್ನು ಬೈಕನೋರ್ ಕಾಸ್ಮೋಡ್ರೋಮ್‌ನಿಂದ ಪ್ರೋಟೊನ್-ಕೆ ಬ್ರಿಜ್-ಎಂ ಉಡಾವಣೆ ವಾಹನಗಳಿಂದ ಉಡಾವಣೆ ಮಾಡಬಹುದು.[೨೩][೨೪]

ಭೂ ನಿಯಂತ್ರಣ

ಬದಲಾಯಿಸಿ

ಗ್ಲೋನಾಸ್‌ನ ಭೂ ನಿಯಂತ್ರಣ ವಿಭಾಗವು ಮುಂಚಿನ ಸೋವಿಯಟ್ ಒಕ್ಕೂಟದ ಪ್ರದೇಶದಲ್ಲಿ ನೆಲೆಗೊಂಡಿದೆ. ಭೂ ನಿಯಂತ್ರಣ ನೆಲೆ ಮತ್ತು ಟೈಮ್ ಸ್ಟಾಂಡರ್ಡ್ಸ್ ಮಾಸ್ಕೊನಲ್ಲಿ ನೆಲೆಗೊಂಡಿದೆ ಮತ್ತು ದೂರಸ್ಥಮಾಪಕ ಮತ್ತು ಶೋಧಕ ನಿಲ್ದಾಣಗಳು ಸೇಂಟ್ ಪೀಟರ್ಸ್‌ಬರ್ಗ್, ಟೆರ್ನೊಪೋಲ್, ಎನಿಸೈಸ್ಕ್, ಮತ್ತು ಕೋಮ್ಸೋಮೋಲ್ಕ್ಸ್-ನಾ-ಅಮುರೆಯಲ್ಲಿ ನೆಲೆಗೊಂಡಿವೆ[೪೧].

ಗ್ರಾಹಕಗಳು

ಬದಲಾಯಿಸಿ

ಸೆಪ್ಟೆಂಟ್ರಿಯೊ, ಟಾಪ್ಕಾನ್, JAVAD, ಮೆಗೆಲಾನ್ ನ್ಯಾವಿಗೇಷನ್, ನೊವಾಟೆಲ್, ಲೈಕಾ ಜಿಯೋಸಿಸ್ಟಮ್ಸ್ ಮತ್ತು ಟ್ರಿಂಬಲ್ ಇಂಕ್ ಗ್ಲೋನಾಸ್ ಬಳಸಿಕೊಂಡು GNSSಉತ್ಪಾದಿಸುತ್ತವೆ. NPO ಪ್ರೋಗ್ರೆಸ್ "GALS-A೧" ಗ್ರಾಹಕವನ್ನು ವರ್ಣಿಸುತ್ತದೆ[permanent dead link]. ಅದು GPS ಮತ್ತು ಗ್ಲೋನಾಸ್ ಸ್ವೀಕಾರವನ್ನು ಸಂಯೋಜಿಸುತ್ತದೆ. ಸ್ಕೈವೇವ್ ಮೊಬೈಲ್ ಕಮ್ಯೂನಿಕೇಷನ್ಸ್ ಇಮ್ಮರ್‌ಸ್ಯಾಟ್ ಆಧಾರದ ಉಪಗ್ರಹ ಸಂವಹನ ನಿಲ್ದಾಣವನ್ನು ಉತ್ಪಾದಿಸುತ್ತದೆ. ಅದುthat ಗ್ಲೋನಾಸ್ ಮತ್ತು GPS ಎರಡನ್ನೂ ಬಳಸುತ್ತದೆ.[೪೨]

ಪ್ರಚಲಿತ ಸ್ಥಿತಿ

ಬದಲಾಯಿಸಿ

ಲಭ್ಯತೆ

ಬದಲಾಯಿಸಿ
 
ಭೂಮಿಯ ಮೇಲ್ಮೈಯಲ್ಲಿ ಸ್ಥಾನಿಕ ಜ್ಯಾಮಿತಿ ಅಂಶ PDOP ಯ ಪ್ರಸಕ್ತ ಮೌಲ್ಯಗಳನ್ನು ತೋರಿಸುವ ನಕ್ಷೆ(ಮಾಸ್ಕ್ ಆಂಗಲ್: 5°)[103] 9:51:05 UTC.

As of 24 ಮಾರ್ಚ್ 2011[[ವರ್ಗ:Articles containing potentially dated statements from Expression error: Unexpected < operator.]], the ಗ್ಲೋನಾಸ್ ಸಮೂಹ ಸ್ಥಿತಿಗತಿ:[೪೩]

ಸಮೂಹದಲ್ಲಿ ಒಟ್ಟು ಉಪಗ್ರಹಗಳು 27 SC
ಕಾರ್ಯಸಮರ್ಥ 23 SC
ನಿಯುಕ್ತಿ ಹಂತದಲ್ಲಿ 1 SC
ನಿರ್ವಹಣೆ ಹಂತದಲ್ಲಿ 3 SC
ಸ್ಪೇರ್‌ಗಳು
ನಿಯುಕ್ತಿರಹಿತ ಹಂತದಲ್ಲಿ

ರಷ್ಯಾ ಒಕ್ಕೂಟದ ಇಡೀ ಪ್ರದೇಶದ ಕಾರ್ಯವ್ಯಾಪ್ತಿಗೆ ವ್ಯವಸ್ಥೆಗೆ ೧೮ ಉಪಗ್ರಹಗಳು ಸತತ ಸಂಚಾರ ನಿರ್ದೇಶನ ಸೇವೆಗಳಿಗೆ ಅಗತ್ಯವಾಗುತ್ತದೆ.[೪೪] ದಿ ಗ್ಲೋನಾಸ್ ವ್ಯವಸ್ಥೆಯು ಪ್ರಸಕ್ತ ರಷ್ಯಾ ಪ್ರದೇಶದ ಶೇಕಡ ೧೦೦ರ ಕಾರ್ಯವ್ಯಾಪ್ತಿ ಹೊಂದಿದೆ.[೪೫]

ನಿಖರತೆ

ಬದಲಾಯಿಸಿ
 
ಗ್ಲೋನಾಸ್ ಗ್ರಾಹಕಕ್ಕೆ (PDOP≤6) ಸಮಗ್ರ ಸಂಚಾರ ನಿರ್ದೇಶನ ಲಭ್ಯತೆ. 5 ಡಿಗ್ರಿಗಿಂತ ಕಡಿಮೆ ದೈನಂದಿನ ವ್ಯಾಪ್ತಿಯ ಎತ್ತರಿಸುವಿಕೆ[109]ಯಲ್ಲಿ.

ರಷ್ಯನ್ ಸಿಸ್ಟಂ ಆಫ್ ಡಿಫೆರೆನ್ಸಿಯಲ್ ಕರೆಕ್ಷನ್ ಎಂಡ್ ಮಾನಿಟರಿಂಗ್ಸ್ 's ದತ್ತಾಂಶದ ಪ್ರಕಾರ, as of 2010[[ವರ್ಗ:Articles containing potentially dated statements from ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".]],ಗ್ಲೋನಾಸ್ ಸಂಚಾರ ನಿರ್ದೇಶನ ನಿರೂಪಣೆಗಳ ನಿಖರತೆಗಳು (for p=೦.೯೫) ಅಕ್ಷಾಂಶ ಮತ್ತು ರೇಖಾಂಶಕ್ಕೆ ೪.೪೬—೮.೩೮ m ಸರಾಸರಿ ಸಂಖ್ಯೆ NSV ಈಕ್ವಲ್ಸ್ ೭—೮ನೊಂದಿಗೆ(ನಿಲ್ದಾಣವನ್ನು ಅವಲಂಬಿಸಿ). ಇದಕ್ಕೆ ಹೋಲಿಕೆಯಾಗಿ, ಜಿಪಿಎಸ್ ಸಂಚಾರ ನಿರ್ದೇಶನ ನಿರೂಪಣೆಗಳು ೨.೦೦-೮.೭೬ ಎಂ, ಸರಾಸರಿ ಸಂಖ್ಯೆ NSVಈಕ್ವಲ್ಸ್ ೬—೧೧(ನಿಲ್ದಾಣದ ಮೇಲೆ ಅವಲಂಬಿತ).[೪೬] ನಾಗರಿಕ ಗ್ಲೋನಾಸ್ ಒಂಟಿಯಾಗಿ ಬಳಸಿದರೆ ಉತ್ತರ ಅಕ್ಷಾಂಶದಲ್ಲಿ ಜಿಪಿಎಸ್‌ಗಿಂತ ಸ್ವಲ್ಪ ಕಡಿಮೆ ನಿಖರತೆಯನ್ನು ಹೊಂದಿರುತ್ತದೆ. ಉಪಗ್ರಹಗಳ ಕಕ್ಷೀಯ ಸ್ಥಾನದ ಕಾರಣದಿಂದ ಗ್ಲೋನಾಸ್ ನಿಖರತೆಯು ಜಿಪಿಎಸ್‌ಗಿಂತ ಉತ್ತಮವಾಗಿದೆ.[೪೭]

ಕೆಲವು ಆಧುನಿಕ ಗ್ರಾಹಕಗಳು ಗ್ಲೋನಾಸ್ ಮತ್ತು ಜಿಪಿಎಸ್ ಉಪಗ್ರಹಗಳನ್ನು ಒಟ್ಟಿಗೆ ಬಳಸಲು ಸಮರ್ಥವಾಗಿವೆ. ಇವು ನಗರ ಗಗನಚುಂಬಿ ಕಟ್ಟಡಗಳ ನಡುವಿನ ಕಮರಿಯ ಪರಿಣಾಮವನ್ನು ಒದಗಿಸುತ್ತದೆ. ೫೦ ಉಪಗ್ರಹಗಳು ಲಭ್ಯವಾಗುವುದರಿಂದ ಸ್ಥಿರಪಡಿಸಲು ಅತ್ಯಂತ ವೇಗದ ಕಾಲವನ್ನು ನೀಡುತ್ತದೆ. ಒಳಾಂಗಣದಲ್ಲಿ ,ನಗರದ ಗಗನಚುಂಬಿ ಕಟ್ಟಡಗಳ ನಡುವಿನ ಕಮರಿಯಾಕಾರ ಅಥವಾ ಪರ್ವತ ಪ್ರದೇಶಗಳಲ್ಲಿ, ಜಿಪಿಎಸ್ ಒಂದನ್ನೇ ಬಳಸುವ ಮೂಲಕ ನಿಖರತೆಯನ್ನು ಹೆಚ್ಚಾಗಿ ಸುಧಾರಿಸಬಹುದು. ಸಂಚಾರ ನಿರ್ದೇಶನ ವ್ಯವಸ್ಥೆಯನ್ನು ಏಕಕಾಲದಲ್ಲಿ ಬಳಸಲು ಗ್ಲೋನಾಸ್/GPS ಸಂಚಾರ ನಿರ್ದೇಶನ ನಿರೂಪಣೆಗಳು ೨.೩೭-೪.೬೫ ಎಂ ಆಗಿದ್ದು,ಎನ್‌ಎಸ್‌ವಿ ಈಕ್ವಲ್ಸ್ ೧೪-೧೯(ನಿಲ್ದಾಣವನ್ನು ಅವಲಂಬಿಸಿದೆ).[ಸೂಕ್ತ ಉಲ್ಲೇಖನ ಬೇಕು]

ರಷ್ಯನ್ ಫೆಡರಲ್ ಸ್ಪೇಸ್ ಏಜನ್ಸಿ ನಿರ್ದೇಶಕ ಅನಾಟಲಿ ಪರ್ಮಿನೋವ್ ಗ್ಲೋನಾಸ್ ನಿಖರತೆಯನ್ನು ಹೆಚ್ಚಿಸಲು ಕೆಲವು ಕ್ರಮಗಳು ಪ್ರಗತಿಯಲ್ಲಿವೆ ಎಂದು ಹೇಳಿದರು.[೪೮] ೨೦೧೧ಕ್ಕೆ ನಿಖರತೆಯನ್ನು ೨.೮ ಎಂ ಸಾಧಿಸಲಾಗುತ್ತದೆ. ಗ್ಲೋನಾಸ್ ಸಮೂಹವನ್ನು ವಿಸ್ತರಿಸುವ ಮತ್ತು ಭೂ ವಿಭಾಗವನ್ನು ಸುಧಾರಿಸುವ ಮೂಲಕ ಇದನ್ನು ಸಾಧಿಸಲಾಗುತ್ತದೆ. ವಿಶೇಷವಾಗಿ, ಇತ್ತೀಚಿನ ಉಪಗ್ರಹ ವಿನ್ಯಾಸ ಗ್ಲೋನಾಸ್-K ಒಂದೊಮ್ಮೆ ಜಾರಿಗೆ ತಂದ ಬಳಿಕ ಸಿಸ್ಟಮ್ ಸಾಮರ್ಥ್ಯವನ್ನು ಇಮ್ಮಡಿಗೊಳಿಸುವ ಸಾಮರ್ಥ್ಯವಿದೆ.

ಇವನ್ನೂ ಗಮನಿಸಿ‌

ಬದಲಾಯಿಸಿ
  • ಗ್ಲೋಬಲ್ ನ್ಯಾವಿಗೇಷನ್ ಸೆಟಲೈಟ್ ಸಿಸ್ಟಮ್ – ಜಾಗತಿಕ ಉಪಗ್ರಹ ಸ್ಥಾನಿಕ ವ್ಯವಸ್ಥೆಯ ಸಾರ್ವತ್ರಿಕ ಪದವಾಗಿದೆ.
  • ಮಲ್ಟಿಲ್ಯಾಟೆರೇಷನ್ – ಸ್ಥಾನಿಕಕ್ಕೆ ಬಳಸುವ ಗಣಿತೀಯ ತಂತ್ರ.

ಉಲ್ಲೇಖಗಳು‌‌

ಬದಲಾಯಿಸಿ
  1. Russian: ГЛОба́льная НАвигацио́нная Спу́тниковая Систе́ма, tr. GLObal'naya NAvigatsionnaya Sputnikovaya Sistema; "GLO ಬಲ್ NA ವಿಗೇಷನ್ಸೆಟಲೈಟ್ S ಸಿಸ್ಟಮ್".
  2. "Tsiklon". Encyclopedia Astronautica.
  3. "Glonass". Encyclopedia Astronautica.
  4. ೪.೦ ೪.೧ ೪.೨ "Start of GLONASS" (PDF). ISS Reshetnev. 2007. Archived from the original (PDF) on 2011-07-13. Retrieved 2011-06-17.
  5. ೫.೦ ೫.೧ ೫.೨ "Satellite Navigation of the 21st Century" (PDF). ISS Reshetnev. 2009. Archived from the original (PDF) on 2010-11-21. Retrieved 2011-06-17.
  6. ೬.೦ ೬.೧ ೬.೨ ೬.೩ ೬.೪ Harvey, Brian (2007). "Military programs". The Rebirth of the Russian Space Program (1st ed.). Germany: Springer. ISBN 9780387713540.
  7. ೭.೦ ೭.೧ ೭.೨ "Putin makes Glonass navigation system free for customers - 1". RIA Novosti. 2007-05-18.
  8. ೮.೦ ೮.೧ ೮.೨ Moskvitch, Katia (2010-04-02). "Glonass: Has Russia's sat-nav system come of age?". BBC News.
  9. http://rt.com/news/sci-tech/ಗ್ಲೋನಾಸ್-wants-system-gps/[permanent dead link]
  10. "Russia to lift Glonass restrictions for accurate civilian use". RIA Novosti. 2006-11-13.
  11. http://rbth.ru/articles/2010/12/07/ಗ್ಲೋನಾಸ್_hits_a_snag05184.html[permanent dead link]
  12. "Russia's Glonass satellite system to be fully operational in 2010". RIA Novosti. 2008-06-07.
  13. McDermott, Roger (2009). "Russia's Conventional Armed Forces and the Georgian War" (PDF). US Army War College. Archived (PDF) from the original on 2009-08-06. Retrieved 2009-08-04. {{cite web}}: Unknown parameter |deadurl= ignored (help)
  14. "Putin orders additional $2.6 bln on Glonass development". RIA Novosti. 2008-09-12. {{cite news}}: Text "urlhttp://en.rian.ru/russia/20080912/116749330.html" ignored (help)
  15. "Glonass still wants to be "the other guy in the sky"". Russia Today. 2010-12-07. Archived from the original on 2011-02-13. Retrieved 2011-06-17.
  16. "Сотовые и навигаторы без ГЛОНАСС обложат пошлиной в 25%" (in Russian). RBC. 2010-10-27. Archived from the original on 2010-10-28. Retrieved 2010-10-27. {{cite news}}: Unknown parameter |trans_title= ignored (help)CS1 maint: unrecognized language (link)
  17. http://www.stericsson.com/subclass/೧೩೩೮.jsp[permanent dead link]
  18. http://www.broadcom.com/press/release.php?id=s೫೪೮೭೨೦
  19. https://www.nytimes.com/reuters/2011/04/11/technology/tech-us-russia-sweden-glonass.html?hp[permanent dead link]
  20. ೨೦.೦ ೨೦.೧ "GLONASS hits a snag". Kommersant. 2010-12-07. Archived from the original on 2011-07-12. Retrieved 2011-06-17.
  21. Weir, Fred (December 6, 2010). "Russia's $2 billion project to rival America's GPS suffers setback". Christian Science Monitor.
  22. Perminov, Anatoly (December 7, 2010). "Interview of Anatoly Perminov to the Izvestia Newspaper (in Russian)". Roscosmos. Archived from the original on ಮಾರ್ಚ್ 19, 2012.
  23. ೨೩.೦ ೨೩.೧ ೨೩.೨ ೨೩.೩ Afanasyev, Igor (2010-11-26). "Glonass nearing completion". Russia & CIS Observer. Archived from the original on 2010-11-30. Retrieved 2011-06-17. {{cite journal}}: Unknown parameter |coauthors= ignored (|author= suggested) (help)
  24. ೨೪.೦ ೨೪.೧ ೨೪.೨ "The Global Navigation System GLONASS: Development and Usage in the 21st Century". 34th Annual Precise Time and Time Interval (PTTI) Meeting. 2002. Archived from the original on 2012-12-01. Retrieved 2011-06-17.
  25. ^ GLONASS ಟ್ರಾನ್ಸ್‌ಮಿಟರ್ ಸ್ಪೆಕ್ಸ್
  26. ೨೬.೦ ೨೬.೧ "ಎ ರಿವ್ಯೂ ಆಪ್ ಗ್ಲೋನಾಸ್" ಮಿಲ್ಲರ್ ೨೦೦೦
  27. "Russia Approves CDMA Signals for GLONASS, Discussing Common Signal Design". Insidegnss.com. Archived from the original on 2018-03-13. Retrieved 2010-12-30.
  28. ಗ್ಲೋನಾಸ್ ಸ್ಟೇಟಸ್ ಎಂಡ್ ಪ್ರೋಗ್ರೆಸ್ Archived 2011-06-14 ವೇಬ್ಯಾಕ್ ಮೆಷಿನ್ ನಲ್ಲಿ., S.G.ರೆವ್‌ನಿವ್ಕ್, ೪೭ನೇCGSIC ಮೀಟಿಂಗ್ "L೧CR ಮತ್ತು L೫R CDMA ಇಂಟರೋಪರೇಬಲ್ ವಿತ್ GPS ಎಂಡ್ ಗೆಲಿಲಿಯೊ"
  29. ಗ್ಲೋನಾಸ್ ಸ್ಟೇಟಸ್ ಎಂಡ್ ಪ್ರೋಗ್ರೆಸ್ Archived 2011-06-14 ವೇಬ್ಯಾಕ್ ಮೆಷಿನ್ ನಲ್ಲಿ., S.G.ರೇವ್‌ನಿವಿಕ್, ೪೮ನೇ CGSIC ಮೀಟಿಂಗ್ "
  30. ೩೦.೦ ೩೦.೧ ಗ್ಲೋನಾಸ್ ಸ್ಟೇಟಸ್ ಎಂಡ್ ಪ್ರೋಗ್ರೆಸ್ Archived 2011-06-14 ವೇಬ್ಯಾಕ್ ಮೆಷಿನ್ ನಲ್ಲಿ., S.G.ರೇವ್‌ನಿವಿಕ್, ೫೦ನೇ CGSIC ಮೀಟಿಂಗ್ "
  31. ೩೧.೦ ೩೧.೧ ೩೧.೨ ಗ್ಲೋನಾಸ್ ಸ್ಟೇಟಸ್ ಎಂಡ್ ಡೆವಲಪ್‌ಮೆಂಟ್, G.ಸ್ಟುಪಾಕ್, ೬ನೇICG ಮೀಟಿಂಗ್
  32. "ರಷ್ಯಾಸ್ ಫಸ್ಟ್ ಗ್ಲೋನಾಸ್-K ಇನ್ ಆರ್ಬಿಟ್, CDMA ಸಿಗ್ನಲ್ಸ್ ಕಮಿಂಗ್". Archived from the original on 2011-03-07. Retrieved 2011-06-17.
  33. "Russia to Put 8 CDMA Signals on 4 GLONASS Frequencies". Inside GNSS. 2010-03-17. Archived from the original on 2010-12-05. Retrieved 2010-12-30.
  34. "GLONASS Update Delves into Constellation Details". GPS World. Archived from the original on 2012-03-10. Retrieved 2010-12-30.
  35. ಉರಗನ್ , ರಷ್ಯನ್ ಸ್ಪೇಸ್ ವೆಬ್
  36. ಗ್ಲೋನಾಸ್ #೭೮೭, ೬೮.೭ ಆಪರೇಷನಲ್ ಮಂತ್ಸ್;ಆಸ್ ರಿಪೋರ್ಟೆಡ್ ಬೈ RSA "ಗ್ಲೋನಾಸ್ ಕಾನ್ಸ್‌ಟಲೇಷನ್ ಸ್ಟೇಟಸ್" ೬ ಏಪ್ರಿಲ್ ೨೦೦೭
  37. ೩೭.೦ ೩೭.೧ "Glonass-K: a prospective satellite of the current GLONASS system" (PDF). Reshetnev Information Satellite Systems. 2007. Archived from the original (PDF) on 2011-07-13. Retrieved 2011-06-17.
  38. "Russia to launch Glonass satellite on Feb. 24". RIA Novosti. 2011-02-09.
  39. Langley, Richard (2010). "GLONASS forecast bright and plentiful". GPS World. Archived from the original on 2012-07-11. Retrieved 2011-06-17.
  40. "Russia launches satellite for global navigation system". BBC News. 2011-02-26.
  41. ಗ್ಲೋನಾಸ್ ಸಮ್ಮರಿ, ಸ್ಪೇಸ್ ಎಂಡ್ ಟೆಕ್
  42. "GLONASS ಆಡೆಡ್ ಟು ಸ್ಕೈವೇವ್ ಟರ್ಮಿನಲ್ಸ್", ಡಿಜಿಟಲ್ ಶಿಪ್, ಡಿಸೆಂಬರ್ ೪, ೨೦೦೯. http://www.thedigitalship.com/conferences/೨೦೦೬/displaynews.asp?NewsID=೯೦೨[permanent dead link]
  43. ಗ್ಲೋನಾಸ್ ಕಾನ್ಸ್ಟಲೇಷನ್ ಸ್ಟೇಟಸ್[permanent dead link] ರಷ್ಯನ್ ಸ್ಪೇಸ್ ಏಜನ್ಸಿ ಇನ್‌ಫಾರ್ಮೇಶನ್-ಅನಾಲಿಟಿಕಲ್ ಸೆಂಟರ್
  44. ರಷ್ಯಾ ಟು ಸೆಟ್ ವರ್ಲ್ಡ್ ರೆಕಾರ್ಡ್ ವಿತ್ 39 ಸ್ಪೇಸ್ ಲಾಂಚಸ್ ಇನ್ 2009 RIA Novosti ೨೦೦೮-೧೨-೨೯
  45. "В российской навигационной системе ГЛОНАСС заработал еще... - Новости - Общество - Интерфакс". Interfax.ru. Retrieved 2010-08-12.
  46. "Russian system of differentional correction and monitoring". Sdcm.ru. Archived from the original on 2019-09-26. Retrieved 2010-12-30.
  47. "First Foreign Firm Embraces Glonass". The Moscow Times. 2011-04-11.
  48. Роскосмос обещает повысить точность работы ГЛОНАСС с 10 до 5,5 метров РИА «Новости»

ಗ್ರಂಥಸೂಚಿ

ಬದಲಾಯಿಸಿ

ಬಾಹ್ಯ ಕೊಂಡಿಗಳು‌‌

ಬದಲಾಯಿಸಿ

ಟೆಂಪ್ಲೇಟು:TimeSig