ಗೌಹರ್ ಜಾನ್
ಗೌಹರ್ ಜಾನ್, [೧] (ಜನನ ಏಂಜಲೀನಾ ಯೆವಾರ್ರ್ಡ್, 26 ಜೂನ್ 1873 - 17 ಜನವರಿ 1930) ಕಲ್ಕತ್ತಾದ ಭಾರತೀಯ ಗಾಯಕಿ ಮತ್ತು ನರ್ತಕಿ. ಭಾರತದಲ್ಲಿ 78 ಆರ್ಪಿಎಂ ದಾಖಲೆಗಳಲ್ಲಿ ಸಂಗೀತವನ್ನು ಧ್ವನಿಮುದ್ರಣ ಮಾಡಿದ ಮೊದಲ ಪ್ರದರ್ಶಕರಲ್ಲಿ ಒಬ್ಬರು ಇದನ್ನು ಭಾರತದ ಗ್ರಾಮೋಫೋನ್ ಕಂಪನಿ ಬಿಡುಗಡೆ ಮಾಡಿದೆ. [೨], [೩]
ಆರಂಭಿಕ ಜೀವನ
ಬದಲಾಯಿಸಿಗೌಹರ್ ಜಾನ್ [೪] 26 ಜೂನ್ 1873 ರಂದು ಅಜಮ್ಗಾರ್ನಲ್ಲಿ ಅರ್ಮೇನಿಯನ್ ಮೂಲದ ಏಂಜಲೀನಾ ಯೆವಾರ್ಡ್ ಆಗಿ ಜನಿಸಿದರು. ಆಕೆಯ ತಂದೆ, ವಿಲಿಯಂ ರಾಬರ್ಟ್ ಯೆಯೋರ್ಡ್ ಅವರು ಡ್ರೈ ಐಸ್ ಕಾರ್ಖಾನೆಯಲ್ಲಿ ಎಂಜಿನಿಯರಾಗಿದ್ದರು, ಮತ್ತು 1872 ರಲ್ಲಿ ವಿಕ್ಟೋರಿಯಾ ಹೆಮಿಂಗ್ಸ್ ಅವರನ್ನು ವಿವಾಹವಾದರು. ವಿಕ್ಟೋರಿಯಾ ಸಂಗೀತ ಮತ್ತು ನೃತ್ಯದಲ್ಲಿ ತರಬೇತಿ ಪಡೆದಿದ್ದಳು. 1879 ರಲ್ಲಿ ಮದುವೆ ಕೊನೆಗೊಂಡಿತು, 1881 ರಲ್ಲಿ ನಂತರ ಬನಾರಸ್ ಗೆ ವಲಸೆ ಬಂದ ತಾಯಿ ಮತ್ತು ಮಗಳು ವಿಕ್ಟೋರಿಯಾಳ ಸಂಗೀತವನ್ನು ಅವಳ ಪತಿಗಿಂತ ಹೆಚ್ಚು ಮೆಚ್ಚುಗೆ ವ್ಯಕ್ತಪಡಿಸುವ ಮುಸ್ಲಿಂ ಕುಲೀನ, ಖುರ್ಷಿದ್ ನೊಂದಿಗೆ ವಿವಾಹವಾದರು.
ಬನಾರೆಸ್ ನಗರ ಎಲ್ಲಾ ವಿಧದ ಅಧ್ಯಯನಗಳ ಕೇಂದ್ರವಾಗಿತ್ತು
ಬದಲಾಯಿಸಿಬನಾರಸ್ ಹಿಂದೂಗಳ ಅತ್ಯಂತ ಪ್ರಾಚೀನ ಹಾಗೂ ಪವಿತ್ರನಗರ. ಇಲ್ಲಿ ಹಲವು ಬಗೆಯ ಶಿಕ್ಷಣಗಳನ್ನು ಪಡೆಯಬಹುದಿತ್ತು. ಪ್ರಮುಖ ಅಧ್ಯಯನಗಳ ಕೇಂದ್ರವಾಗಿತ್ತು. ಎಲ್ಲಾ ಬಗೆಯ ನೃತ್ಯ, ನಾಟಕ, ಹಾಡುಗಾರಿಕೆಗಳಿಗೆ ಹೆಸರುವಾಸಿಯಾಗಿತ್ತು. ಸತತವಾಗಿ ೮ ವರ್ಗಳ ಕಠಿಣ ಪರಿಶ್ರಮದ ಅಧ್ಯಯನದ ಬಳಿಕ, "ಬೈಜಿ ಬೈಜಿ ಪದವಿ" ಗಳಿಸಿದರು. ಮುಂದೆ ನರ್ತಕಿಯಾಗಿ,ನವಾಬರನ್ನು, ಸಾಹುಕಾರನ್ನು ಮತ್ತು ರಾಜರಿಗೆ ತನ್ನ ನೃತ್ಯ, ಹಾಡುಗಾರಿಕೆಯಿಂದ ಮನತಣಿಸುತ್ತಾ, ತನ್ನ ಜೀವನವನ್ನು ಸಾಗಿಸುವ ಧೃಡ ನಿರ್ಧಾರಮಾಡಿದಳು. ರಸಿಕರು ಆಕೆಯನ್ನು "ಬಡಿ ಮಲ್ಕ ಜಾನ್", ಎಂದು ಕರೆಯುತ್ತಿದ್ದರು. ಆಗಿನ ಕಾಲದಲ್ಲಿ ಮತ್ತಿತರ ಸ್ಥಳಗಳಲ್ಲಿ ೩ ಜನ 'ಮಲ್ಕ ಜಾನ್' ಎನ್ನುವ ಹೆಸರಿನ ನರ್ತಕಿಯರು ಪ್ರಸಿದ್ಧಿಯಲ್ಲಿದ್ದರು.
- ಆಗ್ರಾದ ಮಲ್ಕಜಾನ್,
- ಮುಲ್ಕ್ ಫುಖ್ರಾಜ್ ನ ಮಲ್ಕಜಾನ್,
- ಚುಲ್ಬುಲಿ ಮಲ್ಕಜಾನ್,
ಮುಂದೆ, ವಿಕ್ಟೋರಿಯಾರವರು ಇಸ್ಲಾಂಗೆ ಮತಾಂತರಗೊಂಡರು. ಮತ್ತು ಏಂಜಲೀನಾ ಹೆಸರನ್ನು 'ಗೌಹಾರ್ ಜಾನ್'[೫] ಮತ್ತು 'ಮಲ್ಕ ಜಾನ್' ಗೆ ಬದಲಾಯಿಸಿದರು.[೬][೭]
ವಿಕ್ರಂ ಸಂಪತ್ ಅಧ್ಯಯನ
ಬದಲಾಯಿಸಿಹೆಸರಾಂತ ಚಾರಿತ್ರ್ಯಿಕ ಕಾದಂಬರಿಕಾರ, ವಿಕ್ರಂ ಸಂಪತ್, ಗೌಹರ್ ಜಾನ್ ರವರ, ಸಂಗೀತ ಸಾಧನೆಯ ಬಗ್ಗೆ ಸಂಶೋಧನಾತ್ಮಕ ಕೆಲಸ ಮಾಡಿದ್ದಾರೆ. [೮], [೯] ಹಿಂದೂಸ್ತಾನದಲ್ಲಿ ಅತ್ಯಂತ ಹೆಸರುವಾಸಿಯಾದ ಗಾಯಕಿ/ನರ್ತಕಿಯಾಗಿದ್ದ ಗೌಹರ್ ಜಾನ್ ಹಾಡಿನ ಪ್ರಥಮ ಧ್ವನಿ ಮುದ್ರಿಕೆಯನ್ನು ರೂಪಿಸುವ ಕಾರ್ಯವನ್ನು ಆಗಿನ ಕಾಲದ ಹೆಸರಾಂತ ಗ್ರಾಮಫೋನ್ ಕಂಪೆನಿಯೊಂದು ಕಾರ್ಯಾರಂಭಮಾಡಿತು. ಆದರೆ ಭಾರತದ ಸಂಗೀತದ ಇತಿಹಾಸದ ಪುಟಗಳಲ್ಲಿ ಆಕೆಯ ಹೆಸರಿನ ಬಗ್ಗೆ ಸಮರ್ಪಕವಾದ ದಾಖಲಾತಿ ಕಡಿಮೆ.
"The great mystery of Vikram Sampath’s definitive account of Gauhar Jaan’s life is how India’s first recorded voice, whose image appeared on Austrian-made matchbooks, and whose voice was known to and loved by millions of Indians all but vanish from history? That Mr Sampath’s richly detailed biography of Gauhar Jaan is the first of its kind (barring an extremely obscure Bengali language work) is testament to his inquiry into this mystery. Sometimes overnight successes vanish by the very principle that inflates them, and other times events seem to conspire against individuals and leave us with no trace of them. Even if the old guard who, in refusing to be mechanically recorded, remain part of a millennia-old oral tradition gone without a trace and thus kept their art free from political machination, we may also listen to Gauhar Jaan as the first voice heralding the dawn of a new kind of history".
ಉಲ್ಲೇಖಗಳು
ಬದಲಾಯಿಸಿ- ↑ https://www.last.fm/music/Gauhar+Jan/+wiki, Biography]
- ↑ New Gramaphone house, Malka jan, N. 796-78 ಮಲ್ಕಾಜಾನ್, N. 796-78
- ↑ The first dancing girl of Calcutta
- ↑ Who was Gauhar Jaan? Here's all you need to know about iconic Hindustani singer, DNA
- ↑ Reviewed Work: Vintage Music from India: Early Twentieth-Century Classical and Light-Classical Music
- ↑ Savitha Gautam (13 May 2010). "The Hindu : Arts / Music : Recording Gauhar Jaan". Beta.thehindu.com. Retrieved 29 January 2012.
- ↑ The importance of being Gauhar Jan The Tribune, 26 May 2002.
- ↑ Chasing a legend, By: Vikram Sampath 14 January 2014
- ↑ "Gone in the Air, November 20, 2010 | by Aram Yardumian | "My Name is Gauhar Jaan!" The Life and Times of a Musician, by Vikram Sampath (©2010), Rupa Publications, New Delhi, ISBN 8129116185 –". Archived from the original on ಅಕ್ಟೋಬರ್ 1, 2018. Retrieved ಅಕ್ಟೋಬರ್ 31, 2018.
ಬಾಹ್ಯ ಸಂಪರ್ಕಗಳು
ಬದಲಾಯಿಸಿ- Gauhar Jaan: The Forgotten Doyen Of Hindustani Music | #IndianWomenInHistory By Tanya Jha - August 22, 2018
- Google Doodle Celebrates Noted Singer Gauhar Jaan’s 145th Birth Anniversary June 26, 2018
- National herald, Gauhar Jaan: The most famous ‘tawaif’ of British India, June 26, 2018
- Gauhar Jaan – an Armenian lady who became India’s first Superstar, Feb, 11, 2018
- Our masters' voices - Album lined up to mark 100 years of recording, The Telegraph, By SUBHRO SAHA, Published 1.11.02
- 1900-1930, Pioneering Muscians, : WomenSuperstars of the Early Gramaphone Era, Archive of Indian Music
- EMI Archive trust Archived 2018-11-16 ವೇಬ್ಯಾಕ್ ಮೆಷಿನ್ ನಲ್ಲಿ.
- thebetterindia.com
- saregama,
- Ras ke bhare, Gauhar jaan, Archive of Indian music
- Review of Gauhar Jaan – The Datia Incident at the Omnibus Theatre, APRIL 17, 2018 9:58 PM BY CHRIS OMAWENG, London theater 1.com