ಕವಲು ಮರ

(ಗೌಜಲು ಮರ ಇಂದ ಪುನರ್ನಿರ್ದೇಶಿತ)

ಕವಲು ಮರ ಭಾರತದೆಲ್ಲೆಡೆ ಬೆಳೆಯುವ ಮರ.ಇದನ್ನು ಸಂಸ್ಕೃತದಲ್ಲಿ 'ಕುಂಭಿ' ಎಂದು ಕರೆಯುತ್ತಾರೆ.ಚಳಿಗಾಲದಲ್ಲಿ ಇದರ ಎಲೆಯು ಕೆಂಪು ಬಣ್ಣಕ್ಕೆ ತಿರುಗುತ್ತದೆ.ಇದು ಸಾಧಾರಣ ೧೫ ಮೀ.ಎತ್ತರಕ್ಕೆ ಬೆಳೆಯುತ್ತದೆ.ಇದರ ಬಿಳಿ ಬಣ್ಣದ ಹೂಗಳು ನೇರಳೆ ಹೂಗಳನ್ನು ಹೋಲುತ್ತವೆಯಾದರೂ ಗಾತ್ರದಲ್ಲಿ ಹಿರಿದಾಗಿದ್ದು ನೀರಿನ ಪಾತ್ರೆಯಂತೆ ತೋರುತ್ತದೆ.ಇದರ ತೊಗಟೆ ಹಾಗೂ ಹೂವನ್ನು ನೆಗಡಿ ಹಾಗೂ ಕಫ ಪರಿಹಾರಕ್ಕೆ ಉಪಯೋಗಿಸುತ್ತಾರೆ.

ಕವಲು ಮರ
Scientific classification
ಸಾಮ್ರಾಜ್ಯ:
plantae
Division:
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
C. arborea
Binomial name
ಕರೇಯ ಅರ್ಬೋರಿಯ(Careya arborea)
Synonyms

Careya coccinea sensu Alston

ಪರ್ಯಾಯ ನಾಮಗಳು

ಬದಲಾಯಿಸಿ

ಲೆಸಿಥಿಡೇಸೀ ಕುಟುಂಬಕ್ಕೆ ಸೇರಿದ ಒಂದು ಕಾಡುಮರ. ಕವುಲುಮರ, ದಡ್ಡಾಲ, ಹೆಣ್ಣುಮತ್ತಿ ಪರ್ಯಾಯನಾಮಗಳು. ಕ್ಯಾರಿಯ ಆರ್ಬೋರಿಯ ಇದರ ಶಾಸ್ತ್ರೀಯ ಹೆಸರು.

ಇದು ಭಾರತದ ಮೂಲನಿವಾಸಿ. ಭಾರತಾದ್ಯಂತ ಮತ್ತು ಮಲಯ, ಇಂಡೋಚೀನ ಮುಂತಾದೆಡೆಗಳಲ್ಲೆಲ್ಲ ಇದು ಹರಡಿದೆ. ಸಮುದ್ರಮಟ್ಟದಿಂದ ಹಿಡಿದು 1500 ಮೀ ಎತ್ತರದ ಬೆಟ್ಟ ಪ್ರದೇಶಗಳವರೆಗೂ ಇದರ ವ್ಯಾಪ್ತಿ ಉಂಟು.

ಲಕ್ಷಣಗಳು

ಬದಲಾಯಿಸಿ

10-20 ಮೀ ಎತ್ತರಕ್ಕೆ ಬೆಳೆಯುವ ಮರವಿದು. ಇದರ ಚೌಬೀನೆ ಗಡುಸಾಗಿಯೂ ಭಾರವಾಗಿಯೂ ಬಲವಾಗಿಯೂ ಉಂಟು. ಬಹುಕಾಲ ನೀರಿನ ಸಂಪರ್ಕವಿದ್ದರೂ ಕೆಡದು. ಆದರೆ ಬೇಗ ಸೀಳುವುದರಿಂದ ಮತ್ತು ಬಾಗುವುದರಿಂದ ಅಷ್ಟಾಗಿ ಉಪಯೋಗದಲ್ಲಿಲ್ಲ.

ಉಪಯೋಗಗಳು

ಬದಲಾಯಿಸಿ

ಇದನ್ನು ಗರಗಸದಿಂದ ಕೊಯ್ಯುವುದೂ ಕಷ್ಟ. ಆದರೂ ಸೂಕ್ತರೀತಿಯಲ್ಲಿ ಸಂಸ್ಕರಿಸುವುದರಿಂದ ಇದನ್ನು ಕೃಷಿ ಉಪಕರಣಗಳು, ಹಲಗೆಗಳು, ರೈಲ್ವೆ ಸ್ಲೀಪರುಗಳು, ಬಂದೂಕದ ಹಿಡಿಗಳು, ತೊಲೆಗಳು ಮುಂತಾದವುಗಳ ತಯಾರಿಕೆಯಲ್ಲಿ ಬಳಸಬಹುದು. ತೊಗಟೆಯಿಂದ ಒರಟಾದ ಹಗ್ಗ ಮತ್ತು ಕಂದುಬಣ್ಣದ ಕಾಗದ ಮುಂತಾದವನ್ನು ತಯಾರಿಸುವುದಿದೆ.

ಔಷದೀಯ ಗುಣಗಳು

ಬದಲಾಯಿಸಿ

ತೊಗಟೆಗೆ ಔಷಧೀಯ ಗುಣಗಳೂ ಉಂಟು. ಇದನ್ನು ಕೆಮ್ಮು, ಶೀತ, ಜ್ವರ, ಸಿಡುಬು ಮುಂತಾದ ಬೇನೆಗಳಲ್ಲಿ ಶಾಮಕ ಔಷಧಿಯಾಗಿ ಬಳಸುತ್ತಾರೆ. ಹಣ್ಣಿನ ಕಷಾಯವನ್ನು ಪಚನಕ್ರಿಯೆಯನ್ನು ಹೆಚ್ಚಿಸುವುದಕ್ಕೂ ಎಲೆಗಳನ್ನು ವ್ರಣಗಳ ನಿವಾರಣೆಗೂ ಬಳಸುವುದಿದೆ.

"https://kn.wikipedia.org/w/index.php?title=ಕವಲು_ಮರ&oldid=1158593" ಇಂದ ಪಡೆಯಲ್ಪಟ್ಟಿದೆ