ಗೋವಾ ಸುರಕ್ಷಾ ಮಂಚ

ಗೋವಾ ಸುರಕ್ಷಾ ಮಂಚ್ ಗೋವಾದಲ್ಲಿ ರಾಜಕೀಯ ಪಕ್ಷವಾಗಿದ್ದು, ಭಾರತೀಯ ಭಾಷಾ ಸುರಕ್ಷಾ ಮಂಚ್‌ನ ರಾಜಕೀಯ ಸಂಘಟನೆಯಾಗಿ

ಗೋವಾ ಸುರಕ್ಷಾ ಮಂಚ್ ಒಂದು ರಾಜಕೀಯ ಪಕ್ಷ. ಇದು ಗೋವಾ ರಜ್ಯದ ಭಾರತೀಯ ಭಾಷಾ ಮಂಚಿನ ರಾಜಕೀಯ ವೇದಿಕೆ. ಇದನ್ನು ಸ್ಥಾಪಸಿದವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾಜಿ ಪ್ರಮುಖರಾದ ಸುಭಾಷ ವೆಲಿಂಕರ್[] [][][] . ಆಕ್ಟೋಬರ್ ೨ ೨೦೧೬ ರಂದು ಈ ಪಕ್ಷದ ಸ್ಥಾಪನೆ ಮಾಡಲಾಯಿತು.

ಗೋವಾ ಸುರಕ್ಷಾ ಮಂಚ್
Leaderಸುಭಾಷ ವೆಲಿಂಕರ್
Founderಸುಭಾಷ ವೆಲಿಂಕರ್
Founded2 ಅಕ್ಟೋಬರ್ 2016; 3002 ದಿನ ಗಳ ಹಿಂದೆ (2016-೧೦-02)
Headquartersಅಂಗಡಿ ನಂ. 644/1, ವಾರ್ಡ No. 4, ಅಹಿಲ್ಯಾರಾಮ ನಿವಾಸ, ಸಾವೈರೇಂ, ಪೋಂಡಾ, ಗೋವಾ
Ideologyಪ್ರಾದೇಶಿಕತೆ
ECI Statusಗುರುತಿಸಲಾಗದ ಪಕ್ಷ []
Election symbol
ಕಪ್ಪು ಹಲಗೆ (Blackboard)

ಈ ಪಕ್ಷದ ಮೂಲ ಉದ್ದೇಶ ಕೊಂಕಣಿ ಮತ್ತು ಮರಾಠಿ ಭಾಷೆಯನ್ನು ಶಾಲೆಗಳಲ್ಲಿ ಪ್ರೋತ್ಸಾಹಿಸುವುದು ಹಾಗೂ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಅನುದಾನಗಳನ್ನು ಹಿಂತೆಗೆದುಕೊಳ್ಳುವುದಾಗಿದೆ. ಈ ಪಕ್ಷದ ಚಿನ್ನೆ ಕಪ್ಪು ಹಲಗೆ. (Black Board)[]

ಇದರ ಉದ್ಘಾಟನಾ ಅಧ್ಯಕ್ಷರು ಆನಂದ ಶಿರೋಡ್ಕರ್. ಸ್ವಾತಿ ಕೇರ್ಕರ ಮತ್ತು ಕಿರಣ ನಾಯಕ ಉಪಾಧ್ಯಕ್ಷರಾಗಿದ್ದರು ಆದರೆ ಸುಭಾಷ ವೆಲಿಂಕರವರು ಯಾವ ಹುದ್ದೆಯನ್ನು ತೆಗೆದುಕೊಂಡಿಲ್ಲ, ಯಾವುದೇ ಚುನಾವನೆಯಲ್ಲಿಯೂ ಭಗವಹಿಸುವ ಅಪೇಕ್ಷೆ ಇವರಿಗಿರಲಿಲ್ಲ. ಈ ಪಕ್ಷವು ೨೦೧೭ರ ಗೋವಾ ವಿಧಾನಸಭೆಯ ಚುನಾವನೆಯಲ್ಲಿ ಭಾಗವಹಿಸುತ್ತಿದೆ.[][]


ಇತಿಹಾಸ

ಬದಲಾಯಿಸಿ

ಶಶಿಕಲಾ ಕಾಕೊಡ್ಕರವರು ಡಾ. ಲುಯಿಸ್ ಪ್ರೊಟೊ ಬಾರ್ಬೊಸಾರವರ ನೇತ್ರತ್ವದ ಪ್ರೋಗ್ರೆಸಿವ್ ಡೆಮೊಕ್ರೆಟಿಕ್ ಪಕ್ಷ ಸರಕಾರದ ಶಿಕ್ಷಣಾ ಮಂತ್ರಿಗಳಗಿದ್ದರು. ಕಾಕೊಡ್ಕರವರ ಪ್ರಾರ್ಥಮಿಕ ಶಾಲಾ ಸರಕಾರ ಅನುದಾನ ನೀತಿ ಪ್ರಕಾರ ಸರಕಾರದಿಂದ ಗೋವಾ ರಾಜ್ಯದ ಪ್ರಾರ್ಥಮಿಕ (೧ ರಿಂದ ೪ ತರಗತಿ) ಶಾಲೆಗಳಿಗೆ ಸಿಗುವ ಅನುದಾನಗಳನ್ನು ಕೇವಲ ಕೊಂಕಣಿ ಅಥವಾ ಮರಾಠಿ ಮಾಧ್ಯಮದಲ್ಲಿದ್ದರೆ ಮಾತ್ರ ದೊರೆಯುವುದು. ಜೂನ್ ೧೯೯೦ ರಿಂದ ಈ ನಿಯಮ ಕಾರ್ಯಗೊಳಿಸಲಾಗುವುದೆಂದಿತ್ತು. ಗೋವಾ ರಾಜ್ಯದ ಅಂದಿನ ಮುಖ್ಯಮಂತ್ರಿಗಳಾದ ಡಾ. ಲುಯಿಸ್ ಪ್ರೊಟೊ ಬಾರ್ಬೊಸಾರಿಗೆ ಕಾಕೊಡ್ಕರವರು ಈ ವಿಷಯವನ್ನು ಕುರಿತು ಮನಗಾಣಿಸಿದರು. ಅಂದಿನ ಅಧಿಕೃತ ಭಾಷಾ ಮಂತ್ರಿಗಳಾದ ಚರ್ಚಿಲ್ ಅಲೆಮಾಒರವರೂ ಈ ನಿರ್ಣಯಕ್ಕೆ ಬೆಂಬಲಿಸಿದರು. ಕಾಕೊಡ್ಕರವರ ಈ ಅನುದಾನ ನೀತಿಯಿಂದಾಗಿ ಅನೇಕ ಪ್ರಾರ್ಥಮಿಕ ಶಾಲೆಗಳು ತಮ್ಮ ಮಾಧ್ಯಮವನ್ನು ಆಂಗ್ಲ ಭಾಷೆಯಿಂದ ಕೊಂಕಣಿ ಮತ್ತು ಮರಾಠಿ ಭಾಷೆಗೆ ಬದಲಾಯಿಸಿದರು. ಚರ್ಚ್ಸ್ ಡಿಯೊಸಿಸನ್ ಸೊಸೈಟಿ ಆಫ್ ಎಜುಕೇಶನ್ ಕಾರ್ಯನಿರ್ವಹಿಸುತಿರುವ ೧೩೦ ಪ್ರಾರ್ಥಮಿಕ ಶಾಲೆಗಳು ರಾತ್ರೊರಾತ್ರಿಯಲ್ಲಿ ತಮ್ಮ ಮಾಧ್ಯಮವನ್ನು ಆಂಗ್ಲ ಭಾಷೆಯಿಂದ ಕೊಂಕಣಿ ಭಾಷೆಗೆ ಬದಲಾಯಿಸಿತು.[] ಕಾಕೊಡ್ಕರವರು ಈ ಸ್ಥಾಪನೆಯಿಂದ ಇನ್ಮುಂದೆ ಯಾವುದೇ ಆಂಗ್ಲ ಮಾಧ್ಯಮದ ಹೊಸ ಪ್ರಾರ್ಥಮಿಕ ಶಾಲೆಗಳನ್ನು ನಡೆಸಲು ಅನುಮತಿ ಕೊಡಬಾರದೆಂದು ತಿರ್ಮಾನಿಸಿದರು. ಆದರೆ ಈ ಕಾರ್ಯನೀತಿಯು ನಂತರದ ಸರಕಾರಗಳು ನಡೆಸಲಿಲ್ಲ. ಇದರಿಂದಾಗಿ ಗೋವಾ ರಾಜ್ಯದಲ್ಲಿ ಹಲವು ಅನುದಾನರಹಿತ ಆಂಗ್ಲ ಮಾಧ್ಯಮದ ಪ್ರಾರ್ಥಮಿಕ ಶಾಲೆಗಳು ಉದ್ಭವಿಸಿದವು.[೧೦] ೧೯೯೧ರಲ್ಲಿ ೨೬ ಆಂಗ್ಲ ಮಾಧ್ಯಮ ಪ್ರಾರ್ಥಮಿಕ ಶಾಲೆಗಳಿಂದ ೨೦೧೧ರಲ್ಲಿ ೧೪೪ ಶಾಲೆಗಳಿಗೆ ಹೆಚ್ಚಿದವು.[೧೧]

೧೯ ಡಿಸೆಂಬರ್ ೧೯೬೧ರ ಗೋವಾ ವಿಮೋಚನೆಯ ನಂತರ, ಹಲವು ಭಾರತೀಯರು ಇತರ ರಾಜ್ಯಗಳಿಂದ ಗೋವಾ ರಾಜ್ಯಕ್ಕೆ ವಲಸೆ ಹೋದರು. ಇದರ ಕಾರಣದಿಂದಾಗಿ ಹಲವು ಪ್ರಾರ್ಥಮಿಕ ಶಾಲೆಗಳು ಇತರ ಭಾರತೀಯ ಭಾಷೆಗಳಲ್ಲಿ ಶಿಕ್ಷಣವನ್ನು ನೀಡತೊಡಗಿದವು. ಪೊರ್ತುಗೀಸರ ಆಡಳಿತದ ಸಮಯದಿಂದಲೇ ಉರ್ದೂ ಭಾಷೆಯ ಉಪಯೋಗ ಗೋವಾ ರಾಜ್ಯದಲ್ಲಿದ್ಲರೂ[೧೨], ಗೋವಾ ವಿಮೋಚನೆಯ ನಂತರ ಕನ್ನಡ[೧೩], ತೆಲಗು, ಹಿಂದಿ ಹಾಗು ಉರ್ದೂ[೧೪] ಭಾಷೆಯಲ್ಲಿ ಶಿಕ್ಷಣದ ಪರಿಚಯವಾಯಿತು.

ಪ್ರಾರ್ಥಮಿಕ ಶಿಕ್ಷಣವು ಆಂಗ್ಲ ಮಾಧ್ಯಮದಲ್ಲೇ ಉನ್ನತವೆಂದು ಪರಿಗಣಿಸಲಾಗಿದ್ದರಿಂದ[೧೫], ಪ್ರಾರ್ಥಮಿಕ ಶಾಲೆಗಳಲ್ಲಿ ಪಾಲಕರಿಂದ ಆಂಗ್ಲ ಭಾಷೆಯ ಶಕ್ಷಣದ ಬೇಡಿಕೆ ಹೆಚ್ಚಿತು. ಅಂದಿನ ಸರಕಾರದ ನಾಯಕರಾದ ದಿಗಂಬರ ಕಾಮತರು ೧೩೫ ಪ್ರಾರ್ಥಮಿಕ ಶಲೆಗಳಿಗೆ ತಮ್ಮ ಮಾಧ್ಯಮವನ್ನು ಆಂಗ್ಲ ಮಾಧ್ಯಮಕ್ಕೆ ರಾತ್ರೋರಾತ್ರಯಲ್ಲಿ ಬದಲಾಯಿಸಲು ಅನುಮತಿ ನೀಡಿದರು[೧೬]. ವಿರೋಧ ಪಕ್ಷದ ಅಂದಿನ ನಾಯಕರಾದ ಮನೋಹರ ಪಾರಿಕರವರ ಜೋತೆಯಲ್ಲಿ ಈ ಬದಲಾವಣೆಯನ್ನು ಹಲವರು ವಿರೋಧಿಸಿದರು. ದಿಗಂಬರ ಕಾಮತರ ನಿರ್ಣಯವನ್ನು ವಿರೋಧಿಸಲು ಭಾರತೀಯ ಭಾಷಾ ಸುರಕ್ಷಾ ಮಂಚ್ - ಭಾರತೀಯ ಭಾಷೆಗಳ ರಕ್ಷಣಾ ವೇದಿಕೆಯ ಸ್ಥಾಪನೆವಾಯಿತು. ಮನೋಹರ ಪಾರಿಕರವರು ಭಾರತೀಯ ಭಾಷಾ ಸುರಕ್ಷಾ ಮಂಚಿನಿಂದ ನಡೆಯುವ ಪ್ರತಿಬಟನೆಗಳಲ್ಲಿ ಭಾಗವಹಿಸಿದರು. ಈ ಸಂಸ್ಥಯು ಕಾಕೊಡ್ಕರವರ ಕಾರ್ಯ ನೀತಿಯಂತೆ ಭಾರತೀಯ ಭಾಷೆಗಳಲ್ಲಿ ಪ್ರಾರ್ಥಮಿಕ ಶಕ್ಷಣ ನೀಡುವ ಶಾಲೆಗಳಿಗೆ ಮಾತ್ರ ಸರಕಾರದಿಂದ ಸಿಗುವ ಅನುದಾನ ದೊರೆಯಲು ಬೆಂಬಲಿಸಿತು. ಇದರಿಂದಾಗಿ ೨೦೧೨ ರ ಗೋವಾ ವಿಧಾನಸಭೆಯ ಚುನಾವಣೆಯಲ್ಲಿ ಶಿಕ್ಷಣ ಮಾಧ್ಯಮ ಕುರಿತು ವಿವಾದ ಚರ್ಚೆ ನಡೆಯಿತು.[೧೭][೧೮]

ಅತ್ತ ಭಾರತೀಯ ಭಾಷಾ ಸುರಕ್ಷಾ ಮಂಚಿನ ಹೋರಾಟ ಆಂಗ್ಲ ಮಾಧ್ಯಮ ಶಾಲೆಗಳಿಗೆ ಅನುದಾನ ಸಿಗುವ ವಿರುಧವಿದ್ದರೆ, ಇತ್ತ ಫೊರಂ ಫಾರ್ ರೈಟ್ಸ್ ಆಫ್ ಚಿಲ್ಡ್ರನ್ ಟು ಎಜುಕೇಶನ್ (FORCE),ಮಕ್ಕಳ ಶಿಕ್ಷಣ ವೇದಿಕೆಯು ಆಂಗ್ಲ ಮಾಧ್ಯಮ ಶಾಲೆಗಳಿಗೂ ಅನುದಾನ ಸಿಗಲು ಹೋರಾಟ ನಡೆಸುತಿತ್ತು[೧೯]. ೨೦೧೨ರ ಗೋವಾ ವಿಧಾನಸಭೆ ಚುನಾವಣೆಯ ಪ್ರಚಾರದ ಸಮಯದಲ್ಲಿ ಭಾರತೀಯ ಜನತಾ ಪಕ್ಷ - ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷವು, ಭಾರತೀಯ ಭಾಷಾ ಸುರಕ್ಷಾ ಮಂಚಿನ ಹೋರಾಟಕ್ಕೆ ಮೈತ್ರಿ ಹಾಗು ಬೆಂಬಲ ನೀಡಿತು[೨೦]. ಭಾರತೀಯ ಭಾಷಾ ಸುರಕ್ಷಾ ಮಂಚಿನ ಬೆಂಬಲದಿಂದ ಭಾರತೀಯ ಜನತಾ ಪಕ್ಷ - ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷವು ೨೦೧೨ರ ಗೋವಾ ವಿಧಾನಸಭೆಯ ಚುನಾವಣೆಯಲ್ಲಿ ಗೆಲುವು ಕಂಡಿತು.[೨೧]

೨೦೧೨ ರ ಗೋವಾ ರಾಜ್ಯದ ಮುಖ್ಯ ಮಂತ್ರಿಗಳಾದ ಬಳಿಕ ಮನೋಹರ ಪಾರಿಕರವರು ಮಾಜಿ ಮುಖ್ಯ ಮಂತ್ರಿಗಳಾದ ದಿಗಂಬರ ಕಾಮತ ನೇತ್ರತ್ವದ ಸರಕಾರದ ಕಾರ್ಯನೀತಿಗಳನ್ನು ಮುಂದುವರೆದರು.[೨೨] ದಿಗಂಬರ ಕಾಮತ ಸರಕಾರದ ಸಮಯದಲ್ಲಿ ಅನುದಾನ ನೀಡಿದ ಆಂಗ್ಲ ಮಾಧ್ಯಮ ಶಾಲೆಗಳಿಂದ ಈ ಸೌಲಭ್ಯವನ್ನು ಹಿಂತೆಗೆದುಕಳ್ಳುವುದು ಸರಿಯಲ್ಲವೆಂದು ಪಾರಿಕರವರು ಹೇಳಿದ್ದರು. ಹಿಂತೆಗೆದು ಕೊಂಡಲ್ಲಿ ಆಡಳಿತಾತ್ಮಕ ಮತ್ತು ತಾಂತ್ರಿಕ ತೊಂದರೆಗಳಾಗ ಬಹುದೆಂದರು.[೨೩]ಪಾರಿಕರವರು ಈ ಸ್ಥತಿಗೆ ದಿಗಂಬರ ಕಾಮತರೆ ಕಾರಣವೆಂದು ಆರೋಪಿಸಿದರು.[೨೪] ಆದ ಕಾರಣ ಪಾರಿಕರವರು ಇನ್ಮುಂದೆ ಕೇವಲ ಕೊಂಕಣಿ ಮತ್ತು ಮರಾಠಿ ಮಾಧ್ಯಮ ಶಾಲೆಗಳಿಗೆ ಮಾತ್ರ ಸರಕಾರವು ಅನುದಾನ ನೀಡುವುದೆಂದು ಪ್ರಕಟಿಸಿದರು. ಇದರ ಜೊತೆಗೆ ಕೊಂಕಣಿ ಮತ್ತು ಮರಾಠಿ ಮಾಧ್ಯಮದ ಪ್ರಾರ್ಥಮಿಕ ಶಾಲೆಗಳಿಗೆ ಕೆಲವು SOPಗಳನ್ನು ಘೋಷಿಸಿದರು.[೨೫]

ಮನೋಹರ ಪಾರಿಕರವರ ಈ ಹಿಂತಿರುವನ್ನು[೨೬][೨೭] ಭಾರತೀಯ ಭಾಷಾ ಸುರಕ್ಷಾ ಮಂಚ ಪ್ರತಿಭಟಿಸಿತು.[೨೮] ಭಾರತೀಯ ಭಾಷಾ ಸುರಕ್ಷಾ ಮಂಚ ಒಂದು ಸ್ವತಂತ್ರ ರಾಜಕೀಯ ಪಕ್ಷವನ್ನು ಸ್ಥಾಪಿಸಿ ೨೦೧೭ರ ಗೋವಾ ವಿಧಾನಸಭೆಯಲ್ಲಿ ಭಾಗವಹಿಸಲು ನಿರ್ಣಯಿಸಿತು. ಸುಭಾಷ್ ವೆಲಿಂಕರವರು ಆಗ ರಾಷ್ಟ್ರೀಯ ಸ್ವಯಂಸೇವಕ ಸಂಘಗೋವಾ ವಿಭಾಗದ ಸಂಘಚಾಲಕರಾಗಿದ್ದರು. ಸುಭಾಷ ವೆಲಿಂಕರವರು ರಾಜಕೀಯ ಪಕ್ಷವನ್ನು ಸ್ಥಾಪಿಸುವ ನಿರ್ಧಾದಿಂದ ತಮ್ಮ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜವಾಬದಾರಿಯಿಂದ ಕೆಳಗಿಳಿದರು. ಆ ಸ್ಥಾನದಲ್ಲಿ ಲಕ್ಷ್ಮಣ ಬೆಹ್ರೆಯರು ರಾಷ್ಟ್ರೀಯ ಸ್ವಯಂಸೇವಕ ಸಂಘಗೋವಾ ವಿಭಾಗದ ಸಂಘಚಾಲಕರಾದರು.[೨೯] ಇದನ್ನು ಪ್ರತಿಭಟಿಸಿ ೪೦೦ ಸ್ವಯಂಸೇವಕರು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ರಾಜಿನಾಮೆ ನೀಡಿದರು.[೩೦] ಸುಭಾಷ್ ವೆಲಿಂಕರವರ ನೇತ್ರತ್ವದಲ್ಲಿ ಗೋವಾ ಪ್ರಾಂತ ರಾಷ್ಟ್ರೀಯ ಸ್ವಯಂಸೇವಕ ಸಂಘದ ಇನ್ನೊಂದು ಶಾಖೆಯ ಸ್ಥಪನೆವಾಯಿತು.[೩೧][೩೨]

ತರುವಾಯ ಆಕ್ಟೋಬರ್ ೨ ೨೦೧೬ರಲ್ಲಿ ಗೋವಾ ಸುರಕ್ಷಾ ಮಂಚಿನ ಸ್ಥಾಪನೆವಾಯಿತು.[೩೩]

ಚುನಾವಣೆಯ ರಾಜಕಾರಣ

ಬದಲಾಯಿಸಿ

೨೦೧೭ರ ಗೋವಾ ವಿಧಾನಸಭೆಯ ಚುನಾವಣೆಯಲ್ಲಿ ಭಾಗವಹಿಸಲು ಗೋವಾ ಸುರಕ್ಷಾ ಮಂಚ ಶಿವ ಸೇನಾ, ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷ ಮತ್ತು ಗೋವಾ ಪ್ರಜಾ ಪಕ್ಷದ ಮೈತ್ರಿ ಹೊಂದಿತು.[೩೪][೩೫] ಈ ಮೈತ್ರಿ ಪಕ್ಷವು ಒಟ್ಟು ೪೦ ಕ್ಷೇತ್ರದ ೩೩ ಕ್ಷೇತ್ರಗಳಲ್ಲಿ ಭಾಗವಹಿಸಿತು.[೩೬]

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಶ್ಯಾಮ ಸಾತಾರ್ಡೆಕರ[೩೭] ಮತ್ತು ಭಾರತೀಯ ಜನತಾ ಪಕ್ಷದ ಡಾ.ಸುರೆಷ ಆಮೊಂಕರಂತಹ[೩೮] ಹಲವು ರಾಜಕಾರಣಿಯರು ಗೋವಾ ಸುರಕ್ಷಾ ಮಂಚನ್ನು ಸೇರಿದರು. ತರುವಾಯ ಇವರೆಲ್ಲರು ಪಕ್ಷದ ಸದಸ್ಯರಾಗಿ ನೇಮಕಗೊಂಡರು.

ಉಲ್ಲೇಖಗಳು

ಬದಲಾಯಿಸಿ
  1. "ಆರ್ಕೈವ್ ನಕಲು" (PDF). Archived from the original (PDF) on 2017-11-18. Retrieved 2020-07-20.
  2. https://www.business-standard.com/article/politics/rebel-rss-leader-subhash-velingkar-floats-goa-suraksha-manch-116100200435_1.html
  3. https://timesofindia.indiatimes.com/city/goa/Goa-Suraksha-Manch-and-Shiv-Sena-join-hands-to-contest-Goa-Assembly-elections/articleshow/55625090.cms
  4. https://www.business-standard.com/article/pti-stories/sena-joins-hands-with-rss-rebel-s-outfit-to-take-on-bjp-in-goa-116112500728_1.html
  5. https://indianexpress.com/article/india/india-news-india/goa-suraksha-manch-claims-it-has-support-of-rss-cadre-for-state-polls/
  6. https://eci.gov.in/eci_main/ElectoralLaws/OrdersNotifications/year2017/Letter%20dated%2007.01.17%20Para10B.pdf
  7. https://www.firstpost.com/politics/rebel-rss-leader-subhas-velingkar-floats-goa-suraksha-manch-party-ahead-of-assembly-polls-3030680.html
  8. https://www.firstpost.com/politics/goa-assembly-election-2017-bjp-congress-aap-pitted-against-each-other-in-this-coastal-state-3193870.html
  9. http://m.goanews.com/blog_details.php?id=1106
  10. http://m.goanews.com/news_details.php?id=1375
  11. http://m.goanews.com/blog_details.php?id=1106
  12. Kanekar, Suresh (2009). Of Mangoes and Monsoons: A Novel. Xlibris.
  13. https://timesofindia.indiatimes.com/city/hubballi/Kannada-medium-Goa-students-to-write-SSLC-exams-in-Karwar/articleshow/51610808.cms
  14. "ಆರ್ಕೈವ್ ನಕಲು" (PDF). Archived from the original (PDF) on 2017-01-09. Retrieved 2020-07-20.
  15. "ಆರ್ಕೈವ್ ನಕಲು" (PDF). Archived from the original (PDF) on 2019-02-03. Retrieved 2020-07-20.
  16. "ಆರ್ಕೈವ್ ನಕಲು" (PDF). Archived from the original (PDF) on 2019-02-03. Retrieved 2020-07-20.
  17. https://swarajyamag.com/politics/bjps-soft-bigotry-in-education-the-real-story-behind-sacking-of-rss-goa-chief
  18. https://www.indiatoday.in/assembly-elections-2012/goa/story/polls-2012-bjp-wins-simple-majority-in-goa-95205-2012-03-06
  19. https://www.ndtv.com/india-news/will-boycott-manohar-parrikar-bjp-government-functions-goa-rss-chief-1414122
  20. https://www.financialexpress.com/india-news/manohar-parrikar-cheating-goa-rss-chief-subhash-velingkar/363836/
  21. https://www.indiatoday.in/assembly-elections-2012/goa/story/polls-2012-bjp-wins-simple-majority-in-goa-95205-2012-03-06
  22. "ಆರ್ಕೈವ್ ನಕಲು". Archived from the original on 2017-01-09. Retrieved 2020-07-21.
  23. https://www.navhindtimes.in/bbsm-is-making-moi-an-ego-issue-parrikar/
  24. https://www.indiatoday.in/pti-feed/story/previous-cong-govt-responsible-for-moi-mess-in-goa-parrikar-491102-2016-01-18
  25. http://www.daijiworld.com/news/newsDisplay.aspx?newsID=139554
  26. https://scroll.in/article/810384/bjp-rss-spar-over-english-medium-schools-in-goa-but-is-this-just-an-act-ahead-of-the-2017-polls
  27. "ಆರ್ಕೈವ್ ನಕಲು". Archived from the original on 2020-07-21. Retrieved 2020-07-21.
  28. https://englishnews.thegoan.net/story.php?id=9864
  29. https://timesofindia.indiatimes.com/city/goa/RSS-appoints-new-Goa-unit-chief-secretary/articleshow/54267955.cms
  30. https://www.news18.com/news/politics/400-rss-volunteers-resign-over-goa-chief-subhash-velingkars-sacking-1287876.html
  31. https://www.thehindu.com/news/national/other-states/Velingkar-supporters-form-Goa-RSS-Prant/article14618087.ece
  32. https://indianexpress.com/article/india/india-news-india/rss-rebel-group-led-by-subhash-velingkar-holds-convention-in-goa-3025879/
  33. https://indianexpress.com/article/india/india-news-india/goa-rss-rebel-subhash-velingkar-announces-new-party-ahead-of-polls-next-year-3061157/
  34. https://timesofindia.indiatimes.com/city/goa/gpp-warns-gsm-about-keeping-ties-with-mgp/articleshow/56301700.cms
  35. "ಆರ್ಕೈವ್ ನಕಲು". Archived from the original on 2019-07-12. Retrieved 2020-07-21.
  36. https://thewire.in/politics/goa-polls
  37. http://www.uniindia.com/mgp-release-list-18-candidates-gsm-4-for-assembly-elections-in-goa/other/news/748798.html
  38. https://indianexpress.com/article/india/india-news-india/former-goa-minister-suresh-amonkar-joins-gsm-3731218/