ಗೋವರ್ಧನ ಗಿರಿಒಂದು ಪರ್ವತ. ಯಮುನಾ ನದೀತೀರದಲ್ಲಿ ಬೃಂದಾವನದ ಹತ್ತಿರವಿದೆ. ಒಮ್ಮೆ ನಂದಗೋಕುಲದ ಗೊಲ್ಲರು ಇಂದ್ರನಿಗಾಗಿ ಒಂದು ಯಾಗವನ್ನು ಏರ್ಪಡಿಸಬೇಕೆಂದು ಸಂಕಲ್ಪಿಸಿದ್ದರು. ಯಾಗದ ಬದಲು ಗೋವರ್ಧನ ಗಿರಿಯನ್ನೇ ಪೂಜಿಸಬೇಕೆಂದು ಶ್ರೀಕೃಷ್ಣ ಗೊಲ್ಲರಿಗೆ ಸೂಚಿಸಿದ. ಅವರು ಕೃಷ್ಣನ ಸೂಚನೆಯಂತೆ ಗಿರಿಯನ್ನು ಪೂಜಿಸಲು ಅಣಿಯಾದರು. ಆಗ ಇಂದ್ರ ಕ್ರುದ್ಧನಾಗಿ ಗೋಕುಲ ಮುಳುಗಿಹೋಗುವಂತೆ ಮಳೆ ಸುರಿಸಲಾರಂಭಿಸಿದ. ಆಗ ಕೃಷ್ಣ ತನ್ನ ಕಿರಿಬೆರಳಿನಿಂದ ಆ ಪರ್ವತವನ್ನು ಎತ್ತಿ ಕೊಡೆಯಂತೆ ಹಿಡಿದು ಅದರ ಕೆಳಗೆ ಗೊಲ್ಲರು ಮತ್ತು ಅವರ ದನಕರುಗಳು ರಕ್ಷಣೆ ಪಡೆಯುವಂತೆ ಮಾಡಿದ. ಇದು ಕೃಷ್ಣ ಎಸಗಿದ ಪವಾಡಗಳಲ್ಲಿ ಒಂದು. ಇದರಿಂದಾಗಿ ಕೃಷ್ಣನನ್ನು ಗೋವರ್ಧನ ಗಿರಿಧಾರಿ, ಗಿರಿಧರ ಮುಂತಾಗಿ ಭಕ್ತರು ಸ್ತುತಿಸಿದ್ದಾರೆ. ಈ ವಿಚಾರವಾಗಿ ಹರಿವಂಶ, ವಿಷ್ಣು ಪುರಾಣ, ಭಾಗವತ ಮತ್ತು ಭಾರತಗಳಲ್ಲಿ ಪ್ರಸ್ತಾಪಿಸಲಾಗಿದೆ.

Govardhan Hill Prem Mandir Vrindavan
ಗೋವರ್ಧನ ಗಿರಿಯ ಸಮೀಪದ ನೋಟ.
Krishna holding Govardhan hill from Smithsonian Institution’s collections

ಬಾಹ್ಯ ಸಂಪರ್ಕಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: