ಗೋಪಿನಾಥ್ ಕರ್ತಾ
ಗೋಪಿನಾಥ್ ಕರ್ತಾ (೨೬ ಜನವರಿ ೧೯೨೭ - ೧೮ ಜೂನ್ ೧೯೮೪) ಭಾರತೀಯ ಮೂಲದ ಸ್ಫಟಿಕಶಾಸ್ತ್ರಜ್ಞರಾಗಿದ್ದರು. ೧೯೬೭ ರಲ್ಲಿ, ಅವರು ರೈಬೋನ್ಯೂಕ್ಲೀಸ್ ಕಿಣ್ವದ ಆಣ್ವಿಕ ರಚನೆಯನ್ನು ನಿರ್ಧರಿಸಿದರು. ಇದು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸ್ಪಷ್ಟಪಡಿಸಿದ ಮತ್ತು ಪ್ರಕಟಿಸಿದ ಮೊದಲ ಪ್ರೋಟೀನ್ ರಚನೆಯಾಗಿದೆ.
ಗೋಪಿನಾಥ್ ಕರ್ತಾ | |
---|---|
ಜನನ | ೨೬ ಜನವರಿ ೧೯೨೭ ಕೇರಳ ರಾಜ್ಯದ ಆಲಪ್ಪುಳ ಬಳಿಯ ಚೆರ್ತಲಾ |
ಮರಣ | ೧೮ ಜೂನ್ ೧೯೮೪ |
ರಾಷ್ಟ್ರೀಯತೆ | ಭಾರತೀಯ |
ಕಾರ್ಯಕ್ಷೇತ್ರ | ಸ್ಫಟಿಕಶಾಸ್ತ್ರ |
ಸಂಸ್ಥೆಗಳು | ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ಕ್ಯಾ ವೆಂಡಿಷ್ ಪ್ರಯೋಗಾಲಯ ಕೆನಡಾದ ರಾಷ್ಟ್ರೀಯ ಸಂಶೋಧನಾ ಮಂಡಳಿ ಬ್ರೂಕ್ಲಿನ್ ಪಾಲಿಟೆಕ್ನಿಕ್ ಇನ್ಸ್ಟಿಟ್ಯೂಟ್ ರೋಸ್ವೆಲ್ ಪಾರ್ಕ್ ಸಮಗ್ರ ಕ್ಯಾನ್ಸರ್ ಕೇಂದ್ರ |
ಅಭ್ಯಸಿಸಿದ ವಿದ್ಯಾಪೀಠ | ಮದ್ರಾಸ್ ವಿಶ್ವವಿದ್ಯಾಲಯ ಆಂಧ್ರ ವಿಶ್ವವಿದ್ಯಾಲಯ |
ಶೈಕ್ಷಣಿಕ ಸಲಹೆಗಾರರು | ಜಿ.ಎನ್.ರಾಮಚಂದ್ರ |
ಆರಂಭಿಕ ಜೀವನ ಮತ್ತು ಶಿಕ್ಷಣ
ಬದಲಾಯಿಸಿಗೋಪಿನಾಥ್ ಕರ್ತಾ ಅವರು ಕೇರಳ ರಾಜ್ಯದ ಆಲಪ್ಪುಳ ಬಳಿಯ ಚೆರ್ತಲಾದಲ್ಲಿ ಜನಿಸಿದರು. ಆಲಪ್ಪುಳದ ಸನಾತನಧರ್ಮ ವಿದ್ಯಾಶಾಲೆಯಲ್ಲಿ ಅವರು ತಮ್ಮ ವಿದ್ಯಾಭ್ಯಾಸ ಮಾಡಿದರು. ಅವರು ತಿರುವನಂತಪುರಂ ಕಾಲೇಜಿನಲ್ಲಿ ಗಣಿತ, ಬೌತಶಾಸ್ತ್ರ ಮತ್ತು ರಸಾಯನಶಾಸ್ತ್ರದಲ್ಲಿ ಪದವಿಪೂರ್ವ ಡಿಪ್ಲೊಮಾವನ್ನು ಮುಗಿಸಿದರು. ೧೯೫೦ ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಬೌತಶಾಸ್ತ್ರದಲ್ಲಿ ಬಿ.ಎಸ್ಸಿ.ಅನ್ನು ಪದೆದರು. ೧೯೫೧ ರಲ್ಲಿ ವಿಶಾಖಪಟ್ಟಣಂನ ಆಂಧ್ರ ವಿಶ್ವವಿದ್ಯಾಲಯದಲ್ಲಿ ಗಣಿತಶಾಸ್ತ್ರದಲ್ಲಿ ಬಿ.ಎಸ್ಸಿ.ಅನ್ನು ಪಡೆದರು. ಅವರು ೧೯೫೨ ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ತಮ್ಮ ಪದವಿ ಅಧ್ಯಯನವನ್ನು ಪ್ರಾರಂಭಿಸಿದರು. ಪದವಿ ವಿದ್ಯಾರ್ಥಿಯಾಗಿ, ಅವರು ಮತ್ತು ರಾಮಚಂದ್ರನ್ ಕಾಲಜನ್ ಅಣುವಿನ ಟ್ರಿಪಲ್ ಹೆಲಿಕ್ಸ್ ರಚನೆಯ ಮೇಲೆ ಕೆಲಸ ಮಾಡಿದರು. [೧]
ವೃತ್ತಿ
ಬದಲಾಯಿಸಿ೧೯೫೯ ರಲ್ಲಿ, ಅವರು ಡಾ.ಡೇವಿಡ್ ಹಾರ್ಕರ್ ಮತ್ತು ಡಾ.ಜೆಕ್ ಬೆಲ್ಲೊ ಅವರೊಂದಿಗೆ ಕೆಲಸ ಮಾಡಲು ಬ್ರೂಕ್ಲಿನ್ ಪಾಲಿಟ್‌ಕ್ನಿಕ್ ಇನ್ಸ್ಟಿಟ್ಯೂಟ್‌ಗೆ ತೆರಳಿದರು. ಅದೇ ವರ್ಷದ ನಂತರ, ಇಡೀ ಬ್ರೂಕ್ಲಿನ್ ಪಾಲಿಟ್‌ಕ್ನಿಕ್ ಇನ್ಸ್ಟಿಟ್ಯೂಟ್‌ನ ಸ್ಫಟಿಕಶಾಸ್ತ್ರದ ಗುಂಪು ನ್ಯೂಯಾರ್ಕ್ ಬಫಲೋದಲ್ಲಿರುವ ರೋಸ್ವೆಲ್ ಪಾರ್ಕ್ ಸಮಗ್ರ ಕ್ಯಾನ್ಸರ್ ಕೇಂದ್ರಕ್ಕೆ ಸ್ಥಳಾಂತರಗೊಂಡಿತು.[೨] ಅವರು ತಮ್ಮ ಜೀವನದ ಕೊನೆಯವರೆಗೂ ರೋಸ್ವೆಲ್ ಪಾರ್ಕ್‌ನಲ್ಲಿ ಇದ್ದರು. ೧೯೭೨ ರಲ್ಲಿ ಅವರು ಕ್ಯೋಟೋ ವಿಶ್ವವಿದ್ಯಾಲಯದಲ್ಲಿ ಜೈವಿಕ ಭೌತಶಾಸ್ತ್ರದ ಸಂದರ್ಶಕ ಪ್ರಾಧ್ಯಾಪಕರಾಗಿ ಎಂಟು ತಿಂಗಳುಗಳನ್ನು ಕಳೆದರು.
ಉಲ್ಲೇಖಗಳು
ಬದಲಾಯಿಸಿ- ↑ "Model scientist". The Hindu. 30 April 2001.
- ↑ "Crystallographers" (PDF). Journal of Applied Crystallography.