Expression error: Unexpected < operator.

ಗ್ಯಾಸ್ ಅಥಾರಿಟಿ ಇಂಡಿಯಾ ಲಿಮಿಟೆಡ್ (ಗೈಲ್)
ಸಂಸ್ಥೆಯ ಪ್ರಕಾರಸರ್ಕಾರಿ ಸೌಮ್ಯದ ಉದ್ಯಮ
Public (ಬಿಎಸ್‌ಇ: 532155, ಎನ್‌ಎಸ್‌ಇGAIL)
ಸ್ಥಾಪನೆ೧೯೮೪
ಮುಖ್ಯ ಕಾರ್ಯಾಲಯಹೊಸ ದೆಹಲಿ, ಭಾರತ
ಪ್ರಮುಖ ವ್ಯಕ್ತಿ(ಗಳು)ಶ್ರಿ ಬಿ. ಸಿ. ತ್ರಿಪಾಠಿ
(Chairman & MD)[]
ಉದ್ಯಮತೈಲ ಮತ್ತು ಅನಿಲ
ಉತ್ಪನ್ನನೈಸರ್ಗಿಕ ಅನಿಲ
ಪೆಟ್ರೋಕೆಮಿಕಲ್
ಇಂಧನ
ಲ್ಯೂಬ್ರಿಕೆಂಟ್
ಆದಾಯ ೨೪,೯೯೬ ಕೋಟಿ (ಯುಎಸ್$೫.೫೫ ಶತಕೋಟಿ) (2009-10)
ನಿವ್ವಳ ಆದಾಯ ೩,೧೪೦ ಕೋಟಿ (ಯುಎಸ್$೬೯೭.೦೮ ದಶಲಕ್ಷ) (2009-10)
ಉದ್ಯೋಗಿಗಳು5,000
ಜಾಲತಾಣGailonline.com

ಗೈಲ್(ಇಂಡಿಯಾ)ಲಿಮಿಟೆಡ್ (ಬಿಎಸ್‌ಇ: 532155, ಎನ್‌ಎಸ್‌ಇGAIL), ಇದು ಭಾರತ ಸರ್ಕಾರದ ಸ್ವಾಮ್ಯದಲ್ಲಿರುವ ಅತ್ಯಂತ ದೊಡ್ಡ ಇಂಧನಾನಿಲ ರವಾನೆಯ ಸೌಕರ್ಯ ಕಲ್ಪಿಸುವ ಸಂಸ್ಥೆಯಾಗಿದೆ. ಇದು ನಿಸರ್ಗಾನಿಲ ವ್ಯಾಲ್ಯೂ ಚೈನ್ ನ (ಮಾರುಕಟ್ಟೆಯಲ್ಲಿನ ಬೇಡಿಕೆಗಳನ್ನು ಪೂರೈಸಲು ಹಲವಾರು ಕಂಪನಿಗಳು ಒಟ್ಟಾಗಿ ಕಾರ್ಯ ನಿರ್ವಹಿಸುವುವು) ಹೀಗೆ ಎಲ್ಲ ಅಂಶಗಳನ್ನು ಒಟ್ಟುಗೂಡಿಸಿಕೊಂಡಿರುತ್ತದೆ. ಫೋರ್ಬ್ಸ್ ೨೦೦೭ರ ಪಟ್ಟಿಯ ಪ್ರಕಾರ ಗೈಲ್ ವಿಶ್ವದ ೨,೦೦೦ ಅತ್ಯಂತ ದೊಡ್ಡ ಸಾರ್ವಜನಿಕ ಸಂಸ್ಥೆಗಳಲ್ಲಿ ಒಂದೆನಿಸಿದೆ.[]

ಇತಿಹಾಸ

ಬದಲಾಯಿಸಿ

ಸಂಸ್ಥೆಯು ಈ ಹಿಂದೆ ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ಎಂಬ ಹೆಸರಿನಿಂದ ಪರಿಚಿತವಾಗಿತ್ತು. ಇದು ಭಾರತದ ಪ್ರಮುಖ ಅನಿಲ ರವಾನೆ ಹಾಗು ಮಾರಾಟದ ಸಂಸ್ಥೆಯಾಗಿದೆ. ಇದನ್ನು ಭಾರತ ಸರ್ಕಾರವು ಆಗಸ್ಟ್ ೧೯೮೪ರಲ್ಲಿ ಇಂಧನಾನಿಲ ಕ್ಷೇತ್ರದಲ್ಲಿ ಮೂಲಭೂತ ವ್ಯವಸ್ಥೆ ಕಲ್ಪಿಸಲು ಸ್ಥಾಪನೆ ಮಾಡಿತು.

ಗೈಲ್ ೧೯೯೧ರಲ್ಲಿ ೨೮೦೦ಕಿಮೀ ಉದ್ದದ ಹಜಿರಾ-ವಿಜೈಪುರ್-ಜಗದೀಶಪುರ್(HVJ) ಸಾಗಣೆ ಮಾರ್ಗದ ಮೂಲಕ ತನ್ನ ಕಾರ್ಯಚಟುವಟಿಕೆ ಆರಂಭಿಸಿತು. ಇದು ಮೂರು ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್(LPG)(ದ್ರವೀಕೃತ ಪೆಟ್ರೊಲಿಯಮ್ ಅನಿಲ) ಘಟಕಗಳನ್ನು ೧೯೯೧-೯೩ರಲ್ಲಿ ಸ್ಥಾಪನೆ ಮಾಡಿತು. ಅಲ್ಲದೇ ಕೆಲವು ಪ್ರಾದೇಶಿಕ ಸಾಗಣೆ ಮಾರ್ಗಗಳನ್ನು ಸ್ವಾಧೀನಪಡಿಸಿಕೊಂಡಿತು. ಈ ಮೂಲಕ ಭಾರತದ ಹಲವು ಭಾಗಗಳಲ್ಲಿ ಗೈಲ್ ತನ್ನ ಇಂಧನಾನಿಲ ಸಾಗಣೆ ಆರಂಭಿಸಲು ಸಾಧ್ಯವಾಯಿತು.

ಗೈಲ್, ೧೯೯೭ರಲ್ಲಿ ನವದೆಹಲಿಯಲ್ಲಿ ಒಂಬತ್ತು ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್(CNG) ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ನಗರಗಳಲ್ಲಿ ಇಂಧನಾನಿಲದ ವಿತರಣೆಯನ್ನೂ ಆರಂಭಿಸಿತು.

ಗೈಲ್ ಉತ್ತರ ಭಾರತದ ಏಕೈಕ ಪೆಟ್ರೋಕೆಮಿಕಲ್ ಘಟಕವನ್ನು ಪಾಟದಲ್ಲಿ ೧೯೯೯ರಲ್ಲಿ ಸ್ಥಾಪನೆ ಮಾಡಿತು. ಗೈಲ್ ಇನ್ಫ್ರಾಸ್ಟ್ರಕ್ಚರ್ ಪ್ರೊವೈಡರ್ ಕ್ಯಾಟಗರಿ II ಪರವಾನಗಿ ಪಡೆದ ಮೊದಲ ಸಂಸ್ಥೆಯಾಗಿದೆ. ಇದು ೨೦೦೧ರಲ್ಲಿ ದೆಹಲಿ-ವಿಜೈಪುರ್ ವಲಯದಲ್ಲಿ ಬ್ಯಾಂಡ್ ವಿಸ್ತಾರವನ್ನು ತನ್ನ ದೂರಸಂಪರ್ಕ ಉದ್ಯಮ GAILTELನ ಮೂಲಕ ಗುತ್ತಿಗೆ ಪಡೆದು, ಸರ್ವೀಸ್ ಲೆವೆಲ್ ಅಗ್ರಿಮೆಂಟ್ ಗೆ ಸಹಿ ಹಾಕಿದ ದೇಶದ ಮೊದಲ ಸಂಸ್ಥೆಯಾಗಿದೆ. ಹೀಗೆ ೨೦೦೧ರಲ್ಲಿ ಗೈಲ್ ವಿಶ್ವದ ಅತ್ಯಂತ ಉದ್ದದ ಹಾಗು ಭಾರತದ ಮೊದಲ ದೇಶಾದ್ಯಂತ LPG ಟ್ರ್ಯಾನ್ಸ್ಮಿಶನ್ ಪೈಪ್ ಲೈನ್ ನ್ನು ಜಾಮ್ ನಗರದಿಂದ ಲೋಣಿವರೆಗೂ ಆರಂಭಿಸಿತು.

ಇಂದು ಗೈಲ್, ಇಂಧನಾನಿಲ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರ ಜೊತೆಯಲ್ಲಿ ಪೆಟ್ರೋಕೆಮಿಕಲ್ಸ್, ದೂರಸಂಪರ್ಕ ಹಾಗು ದ್ರವ ಹೈಡ್ರೋಕಾರ್ಬನ್ ಉತ್ಪಾದನೆಯಲ್ಲಿ ತನ್ನ ಯೋಜನಾ ವ್ಯವಸ್ಥೆಯ ವೈವಿಧ್ಯೀಕರಣದಿಂದ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸಿದೆ. ಸಂಸ್ಥೆಯು, ವಿದ್ಯುತ್, ಲಿಕ್ವಿಫೈಡ್ ನ್ಯಾಚುರಲ್ ಗ್ಯಾಸ್ ನ ಮರು ಅನಿಲೀಕರಣ, ನಗರದಲ್ಲಿ ಇಂಧನಾನಿಲದ ಹಂಚಿಕೆ ಹಾಗು ಸಾಮಾನ್ಯ ಷೇರುಗಳ ಸಂಗ್ರಹಿಸಿ ಪರಿಶೋಧನೆ & ಉತ್ಪಾದನೆ ಹಾಗು ಜಂಟಿ ಉದ್ಯಮಗಳ ಮೂಲಕ ತನ್ನ ಕಾರ್ಯಕ್ಷೇತ್ರ ವಿಸ್ತರಿಸಿಕೊಂಡಿದೆ.ತನ್ನ ಕಾರ್ಪೋರೆಟ್ ಸ್ವರೂಪಕ್ಕೆ ಹೊಸದಾಗಿ ಇಂಧನ ಉತ್ಪಾದನಾ ವಿಭಾಗವನ್ನು ಸಂಘಟಿಸಿದ ನಂತರ, ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ, ನವೆಂಬರ್ ೨೨, ೨೦೦೨ರಲ್ಲಿ ಗೈಲ್(ಇಂಡಿಯಾ) ಲಿಮಿಟೆಡ್ ಎಂದು ಮರುನಾಮಕರಣಗೊಂಡಿತು.

ಗೈಲ್ ಟೆಲ್(GAILTEL)

ಬದಲಾಯಿಸಿ

ಗೈಲ್ ಟೆಲ್, ಗೈಲ್ ಇಂಡಿಯಾ ಲಿಮಿಟೆಡ್ ನ ದೂರಸಂಪರ್ಕ ವಿಭಾಗವಾಗಿದೆ. ಇದು ಖಾಸಗಿ ವಲಯದವರಿಗೆ ದೂರಸಂಪರ್ಕ ಸೇವೆಗಳನ್ನು ವಾಣಿಜ್ಯಕವಾಗಿ ಒದಗಿಸುವುದರ ಜೊತೆಗೆ ಗೈಲ್ ನ ಆಂತರಿಕ ದೂರಸಂಪರ್ಕ ಅಗತ್ಯಗಳಿಗೆ ಪ್ರಮುಖ ನೆರವು ನೀಡುತ್ತದೆ. ಗೈಲ್ ಟೆಲ್, ಭಾರತದುದ್ದಕ್ಕೂ ಸುಮಾರು ೧೩೦೦೦ ಕಿಮೀ ಮಾರ್ಗದ (ಆಪ್ಟಿಕ್ ಫೈಬರ್ ಕೇಬಲ್)OFC ನೆಟ್ವರ್ಕ್ ಹಂಚಿಕೆಯ ಕಾರ್ಯ ಮಾಡುವುದರ ಜೊತೆಗೆ ಅದರ ನಿರ್ವಹಣೆಯನ್ನೂ ಮಾಡುತ್ತದೆ. ಗೈಲ್ ಟೆಲ್ ನ USP ಎಂದರೆ - ಇದು ಇಂಧನಾನಿಲ ರವಾನೆ ಮಾರ್ಗ ಹಾಗು ಅಧಿಕ Qosನೊಂದಿಗೆ ಸುರಕ್ಷಿತ OFC ನೆಟ್ವರ್ಕ್(ಜಾಲ) ಆಗಿದೆ.

ಪ್ರಸಕ್ತ, ಗೈಲ್ ಟೆಲ್ ಮೂರು ದೂರಸಂಪರ್ಕ ಪರವಾನಗಿಗಳ ಅಡಿ ಕಾರ್ಯನಿರ್ವಹಿಸುತ್ತದೆ - ಇವುಗಳೆಂದರೆ - IP-I, IP-II ಹಾಗು ISP-A.

ಗೈಲ್ ಟೆಲ್, ಭಾರತದ ಬಹುತೇಕ ಎಲ್ಲ ದೂರಸಂಪರ್ಕ ಕಾರ್ಯನಿರ್ವಾಹಕರಿಗೆ ತನ್ನ ಸೇವೆ ಒದಗಿಸುತ್ತದೆ; ಉದಾಹರಣೆಗೆ ವೊಡಾಫೋನ್, IDEA ಸೆಲ್ಯುಲಾರ್, ಟಾಟಾ ಟೆಲಿ, ಏರ್ ಟೆಲ್. ಇದು TULIP, ಫ್ರಾನ್ಸ್ ಟೆಲಿಕಾಂನಂತಹ ISPಗಳಿಗೂ ಸಹ ತನ್ನ ಸೇವೆ ಒದಗಿಸುತ್ತದೆ.

ಗೈಲ್ ಟೆಲ್, ಈಶಾನ್ಯ ರಾಜ್ಯಗಳು, JNK ಜನಕ್, ಒಡಿಶಾ,ಬಿಹಾರ್, ಜಾರ್ಖಂಡ್, HP(ಹಿಮಾಚಲ ಪ್ರದೇಶ) ಹಾಗು ಉತ್ತರಾಂಚಲ ರಾಜ್ಯಗಳನ್ನು ಹೊರತುಪಡಿಸಿ, ಭಾರತದಾದ್ಯಂತ ಸುಮಾರು ೧೪೦೦೦ಕಿಮೀಗಳಷ್ಟು OFC ನೆಟ್ವರ್ಕ್ ಹಂಚಿಕೆಯ ಒಡೆತನದೊಂದಿಗೆ ಅದರ ನಿರ್ವಹಣೆ ಮಾಡುತ್ತದೆ. ದೂರಸಂಪರ್ಕ ಕೇಂದ್ರ ಕಚೇರಿಯು ನೋಯಿಡಾದಲ್ಲಿ ಸ್ಥಾಪಿತವಾಗಿದ್ದು, ನೆರವಿಗಾಗಿ ವಲಯ ಕಛೇರಿಗಳು ಪ್ರಮುಖ ನಗರಗಳಲ್ಲಿ ಸ್ಥಾಪನೆಯಾಗಿವೆ.

ದೂರಸಂಪರ್ಕ ಉದ್ದಿಮೆಯು, ಗೈಲ್ ನ ಸಮಗ್ರತೆಯ ಪರಿಣಾಮವಾಗಿದೆ. ತನ್ನ ಆಂತರಿಕ ಸಂವಹನ ಹಾಗು SCADA ಅಗತ್ಯಗಳಿಗೆ ಗೈಲ್, OFC ನೆಟ್ವರ್ಕ್ ನ್ನು ಸ್ಥಾಪಿಸಬೇಕಾಗಿದೆ. ಈ ರೀತಿಯಾಗಿ ತಾನೇ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಂಡು ಗೈಲ್ ತನ್ನ ಉದ್ಯಮಕ್ಕೆ ಹೆಚ್ಚಿನ ಆದಾಯ ತಂದುಕೊಡುವ ಮತ್ತೊಂದು ವಿಭಾಗವನ್ನು ಆರಂಭಿಸಿತು.

ಕೊಳವೆ ಮಾರ್ಗದ ಮೂಲಕ ೧೦೦ಕ್ಕೂ ಹೆಚ್ಚಿನ ನಗರಗಳಿಗೆ ಅನಿಲ (CNG) ಪೂರೈಕೆ ಮಾಡುವ ಯೋಜನೆಗಳ ಜೊತೆಯಲ್ಲಿ, ಗೈಲ್ ಟೆಲ್, ತಂತುರಚನೆಗಳ ಮೂಲಕ ಪ್ರತ್ಯೇಕ ಗೃಹಬಳಕೆಗಳಿಗೆ ತನ್ನ ಸೇವೆ ಒದಗಿಸಿ ಸಮಷ್ಟಿ ಪರಿಣಾಮವನ್ನು ವೀಕ್ಷಿಸಬಹುದಾಗಿದೆ. ಪ್ರಮುಖ ನಗರಗಳಲ್ಲಿ ಕೊಳವೆಗಳ ಮೂಲಕ ಅನಿಲವು ಪೂರೈಕೆಯಾಗುತ್ತದೆ. ಅಲ್ಲದೇ OFCಯನ್ನು (ಮೈಕ್ರೋ OFC) ಇಂಧನಾನಿಲದ ಮಾರ್ಗಗಳೊಂದಿಗೆಯೂ ಅಳವಡಿಸಬಹುದು. ಇದು ನಗರದ OFC ನೆಟ್ವರ್ಕ್ ನ್ನು ಇತರ ದೂರಸಂಪರ್ಕ ನಿರ್ವಾಹಕರಿಗೆ ವಿಸ್ತರಿಸಿ ಮಾರಾಟಮಾಡುವ ಅನುಕೂಲಗಳನ್ನೂ ಸಹ ಹೊಂದಿದೆ. ನಗರದ ಎಲ್ಲ ಅನಿಲ ಉದ್ದಿಮೆದಾರರು ಹಾಗು ಗೈಲ್ ಟೆಲ್ ಸೌಕರ್ಯವನ್ನು ಸರಿಯಾದ ರೀತಿಯ ಬಳಕೆ ಹಾಗು ಉಪಯೋಗಿಸಿಕೊಂಡರೆ, ಇದು ಭವಿಷ್ಯದಲ್ಲಿ ಅತ್ಯಂತ ದೊಡ್ಡ ಅನುಕೂಲವಾಗಿ ಪರಿಣಮಿಸುವ ಸಾಧ್ಯತೆಯಿದೆ.

ಗೈಲ್ ಗ್ಯಾಸ್ ಲಿಮಿಟೆಡ್ (GAIL GAS LTD)

ಬದಲಾಯಿಸಿ

ಗೈಲ್ ಗ್ಯಾಸ್, ಗೈಲ್(I)ಲಿಮಿಟೆಡ್ ನ ಸಂಪೂರ್ಣ ಒಡೆತನದಲ್ಲಿರುವ ಉಪ ಘಟಕವಾಗಿದೆ. ಇದು ೨೭.೦೫.೨೦೦೮ರಲ್ಲಿ ಸಂಘಟಿತವಾಯಿತು. ಇದು ಭಾರತ ಹಾಗು ವಿದೇಶದಲ್ಲಿ, CNG & ಆಟೋ LPGಯನ್ನು ವಾಹನಗಳಿಗೆ ಇಂಧನವಾಗಿ ವಿತರಣೆ ಹಾಗು ಮಾರಾಟ ಮಾಡುತ್ತದೆ. ಈಗ PNGಯನ್ನು ಗೃಹಬಳಕೆಗೆ/ವಾಣಿಜ್ಯ ಬಳಕೆಗೆ/ ಕೈಗಾರಿಕಾ ಉದ್ದೇಶಗಳಿಗೆ ಬಳಸಲಾಗುತ್ತದೆ. ಪ್ರಬಲ ಉದ್ದಿಮೆಗಳಿಗೆ OFCಯ ಸ್ಥಾಪನೆ/ಕೊಳವೆಮಾರ್ಗ. ಭಾರತದ ಹಲವಾರು ನಗರಗಳಲ್ಲಿ ಹಾಗು ಹೆದ್ದಾರಿಗಳಿಗಾಗಿ CNG ಕಾರಿಡಾರ್ ಗಳ ನಿರ್ಮಾಣಕ್ಕೆ ಬಂಡವಾಳ ಹೂಡಿಕೆ ಮತ್ತು ಅಗತ್ಯವಿರುವ ಮೂಲಭೂತ ಸೌಕರ್ಯಗಳ ಸ್ಥಾಪನೆ. ನಿಸರ್ಗಾನಿಲ , CNG, ಆಟೋ LPG ಮುಂತಾದವುಗಳ ವಿತರಣೆ & ಮಾರಾಟಗಾರಿಕೆಗೆ ಸಂಬಂಧಿಸಿದಂತೆ ಜಂಟಿ ಉದ್ಯಮವಾಗಿದೆ. ನಗರ ಗ್ಯಾಸ್ ವಿತರಣೆ ವಿಭಾಗದಲ್ಲಿ, ಗೈಲ್ ಒಂಬತ್ತು JV ಸಂಸ್ಥೆಗಳನ್ನು ಹೊಂದಿದೆ.

ಉಲ್ಲೇಖಗಳು

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2010-02-05. Retrieved 2011-02-02.
  2. "Forbes Global 2000".


"https://kn.wikipedia.org/w/index.php?title=ಗೈಲ್&oldid=1063654" ಇಂದ ಪಡೆಯಲ್ಪಟ್ಟಿದೆ