ಗುರು (೨೦೧೨ರ ಚಲನಚಿತ್ರ)
ಗುರು ಜಗ್ಗೇಶ್ ನಿರ್ದೇಶನದ 2012 ರ ಕನ್ನಡ ಭಾಷೆಯ ಸಾಹಸ ಚಿತ್ರವಾಗಿದೆ . ಚಿತ್ರದಲ್ಲಿ ಅವರ ಮಕ್ಕಳಾದ ಗುರುರಾಜ್ ಮತ್ತು ಯತಿರಾಜ್ ಪುರುಷ ನಾಯಕರಾಗಿ ಮತ್ತು ರಶ್ಮಿ ಗೌತಮ್ ಮಹಿಳಾ ನಾಯಕಿಯಾಗಿ ನಟಿಸಿದ್ದಾರೆ. ನಿರ್ದೇಶಕರಾಗಿ ಜಗ್ಗೇಶ್ ಅವರ ಮೊದಲ ಚಿತ್ರ ಇದು. ಇದು ತಮಿಳು ಭಾಷೆಯ ಮೌನ ಗುರು ಚಿತ್ರದ ರಿಮೇಕ್ ಆಗಿದೆ.
ಗುರು | |
---|---|
Directed by | ಜಗ್ಗೇಶ್ |
Story by | ಶಾಂತ ಕುಮಾರ್ |
Produced by | ಪರಿಮಳಾ ಜಗ್ಗೇಶ್ |
Starring | ಗುರುರಾಜ್, ರಶ್ಮಿ ಗೌತಮ್, ಯತಿರಾಜ್, ಸುಧಾರಾಣಿ, ಶೋಭರಾಜ್, ಶ್ರೀನಿವಾಸ ಮೂರ್ತಿ |
Cinematography | ರಮೇಶ್ ಬಾಬು |
Edited by | ಕೆ. ಎಂ. ಪ್ರಕಾಶ್ |
Music by | ವಿನಯ್ ಚಂದ್ರ |
Production company | ಗುರುರಾಜ್ ಫಿಲಮ್ಸ್ |
Release date | 2012 ರ ನವಂಬರ್ 16 |
Running time | 130 ನಿಮಿಷಗಳು[೧] |
Country | ಭಾರತ |
Language | ಕನ್ನಡ |
ಪಾತ್ರವರ್ಗ
ಬದಲಾಯಿಸಿಉತ್ಪಾದನೆ
ಬದಲಾಯಿಸಿಈ ಚಿತ್ರವು ನಟ ಜಗ್ಗೇಶ್ ಅವರ ನಿರ್ದೇಶಕರಾಗಿ ಚೊಚ್ಚಲ ಚಿತ್ರವಾಗಿದ್ದು ತನಗೆ ಚಿಮ್ಮುಹಲಗೆಯಾಗುವಂತೆ ತಮ್ಮ ಮಗನ ಒತ್ತಾಯದ ಮೇರೆಗೆ ಈ ಯೋಜನೆಯನ್ನು ಕೈಗೆತ್ತಿಕೊಂಡಿದ್ದೇನೆ ಎಂದು ಜಗ್ಗೇಶ್ ಹೇಳಿದರು. ಈ ಚಿತ್ರವನ್ನು ಜಗ್ಗೇಶ್, ಗುರುರಾಜ್ ಫಿಲಂಸ್ ಅವರು ಅಂದು ಆರಂಭಿಸಿದ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. [೨]
ಚಿತ್ರದಲ್ಲಿನ ತಮ್ಮ ಪಾತ್ರಕ್ಕಾಗಿ ತಯಾರಿ ಮಾಡಲು, ಗುರುರಾಜ್ ಅವರು ಕಾಂಬೋಡಿಯಾದಲ್ಲಿ ಐದೂವರೆ ತಿಂಗಳ ಕಾಲ ಕಿಕ್ ಬಾಕ್ಸಿಂಗ್ ಮತ್ತು ಇತರ ಸಮರ ಕಲೆಗಳಲ್ಲಿ ತರಬೇತಿ ಪಡೆದರು. [೨] ಜೂನ್ 2012 [೩] ಚಿತ್ರೀಕರಣ ಪ್ರಾರಂಭವಾಗುವ ಮೊದಲು ಮೇ 2012 ರಲ್ಲಿ ಚಲನಚಿತ್ರವನ್ನು ಮಂತ್ರಾಲಯದಲ್ಲಿ ಪ್ರಾರಂಭಿಸಲಾಯಿತು.
ಧ್ವನಿಮುದ್ರಿಕೆ
ಬದಲಾಯಿಸಿವಿನಯ್ ಚಂದ್ರ ಅವರು ಧ್ವನಿಮುದ್ರಿಕೆಗೆ ಸಂಗೀತ ಸಂಯೋಜಿಸಿದ್ದಾರೆ ಮತ್ತು ರಾಮನಾರಾಯಣ್ ಮತ್ತು ಕವಿರಾಜ್ ಸಾಹಿತ್ಯವನ್ನು ಬರೆದಿದ್ದಾರೆ. ಧ್ವನಿಮುದ್ರಿಕೆಯು ನಾಲ್ಕು ಹಾಡುಗಳನ್ನು ಒಳಗೊಂಡಿದೆ. [೪]
ಹಾಡುಗಳ ಪಟ್ಟಿ | ||||
---|---|---|---|---|
ಸಂ. | ಹಾಡು | ಸಾಹಿತ್ಯ | ಹಾಡುಗಾರರು | ಸಮಯ |
1. | "ಅಂಕಿತ" | ರಾಮನಾರಾಯಣ್ | ಕಾರ್ತಿಕ್ , ಅನುರಾಧಾ ಭಟ್ | 4:16 |
2. | "ಏನು ಪಾಪ ಮಾಡಿದೆ" | ಕವಿರಾಜ್ | ರಾಜೇಶ್ ಕೃಷ್ಣನ್ | 3:31 |
3. | "ಗುರು" | ರಾಮನಾರಾಯಣ್ | ಜಗ್ಗೇಶ್ | 3:44 |
4. | "ಮನಸೇ" | ಕವಿರಾಜ್ | ವಿನಯ ಚಂದ್ರ | 4:43 |
ಒಟ್ಟು ಸಮಯ: | 16:14 |
ವಿಮರ್ಶೆಗಳು
ಬದಲಾಯಿಸಿಗುರು ಚಿತ್ರದ ಬಿಡುಗಡೆಯ ನಂತರ ವಿಮರ್ಶಕರಿಂದ ಸಾಧಾರಣದಿಂದ ಧನಾತ್ಮಕವರೆಗೆ ಪ್ರತಿಕ್ರಿಯೆಗಳು ಸಿಕ್ಕವು. ದಿ ಟೈಮ್ಸ್ ಆಫ್ ಇಂಡಿಯಾದ ಜಿಎಸ್ ಕುಮಾರ್ ಚಿತ್ರಕ್ಕೆ 3.5/5 ರೇಟಿಂಗ್ ನೀಡಿ ನಿರ್ದೇಶನದ ಬಗ್ಗೆ ಹೀಗೆ ಬರೆದಿದ್ದಾರೆ, "ಜಗ್ಗೇಶ್ ಅವರ ಚೊಚ್ಚಲ ನಿರ್ದೇಶನವು ಸ್ಯಾಂಡಲ್ವುಡ್ಗೆ ಕೆಲವು ಅತ್ಯುತ್ತಮ ಚಲನಚಿತ್ರಗಳನ್ನು ನೀಡಿದ ಪ್ರತಿಭಾವಂತ ನಿರ್ದೇಶಕರ ಪಟ್ಟಿಗೆ ಅವರೂ ಸೇರಬಹುದು ಎಂಬುದನ್ನು ಸಾಬೀತುಪಡಿಸಿದೆ." ಅವರು "ಉತ್ತಮ ಸ್ಕ್ರಿಪ್ಟ್ , [ಗುರುರಾಜ್] ಅವರ ಅಭಿವ್ಯಕ್ತಿ ಮತ್ತು ಸಂಭಾಷಣೆಯ ಪ್ರಬುದ್ಧ ಅಭಿನಯ ,ಸಂಗೀತ ಮತ್ತು ಛಾಯಾಗ್ರಹಣ" ಗಳನ್ನು ಹೊಗಳಿದರು,. [೧] ರೆಡಿಫ್‌ನ ಶ್ರೀಕಾಂತ್ ಶ್ರೀನಿವಾಸ ಅವರು ಚಲನಚಿತ್ರಕ್ಕೆ 2.5/5 ನೀಡಿದರು, " ತಂಗಾಳಿಯಂಥ ನಿರೂಪಣೆ ಮತ್ತು ಕೆಲವು ಆಶ್ಚರ್ಯಕರವಾಗಿ ಚೆನ್ನಾಗಿ ಚಿತ್ರೀಕರಿಸಿದ ದೃಶ್ಯಗಳು ಮತ್ತು ನುಣುಪಾದ ಸಂಕಲನಕ್ಕಾಗಿ ವೀಕ್ಷಿಸಲು ಗುರು ಚಿತ್ರವು ಯೋಗ್ಯವಾಗಿದೆ" ಎಂದು ಪ್ರತಿಕ್ರಿಯಿಸಿದ್ದಾರೆ. [೫] ಆದಾಗ್ಯೂ ನ್ಯೂಸ್‌ಟ್ರಾಕ್‌ಇಂಡಿಯಾ ಚಲನಚಿತ್ರವನ್ನು 2/5 ರೇಟ್ ಮಾಡಿದೆ ಮತ್ತು ಚಿತ್ರವು ನಿರೀಕ್ಷೆಗೆ ತಕ್ಕಂತೆ ಇಲ್ಲ, ಆದರೆ ಒಮ್ಮೆ ನೋಡಬಹುದಾಗಿದೆ ಎಂದು ಹೇಳಿತು. [೬]
ಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ "Guru review". The Times of India. 16 November 2012. Retrieved 25 October 2014.
- ↑ ೨.೦ ೨.೧ "Kannada actor Jaggesh's love for his little Gururaj". dnaindia.com. 3 May 2012. Retrieved 25 October 2014.
- ↑ "Jaggesh turns director for son". The New Indian Express. 2 June 2012. Archived from the original on 4 ಮಾರ್ಚ್ 2016. Retrieved 25 October 2014.
- ↑ "Guru (Original Motion Picture Soundtrack) - EP". iTunes. Retrieved 25 October 2014.
- ↑ "Review: Guru is entertaining". Rediff.com. 16 November 2012. Retrieved 18 November 2012.
- ↑ "'Guru' doesn't live up to expectations (Kannada Movie Review)". Newstrackindia.com. 8 November 2012. Archived from the original on 26 ಏಪ್ರಿಲ್ 2016. Retrieved 18 November 2012.