ಗುರುಪ್ರಸಾದ್
ಪರಿಚಯ
ಬದಲಾಯಿಸಿಗುರುಪ್ರಸಾದ್ ಅವರು ಕನ್ನಡ ಚಲನಚಿತ್ರೋದ್ಯಮದಲ್ಲಿ ನಟ ಮತ್ತು ನಿರ್ದೇಶಕರಾಗಿದ್ದಾರೆ. ಗುರುಪ್ರಸಾದ್ ಅವರು ನವೆಂಬರ್ ೨, ೧೯೭೨ರಲ್ಲಿ ಕನಕಪುರದಲ್ಲಿ ಜನಿಸಿದರು. ಗುರುಪ್ರಸಾದ್ ಮೂಲತಃ ಕನಕಪುರದವರು. ಈಗ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ತಂದೆ ರಾಮಚಂದ್ರ ಕೆ.ಎಸ್ ಹಾಗೂ ತಾಯಿ ಉಷಾದೇವಿ. ಪತ್ನಿ ಆರತಿ ಕೆ. ಎನ್. ಅವರು ಪರದೆಯ ಮೇಲೆ ನೈಜ ರೀತಿಯಲ್ಲಿ ವಿಡಂಬನೆಯನ್ನು ಚಿತ್ರಿಸಲು ಹೆಸರುವಾಸಿಯಾಗಿದ್ದಾರೆ.[೧]
ಶಿಕ್ಷಣ
ಬದಲಾಯಿಸಿಬಾಲ್ಯ ಮತ್ತು ಪ್ರಾಥಮಿಕ ಶಿಕ್ಷಣವನ್ನು ಕನಕಪುರದಲ್ಲಿಯೇ ಬಿಎಸ್ಸಿ ಪದವಿಯನ್ನು ಪಡೆದುಕೊಂಡರು. ನಂತರ ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದುಕೊಂಡರು. ಸಿನೆಮಾ ನೋಡುವುದು ಮತ್ತು ಯು.ಆರ್ ಅನಂತ ಮೂರ್ತಿ, ಭೈರಪ್ಪ, ಶಿವರಾಮ ಕಾರಾಂತರು, ಪೂರ್ಣಚಂದ್ರ ತೇಜಸ್ವಿ ಮತ್ತು ಇನ್ನಿತರ ಲೇಖಕರ ಪುಸ್ತಕಗಳನ್ನು ಓದುವುದು ಇವರ ನೆಚ್ಚಿನ ಹವ್ಯಾಸ.
ವೃತ್ತಿಜೀವನ
ಬದಲಾಯಿಸಿ೧೯೯೩ರಲ್ಲಿ ಜೀವನ ನಿರ್ವಹಣೆಗಾಗಿ ಬೆಂಗಳೂರಿಗೆ ಬಂದು ಮೆಡಿಕಲ್ ರೆಪ್ರೆಸೆಂಟೆಟಿವ್ ಆಗಿ ೨ವರ್ಷಗಳ ಕಾಲ ಕೇರಳ ಹಾಗೂ ತಮಿಳುನಾಡಿನಲ್ಲಿ ಕೆಲಸ ಮಾಡಿದರು. ನಂತರ ಹಿಂದುಸ್ಥಾನ್ ಲಿವರ್ ಕಂಪನಿಯಲ್ಲಿ ಸಹಾಯಕ ವಿಜ್ಞಾನಿಯಾಗಿ ಸೇರಿಕೊಂಡರು.
ದೂರದರ್ಶನದಲ್ಲಿ
ಬದಲಾಯಿಸಿಟಿ.ಎನ್.ಸೀತಾರಾಮ ಅವರ ‘ಮಂನ್ವಂತರ’ ಧಾರಾವಾಹಿಯಲ್ಲಿ ಬರಹಗಾರನಾಗಿ ಕೆಲಸಮಾಡಿದ್ದರು.
ಚಲನಚಿತ್ರರಂಗದಲ್ಲಿ
ಬದಲಾಯಿಸಿಸುನಿಲ್ ಕುಮಾರ್ ದೇಸಾಯಿಯವರ ‘ಮರ್ಮ’ ಚಿತ್ರದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದರು. ೨೦೦೬ ರಲ್ಲಿ ಮಠ ಚಿತ್ರ ನಿರ್ದೇಶಿಸುವುದರ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾದರು. ಇದು ನವರಸನಾಯಕ ಜಗ್ಗೇಶ್ ಅಭಿನದ ನೂರನೇ ಚಿತ್ರ.
ನಿರ್ದೇಶಕನಾಗಿ
ಬದಲಾಯಿಸಿಇದುವರೆಗೂ ಗುರುಪ್ರಸಾದ್ ಸುಮಾರು ನಾಲ್ಕು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅವರ ಐದನೇ ಚಿತ್ರ ನಿರ್ಮಾಣ ಹಂತದಲ್ಲಿದೆ.[೨]
•೨೦೦೯ ರಲ್ಲಿ ‘ಎದ್ದೇಳು ಮಂಜುನಾಥ’ ಚಿತ್ರ
•೨೦೧೩ ರಲ್ಲಿ ‘ಡೈರೆಕ್ಟರ್ ಸ್ಪೆಷಲ್’ ಚಿತ್ರ
•೨೦೧೭ ರಲ್ಲಿ ‘ಎರಡನೇ ಸಲ’ ಚಿತ್ರ
•೨೦೧೯ ರಲ್ಲಿ ‘ಅದೇಮಾ’ ಚಿತ್ರ (ಚಿತ್ರೀಕರಣ ಹಂತದಲ್ಲಿದೆ) [೪]
ರಿಯಾಲಿಟಿ ಶೋಗಳಲ್ಲಿ
ಬದಲಾಯಿಸಿಕೇವಲ ಚಲನಚಿತ್ರರಂಗ ಮಾತ್ರವಲ್ಲದೇ ಗುರುಪ್ರಸಾದ್ ಅನೇಕ ದೂರದರ್ಶನ ವಾಹಿನಿಗಳನ್ನೂ ಕಾಣಿಸಿಕೊಂಡಿದ್ದಾರೆ.
•ಸುವರ್ಣ ವಾಹಿನಿಯ ಕನ್ನಡದ ಕೋಟ್ಯಾಧಿಪತಿ ಸೀಸನ್ ೧
•ಸುವರ್ಣ ವಾಹಿನಿಯ ಕನ್ನಡದ ಕೋಟ್ಯಾಧಿಪತಿ ಸೀಸನ್ ೩
•ಈ ಟಿವಿ ಕನ್ನಡ ವಾಹಿನಿಯ ‘ಥಕಧಿಮಿಥಾ’(೨೦೧೪) ನೃತ್ಯ ಕಾರ್ಯಕ್ರಮದಲ್ಲಿ ನಿರ್ಣಾಯಕರಾಗಿದ್ದರು
•ಸುವರ್ಣ ವಾಹಿನಿಯ ‘ಬಿಗ್ ಬಾಸ್’-೨(೨೦೧೪)ನಲ್ಲಿ ಸ್ಪರ್ಧಿಯಾಗಿದ್ದರು [೫]
•ಝೀ ಕನ್ನಡ ವಾಹಿನಿಯ ‘ಲೈಫ್ ಸೂಪರ್ ಗುರು’ ಕಾರ್ಯಕ್ರಮದಲ್ಲಿ ನಿರೂಪಕರಾಗಿದ್ದರು
•ಝಿ ಕನ್ನಡ ವಾಹಿನಿಯ ‘ ಡಾನ್ಸ್ ಕರ್ನಾಟಕಾ ಡಾನ್ಸ್’-೩(೨೦೧೬) ಕಾರ್ಯಕ್ರಮದಲ್ಲಿ ನಿರ್ಣಾಯಕರಾಗಿದ್ದರು
•ಸುವರ್ಣ ವಾಹಿನಿಯ ‘ಪುಟಾಣಿ ಪಂಟ್ರು’-೨(೨೦೧೫) ಕಾರ್ಯಕ್ರಮದಲ್ಲಿ ನಿರ್ಣಾಯಕರಾಗಿದ್ದರು
•ಸುವರ್ಣ ವಾಹಿನಿಯ ‘ಭರ್ಜರಿ ಕಾಮಿಡಿ’-೨ ಕಾರ್ಯಕ್ರಮದಲ್ಲಿ ನಿರ್ಣಾಯಕರಾಗಿದ್ದರು
ನಟನಾಗಿ
ಬದಲಾಯಿಸಿನಿರ್ದೇಶನದ ಜೊತೆಯಲ್ಲಿ ಗುರುಪ್ರಸಾದ್ ಹಲವಾರು ಸಿನೆಮಾಗಳಲ್ಲಿ ಅಭಿನಯಿಸಿದ್ದಾರೆ.
•ಮಠ
•ಡೈರೆಕ್ಟರ್ಸ್ ಸ್ಪೆಷಲ್
•ಅದೇಮಾ
•ಪ್ರಾರ್ಥನೆ
•ವಿಶಿಲ್
•ಜನವರಿ ೧ ಬಿಡುಗಡೆ
•ಗೀತಾ ಬ್ಯಾಂಗಲ್ ಸ್ಟೋರ್ಸ್
•ಕಳ್ ಮಂಜ
•ಕರೋಡ್ ಪತಿ
•ಸರಕಾರಿ ಕೆಲಸ ದೇವರ ಕೆಲಸ
•ಊಟಿ
•ಟ್ಯೂಬ್ ಲೈಟ್
•ಕುಷ್ಕ
•ಲಕ್ಷ್ಮಿ
•ಮೈಲಾರಿ
•ಮರ್ಮ
•ಅನಂತು ವರ್ಸಸ್ ನುಸ್ರತ್
•ಇದು ಬೊಂಬೆಯಾಟವಯ್ಯ
•ಜಿಗರ್ ತಂಡ
•ಮಾಣಿಕ್ಯ
•ಕೋಮಾ
•ಹೀಗೊಂದು ದಿನ
•ಸಿನಿಮಾ ಮೈ ಡಾರ್ಲಿಂಗ್
•ಕುಷ್ಕ
•ಆಶಿಕಿ೩
ಸಂಭಾಷಣಾಕಾರನಾಗಿ
ಬದಲಾಯಿಸಿಕೇವಲ ನಿರ್ದೇಶಕರಾಗಿ ಮಾತ್ರವಲ್ಲದೇ ಗುರುಪ್ರಸಾದ್ ಅನೇಕ ಚಿತ್ರಗಳಿಗೆ ಸಂಭಾಷಣೆಯನ್ನು ಬರೆದಿದ್ದಾರೆ. •ಮಠ
•ಡೈರೆಕ್ಟರ್ಸ್ ಸ್ಪೆಷಲ್
•ಅದೇಮಾ
•ವಿಶಿಲ್
•ಸರಕಾರಿ ಕೆಲಸ ದೇವರ ಕೆಲಸ
•ಎಲೆಕ್ಷನ್
•ಡಕೋಟಾ ಫ್ಯಾಮಿಲಿ
•ಯಾರೇ ಕೂಗಾಡಲಿ
•ಸೂಪರೋ ರಂಗ
•ಗೋವಾ
•ಮರ್ಮ
•ಭಾಗ್ಯ ವಿಧಾತ
•ಸಾರಿ ಮತ್ತೆ ಬನ್ನಿ ಪ್ರೀತ್ಸೋಣ
•ಎರಡನೇ ಮದುವೆ
•ಇದು ಬೊಂಬೆಯಾಟವಯ್ಯ
ಕಥಾ ಲೇಖಕನಾಗಿ
ಬದಲಾಯಿಸಿಗುರುಪ್ರಸಾದ್ ಅವರ ಕಥಾ ಲೇಖನಗಳ ಪಟ್ಟಿ
•ಮಠ
•ಡೈರೆಕ್ಟರ್ಸ್ ಸ್ಪೆಷಲ್
•ಅದೇಮಾ
•ಸರಕಾರಿ ಕೆಲಸ ದೇವರ ಕೆಲಸ
•ಡಕೋಟಾ ಫ್ಯಾಮಿಲಿ
•ಮರ್ಮ
•ಭಾಗ್ಯ ವಿಧಾತ
•ಸಾರಿ ಮತ್ತೆ ಬನ್ನಿ ಪ್ರೀತ್ಸೋಣ
•ಎರಡನೇ ಮದುವೆ
•ಇದು ಬೊಂಬೆಯಾಟವಯ್ಯ
ಸಾಹಿತ್ಯಗಾರನಾಗಿ
ಬದಲಾಯಿಸಿಕೇವಲ ನಟನೆ ನಿರ್ದೇಶನ ಮಾತ್ರವಲ್ಲದೇ ಗುರುಪ್ರಸಾದ್ ಉತ್ತಮ ಸಾಹಿತ್ಯ ರಚನಾಕಾರರೂ ಹೌದು.ಅನೇಕ ಚಿತ್ರಗಳ ಹಾಡುಗಳಿಗ ಸಾಹಿತ್ಯವನ್ನು ಬರೆದಿದ್ದಾರೆ.
•ಮಠ
•ಡೈರೆಕ್ಟರ್ಸ್ ಸ್ಪೆಷಲ್
•ಅದೇಮಾ
ಕಾರ್ಯನಿರ್ವಾಹಕ ನಿರ್ಮಾಪಕರಾಗಿ
ಬದಲಾಯಿಸಿಮಠ ಮತ್ತು ಎದ್ದೇಳು ಮಂಜುನಾಥ [೬]
ಸಹ ನಿರ್ಮಾಪಕರಾಗಿ
ಬದಲಾಯಿಸಿ•ಡೈರೆಕ್ಟರ್ಸ್ ಸ್ಪೆಷಲ್
•ಎರಡನೇ ಸಲ
•ಅದೇಮಾ
•ಇದು ಬೊಂಬೆಯಾಟವಯ್ಯ(ಕನ್ನಡದ ಮೊದಲ ಆ್ಯನಿಮೇಟೆಡ್ ಚಿತ್ರ)
ಬರಹಗಾರನಾಗಿ
ಬದಲಾಯಿಸಿ•ಡೈರೆಕ್ಟರ್ಸ್ ಸ್ಪೆಷಲ್ - ಸಿನೆಮಾ ಮಾಡಲಾಗದ ಕಥೆಗಳು
•ಮಠ – ಚಿತ್ರಕಥೆ
•ಎದ್ದೇಳು ಮಂಜುನಾಥ- ಚಿತ್ರಕಥೆ
ಪ್ರಶಸ್ತಿಗಳು
ಬದಲಾಯಿಸಿ•೨೦೦೯-೧೦ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ - ಉತ್ತಮ ಚಿತ್ರಕಥೆ
•ದಕ್ಷಿಣ ಭಾರತದ ೫೭ನೇ ಫೀಲಂ ಫೇರ್ ಪ್ರಶಸ್ತಿ - ಉತ್ತಮ ನಿರ್ದೇಶಕ
ಇತರೆ
ಬದಲಾಯಿಸಿಕೌಶಲ್ಯ ಶಾಲೆ
ಬದಲಾಯಿಸಿ(ಗುರುಪ್ರಸಾದ್ ಇನ್‌ಸ್ಟಿಟ್ಯೂಟ್ ಆಫ್ ಸ್ಕ್ರಿಪ್ಟ್ ರೈಟಿಂಗ್ ಅಂಡ್ ಡೈರೆಕ್ಷನ್) ನವ ನಿರ್ದೇಶಕರಿಗೆ ಬೇಕಾಗುವ ಕಥೆ ರಚನೆ, ಚಿತ್ರಕಥೆ ಬರೆಯುವ ವಿಧಾನ ಹಾಗೂ ಮುಂತಾದ ಸಿನೆಮಾ ಮಾಡಲು ಸಹಕಾರಿಯಾಗುವ ಅಂಶಗಳನ್ನು ಖುದ್ದಾಗಿ ಗುರುಪ್ರಸಾದ್ ಈ ಶಾಲೆಯಲ್ಲಿ ಕಲಿಸುತ್ತಾರೆ. ಸಂದರ್ಶನದ ಮೂಲಕ ಆಸಕ್ತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಕನ್ನಡದಲ್ಲಿಯೇ ತರಗತಿಗಳನ್ನು ಮಾಡಲಾಗುತ್ತದೆ. ಈ ತರಗತಿಗೆ ಯಾವುದೇ ವಯೋಮಿತಿ ಇರುವುದಿಲ್ಲ. ಲಿಂಗ ಬೇಧವಿಲ್ಲದೆ ಯಾರು ಬೇಕಾದರೂ ಈ ಶಾಲೆಯನ್ನು ಸೇರಿಕೊಳ್ಳಬಹುದು.[೭]
•ಪ್ರಮುಖ ಸಿನಿ ಮಾಸಿಕ ‘ಚಿತ್ತಾರ’ಕ್ಕೆ ಪತ್ರಕರ್ತನಾಗಿದ್ದರು.
•ಎಲ್ಲಾ ಪ್ರಮುಖ ದಿನಪತ್ರಿಕೆ, ವಾರ ಪತ್ರಿಕೆ, ಮಾಸಿಕ ಕನ್ನಡ ಸುದ್ದಿಪತ್ರಿಕೆಗಳಿಗೆ ಮತ್ತು ನಿಯತಕಾಲಿಕೆಗಳಿಗೆ ಸ್ವತಂತ್ರ ಪರ್ತಕರ್ತರಾಗಿದ್ದಾರೆ. ವಿಜಯ ಕರ್ನಾಟಕ, ಪ್ರಜಾವಾಣಿ, ಮಯೂರ, ಕನ್ನಡ ಪ್ರಭ, ರೂಪತಾರಾ ಇತ್ಯಾದಿ.
•ಅಲ್ಲದೇ ಸುಸಜ್ಜಿತ ಎಡಿಟಿಂಗ್ ಸ್ಟುಡಿಯೋವನ್ನು ಹೊಂದಿದ್ದಾರೆ
•ಚಿತ್ರಕಥೆ, ಬರವಣಿಗೆ, ನಿರ್ದೇಶನದ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ.
ಉಲ್ಲೇಖಗಳು
ಬದಲಾಯಿಸಿ- ↑ 17. https://timesofindia.indiatimes.com/topic/Guruprasad
- ↑ https://www.filmibeat.com/kannada/news/2013/director-guruprasad-third-film-109210.html
- ↑ https://www.indiaglitz.com/mata-review-kannada-movie-8188
- ↑ "ಆರ್ಕೈವ್ ನಕಲು". Archived from the original on 2013-03-05. Retrieved 2019-03-09.
- ↑ https://timesofindia.indiatimes.com/tv/news/kannada/Neethus-fight-with-Guruprasad-turns-ugly/articleshow/41688649.cms?
- ↑ https://www.nowrunning.com/movie/6791/kannada/eddeli-manjunatha/2247/review.htm
- ↑ https://kannada.oneindia.com/features/mata-director-guru-prasad-teaching-how-to-write-script-writting-153179.html