ಗುರುನಂದನ್ ರವರು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ನಟ.ದೂರದರ್ಶನ ಸರಣಿಗಳಲ್ಲಿ ಸಣ್ಣ ಪಾತ್ರಗಳಲ್ಲಿ ಕೆಲಸ ಮಾಡಿದ ನಂತರ,ಏಷಿಯಾನೆಟ್ ಸುವರ್ಣದಲ್ಲಿ ಪ್ರಸಾರವಾದ ಜನಪ್ರಿಯ ಸರಣಿ ಲಕುಮಿಯೊಂದಿಗೆ ಅವರು ಖ್ಯಾತಿ ಗಳಿಸಿದರು.ಇದರ ನಂತರ,ಅವರು 'ಸೈಬರ್ ಯುಗದೊಳ್ ನವ ಯುವ ಮಧುರಾ ಪ್ರೇಮ ಕಾವ್ಯಂ' ಚಿತ್ರದಲ್ಲಿ ದೊಡ್ಡ ಪರದೆಯಲ್ಲಿ ಪ್ರಮುಖ ಪಾತ್ರ ವಹಿಸಿ ಚೊಚ್ಚಲ ಪ್ರವೇಶವನ್ನು ಮಾಡಿದರು.ಅದು ವಿಮರ್ಶಾತ್ಮಕವಾಗಿ ಪ್ರಶಂಸಿಸಲ್ಪಟ್ಟಿತು ಮತ್ತು ಅತ್ಯುತ್ತಮ ಚೊಚ್ಚಲ ಪ್ರಶಸ್ತಿಗಾಗಿ ಆಯ್ಕೆಯಾಯಿತು.

ಗುರುನಂದನ್
Born (1989-12-31) ೩೧ ಡಿಸೆಂಬರ್ ೧೯೮೯ (ವಯಸ್ಸು ೩೪)
Nationalityಭಾರತೀಯ
Other namesರಾಜು, ರ್ಯಾಂಕ್ ಸ್ಟಾರ್
Occupation(s)Actor, Model
Years active೨೦೧೧– ಪ್ರಸ್ತುತ
Known forfitness,goodlooking,smile,comedy timing, rumoreres free actor

ಅವರ ಎರಡನೆಯ ಚಿತ್ರ 'ಫಸ್ಟ್ ರ್ಯಾಂಕ್ ರಾಜು'(೨೦೧೫). ಇದರಿಂದ ಅವರು ವಿಮರ್ಶಾತ್ಮಕ ಮೆಚ್ಚುಗೆ ಮತ್ತು ವಾಣಿಜ್ಯ ಯಶಸ್ಸು ಗಳಿಸಿದರು.

ಆರಂಭಿಕ ಜೀವನ ಬದಲಾಯಿಸಿ

ಗುರುನಂದನ್ ರವರು ಕರ್ನಾಟಕಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಜನಿಸಿದರು.ಶಾಲೆಯಲ್ಲಿ ತಮ್ಮ ೮ ನೇ ದರ್ಜೆಯ ನಂತರ ಸಿನಿಮಾದಲ್ಲಿ ಅವರ ಅದೃಷ್ಟವನ್ನು ಪ್ರಯತ್ನಿಸಲು ತಮ್ಮ ಮನೆಯಿಂದ ಬೆಂಗಳೂರಿಗೆ ಓಡಿಹೋದರು.ಆದರೆ ಅವರ ಪ್ರಯತ್ನಗಳೆಲ್ಲವೂ ನಿರರ್ಥಕವಾಗಿ ತಮ್ಮ ಹೆತ್ತವರ ಬಳಿ ಮರಳಬೇಕಾಗಿ ಬಂತು ಮತ್ತು ಅವರ ವಿದ್ಯಾಭ್ಯಾಸವನ್ನು ಮುಂದುವರೆಸಬೇಕಾಯಿತು.ಅವರು ತಮ್ಮ ಪದವಿಯ ನಂತರ, ಮತ್ತೊಮ್ಮೆ ಅವರ ಪೋಷಕರ ಒಪ್ಪಿಗೆಯೊಂದಿಗೆ ಬೆಂಗಳೂರಿಗೆ ತೆರಳಿದರು.ಅವರು ಎರಡನೇ ಪ್ರಮುಖ ಪಾತ್ರಗಳಲ್ಲಿ ಹಲವು ದೂರದರ್ಶನ ಸರಣಿಗಳಲ್ಲಿ ಕಾಣಿಸಿಕೊಂಡರು.[೧]

ವೃತ್ತಿ ಬದಲಾಯಿಸಿ

ಗುರುನಂದನ್ ರವರು ದೂರದರ್ಶನದಲ್ಲಿ ತಮ್ಮ ಮೊದಲನೆಯ ಪ್ರದರ್ಶನದಿಂದ ಹೆಚ್ಚು ಜನಪ್ರಿಯತೆಯನ್ನು ಪಡೆಯಲು ಸಾಧ್ಯವಾಗಲಿಲ್ಲ.ಅವರ ಮುಂದಿನ ಸರಣಿಯು ಟಿ.ಎನ್.ಸೀತಾರಾಂ ನಿರ್ದೇಶನದ 'ಮುಕ್ತ ಮುಕ್ತ' ಆಗಿದ್ದು,ಅದು ವ್ಯಾಪಕವಾಗಿ ಜನಪ್ರಿಯವಾಯಿತು.ಇದರ ನಂತರ, ಲಕುಮಿ ಯಲ್ಲಿ ಸೂರ್ಯನ ಪಾತ್ರವನ್ನು ನಿರ್ವಹಿಸಿದ್ದಾರೆ.ಈ ಸರಣಿಯು ೩೫೦ ಕ್ಕೂ ಹೆಚ್ಚಿನ ಕಂತುಗಳವರೆಗೆ ನಡೆಯಿತು.ನಂತರದಲ್ಲಿ ಅವರು ದೂರದರ್ಶನ ವಲಯಗಳಲ್ಲಿ ಚಿರಪರಿಚಿತರಾದರು.ಗುರುನಂದನ್ ರವರು ಮುಖ್ಯ ವಾಹಿನಿಯ ಸಿನಿಮಾದಲ್ಲಿ ಪ್ರಾಯೋಗಿಕ ರೋಮ್ಯಾಂಟಿಕ್ ಚಿತ್ರ 'ಸೈಬರ್ ಯುಗದೊಳ್ ನವ ಯುವ ಮಧುರಾ ಪ್ರೇಮ ಕಾವ್ಯಂ' ನಲ್ಲಿ ಶ್ವೇತಾ ಶ್ರೀವಾತ್ಸವ್ ಎದುರು ಪ್ರಮುಖ ಪಾತ್ರದಲ್ಲಿ ನಟಿಸಿದರು.ಅವರ ಅಭಿನಯವು ಅನೇಕರ ಗಮನ ಸೆಳೆಯಿತು.ಅವರ ಮುಂದಿನ ಹಾಸ್ಯಮಯ ಚಲನಚಿತ್ರ 'ಫಸ್ಟ್ ರ್ಯಾಂಕ್ ರಾಜು' ೨೦೧೫ ರಲ್ಲಿ ಬಿಡುಗಡೆಯಾಯಿತು[೨]ಹಾಗೂ ನಂತರದ ಚಲನಚಿತ್ರ 'ಚಿರವಾದ ನೆನಪು' ೨೦೧೬ ರಲ್ಲಿ ಬಿಡುಗಡೆಯಾಯಿತು.[೩]

ಚಲನಚಿತ್ರಗಳ ಪಟ್ಟಿ ಬದಲಾಯಿಸಿ

ವರ್ಷ ಚಲನಚಿತ್ರ ಪಾತ್ರ ಭಾಷೆ ಟಿಪ್ಪಣಿ
೨೦೧೨ ಸೈಬರ್ ಯುಗದೊಳ್ ನವ ಯುವ ಮಧುರಾ ಪ್ರೇಮ ಕಾವ್ಯಂ ಜಯಂತ ಕನ್ನಡ ಆಯ್ಕೆಯಾಗಿದ್ದು- ಸೈಮಾ ಅತ್ಯುತ್ತಮ ಪುರುಷ ಚೊಚ್ಚಲ ಪ್ರಶಸ್ತಿ
೨೦೧೫ ಚಾರ್ಲಿ ಅತಿಥಿ ಪಾತ್ರ
೨೦೧೫ ಫಸ್ಟ್ ರ‍್ಯಾಂಕ್ ರಾಜು ರಾಜು ಕನ್ನಡ ಬ್ಲಾಕ್ಬಸ್ಟರ್ ೧೦೦ ದಿನ
೨೦೧೬ ಚಿರವಾದ ನೆನಪು ರಾಜ್
೨೦೧೬ ಜಾನ್ ಜಾನಿ ಜನಾರ್ಧನ್ ಕನ್ನಡ ಅತಿಥಿ ಪಾತ್ರ
೨೦೧೭ ಸ್ಮೈಲ್ ಪ್ಲೀಜ್ ಮನಮೋಹನ್/ಮನು
೨೦೧೭ ಎಂ ಟಿ ವಿ ಸುಬ್ಬುಲಕ್ಷ್ಮಿ ಸುಬ್ಬು ಚಿತ್ರೀಕರಣ
೨೦೧೭ ಮಿಸ್ಸಿಂಗ್ ಬಾಯ್ NA ಚಿತ್ರೀಕರಣ
೨೦೧೭ ರಾಜು ಕನ್ನಡ ಮೀಡಿಯಂ ರಾಜು ಕನ್ನಡ ಬಿಡುಗಡೆ ಮಾಡಲಾಗಿದೆ
೨೦೧೯ ನಾಗತಿಹಳ್ಳಿ ಸಿನಿಮಾಸ್ TBA ಇನ್ನೂ ಚಿತ್ರೀಕರಣಕ್ಕೆ

[೪][೫]

ಉಲ್ಲೇಖಗಳು ಬದಲಾಯಿಸಿ

  1. https://www.veethi.com/india-people/gurunandan-profile-11390-17.htm
  2. "FIRST RANK in second attempt!". Deccan Chronicle. 23 December 2015. Retrieved 13 March 2015.
  3. https://www.filmibeat.com/celebs/gurunandan/biography.html
  4. https://m.timesofindia.com/topic/Gurunandan
  5. https://www.filmibeat.com/celebs/gurunandan/upcoming-movies.html