ಗುರಿ (ಚಲನಚಿತ್ರ)
ಕಸ್ಟಂಸ್ ಇಲಾಖೆಯ ಅಧಿಕಾರಿ ಕಾಳಿಪ್ರಸಾದ್ ಡಾ.ರಾಜ್‍ಕುಮಾರ್ , ಕಳ್ಳಸಾಗಣೆಕಾರರನ್ನು ಬಂಧಿಸಿ, ಅವರನ್ನು ಪೋಲಿಸ್ ಇಲಾಖೆಗೆ ಹಸ್ತಾಂತರ ಮಾಡುತ್ತಾರೆ. ಪೋಲೀಸ್ ಇನ್ಸ್ಪೆಕ್ಟರ್ ಜೈ ಜಗದೀಶ್ ರೊಂದಿಗೆ ಸ್ನೇಹ ಬಲಿಯುತ್ತದೆ. ಆತನೊಂದಿಗೆಯೇ ತಂಗಿಗೆ ಲಗ್ನ ನಿಶ್ಚಯವಾಗುತ್ತದೆ. ಇಡೀ ಊರೇ ಆದರಿಸುವ ನಿವೃತ್ತ ಸ್ಕೂಲ್ ಮೇಷ್ಟ್ರು ತಂದೆ ಸದಾಶಿವ ಬ್ರಹ್ಮಾವರ, ತಂಗಿ ತಾರ ಯ ತುಂಬು ಸಂಸಾರದಿಂದ ಕಾಳಿಪ್ರಸಾದ್ ಸಂತಸದಿಂದ ಬಾಳುವೆ ನಡೆಸುವಾಗೆಯೇ, ಊರಿನ ಕುಖ್ಯಾತ ವ್ಯಕ್ತಿ ರುದ್ರಯ್ಯ ಮುಖ್ಯಮಂತ್ರಿ ಚಂದ್ರು ನ ಕೆಂಗಣ್ಣು ಬೀಳುತ್ತದೆ. ಕಸ್ಟಂಸ್ ಇಲಾಖೆಯಲ್ಲಿ ದಕ್ಷ ಅಧಿಕಾರಿಯಿಂದ ರುದ್ರಯ್ಯನ ಅವ್ಯವಹಾರಗಳು ನಿಂತು ನಷ್ಟವಾಗುತ್ತದೆ. ಲಂಚ ನೀಡಲು ಮನೆಗೆ ಬಂದ ರುದ್ರಯ್ಯನನ್ನು ಕಾಳಿಪ್ರಸಾದ್ ಹೊರದಬ್ಬುತ್ತಾರೆ. ಸೇಡು ತೀರಿಸಿಕೊಳ್ಳಲು ರುದ್ರಯ್ಯ, ಕಾಳಿಪ್ರಸಾದ್ ರ ಕಸ್ಟಂಸ್ ಇಲಾಖೆಯ ಸಹೋದ್ಯೋಗಿಗಳನ್ನೇ ಬಳಸಿಕೊಳ್ಳುತ್ತಾನೆ. ತನ್ನ ಅಡಿ ಕೆಲಸ ಮಾಡುವ ಟೈಪಿಸ್ಟ್ ಮೇಲೆ ಬಲಾತ್ಕಾರ ಮಾಡಿದ ಆರೋಪದ ಮೇಲೆ ಕಾಳಿಪ್ರಸಾದ್ ಜೈಲಿಗೆ ಹೋಗಬೇಕಾಗುತ್ತದೆ. ಜೈಲಿಗೆ ಹೋದ ವ್ಯಕ್ತಿಯ ತಂಗಿಯನ್ನು ಲಗ್ನವಾಗಲು ಪೋಲೀಸ್ ಇನ್ಸ್ಪೆಕ್ಟರ್ ನಿರಾಕರಿಸುತ್ತಾನೆ. ತಂಗಿ ನಿರಾಶೆ, ಅವಮಾನದಿಂದ ನೇಣು ಹಾಕಿಕೊಳ್ಳುತ್ತಾಳೆ. ತಂಗಿಯ ಅಂತಿಮ ದರ್ಶನಕ್ಕೆ ಕಾಳಿಪ್ರಸಾದ್ ನನ್ನು ಪೋಲೀಸ್ ಇನ್ಸ್ಪೆಕ್ಟರ್ ಕರೆತಂದಾಗ, ಕಾಳಿಪ್ರಸಾದ್ ನ ತಂದೆ ಪೋಲೀಸ್ ಇನ್ಸ್ಪೆಕ್ಟರ್ ನ ಮೇಳೆ ಹರಿಹಾಯುತ್ತಾನೆ. ಆ ವೇಳೆಯಲ್ಲೇ ತಂದೆಗೆ ಹುಚ್ಚು ಹಿಡಿಯುತ್ತದೆ. ಸತ್ತ ತಂಗಿ, ಹುಚ್ಚ ತಂದೆ, ಜೈಲು ವಾಸ ಇವನ್ನು ಕಂಡು, ತನ್ನ ಆದರ್ಶಗಳು ಪ್ರಯೋಜನಕ್ಕೆ ಬಾರದ್ದು ಎಂದು ಕಾಳಿಪ್ರಸಾದ್ ಪೋಲೀಸರಿಂದ ತಪ್ಪಿಸಿಕೊಳ್ಳುತ್ತಾನೆ.
ಗುರಿ (ಚಲನಚಿತ್ರ) | |
---|---|
ಗುರಿ | |
ನಿರ್ದೇಶನ | ವಾಸು |
ನಿರ್ಮಾಪಕ | ಪಾರ್ವತಮ್ಮ ರಾಜ್‍ಕುಮಾರ್ |
ಚಿತ್ರಕಥೆ | ವಾಸು |
ಪಾತ್ರವರ್ಗ | ಡಾ.ರಾಜ್‍ಕುಮಾರ್ ಅರ್ಚನ(ಚಿತ್ರನಟಿ) ತಾರ, ಪಂಡರೀ ಬಾಯಿ, ಸದಾಶಿವ ಬ್ರಹ್ಮಾವರ, ಜೈಜಗದೀಶ್, ಮುಖ್ಯಮಂತ್ರಿ ಚಂದ್ರು, ತೂಗುದೀಪ ಶ್ರೀನಿವಾಸ್, ಶನಿಮಹದೇವಪ್ಪ |
ಸಂಗೀತ | ರಾಜನ್ ನಾಗೇಂದ್ರ |
ಬಿಡುಗಡೆಯಾಗಿದ್ದು | ೧೯೮೬ |
ಚಿತ್ರ ನಿರ್ಮಾಣ ಸಂಸ್ಥೆ | ಪೂರ್ಣಿಮಾ ಎಂಟರ್ಪ್ರೈಸಸ್ |
ಸಾಹಿತ್ಯ | ಚಿ.ಉದಯಶಂಕರ್ |
ಹಿನ್ನೆಲೆ ಗಾಯನ | ಡಾ.ರಾಜ್‍ಕುಮಾರ್ , ರತ್ನಮಾಲ ಪ್ರಕಾಶ್ |
ತನ್ನ ಶತ್ರುಗಳ ಮೇಲೆ ಒಬ್ಬೊಬ್ಬರಾಗಿ ಸೇಡು ತೀರಿಸಿಕೊಳ್ಳುತ್ತಾನೆ.
ಅದೇ ವೇಳೆ, ಅನಾಥ ಯುವತಿಗೆ ಅರ್ಚನ ಆಸರೆಯಾಗುತ್ತಾನೆ.
ಕಡೆಯದಾಗಿ, ರುದ್ರಯ್ಯನನ್ನು ಜಾನ್ ವೇಯ್ನ್ ನ ಚಿತ್ರ ಪ್ರದರ್ಶಿಸುವ ಚಿತ್ರಮಂದಿರದಲ್ಲಿ ಕೊಲ್ಲಲು ಯೋಜನೆ ಹೂಡುತ್ತಾನೆ. ನಾಯಕ ಪರದೆಯಲ್ಲಿ ಗುಂಡು ಹಾರಿಸುವ ದೃಶ್ಯದಲ್ಲಿ , ಕಾಳಿಪ್ರಸಾದ್ ರುದ್ರಯ್ಯನ ಮೇಲೆ ಗುಂಡು ಹಾರಿಸಿ, ತಾನೂ ಪೋಲೀಸರ ಗುಂಡಿಗೆ ಬಲಿಯಾಗುತ್ತಾನೆ.
ತನ್ನ ಗುರಿ ತೀರಿಸಿಕೊಂಡು, ಕೊನೆ ಉಸಿರು ಎಳೆಯುತ್ತಾನೆ.