ಗುನಾ ಜಿಲ್ಲೆ ಮಧ್ಯಪ್ರದೇಶದ ಒಂದು ಜಿಲ್ಲೆ; ಜಿಲ್ಲೆಯ ಮುಖ್ಯಪಟ್ಟಣ. ಜಿಲ್ಲೆಯ ವಿಸ್ತೀರ್ಣ 11065ಚ.ಕಿಮೀ. ಜನಸಂಖ್ಯೆ 12.40.938 (2011). ಜಿಲ್ಲೆಯ ಹೆಚ್ಚಿನ ಭಾಗ ಗುಡ್ಡಗಳಿಂದ ಕೂಡಿದೆ; ಸಮುದ್ರಮಟ್ಟದಿಂದ 488 ಮೀ ಎತ್ತರದಲ್ಲಿದೆ. ಬೇತವಾ, ಪಾರ್ವತಿ, ಸಿಂಧ ಮತ್ತು ಬಿಲಾಸ್ ಇಲ್ಲಿಯ ಮುಖ್ಯ ನದಿಗಳು.

ಗುನಾ ಜಿಲ್ಲೆ
गुना जिला
Location of ಗುನಾ district in ಮಧ್ಯಪ್ರದೇಶ
Location of ಗುನಾ district in ಮಧ್ಯಪ್ರದೇಶ
ದೇಶಭಾರತ
ರಾಜ್ಯಮಧ್ಯಪ್ರದೇಶ
ಆಡಳಿತ ವಿಭಾಗಗ್ವಾಲಿಯರ್
ಜಿಲ್ಲಾ ಕೇಂದ್ರGuna, India
ತಾಲೂಕುಗಳು1. ಗುನಾ, 2. ರಾಘೋಗಡ, 3. ಅರಾನ್, 4. ಕುಂಬ್ರಜ್ 5. ಚಂಚೋಡ
Government
 • ಲೋಕಸಭಾ ಕ್ಷೇತ್ರ/ಗಳು1. Guna (shared with Shivpuri and Ashoknagar districts), 2. Rajgarh (shared with Rajgarh district)
 • ವಿಧಾನಸಭಾ ಕ್ಷೇತ್ರಗಳು1. Bamori, 2. Guna, 3. Chachoura and 4. Raghogarh
ಜನಸಂಖ್ಯಾ ವಿಜ್ಞಾನ
 • ಸಾಕ್ಷರತೆ65.1 per cent
 • ಲಿಂಗಾನುಪಾತ910
ಸರಾಸರಿ ವಾರ್ಷಿಕ ಮಳೆ65 mm
Website[೧]

ಇತಿಹಾಸ ಬದಲಾಯಿಸಿ

ಐತಿಹಾಸಿಕ ಮತ್ತು ಪುರಾತತ್ವ ದೃಷ್ಟಿಯಿಂದ ಈ ಜಿಲ್ಲೆ ಮಹತ್ತ್ವದ ಸ್ಥಾನ ಪಡೆದಿದೆ. ತುಂಭವನ್, ಚಾಚೋಡಾ, ಮ್ಯಾನಾ (ಮಾಯಾಪುರ), ಈಸಾಗಢ, ಚಂದೇರಿ ಮುಂತಾದ ಐತಿಹಾಸಿಕ ಸ್ಥಳಗಳು ಇಲ್ಲಿವೆ.

ವ್ಯಾಪಾರ ಮತ್ತು ಕೃಷಿ ಬದಲಾಯಿಸಿ

ವ್ಯಾಪಾರ, ಕೈಗಾರಿಕೆ, ಸರಕು ಸಾಗಣೆ, ಶಿಕ್ಷಣ ಮತ್ತು ಸಾಂಸ್ಕೃತಿಕ ದೃಷ್ಟಿಗಳಿಂದ ಜಿಲ್ಲೆ ಅಷ್ಟಾಗಿ ಮುಂದುವರಿದಿಲ್ಲ. 1951ರಿಂದ ಈಚೆಗೆ ಎಣ್ಣೆ, ಬೇಳೆ, ಮಂಜುಗೆಡ್ಡೆ, ಸಕ್ಕರೆ ಮತ್ತು ಜವಳಿ ಕೈಗಾರಿಕೆಗಳು ಪ್ರಾರಂಭವಾಗಿವೆ. ಚಂದೇರಿಯಲ್ಲಿ ತಯಾರಾಗುವ ನೂಲು ಮತ್ತು ರೇಷ್ಮೆ ಬಟ್ಟೆಗಳು ದೇಶವಿದೇಶಗಳಲ್ಲಿ ಪ್ರಸಿದ್ಧವಾಗಿವೆ. ಇವಲ್ಲದೆ ಜರಿ ಕೆಲಸ, ಚರ್ಮ ಹದಮಾಡುವ ಮತ್ತು ಬೀಡಿ ಕಟ್ಟುವ ಉದ್ಯಮಗಳು ಬೆಳೆದಿವೆ.

ಬಾಹ್ಯ ಸಂಪರ್ಕಗಳು ಬದಲಾಯಿಸಿ

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: