ಗೀರ್ (ಗೋವಿನ ತಳಿ)

(ಗೀರ್ ಇಂದ ಪುನರ್ನಿರ್ದೇಶಿತ)

ಭಾರತದ ಗೋಪರಂಪರೆಯಲ್ಲೂ ಹೈನುಗಾರಿಕೆ ತಳಿಗಳಲ್ಲಿ ಗೀರ್‌ಗೆ ವಿಶಿಷ್ಟ ಸ್ಥಾನ. ಭಾರತೀಯ ಗೋಪರಂಪರೆಯಲ್ಲಿ ಹೆಚ್ಚು ಹಾಲು ಕೊಡುವ ತಳಿಗಳಲ್ಲಿ ಇದು ಎರಡನೆಯದು. ಗುಜರಾತಿನ ಸೌರಾಷ್ಟ್ರ ಬಳಿಯ ಗೀರ್ ಅರಣ್ಯಪ್ರದೇಶ ಇವುಗಳ ಮೂಲಸ್ಥಾನ. ಗೀರ್ ಭಾರತದ ಅತ್ಯಂತ ಪ್ರಾಚೀನ ತಳಿ, ಅಂದರೆ ಬರೊಬ್ಬರಿ ೧೨೦೦ ವರ್ಷಗಳಷ್ಟು ಹಳೆಯದು!

ಗೀರ್
ತಳಿಯ ಹೆಸರುಗೀರ್
ಮೂಲಗುಜರಾತಿನ ಸೌರಾಷ್ಟ್ರ ದ ಬಳಿಯ ಗೀರ್ ಅರಣ್ಯಪ್ರದೇಶ
ವಿಭಾಗಹೈನುಗಾರಿಕಾ ತಳಿ
ಬಣ್ಣಕೆಂಪು ಮಿಶ್ರಿತ ಕಂದು ಬಣ್ಣ
ಮುಖಉಬ್ಬಿದ ಅಗಲ ಹಣೆ
ಕೊಂಬುದಪ್ಪನಾದ ಬಾಗಿರುವ ಉದ್ದನೆಯ ಕೋಡುಗಳು
ಕಾಲುಗಳುಶಕ್ತಿಯುತ
ಕಿವಿಜೋತಾಡುವ ಕಿವಿಗಳು

ದಿನಕ್ಕೆ ೧೨-೧೪ ಲೀಟರ್ ಹಾಲು ಕೊಡುವ ಸಾಮರ್ಥ್ಯ, ಅಪೂರ್ವ ರೋಗ ನಿರೋಧಕಶಕ್ತಿ, ಭಾರತೀಯ ರೈತಜೀವನಕ್ಕೆ ಪೂರಕವಾದ ಕಷ್ಟಸಹಿಷ್ಣುತೆ, ಅಚ್ಚರಿ ಹುಟ್ಟಿಸುವಂತ ಬುದ್ಧಿಶಕ್ತಿ ಹೊಂದಿವೆ. ಕಾಡಿನಿಂದ ಬಂದ ತಳಿಯಾದರೂ ಇದರ ಸಾಮಾಜಿಕ ಸ್ವಭಾವ ಅಪೂರ್ವವಾದದ್ದು. ತನ್ನ ಒಡೆಯನ ಪ್ರೀತಿಗೆ, ಮೈನೇವರಿಕೆಗೆ, ಮುದ್ದುಗರೆಯುವಿಕೆಗೆ ಇದು ಪ್ರತಿಸ್ಪಂದಿಸುವ ವಿಧಾನ ಆನಂದ ತರುವಂತದ್ದು ಎನ್ನುತ್ತರೆ ಹೈನುಗಾರರು.

ಗೀರ್ ದೊಡ್ಡಗಾತ್ರದ ತಳಿ. ದನಗಳು ೪೦೦-೪೫೦ ಕಿಲೊಗ್ರಾಮ್ ತೂಗಿದರೆ ಹೋರಿಗಳ ತೂಕ ೫೫೦ರಿಂದ ೬೫೦ಕೆ.ಜಿ. ಬಣ್ಣ ಕೆಂಪು ಮಿಶ್ರಿತ ಕಂದು. ಗೀರ್‌ನ್ನು ಬಹಳ ಸುಲಭವಾಗಿ ಗುರುತಿಸುವಂತೆ ಮಾಡುವುದು ಇದರ ಅಗಲ ಉಬ್ಬಿದ ಹಣೆ. ಗೀರ್ ಸಾಮಾನ್ಯವಾಗಿ ೨೧ ದಿನಕ್ಕೊಮ್ಮೆ ಬೆದೆಗೆ ಬರುತ್ತದೆ . ಬಹಳ ಸುಲಭವಾಗಿ ತಜ್ಞರ ಅಗತ್ಯವೇ ಇಲ್ಲದೆ ಗುರುತಿಸಬಹುದಾದಷ್ಟು ಸ್ಪಷ್ಟವಾಗಿ ಬೆದೆ ಲಕ್ಷಣಗಳು ತೋರುತ್ತವೆ. ಮೊದಲನೆ ಬೆದೆ ಬರುವುದು ೨೦-೨೪ ತಿಂಗಳುಗಳಲ್ಲಿ. ೩೬ ತಿಂಗಳಲ್ಲಿ ಮೊದಲ ಕರು. ಕರು ಈದ ನಂತರ ಸುಮಾರು ೩೦೦-೩೨೦ ದಿನ ಹಾಲು ಕೊಡುತ್ತದೆ. ೧೨-೧೫ ವರ್ಷಗಳ ಆಯಸ್ಸಿನಲ್ಲಿ ೬-೧೦ ಕರು ಈಯುತ್ತದೆ.

ಗೀರ್‌ನ ವಿದೇಶಿ ಆವೃತ್ತಿಯ ಹೆಸರು ಬ್ರಹ್ಮನ್. ಹೀಗೆ ಇದು ವಿಶ್ವಮನ್ನಣೆಗಳಿಸಲು ಕಾರಣವಾದದ್ದು ಅದರ ಅದ್ಭುತ ರೋಗನಿರೋಧಕ ಶಕ್ತಿ ಮತ್ತು ಹಾಲು ಕೊಡುವ ಸಾಮರ್ಥ್ಯ. ಪ್ರಪಂಚದ ಯಾವುದೇ ಭಾಗಕ್ಕೆ ಹೋದರೂ ಗೀರ್‌ನ ಗುಣಲಕ್ಷಣ ಕೆಂಪು ಮಿಶ್ರಿತ ಕಂದು ಬಣ್ಣ, ಅಗಲ ಮುಖ, ಜೋತಾಡುವ ಕಿವಿಗಳು. ಈ ಜೋತಾಡುವ ಕಿವಿಗಳು ಕೆಳಗೆ ಒಂದನ್ನೊಂದು ತಾಕಿದರೆ ಅದನ್ನು ಪರಿಶುದ್ಧ ಗೀರ್ ತಳಿಯಾಗಿ ಗುರುತಿಸುತ್ತಾರೆ.

ಚಿತ್ರಗಳು

ಬದಲಾಯಿಸಿ

ಆಧಾರ/ಆಕರ

ಬದಲಾಯಿಸಿ

'ಗೋವಿಶ್ವಲೋಕ' ಜಾಲತಾಣದ 'ಗೋವಿಶ್ವ' ಇ-ಪತ್ರಿಕೆ Archived 2018-11-24 ವೇಬ್ಯಾಕ್ ಮೆಷಿನ್ ನಲ್ಲಿ.

ಹೊರಗಿನ ಕೊಂಡಿಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ