ಗೀತ ಗೋವಿಂದ
ಗೀತ ಗೋವಿಂದವು (ಒರಿಯ : ଗିତ ଗୋବିନ୍ଦ, ದೇವನಾಗರಿ: गीत गोविन्द) ೧೨ನೆಯ ಶತಮಾನದ ಕವಿ ಜಯದೇವನ ರಚನೆಯಾಗಿದೆ.ಇವನು ಒಡಿಶಾ ರಾಜ್ಯದ ಪುರಿ ಬಳಿಯ ಕೆನ್ದುಲಿ ಸಸನ್ ಎಂಬಲ್ಲಿ ಜನಿಸಿದನು. ಇದು ವೃಂದಾವನದ ಕೃಷ್ಣ ಮತ್ತು ಗೋಪಿಕೆಯರ, ಮುಖ್ಯವಾಗಿ ರಾಧಾ ಎಂಬ ಗೋಪಿಕೆಯ, ನಡುವಿನ ಸಂಬಂದವನ್ನು ವರ್ಣಿಸುತ್ತದೆ . ಈ ಗ್ರಂಥವು ಹಿಂದೂ ಧರ್ಮದ ಭಕ್ತಿ ಪಂಥದ ಬೆಳೆವಣಿಗೆಯಲ್ಲಿ ಬಹು ಮುಖ್ಯವಾದ ಪಾತ್ರವನ್ನು ವಹಿಸಿದೆ.
ಗೀತ ಗೋವಿಂದವು ಹನ್ನೆರಡು ಅದ್ಯಾಯವಾಗಿ ವಿಭಾಗಿಸಲ್ಪಟ್ಟಿದೆ. ಪ್ರತೀ ಅಧ್ಯಾಯವು ಪ್ರಬಂಧ ವೆಂಬ ೨೪ ಭಾಗವಾಗಿ ವಿಭಾಗಿಸಲ್ಪಟ್ಟಿದೆ.ಪ್ರಬಂಧಗಳು ಅಷ್ಟಪದಿಗಳೆಂಬ ಎಂಟು ದ್ವಿಪದಿಗಳನ್ನು ಒಳಗೊಂಡಿದೆ. ಈ ಗ್ರಂಥವು ರಾಧಳನ್ನು ಕೃಷ್ಣನಿಗಿಂತ ಶ್ರೇಷ್ಠಳು ಎಂದು ಉಲ್ಲೇಖಿಸುತ್ತದೆ. ಇದರ ಪತ್ಯ ನಾಯಿಕೆಯ ಎಂಟು ಲಹರಿಗಳನ್ನು ವಿವರಿಸುತ್ತದೆ.ಈ ವಿವರಣೆಗಳು ನಿರಂತರವಾಗಿ ಭಾರತೀಯ ನೃತ್ಯ ಪ್ರಕಾರಗಳ ಮೇಲೆ ತನ್ನ ಪ್ರಭಾವವನ್ನು ಬೀರುತ್ತಿವೆ.
ಅನುವಾದಗಳು
ಬದಲಾಯಿಸಿಗೀತ ಗೋವಿಂದದ ಪ್ರಥಮ ಇಂಗ್ಲಿಷ್ ಅನುವಾದ ಸರ್ ವಿಲಿಯಂ ಜೋನ್ಸ್ ರವರಿಂದ ೧೭೯೨ರಲ್ಲಿ ಪ್ರಕಟವಾಯಿತು. ಇದರಲ್ಲಿ ಕಳಿಂಗ (ಹಳೆಯ ಒಡಿಶಾ )ವು ಗೀತ ಗೋವಿಂದದ ತವರು ಎಂದು ನಮೂದಿಸಲಾಗಿದೆ. ತದನಂತರ ಗೀತ ಗೋವಿಂದವು ಪ್ರಪಂಚದ ಅದ್ಯಂತ ಹಲವಾರು ಭಾಷೆಗಳಿಗೆ ಅನುವಾದವಾಗಿದೆ.ಇದು ಸಂಸ್ಕೃತ ಕಾವ್ಯದ ಒಂದು ಅತ್ತ್ಯುತ್ತಮ ಉದಾಹರಣೆ ಎಂದು ಪರಿಗಣಿತವಾಗಿದೆ.
ಬಾರ್ಬರ ಸ್ಟಾಲರ್ ಮಿಲ್ಲರ್ 'ರು "ಕಪ್ಪು ದೇವರ ಪ್ರೇಮ ಕಾವ್ಯ "ಎಂಬ ಹೆಸರಿನಲ್ಲಿ ಇದನ್ನು ೧೯೭೭ರಲ್ಲಿ ಅನುವಾದಿಸಿರುತ್ತಾರೆ.[ ಲವ್ ಸಾಂಗ್ ಆಫ್ ದಿ ಡಾರ್ಕ್ ಲಾರ್ಡ್ : ಜಯದೇವ 'ರ ಗೀತಾ ಗೋವಿಂದ ] (ISBN 0-231-11097-9). ಈ ಪುಸ್ತಕವು ಜಾನ್ ಸ್ತ್ರತೋನ್ ಹವ್ಲೆಯ್ ರ ಮುನ್ನುಡಿ ಮತ್ತು ವಿಸ್ತೃತವಾದ ವಿವರಣೆ ಯನ್ನು ಹೊಂದಿದೆ.
ಇವನ್ನೂ ಗಮನಿಸಿ
ಬದಲಾಯಿಸಿ- ಜಯದೇವ
- ಕೆಂದುಲಿ ಸಸಾನ್
- ಜಯದೇವರ ಜನ್ಮ ವಿವಾದ
- ಸಿಖ್ ಪಂಥದಲ್ಲಿ ಜಯದೇವ
- ಸಂಸ್ಕೃತ ಕವಿಗಳ ಪಟ್ಟಿ
- ಸಂಸ್ಕೃತ ಸಾಹಿತ್ಯ
- ಒಡಿಸ್ಸಿ
- ಜಯದೇವ ನ ಸಾಹಿತ್ಯ
ಉಲ್ಲೇಖಗಳು
ಬದಲಾಯಿಸಿ
ಬಾಹ್ಯ ಕೊಂಡಿಗಳು
ಬದಲಾಯಿಸಿ- ಗೀತಾ ಗೋವಿಂದ ದ ಓರಿಯ ಭಾಷೆಯ ಆವೃತ್ತಿ
- ಗೀತಾ ಗೋವಿಂದ : ಒಂದು ಬಹುಮಾದ್ಯಮ ಪ್ರಸ್ತುತಿ Archived 2017-12-13 ವೇಬ್ಯಾಕ್ ಮೆಷಿನ್ ನಲ್ಲಿ.
- ವರ್ಡ್ -ಫಾರ್ -ವರ್ಡ್ ಸಂಸ್ಕ್ರಿತ್ ವೆರ್ಸೆಸ್ ಟು ಇಂಗ್ಲಿಷ್ , ಟ್ರನ್ಸಲೆಶನ್ ಇನ್ ಪ್ರೋಸೆ ಥ್ರೂ ವೆಬ್ ಪೇಜ್ ಗಿರ್ವನಿ -ಗೀತಾ ಗೋವಿಂದಂ