ಗಿಲ್ಬರ್ಟ್ ದ್ವೀಪಗಳು

''ಪೆಸಿಫಿಕ್'' ಸಾಗರದಲ್ಲಿರುವ ಹದಿನಾರು ಹವಳ ದ್ವೀಪಗಳ ಸಮೂಹ. ಉ.ಅ. 40-ದ.ಅ.30 ಮತ್ತು ಪು.ರೇ.1720-1780 ಮಧ್ಯದಲ್ಲಿ ಇವು ಹರಡಿದೆ. ವಿಸ್ತೀರ್ಣ ಸು. 861 ಚ.ಕಿಮೀ ಈ ಸಮೂಹದಲ್ಲಿ ಮುಖ್ಯವಾದ ದ್ವೀಪಗಳು ಮಾಕಿನ್ ಅಥವಾ ಬೂಟಾರಿಟಾರಿ, ಅಬೈಯಾಂಗ್, ತರಾವಾ. ಈ ದ್ವೀಪಗಳು ಸಾಮಾನ್ಯವಾಗಿ ತಗ್ಗಾಗಿವೆ. ಇಲ್ಲಿಯದು ತೇವದಿಂದ ಕೂಡಿದ ವಾಯುಗುಣ. ಸರಾಸರಿ ಮಳೆ 40"-100". ಕೇದಗೆ, ಹಣ್ಣುಗಳು ಮತ್ತು ತೆಂಗು ಇಲ್ಲಿಯ ಬೆಳೆಗಳು. ಕೊಬ್ಬರಿ ಪರದೇಶಕ್ಕೆ ರಫ್ತಾಗುತ್ತದೆ. ಇಲ್ಲಿಯ ಜನ ಮೈಕ್ರೊನೇಷಿಯನರು. ಎಲ್ಲ ದ್ವೀಪಗಳ ಒಟ್ಟು ಜನಸಂಖ್ಯೆ 98,000(2011). ಗಿಲ್ಬರ್ಟ್ ದ್ವೀಪಗಳನ್ನು ಪರಿಶೋಧಿಸಿದವರು ಜಾನ್ ಬೈರನ್ (1765) ಥಾಮಸ್ ಗಿಲ್ಬರ್ಟ್ ಮತ್ತು ಜಾನ್ ಮಾರ್ಷಲ್(1788). 1892 ರಲ್ಲಿ ಇವು ಬ್ರಿಟಿಷರ ಆಡಳಿತಕ್ಕೆ ಬಂದುವು. ೧೯೫೧ ರಲ್ಲಿ ಈ ದ್ವೀಪಗಳು ಮತ್ತು ಎಲಿಸ್ ದ್ವೀಪಗಳು ಸೇರಿ ಬ್ರಿಟಿಷ್ ವಸಾಹತುಗಳಾದವು. 1941 ರಲ್ಲಿ ಈ ದ್ವೀಪಗಳನ್ನು ಜಪಾನ್ ವಶಪಡಿಸಿಕೊಂಡಿತ್ತು. 1943 ರಲ್ಲಿ ಇವು ಮಿತ್ರಸೇನೆಗಳ ವಶಕ್ಕೆ ಬಂದವು. ಎಲಿಸ್ ದ್ವೀಪಗಳೂ ಸೇರಿದಂತೆ ಇವುಗಳ ಆಡಳಿತ ಬ್ರಿಟಿಷರ ಅಧೀನದಲ್ಲಿ 1979 ಜುಲೈರವರೆಗೆ ಇದ್ದಿತು. ಅನಂತರ 1979 ಜುಲೈ 12ರಿಂದ ಕಿರಿಬತಿ ಎಂಬ ಹೆಸರಿನಿಂದ ಸ್ವತಂತ್ರವಾಗಿದೆ. ಈಗ ಸುಮಾರು 33 ದ್ವೀಪಗಳ ಸಮೂಹವಾಗಿದೆ. ಈಗ ವಿಸ್ತೀರ್ಣ 861 ಚ.ಕಿಮೀ. ಇದರ ರಾಜಧಾನಿ ತರಾವಾ.[][][][]

611 × 480 pixelspx
360 × 480 pixelspx
500 × 500 pixelspx

ಉಲ್ಲೇಖಗಳು

ಬದಲಾಯಿಸಿ
  1. http://www.tandfonline.com/doi/abs/10.1080/00223348108572410
  2. http://www.naval-history.net/WW2CampaignsPacific.htm
  3. "ಆರ್ಕೈವ್ ನಕಲು" (PDF). Archived from the original (PDF) on 2017-12-07. Retrieved 2016-11-29.
  4. "ಆರ್ಕೈವ್ ನಕಲು". Archived from the original on 2018-02-10. Retrieved 2016-11-29.