ಗಿಯೊವನ್ನಿ ಶಿಯಾಪರೆಲ್ಲಿ
ಗಿಯೊವನ್ನಿ ವಿರ್ಗಿನಿಯೊ ಶಿಯಾಪರೆಲ್ಲಿ (ಮಾರ್ಚ್ ೧೪, ೧೮೩೫ - ಜುಲೈ ೪, ೧೯೧೦) ಅವರು ಇಟಲಿಯ ಖಗೋಳಜ್ಞ ಮತ್ತು ಇತಿಹಾಸ ವಿಜ್ಞಾನಿ. ಟುರಿನ್ ವಿಶ್ವವಿದ್ಯಾಲಯ ಮತ್ತು ಬರ್ಲಿನ್ ವೀಕ್ಷಣಾಲಯದಲ್ಲಿ ಅವರು ಅಧ್ಯಯನ ನಡೆಸಿದರು.1859-1860ರಲ್ಲಿ ಪುಲ್ಕೊವೊ ವೀಕ್ಷಣಾಲಯ ಮತ್ತು ಬ್ರೆರಾ ವೀಕ್ಷಣಾಲಯದಲ್ಲಿ ಸುಮಾರು 40 ವರ್ಷಗಳಿಗೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿದರು. ಇಟಲಿ ಪ್ರಭುತ್ವದಲ್ಲಿ ಅವರು ಸದಸ್ಯರಾಗಿದ್ದರು, ಅಲ್ಲದೆ ಅಕಾಡೆಮಿಯಾ ಡೇ ಲಿನ್ಸೇಯ್, ಅಕಾಡೆಮಿಯಾ ದಿ ಟೊರಿನೊ ಮತ್ತು ಲೊಂಬೊರ್ಡೊ ಪ್ರಾದೇಶಿಕ ಸಂಸ್ಥೆಯ ಸದಸ್ಯರೂ ಹೌದು, ಮತ್ತು ಮಂಗಳ ಗ್ರಹ ಕುರಿತು ನಡೆಸಿದ ಅಧ್ಯಯನಕ್ಕೆ ಹೆಸರುವಾಸಿಯಾಗಿದ್ದಾರೆ.ಅವರ ಸೋದರ ಸೊಸೆ, ಎಲ್ಸಾ ಶಿಯಾಪರೆಲ್ಲಿ ವಸ್ತ್ರ ವಿನ್ಯಾಸಕಾರರಾಗಿ ಪ್ರಸಿದ್ಧಿ ಪಡೆದಿದ್ದಾರೆ.
ಗಿಯೊವನ್ನಿ ಶಿಯಾಪರೆಲ್ಲಿ | |
---|---|
ಜನನ | ಸವಿಗ್ಲಿಯಾನೊ[೧] | ೧೪ ಮಾರ್ಚ್ ೧೮೩೫
ಮರಣ | July 4, 1910 | (aged 75)
ಪೌರತ್ವ | ಇಟಲಿಗ |
ಕಾರ್ಯಕ್ಷೇತ್ರಗಳು | ಖಗೋಳಶಾಸ್ತ್ರ |
ಮಂಗಳ
ಬದಲಾಯಿಸಿಮಂಗಳನ ಕುರಿತು ದೂರದರ್ಶಕದ ನೆರವಿನಿಂದ ನಡೆಸಿದ ಅವಲೋಕನ ಶಿಯಾಪರೆಲ್ಲಿ ಅವರು ಖಗೋಳ ವಿಜ್ಞಾನಕ್ಕೆ ನೀಡಿದ ಕೊಡುಗೆಗಳ ಪೈಕಿ ಪ್ರಮುಖವಾದ್ದು. ತಮ್ಮ ಆರಂಭದ ಅವಲೋಕನಗಳಲ್ಲಿ, ಮಂಗಳನ ಭೂಖಂಡಗಳು ಮತ್ತು ಸಮುದ್ರಗಳು ಎಂದು ಹೆಸರಿಟ್ಟಿದ್ದಾರೆ. 1877ರ ವೇಳೆ ಗ್ರಹದಲ್ಲಿ ಕಾಣಿಸಿಕೊಂಡ "ಮಹಾನ್ ವಿರೋಧದ" ಸಂದರ್ಭದಲ್ಲಿ, ಅವರು ಮಂಗಳನ ಮೇಲ್ಮೈನಲ್ಲಿರುವ ರೇಖಾತ್ಮಕ ರಚನೆಗಳ ದಟ್ಟ ಜಾಲಗಳ ಕುರಿತು ಅವಲೋಕನ ನಡೆಸಿದರಲ್ಲದೆ, ಇಟಲಿ ಭಾಷೆಯಲ್ಲಿ "ಕನಾಲಿ" ಎಂದು ಕರೆದರು, ಅಂದರೆ "ಪಥಗಳು ಅಥವಾ ದಾರಿ" ಎಂದರ್ಥ ಆದರೆ "ಕಾನಲ್ಸ್" ಎಂದು ತಪ್ಪಾಗಿ ಅನುವಾದಿಸಲಾಗಿದೆ. ಇದು ಕೃತಕ ನಿರ್ಮಾಣ ಎಂಬರ್ಥವನ್ನು ಸೂಚಿಸಿದರೆ, ಮೊದಲಿನದ್ದು ಅಧಿಕಾರ್ಥತೆಯನ್ನು ಸೂಚಿಸುವುದು, ಅದು ಭೂಮಿಯ ಸ್ವಾಭಾವಿಕ ರಚನೆಯೂ ಆಗಿರಬಹುದು. ತಪ್ಪಾದ ಅನುವಾದದಿಂದಾಗಿ, ಮಂಗಳನಲ್ಲಿನ "ಕಾಲುವೆಗಳು" ಜನಪ್ರಿಯವಾಗತೊಡಗಿದವು, ಜೊತೆಗೆ ಮಂಗಳನಲ್ಲಿ ಜೀವಿಗಳಿರುವ ಬಗ್ಗೆ ವಿವಿಧ ಊಹೆಗಳು ಹುಟ್ಟಿಕೊಂಡವು. ಇದರಿಂದಾಗಿ ಮಂಗಳನಲ್ಲಿ ಜೀವಿಗಳಿರುವ ಬಗ್ಗೆ ಸಾಲು ಸಾಲಾಗಿ ಹೊಸ ಕಲ್ಪನೆಗಳು, ಊಹೆಗಳು, ಮತ್ತು ಜನಪದಗಳು ಹೆಚ್ಚಾದವು. ಅಮೇರಿಕಾದ ಖ್ಯಾತ ಖಗೋಳಜ್ಞ ಪರ್ಸಿವಲ್ ಲೊವೆಲ್‌ರವರು ಕೃತಕ ಕಾಲುವೆಗಳ ಬಗ್ಗೆ ತಿಳಿಯಲು ಅತಿ ಉತ್ಸಾಹ ತೋರಿಸಿ ಬೆಂಬಲಿಸಿದರು. ಅಲ್ಲದೆ ಕೆಂಪು ಗ್ರಹದಲ್ಲಿ ಬುದ್ದಿವಂತ ಜೀವಿಗಳ ಅಸ್ಥಿತ್ವವನ್ನು ಸಾಬೀತುಪಡಿಸಲು ಪ್ರಯತ್ನಿಸುವುದರಲ್ಲೇ ತಮ್ಮ ಜೀವನ ಬಹು ಭಾಗವನ್ನು ಕಳೆದರು.ನಂತರದ ದಿನಗಳಲ್ಲಿ, ಇಟಲಿಯ ಖಗೋಳಜ್ಞ ವಿಸೆಂಝೊ ಸೆರುಲ್ಲಿ ನಡೆಸಿದ ಗಮನಾರ್ಹ ಅವಲೋಕನಗಳಿಗೆ ಕೃತಜ್ಞತೆ ಸೂಚಿಸಬಹುದಾದರೂ, ಅದಾಗಲೇ ಪ್ರಸಿದ್ಧಿಯಾಗಿದ್ದ ಕಾಲುವೆಗಳು ನೈಜವಾಗಿ ಕೇವಲ ಭ್ರಮೆಗಳು ಎಂಬುದನ್ನು ವಿಜ್ಞಾನಿಗಳು ಖಚಿತಪಡಿಸಿದರು
ಶಿಯಾಪರೆಲ್ಲಿ ತಮ್ಮ ಪುಸ್ತಕ ಲೈಫ್ ಆನ್ ಮಾರ್ಸ್ ನಲ್ಲಿ ಹೀಗೆ ಬರೆಯುತ್ತಾರೆ: "ನಮಗೆ ತಿಳಿದಿರುವ ಸ್ವರೂಪದಲ್ಲಿರುವ ನೈಜ ಕಾಲುವೆಗಳಿಗಿಂತ, ಮಣ್ಣಿನಲ್ಲಿರುವ ಹಳ್ಳಗಳು ಅಷ್ಟೊಂದು ಆಳವಾಗಿಲ್ಲವೆಂದು ನಾವು ಕಲ್ಪಿಸಿಕೊಳ್ಳಬೇಕು, ಈ ಕಾಲುವೆಗಳು ನೇರವಾಗಿ ಸಾವಿರಾರು ಮೈಲುಗಳುದ್ದಕ್ಕೆ ಮತ್ತು 100, 200 ಕಿ.ಮೀ ಅಥವಾ ಅದಕ್ಕಿಂತ ಹೆಚ್ಚು ಅಗಲಕ್ಕೆ ವಿಸ್ತರಿಸಿಕೊಂಡಿರಬಹುದು. ಮಂಗಳನಲ್ಲಿ ಮಳೆಯಾಗದೇ ಇದ್ದರೂ, ಈ ಕಾಲುವೆಗಳಿರುವುದರಿಂದಾಗಿ ಬಹುಶಃ ಗ್ರಹದ ಒಣ ಮೇಲ್ಮೈ ಮೇಲೆ ನೀರು (ಮತ್ತು ಅದರ ಜೈವಿಕ ಜೀವನ) ಹರಡಲು ಸಾಧ್ಯವಾಗುತ್ತದೆ ಎಂಬುದನ್ನು ನಾನು ಈಗಾಗಲೇ ಬೊಟ್ಟು ಮಾಡಿದ್ದೇನೆ. "
ಖಗೋಳ ವಿಜ್ಞಾನ ಮತ್ತು ವಿಜ್ಞಾನದ ಇತಿಹಾಸ
ಬದಲಾಯಿಸಿಸೌರಮಂಡಲದಲ್ಲಿರುವ ವಸ್ತುಗಳ ವೀಕ್ಷಕರಾಗಿ ಶಿಯಾಪರೆಲ್ಲಿ ಅವರು ಅವಳಿ ನಕ್ಷತ್ರಗಳ ಕುರಿತು ಅಧ್ಯಯನ ಮಾಡಿದ್ದಾರೆ. ಅವರು 26 ಎಪ್ರಿಲ್ 1861ರಂದು ಕ್ಷುದ್ರಗ್ರಹ 69 ಹೆಸ್ಪೆರಿಯಾವನ್ನು ಅನ್ವೇಷಿಸಿದರು, ಅಲ್ಲದೆ ಪೆರ್ಸೈಡ್ಸ್, ಸಿಂಹೋಲ್ಕೆಗಳು ಮತ್ತು ಉಲ್ಕಾಪಾತಗಳು {/{7}ಧೂಮಕೇತುಗಳ /7} ಜೊತೆಗಿರುತ್ತವೆ ಎಂಬುದನ್ನು ಪ್ರಯೋಗಗಳ ಮೂಲಕ ವಿವರಿಸಿದರು.ಅವರು ನಿರೂಪಿಸಿದರು, ಉದಾಹರಣೆಗೆ ಧೂಮಕೇತು ಟೆಂಪಲ್-ಟಟಲ್‌ನಂತಹವುಗಳೊಂದಿಗೆ ಸರಿಹೊಂದುವ ಸಿಂಹೋಲ್ಕೆಗಳ ಉಲ್ಕಾಪಾತದ ಪಥ.ಕಲ್ಪನೆಗಳನ್ನು ವ್ಯವಸ್ಥಿತವಾಗಿ ರೂಪಿಸಲು ಖಗೋಳಜ್ಞರಿಗೆ ಈ ಅವಲೋಕನಗಳು ಸಹಕಾರಿಯಾದವು. ಆಮೇಲೆ ಉಲ್ಕಾಪಾತಗಳು ಧೂಮಕೇತುಗಳ ಬಾಲವಾಗಿರಬಹುದೆಂದು ನಿಖರವಾಗಿ ಸಾಬೀತುಪಡಿಸಿದರು.
ಶಿಯಾಪರೆಲ್ಲಿ ಅವರು ಶಾಸ್ತ್ರಿಯ ಖಗೋಳ ವಿಜ್ಞಾನ ಇತಿಹಾಸದ ವಿದ್ವಾಂಸರಾಗಿದ್ದರು. ಸ್ನೈಡಸ್ ಎಡೊಕ್ಸಸ್ ಮತ್ತು ಕ್ಯಾಲಿಪಸ್‌ನ ಏಕಕೇಂದ್ರಕ ಮಂಡಲಗಳನ್ನು ಅವರು ಮೊದಲ ಬಾರಿಗೆ ಮನಗಂಡರು. ನಂತರದ ದಿನಗಳಲ್ಲಿ ಹಲವಾರು ಖಗೋಳಜ್ಞರು ಬಳಸಿದ್ದನ್ನು ಭೌತಿಕ ವಸ್ತುಗಳಂತೆ ತೆಗೆದುಕೊಳ್ಳದಿದ್ದರೂ ಸಹ, ಅವುಗಳನ್ನು ಆಧುನಿಕ ಫೌರಿಯರ್ ಸರಣಿಗಳಿಗೆ ಸಮಾನವಾದ ಕ್ರಮಾವಳಿಗಳ ಒಂದು ಭಾಗ ಮಾತ್ರವಾಗಿ ಪರಿಗಣಿಸಲಾಗಿದೆ.
ಗೌರವಗಳು ಮತ್ತು ಪ್ರಶಸ್ತಿಗಳು
ಬದಲಾಯಿಸಿಪ್ರಶಸ್ತಿಗಳು
- ರಾಯಲ್ ಖಾಗೋಳಿಕ ಸೊಸೈಟಿಯ ಚಿನ್ನದ ಪದಕ (1872)
- ಬ್ರೂಸ್ ಪದಕ (1902)
ಅವರ ಹೆಸರಲ್ಲಿ ನಾಮಕರಣಗೊಂಡವುಗಳು
- ಕ್ಷುದ್ರಗ್ರಹ 4062 ಶಿಯಾಪರೆಲ್ಲಿ
- ಚಂದ್ರನ ಮೇಲಿರುವ ಶಿಯಾಪರೆಲ್ಲಿಗುಳಿ
- ಮಂಗಳನಲ್ಲಿರುವ ಶಿಯಾಪರೆಲ್ಲಿಗುಳಿ
ಆಯ್ದ ಲೇಖನಗಳು
ಬದಲಾಯಿಸಿ- 1873 - ಲಿ ಸ್ಟೆಲ್ಲೆ ಕ್ಯಾಡಿಂಟಿ (ದಿ ಫಾಲಿಂಗ್ ಸ್ಟಾರ್ಸ್ )
- 1893 - ಲಾ ವಿಟಾ ಸುಲ್ ಪಿಯಾನೆಟಾ ಮಾರ್ಟೆ (ಲೈಫ್ ಆನ್ ಮಾರ್ಸ್ )
- 1925 - ಸ್ಕ್ರಿಟ್ಟಿ ಸುಲ್ಲಾ ಸ್ಟೋರಿಯಾ ಡೆಲ್ಲಾ ಅಸ್ಟ್ರೋನೊಮಿಯಾ ಆಂಟಿಕಾ ಮೂರು ಸಂಪುಟಗಳಲ್ಲಿ (ಶಾಸ್ತ್ರೀಯ ಖಗೋಳ ವಿಜ್ಞಾನ ಇತಿಹಾಸದ ಬಗ್ಗೆ ಲೇಖನಗಳು ).ಬೋಲ್ಗೊನಾ. ಮರುಮುದ್ರಿಸಿ: ಮಿಲನೊ, ಮಿಮೆಸಿಸ್, 1997.
ಆಕರಗಳು
ಬದಲಾಯಿಸಿಹೆಚ್ಚುವರಿ ಓದಿಗಾಗಿ
ಬದಲಾಯಿಸಿ- "ಶಿಯಾಪರೆಲ್ಲಿ, ಗಿಯೊವನ್ನಿ ವಿರ್ಜಿನಿಯೊ (1835-1910)" - http://www.daviddarling.info/ನಿಂದ ಜೀವನ ಚರಿತ್ರೆ
- ವೀಕ್ಷಣಾಲಯಗಳು: ವೀಕ್ಷಣಾಲಯದಲ್ಲಿರುವ ಜಿ. ವಿ. ಶಿಯಾಪರೆಲ್ಲಿ, ಜೆ. ಜಿ. ಗಲ್ಲೆ, ಜೆ.ಬಿ.ಎನ್. ಹೆನ್ನೆಸ್ಸಿ ಜೆ.ಕೋಲ್ಸ್, ಜೆ. ಇ. ಗೋರೆ, ಸಂ. 33, ಪು. 311-318, ಆಗಸ್ಟ್ 1910
ಹೊರಗಿನ ಕೊಂಡಿಗಳು
ಬದಲಾಯಿಸಿ- Source texts from Giovanni Schiaparelli.
- ಲೆ ಮನಿ ಸು ಮರ್ಟೆ: ಐ ದಿಯಾರಿ ದಿ ಜಿ.ವಿ. ಶಿಯಾಪರೆಲ್ಲಿ Archived 2007-12-10 ವೇಬ್ಯಾಕ್ ಮೆಷಿನ್ ನಲ್ಲಿ.
- La Vita Sul Pianeta Marte at Project Gutenberg
- ಗಿಯೊವನ್ನಿ ಶಿಯಾಪರೆಲ್ಲಿ
- ವೀಕ್ಷಣಾಲಯಗಳು