ಗಾವಳಿ, ಉಡುಪಿ

ಭಾರತ ದೇಶದ ಗ್ರಾಮಗಳು

 

ಗಾವಳಿಯು ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿರುವ ಒಂದು ಗ್ರಾಮವಾಗಿದ್ದು, ಇಲ್ಲಿ ಇತಿಹಾಸಪೂರ್ವ ಶಿಲಾ ಚಿತ್ರಗಳು ಕಂಡುಬರುತ್ತವೆ.

ಪುರಾತತ್ವ ಸಂಶೋಧನೆಗಳು

ಬದಲಾಯಿಸಿ

ಗಾವಳಿಯ ಗ್ರಾಮದೇವತೆ ಬ್ರಹ್ಮಸ್ಥಾನ ದೇವಾಲಯದ ಸಮೀಪ ಬಂಡೆಯ ಮೇಲೆ ಕಲ್ಲಿನ ರೇಖಾಚಿತ್ರಗಳು ಕೆತ್ತನೆಯ ರೂಪದಲ್ಲಿವೆ. ಭಾರತೀಯ ಮೂಲದ್ದೇ ಆಗಿರುವ ಅಮೆರಿಕಾದ 'ಬ್ರಹ್ಮನ್' ಹಸುವಿನ ಆಕೃತಿಯನ್ನು ಬಂಡೆಯ ಮೇಲೆ ಕೆತ್ತಲಾಗಿದೆ ಮತ್ತು ಈ ರೇಖಾ ರೇಖಾಚಿತ್ರವನ್ನು ರಂಗೋಲಿ ರೇಖಾಚಿತ್ರಗಳಿಗೆ ವಿಸ್ತರಿಸಲಾಗಿದೆ. [] ಬಂಡೆಗಳ ಮೇಲೆ ಇದೇ ರೀತಿಯ ಕೆತ್ತನೆಯ ರೇಖಾಚಿತ್ರಗಳು ಹಿರೇ ಬೆಣಕಲ್, ಬಳ್ಳಾರಿ ಜಿಲ್ಲೆಯ ರಾಂಪುರ, ಉತ್ತರ ಕನ್ನಡ ಜಿಲ್ಲೆಯ ಸೋಂದಾದಲ್ಲಿ ಕಂಡುಬರುತ್ತವೆ. []

ಈ ಸ್ಥಳದಲ್ಲಿ ಹೊಸ ಶಿಲಾಯುಗಕ್ಕೆ ಸೇರಿದ ಒಂದು ಬದಿಯ ಆಯುಧದ ರೂಪದಂತೆ ಕಾಣಿಸುವ ಕಲ್ಲಿನ ಉಪಕರಣಗಳು ಮತ್ತು ಮರಳುಗಲ್ಲಿನ ಆಯುಧಗಳು ಕಂಡುಬಂದಿವೆ. [] ಇಂತಹ ಆಯುಧಗಳನ್ನು ಡೊಲೊರೈಟ್ ಕಲ್ಲಿನಿಂದ ತಯಾರಿಸಲಾಗುತ್ತದೆ ಮತ್ತು ಅವುಗಳು ಉತ್ತಮವಾದ ಮೇಲ್ಮೈಯನ್ನು ಹೊಂದಿರುತ್ತದೆ ಮತ್ತು ಈಟಿಯನ್ನು ಹೋಲುತ್ತದೆ. []

ಕ್ರಿಸ್ತಪೂರ್ವ ೮೦೦-೬೦೦ ಇಸವಿಯದ್ದೆಂದು ಗುರುತಿಸಲಾದ, ಸಮುದ್ರಮಟ್ಟದಿಂದ 250 ಅಡಿ ಎತ್ತರದಲ್ಲಿ ಸ್ಥಿತಗೊಂಡಿರುವ ಈ ಸ್ಥಳವನ್ನು ಪ್ರಸಿದ್ಧ ಇತಿಹಾಸಕಾರ ಡಾ.ಎ.ಸುಂದರ ಅವರು ಗುರುತಿಸಿರುತ್ತಾರೆ. ಇಲ್ಲಿ ಕಂಡುಬಂದಿರುವ ಕಲ್ಲಿನ ಆಯುಧಗಳು ಕ್ರಿ.ಪೂ. 2000-1500 BCE ರಷ್ಟು ಹಳೆಯದ್ದೆಂದೂ ಗುರುತಿಸಲಾಗಿದೆ. []

ಉಡುಪಿ ಜಿಲ್ಲೆಯಲ್ಲಿ ಕಂಡುಬರುವ ಮಧ್ಯಶಿಲಾಯುಗದ ತಾಣಗಳಾದ ಅವರ್ಸೆ, ಮಸಿಕೆರೆ, ಗುಡ್ಡೆಟ್ಟು, ಕೊಳನಕಲ್ಲು, ನಂಚಾರು, ಪೇತ್ರಿ ಸಮೀಪದ ಸಾಸ್ತಾವು ಇತ್ಯಾದಿಗಳ ಪಟ್ಟಿಯಲ್ಲಿ ಗಾವಳಿಯನ್ನೂ ಸೇರಿಸಲಾಗಿದೆ. []

ಈ ಪುಟವನ್ನೂ ನೋಡಿ

ಬದಲಾಯಿಸಿ

ಬಾಹ್ಯ ಕೊಂಡಿಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. Dr. A, Sundara. "Pre historic art in Karnataka". Indira Gandhi National Centre for Arts(IGNCA). Archived from the original on 15 July 2013. Retrieved 4 August 2012.
  2. kannada, classical.org. "Mural Paintings of Karnataka". classicalkannada.org. Archived from the original on 12 April 2013. Retrieved 4 August 2012.
  3. DHNS. "Stone Age weapons and carvings found at Gavali, Kundapur". brahmavara.com/news. Retrieved 4 August 2012.
  4. Udayavani. "Neolithic weapons found". Udayavani 20.7.2010. Retrieved 4 August 2012.[ಮಡಿದ ಕೊಂಡಿ]
  5. mega media, news. "Gavali in Udupi points a new stone Age-site: Several stone weapons discovered". megamedianews dt.20.7.2012. Archived from the original on 4 March 2016. Retrieved 4 August 2012. {{cite web}}: |first= has generic name (help)
  6. Vol.31, Issue 1 (2006). Man and Environment. New Delhi: Indian Society for Prehistoric and Quaternary Studies. p. 42.{{cite book}}: CS1 maint: numeric names: authors list (link)

ಟೆಂಪ್ಲೇಟು:Settlements in Udupi district