ಗಾರ್ಗ್ಯ (ವೈಯಾಕರಣಿ)
ಗಾರ್ಗ್ಯ ಒಬ್ಬ ಪ್ರಸಿದ್ಧ ಪ್ರಾಚೀನ ವೈಯಾಕರಣಿ. ಈತ ನಿರುಕ್ತವನ್ನು ಕುರಿತ ಗ್ರಂಥವನ್ನು ರಚಿಸಿದ್ದಿರಬಹುದೆಂದು ಹೇಳಲಾಗಿದೆ. ವೇದಾಂಗ - ಶಿಕ್ಷಾ ಭಾಗಗಳಾಗಿರುವ ಪ್ರಾತಿಶಾಖ್ಯಗಳಲ್ಲಿ ಈತನ ಹೆಸರು ಕಂಡುಬರುತ್ತದೆ. ಸುಪ್ರಸಿದ್ಧ ನಿರುಕ್ತನಾದ ಯಾಸ್ಕ (ಕ್ರಿ.ಪೂ. ಸು. 600) ತನ್ನ ನಿರುಕ್ತದಲ್ಲಿ ಸೂಚಿಸಿರುವ ಮತ್ತು ಅವನಿಗಿಂತಲೂ ಮೊದಲಿನವರಾಗಿದ್ದ ವ್ಯಾಕರಣಾಚಾರ್ಯರಲ್ಲಿ ಗಾರ್ಗ್ಯನೂ ಒಬ್ಬನಾಗಿದ್ದಾನೆ. ಈತನ ಹೆಸರು ಕಂಡುಬರುವ ಮತ್ತೊಂದು ಮುಖ್ಯ ಗ್ರಂಥವೆಂದರೆ ಪಾಣಿನಿಯ ಅಷ್ಟಾಧ್ಯಾಯೀ (ಕ್ರಿ. ಪೂ. ಸು. 400).[೧][೨][೩] ಈ ಗ್ರಂಥಗಳು ಸಾಮಾನ್ಯವಾಗಿ ವೈದಿಕ ಸ್ವರಗಳ ವಿಚಾರಕ್ಕೆ ಸಂಬಂಧಪಟ್ಟಂತೆ ಈತನ ಹೆಸರನ್ನು ಸೂಚಿಸುತ್ತವೆ.
ನಾಮಪದಗಳೆಲ್ಲವೂ ಆಖ್ಯಾತಗಳಿಂದ (ಕ್ರಿಯಾಸೂಚಕ ಧಾತುಗಳು) ನಿಷ್ಪನ್ನವಾಗುತ್ತವೆಂದೂ ಅದು ಆಚಾರ್ಯ ಶಾಕಟಾಯನನ ಹಾಗೂ ನೈರುಕ್ತ ಸಿದ್ಧಾಂತವೆಂದೂ ಯಾಸ್ಕ ಪ್ರತಿಪಾದಿಸಿದ್ದಾನೆ. ಯಾಸ್ಕನೇ ಹೇಳಿರುವ ಪ್ರಕಾರ, ಕೆಲವು ವೈಯಾಕರಣದಂತೆ ಗಾರ್ಗ್ಯನೂ ಎಲ್ಲ ನಾಮಪದಗಳೂ ಧಾತು ನಿಷ್ಪನ್ನವಾಗಲಾರವೆಂಬ ಅಭಿಪ್ರಾಯವುಳ್ಳವನಾಗಿದ್ದಾನೆ.
ಉಲ್ಲೇಖಗಳು
ಬದಲಾಯಿಸಿ- ↑ George Cardona 1997, pp. 148–157.
- ↑ Monier Monier-Williams (1876). Indian Wisdom Or Examples of the Religious, Philosophical and Ethical Doctrines of the Hindus. quote: "Pāṇini himself mentions several grammarians as having preceded him, such as Apisali, Kasyapa, Gargya, Galava, Cakravarmana, Bharadvaja, Sakatayana, Sakalya, Senaka, and Sphoṭayāna. The Unadi-sutras are thought by some to be anterior to Pāṇini." Also discusses the differences in opinions on interpreting Vedic texts, as given by Aurnabhava, Aupamanyava, Agrayana, Katthakya, Kautsa and Shakapuni – all mentioned as "anterior to Yāska" on p. 169
- ↑ Pāṇini; Katre, Sumitra Mangesh (1989). Aṣṭādhyāyī of Pāṇini. Motilal Banarsidass. pp. xix–xxi. ISBN 978-81-208-0521-7. Archived from the original on 29 March 2024. Retrieved 18 July 2018.
ಗ್ರಂಥಸೂಚಿ
ಬದಲಾಯಿಸಿ- George Cardona (1997). Pāṇini: A Survey of Research. Motilal Banarsidass. ISBN 978-81-208-1494-3.