ಗಾಂಡೀವ

ಒಂದು ದಿವ್ಯ ಧನುಸ್ಸು

ಗಾಂಡೀವ ಒಂದು ದಿವ್ಯ ಧನುಸ್ಸು. ಈ ಧನುಸ್ಸು ಬ್ರಹ್ಮನಿಂದ ಇಂದ್ರನಿಗೂ,ಇಂದ್ರನಿಂದ ವರುಣನಿಗೂ,ವರುಣನಿಂದ ಅಗ್ನಿಗೂ ಬಂತು. ಖಾಂಡವದಹನ ಸಮಯದಲ್ಲಿ ಅಗ್ನಿ ಅರ್ಜುನ ಮಾಡಿದ ಉಪಕಾರಕ್ಕಾಗಿ ಆತನಿಗಿದನ್ನು ಕೊಟ್ಟ[೧]. ಈ ಧನಸ್ಸು ಎರಡು ಅಕ್ಷಯ ಬತ್ತಳಿಕೆಗಳೊಂದಿಗೆ ಅರ್ಜುನನಿಗೆ ಪ್ರಾಪ್ತವಾಗಿತ್ತು. ಈ ಕಾರಣದಿಂದಲೇ ಅವನು ಗಾಂಡೀವಿ ಎನಿಸಿದ. ಇದರ ಮಹಿಮೆಯಿಂದ ಅರ್ಜುನ ಎಲ್ಲ ದಿಕ್ಕುಗಳನ್ನು ಗೆದ್ದು, ಇಂದ್ರನನ್ನು ಸೋಲಿಸಿದುದಲ್ಲದೆ ಇದರ ತುದಿಯಿಂದ ಶಿವನ ನೆತ್ತಿ ಮೇಲೆ ಹೊಡೆದು ಗಾಯ ಮಾಡಿದ. ಮಹಾಪ್ರಸ್ಥಾನ ಸಮಯದಲ್ಲಿ ಅರ್ಜುನ ಇದನ್ನು ಸಮುದ್ರದಲ್ಲಿ ಬಿಸಾಡಿದನೆಂದು ಹೇಳಲಾಗಿದೆ. ಅರ್ಜುನನು ಕುರುಕ್ಷೇತ್ರ ಯುದ್ಧದಲ್ಲಿ ಈ ಆಯುಧವನ್ನು ಬಳಸಿದನು, ಅವನನ್ನು ಸೋಲಿಸುವವರೇ ಇರಲಿಲ್ಲ. ಯಾವುದೇ ಸಾಮಾನ್ಯ ವ್ಯಕ್ತಿಗೆ ಗಾಂಡೀವವಿನ ನಿಯಂತ್ರಣ ಸಾಧ್ಯವಾಗಿರಲಿಲಲ್ಲ. ಬಿಲ್ಲನ್ನು ಹೊಡೆದಾಗ ಅದು ಗುಡುಗು ಧ್ವನಿ ಮಾಡುತ್ತಿತ್ತು. ಇದು 108 ಬಿಲ್ಲು ತಂತಿಗಳನ್ನು ಹೊಂದಿತ್ತು, ಅವಿನಾಶಿಯಾಗಿ ಇತ್ತು ಮತ್ತು ಇತರ ವಿಶೇಷ ಗುಣಗಳನ್ನು ಹೊಂದಿತ್ತು.

ಉಲ್ಲೇಖಗಳು ಬದಲಾಯಿಸಿ

  1. Bharadvaja Sarma, Vyāsa, Bharadvaja Sarma. Vyasa's Mahabharatam. Academic Publishers. p. 844.{{cite book}}: CS1 maint: multiple names: authors list (link)

ಬಾಹ್ಯ ಸಂಪರ್ಕಗಳು ಬದಲಾಯಿಸಿ

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:



"https://kn.wikipedia.org/w/index.php?title=ಗಾಂಡೀವ&oldid=1170542" ಇಂದ ಪಡೆಯಲ್ಪಟ್ಟಿದೆ