ಆಂಟೋನಿಯಸ್ ಗಯಸ್ ೧ - ಕ್ರಿಸ್ತ ಪೂರ್ವ ಮೊದಲ ಶತಮಾನದಲ್ಲಿ ರೋಮನ್ ಗಣರಾಜ್ಯದಲ್ಲೇ ಅತ್ಯುತ್ತಮ ವಾಕ್ಪಟುವೆಂದು ಹೆಸರು ಪಡೆದಿದ್ದ ಮಾರ್ಕಸ್ ಆಂಟೋನಿಯಸ್‍ನ ಮಗ. ಗಯಸ್ ಆಂಟೋನಿಯಸ್ ಅವರು ೪೨ ಬಿಸಿ ಯಲ್ಲಿ ಮರಣಹೊಂದಿದ್ದರು.ಇವರ ಅಣ್ಣನ ಹೆಸರು ಮಾರ್ಕ್ ಆಂಟೋನಿ.

ವೃತ್ತಿ ಜೀವನ ಬದಲಾಯಿಸಿ

ಸಿಸಿರೋನ ಜೊತೆ ದಂಡಾಧಿಕಾರಿಯಾಗಿಯೂ (ಕ್ರಿ.ಪೂ 66) ಮೂರು ವರ್ಷಗಳ ಅನಂತರ ರಾಜನ ಸಲಹೆಗಾರನಾಗಿಯೂ ಕೆಲಸ ಮಾಡಿದ. ಕ್ರಿ.ಪೂ. 62ರಲ್ಲಿ ಅವನನ್ನು ಮ್ಯಾಸಿಡೋನಿಯದ ಆಡಳಿತಾಧಿಕಾರಿಯಾಗಿ ನೇಮಿಸಿದರು. ಎರಡು ವರ್ಷ ಅಲ್ಲಿದ್ದು ಹಿಂತಿರುಗಿದ ಮೇಲೆ, ನ್ಯಾಯವಿರುದ್ಧವಾಗಿ ಜನರಿಂದ ಸುಲಿಗೆ ನಡೆಸಿದನೆಂಬ ಆಪಾದನೆ ಹೊರಿಸಿ ವಿಚಾರಣೆಗೊಳಪಡಿಸಿದರು. ಸಿಸಿರೋ ಅವನ ಪರ ವಾದಿಸಿದರೂ ತಪ್ಪಿತಸ್ಥನೆಂದು ತೀರ್ಮಾನವಾಗಿ ಗಡಿಪಾರು ಮಾಡಿದರು. ಜೂಲಿಯಸ್ ಸೀಸರ್ ಅವನನ್ನು ಹಿಂದಕ್ಕೆ ಕರೆಸಿಕೊಂಡಂತೆ ತೋರುತ್ತದೆ; ಏಕೆಂದರೆ ಕ್ರಿ.ಪೂ. 42ರಲ್ಲಿ ಆತ ಜನಗಣತಿ ಮತ್ತು ಪ್ರಜೆಗಳ ರೀತಿನೀತಿಗಳನ್ನು ನೋಡಿಕೊಳ್ಳುವ ಅಧಿಕಾರಿಯಾಗಿ (ಸೆನ್ಸಾರ್) ಕೆಲಸ ಮಾಡುತ್ತಿದ್ದ.

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: