ಗಣೇಶ ಶಂಕರ ವಿದ್ಯಾರ್ಥಿ

ಭಾರತೀಯ ಪತ್ರಕರ್ತ

ಗಣೇಶ ಶಂಕರ ವಿದ್ಯಾರ್ಥಿ (1890-1931) ಒಬ್ಬ ಹಿಂದಿ ಸಾಹಿತಿ ಮತ್ತು ಸಾರ್ವಜನಿಕ ಕಾರ್ಯಕರ್ತ.

೧೯೪೦ರ ದಶಕದ ಭಾವಚಿತ್ರ

ಹುಟ್ಟಿದ ಊರು ನನಿಹಾಲ್ ಪ್ರಯಾಗ. ತಂದೆಯ ಹೆಸರು ಜಯನಾರಾಯಣ. ಮುಂಗಾವಲಿ (ಗ್ವಾಲೇರ್) ಎಂಬಲ್ಲಿ ಶಿಕ್ಷಣ ನಡೆಯಿತು. ಅನಂತರ ಕಾನ್‌ಪುರದಲ್ಲಿ ಸರ್ಕಾರಿ ನೌಕರಿ ಹಿಡಿದನಾದರೂ ಅಲ್ಲಿನ ಇಂಗ್ಲಿಷ್ ಅಧಿಕಾರಿಗಳ ಜೊತೆಗೆ ಹೊಂದಿಕೊಳ್ಳಲು ಆಗದದ್ದರಿಂದ ಆ ಕೆಲಸಕ್ಕೆ ರಾಜೀನಾಮೆ ಕೊಟ್ಟ. ಅನಂತರ ಸರಸ್ವತಿ, ಅಭ್ಯುದಯ ಇತ್ಯಾದಿ ನಿಯತಕಾಲಿಕ ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯತೊಡಗಿದ. ಪ್ರಭಾ ಪತ್ರಿಕೆಯ ಸಂಪಾದಕನಾದ. 1913ರಲ್ಲಿ ಪ್ರತಾಪ ವಾರಪತ್ರಿಕೆಯ ಸಂಪಾದಕತ್ವವನ್ನು ವಹಿಸಿಕೊಂಡ ಮೇಲೆ ಒಂದು ಕಡೆ ನೆಲೆ ನಿಲ್ಲಲು ಸಾಧ್ಯವಾಯಿತು.[][][] ಕ್ರಮೇಣ ಪತ್ರಕರ್ತ, ನಿಬಂಧ ಲೇಖಕ ಮತ್ತು ವಿಶಿಷ್ಟ ಶೈಲಿಯ ಬರೆಹಗಾರ ಎಂದು ಹಿಂದಿ ಸಾಹಿತ್ಯದಲ್ಲಿ ಈತ ಪ್ರಸಿದ್ಧಿಗಳಿಸಿದ. ಒಕ್ಕಲಿಗರ ಚಳವಳಿಗಳಲ್ಲಿ, ಸಾಮಾಜಿಕ ಮತ್ತು ರಾಜಕೀಯ ಚಳವಳಿಗಳಲ್ಲಿ ನಿರ್ಭಯದಿಂದ ಈತ ಸಕ್ರಿಯವಾಗಿ ಭಾಗವಹಿಸಿದ. ಕಾನ್‌ಪುರದಲ್ಲಿ ನಡೆದ ಹಿಂದೂ-ಮುಸ್ಲಿಂ ದುರಂತದಲ್ಲಿ ನೊಂದವರಿಗೆ ಸಹಾಯ ಮಾಡುತ್ತಿರುವ ಸಮಯದಲ್ಲಿ ಗುಂಡಿನೇಟಿಗೆ ಬಲಿಯಾಗಿ ಈತ ಅಕಾಲ ಮರಣಕ್ಕೆ ತುತ್ತಾದ.

ಉಲ್ಲೇಖಗಳು

ಬದಲಾಯಿಸಿ
  1. Brass, Paul R. (1965). Factional Politics in an Indian State: The Congress Party in Uttar Pradesh. University of California Press. pp. 169–196.
  2. Mukul, Akshaya (2015-11-03). Gita Press and the Making of Hindu India. HarperCollins. ISBN 978-9351772316.
  3. Gould, William (2004-04-15). Hindu Nationalism and the Language of Politics in Late Colonial India. Cambridge University Press. pp. 61–100. ISBN 978-1139451956.