ಗಣೇಶನ ಮದುವೆ (ಚಲನಚಿತ್ರ)
ಕನ್ನಡ ಚಲನಚಿತ್ರ
ಟೆಂಪ್ಲೇಟು:Infobox film/short description
ಗಣೇಶನ ಮದುವೆ |
---|
ಗಣೇಶನ ಮದುವೆ ಯು 1990 ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರ ವಾಗಿದ್ದು ಫಣಿರಾಮಚಂದ್ರ ಅವರು ಇದನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಅನಂತನಾಗ್ , ವಿನಯಾಪ್ರಸಾದ್, ಮುಖ್ಯಮಂತ್ರಿ ಚಂದ್ರು , ರಮೇಶ್ ಭಟ್ ಅವರುಗಳು ಪ್ರಮುಖ ಪಾತ್ರ ವಹಿಸಿದ್ದಾರೆ. ಇದು ಅಂದಿನ ದಿನಗಳಲ್ಲಿ ಬಾಕ್ಸ್ ಆಫೀಸ್ ನಲ್ಲಿ ತುಂಬಾ ಯಶಸ್ವಿಯಾದ ಚಲನಚಿತ್ರವಾಗಿದ್ದು ಅತ್ಯುತ್ತಮವಾದ ಹಾಸ್ಯಪ್ರಧಾನ ಕನ್ನಡ ಚಲನಚಿತ್ರಗಳಲ್ಲಿ ಒಂದೆಂದು ಇದನ್ನು ಪರಿಗಣಿಸಲಾಗಿದೆ.
ಪಾತ್ರವರ್ಗ
ಬದಲಾಯಿಸಿ- ಅನಂತನಾಗ್ ಮುಖ್ಯಪಾತ್ರವಾದ ಗಣೇಶ ಆಗಿ
- ವಿನಯಾ ಪ್ರಸಾದ್ ಆದಿಲಕ್ಷ್ಮಿ ಆಗಿ
- ಮುಖ್ಯಮಂತ್ರಿ ಚಂದ್ರು ರಮಣ ಮೂರ್ತಿ ಆಗಿ
- ರಮೇಶ್ ಭಟ್ ಶಾಸ್ತ್ರಿ ಆಗಿ —
- ವೈಶಾಲಿ ಕಾಸರವಳ್ಳಿ ಸತ್ಯಭಾಮ ಆಗಿ
- ಶಿವರಾಂ ಗೋವಿಂದರಾಯನಾಗಿ
- ಎಂ. ಎಸ್. ಉಮೇಶ್ — ವಠಾರದ ಇನ್ನೊಬ್ಬ ವಾಸಿಯಾಗಿ
- ರತ್ನಾಕರ ವಾಮನಮೂರ್ತಿಯಾಗಿ
- ಸತ್ಯಭಾಮ ಕನಕ ಆಗಿ
- ಅಂಜಲಿ ಸುಧಾಕರ್ ಅಭಿಲಾಶಾ ಆಗಿ
- ಸಿಹಿ ಕಹಿ ಚಂದ್ರು ಚಂದ್ರು ಪಾತ್ರದಲ್ಲಿ
- ಹೊನ್ನವಳ್ಳಿ ಕೃಷ್ಣ ಪರಮೇಶಿ ಆಗಿ.
- ಮಂಜುಮಾಲಿನಿ ಗಜಲಕ್ಷ್ಮಿಯಾಗಿ
- ಪ್ರಥ್ವಿರಾಜ್ ಪರಮೇಶಿಯ ತಂದೆಯಾಗಿ
- ವಿಷ್ಣುವರ್ಧನ್ ಅತಿಥಿ ಪಾತ್ರದಲ್ಲಿ ತಾವೇ ಆಗಿ
ಹಿನ್ನೆಲೆಸಂಗೀತ
ಬದಲಾಯಿಸಿಚಿತ್ರಕ್ಕೆ ಹಿನ್ನೆಲೆ ಸಂಗೀತವನ್ನು ರಾಜನ್-ನಾಗೇಂದ್ರ ಜೋಡಿಯು ಒದಗಿಸಿದೆ.
ಕ್ರಮ ಸಂಖ್ಯೆ | ಹಾಡು | ಹಾಡುಗಾರರು | ಅವಧಿ |
---|---|---|---|
1 | "ಪ್ರೇಮದ ಶ್ರುತಿ ಮೀಟಿದೆ" | ಎಸ್ ಜಾನಕಿ, ಜಯಚಂದ್ರನ್ | 4:26 |
2 | "ಶ್ರೀದೇವಿ ಮಾದೇವಿ ಕಣ್ಣೋಟ ಬೇಡ" | ಎಸ್ ಜಾನಕಿ, ಜಯಚಂದ್ರನ್ | 4:56 |
3 | " ಸೌಂದರ್ಯ ನೋಡು ನಲ್ಲ" | ಎಸ್ ಜಾನಕಿ | 4:16 |
4 | " ಅನುರಾಗ ತೋಟದಲ್ಲಿ ಹೂವಂತೆ ನಾನು" | ಎಸ್ ಜಾನಕಿ | 4:05 |
5 | " ಬೆಂಗಳೂರು ಸಿಟಿಯ ಒಳಗೆ" | ನಾಗೇಂದ್ರಪ್ಪ, ಮುಖ್ಯಮಂತ್ರಿ ಚಂದ್ರು ಮತ್ತು ಇತರರು | 1:28 |