ಗಣಿಗಲ ತೋರ
ಗಣಿಗಲ ತೋರ | |
---|---|
Barringtonia racemosa flowers | |
Scientific classification | |
ಸಾಮ್ರಾಜ್ಯ: | |
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | Eudicots
|
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | B. racemosa
|
Binomial name | |
Barringtonia racemosa (L.) Spreng.
| |
Synonyms | |
|
ಗಣಿಗಲ ತೋರ ಭಾರತದ ಎಲ್ಲೆಡೆಯೂ ಕಾಣಬರುವ ಒಂದು ಅಲಂಕಾರಿಕ ಸಸ್ಯ.
ಲಕ್ಷಣಗಳು
ಬದಲಾಯಿಸಿಸದಾ ಹಸಿರಿನ ಸಸ್ಯ.ಜೋಲು ರೆಂಬೆಗಳಿರುತ್ತವೆ.ಸಾಧಾರಣ ಗಾತ್ರವಿದ್ದು,ಹೂವು ಬಿಳಿ ಬಣ್ಣವಿದೆ.
ವೈಜ್ಞಾನಿಕ ಹೆಸರು
ಬದಲಾಯಿಸಿಬ್ಯಾರಿಂಗ್ಟೋನಿಯ ರೆಸೆಮೊಸ ಎಂಬುದು ವೈಜ್ಞಾನಿಕ ನಾಮ.ಲೆಸಿಥಿಡೇಸೀ ಕುಟುಂಬಕ್ಕೆ ಸೇರಿದೆ.ನೀವಾರ ಎಂಬುದು ಇದರ ಪರ್ಯಾಯ ನಾಮ.
ಹರಡುವಿಕೆ
ಬದಲಾಯಿಸಿಸಮುದ್ರ ತೀರ ಪ್ರದೇಶದ ಚೌಗು ಕಾಡುಗಳಲ್ಲಿ,ಅಳಿವೆಗಳಲ್ಲಿ ಹೆಚ್ಚಾಗಿ ಬೆಳೆಯುತ್ತದೆ.ಮೊಜಾಂಬಿಕ್, ದಕ್ಷಿಣ ಆಫ್ರಿಕದಿಂದ ಹಿಡಿದು,ಭಾರತ,ಶ್ರೀಲಂಕಾ,ಮಲೇಷಿಯಾ,ಚೀನಾ,ಲಾವೋಸ್ ಮತ್ತು ಆಸ್ಟ್ರೇಲಿಯ ಸಮುದ್ರ ತೀರಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.ದಕ್ಷಿಣ ಆಫ್ರಿಕ ದೇಶದಲ್ಲಿ ಇದು ಸಂರಕ್ಷಿತ ಸಸ್ಯವಾಗಿದೆ.[೨] ಸ್ವಾಭಾವಿಕವಾಗಿ ನದೀದಂಡೆಗಳಲ್ಲಿ ತಾನೇತಾನಾಗಿ ಬೆಳೆಯುತ್ತದೆ. ಭಾರತದಲ್ಲಿ ಹೆಚ್ಚು ಕಡಿಮೆ ಎಲ್ಲ ಕಡೆಗಳಲ್ಲೂ ಇದನ್ನು ಕಾಣಬಹುದು.
ಲಕ್ಷಣಗಳು
ಬದಲಾಯಿಸಿಸದಾ ಹಸುರಾಗಿರುವ ಜೋಲುರೆಂಬೆಗಳು ಈ ಮರದ ವೈಶಿಷ್ಟ್ಯ. ನಸುಗೆಂಪು ಬಣ್ಣದ ಹೂ ಬಿಡುತ್ತದೆ. ಬೀಜಗಳಲ್ಲಿರುವ ಪಿಷ್ಟದ ಪರಿಣಾಮ ಹೆಚ್ಚು. ಈ ಪಿಷ್ಟವನ್ನು ಸಂಗ್ರಹಿಸಿ ಆಹಾರ ಪದಾರ್ಥವಾಗಿ ಬಳಸುವ ಪದ್ಧತಿ ಮಲಯದಲ್ಲಿ ಉಂಟು. ಅಲ್ಲದೆ ಮರದ ಎಳೆ ಎಲೆಗಳನ್ನು ಸಹ ತಿನ್ನುವುದಿದೆ. ಗಣಿಗಲ ತೋರ ಸಾಧಾರಣ ಗಾತ್ರದ ಸುಂದರ ಮರ.
ಉಪಯೋಗಗಳು
ಬದಲಾಯಿಸಿಇದರ ವೃದ್ಧಿ ಬೀಜಗಳ ಮೂಲಕ. ಬೀಜ, ಕಾಯಿ ಮತ್ತು ಬೇರುಗಳಿಗೆ ಔಷಧೀಯ ಗುಣಗಳಿವೆ. ಕಾಯಿಯನ್ನು ಕೆಮ್ಮು, ಉಬ್ಬಸ, ಅತಿಸಾರ ಮುಂತಾದ ಕಾಯಿಲೆಗಳ ನಿವಾರಣೆಗೂ ಬೀಜಗಳನ್ನು ಹಸುವಿನ ತುಪ್ಪದೊಂದಿಗೆ ಸೇರಿಸಿ ಅರೆದು ಕಾಡಿಗೆಯ ರೂಪದಲ್ಲಿ ಹಲವು ಬಗೆಯ ಕಣ್ಣುಬೇನೆಗಳಿಗೂ ಬಳಸುವುದಿದೆ. ಇದರ ಬೀಜ, ತೊಗಟೆಗಳಲ್ಲಿ ಮೀನು ಮತ್ತು ಕಾಡುಹಂದಿಗಳಿಗೆ ಮಾರಕವಾದ ವಿಷವಿರುವುದರಿಂದ ಆ ಪ್ರಾಣಿಗಳನ್ನು ಕೊಲ್ಲಲು ಇವನ್ನು ಉಪಯೋಗಿಸುತ್ತಾರೆ.ಇದನ್ನು ಉದ್ಯಾನರಸ್ತೆಗಳ ಅಕ್ಕ ಪಕ್ಕಗಳಲ್ಲಿ ಬೆಳೆಸುತ್ತಾರೆ.
ಛಾಯಾಂಕಣ
ಬದಲಾಯಿಸಿ-
ಹೂವು
-
ಚಿಗುರು
-
ಹಣ್ಣು
-
Young leaves
-
Roots in stream bank
ಉಲ್ಲೇಖಗಳು
ಬದಲಾಯಿಸಿ- ↑ "ಆರ್ಕೈವ್ ನಕಲು". Archived from the original on 2019-07-15. Retrieved 2015-08-08.
- ↑ "Protected Trees" (PDF). Department of Water Affairs and Forestry, Republic of South Africa. 3 May 2013. Archived from the original (PDF) on 5 ಜುಲೈ 2010. Retrieved 8 ಆಗಸ್ಟ್ 2015.
ಬಾಹ್ಯ ಸಂಪರ್ಕಗಳು
ಬದಲಾಯಿಸಿ- http://www.plantzafrica.com/plantab/barringrac.htm Archived 2016-03-04 ವೇಬ್ಯಾಕ್ ಮೆಷಿನ್ ನಲ್ಲಿ.
- http://www.worldagroforestrycentre.org/sea/Products/AFDbases/af/asp/SpeciesInfo.asp?SpID=307 Archived 2012-03-09 ವೇಬ್ಯಾಕ್ ಮೆಷಿನ್ ನಲ್ಲಿ.
- [೧] Archived 2011-02-18 ವೇಬ್ಯಾಕ್ ಮೆಷಿನ್ ನಲ್ಲಿ. Australian Institute of Marine Science - Field Guide to the Mangroves of Queensland