ಸೌರವ್ ಗಂಗೂಲಿ
ಸೌರವ್ ಚಂದಿದಾಸ್ ಗಂಗೂಲಿ (ಜನನ: ಜುಲೈ ೮, ೧೯೭೨) - ಭಾರತ ಕ್ರಿಕೆಟ್ ತಂಡದ ಆಟಗಾರರೊಲ್ಲಬ್ಬರು ಮತ್ತು ತಂಡದ ಮಾಜಿ ನಾಯಕ. ಟೆಸ್ಟ್ ಕ್ರಿಕೆಟ್ ನಲ್ಲಿ ಇವರು ಭಾರತದ ಅತ್ಯಂತ ಸಫಲ ನಾಯಕ, ಭಾರತ ಕ್ರಿಕೆಟ್ ತಂಡವು ಇವರು ನಯಕತ್ವ ವಹಿಸಿದ್ದ ೪೯ ಟೆಸ್ಟ್ ಪಂದ್ಯಗಳಲ್ಲಿ ೨೧ ಪಂದ್ಯಗಳನ್ನು ಜಯಿಸಿದೆ.ಸೌರವ್ ನಾಯಕತ್ವದಲ್ಲಿ ಭಾರತ ೨೦೦೩ರ ವಿಶ್ವ ಕಪ್ ಫೈನಲ್ ತಲುಪಿತ್ತು.ಎದಗೈ ಆಟಗಾರರಾದ ಸೌರವ್, ೧೦,೦೦೦ಕ್ಕೂ ಹೆಚ್ಚು ರನ್ನುಗಳನ್ನು ಅಂತರರಾಷ್ಟ್ರೀಯ ಓಂದು ದಿನದ ಕ್ರಿಕೆಟ್ ನಲ್ಲಿ ಗಳಿಸಿರುವ ಇವರನ್ನು, ಇವರ ಸಹ ಆಟಗಾರರು ಪ್ರೀತಿಯಿಂದ 'ದಾದಾ'ಯೆಂದು ಕರೆಯುತ್ತಾರೆ.
ಸೌರವ್ ಗಂಗೂಲಿ ಭಾರತೀಯ ಪ್ರಿಮಿಯರ್ ಲೀಗ್ ನ, ಕೊಲ್ಕತ್ತ ನೈಟ್ ರೈಡರ್ಸ್ ತಂಡದ ನಾಯಕರು ಮತ್ತು 'ಐಕಾನ್ ಆಟಗಾರ'.
ಸೌರವ್ ೨೦೦೮ರ ಆಸ್ಟ್ರೇಲಿಯಾ ತಂಡದ ವಿರುದ್ಧ್ದದ ಟೆಸ್ಟ್ ಸರಣಿಯ ನಂತರ ಅಂತರ್ರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ.
ಮೂಲ: [೧], April 13 2008 |
ವೈಯಕ್ತಿಕ ಜೀವನ
ಬದಲಾಯಿಸಿಚಂದಿದಾಸ್ ಮತ್ತು ನಿರೂಪಮ ಗಂಗೂಲಿಯವರ ಕೊನೆಯ ಮಗನಾದ ಸೌರವ್, ಜುಲೈ ೮, ೧೯೭೨ ರಂದು ಕೊಲ್ಕತ್ತ ದಲ್ಲಿ ಜನಿಸಿದರು.
- ಎಡಗೈ ಆಟಗಾರ
- ಬಲಗೈ ಮಧ್ಯಮ ವೇಗದ ಬೌಲರ್. ಅತಿ
ಬೇಗ ೧೦೦೦೦ ರನ್ ಪೂರೈಸಿದ ಅಗ್ರಮಾನ್ಯ ಬ್ಯಾಟ್ಸಮನ್ ದಾದಾ.....ಇವರನ್ನು ಕಂಡರೆ ಭಯ ಪಡುವ ಬೌಲರ್ ಗಳೆ ಜಾಸ್ತಿ ಅದರಲ್ಲೂ ಲೆಗ್ ಸ್ಪಿನ್ನರ್ ಅಂತು ಇವರನ್ನು ಕಂಡರೆ ಹುಲಿಗೆ ನೋಡಿದಷ್ಟು ಭಯ ಪಡ್ತಾಯಿದರು...
ಹೊರಗಿನ ಸಂಪರ್ಕಗಳು
ಬದಲಾಯಿಸಿಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |