ಗಂಗರಾಂ ಚಂಡಾಳ[] ಕನ್ನಡಕವಿ, ವಿಮರ್ಶಕ, ಸಂಶೋಧಕ, ಅನುವಾದಕ, ಚತುರ್ಭಾಷಾ ಪರಿಣತ, ಕಲಾವಿದ, ಬಂಡಾಯ ಸಾಹಿತಿ-ಹೀಗೆ ಬಹುಮುಖ ವ್ಯಕ್ತಿತ್ವವನ್ನು ಹೊಂದಿದವರು. ಇವರ ಕವನಗಳು ಹಿಂದಿ ಹಾಗೂ ಬಂಗಾಲಿ ಭಾಷೆಗೆ ಅನುವಾದಗೊಂಡಿವೆ.

ಜನನ/ಜೀವನ

ಬದಲಾಯಿಸಿ

ಗಂಗರಾಂ ಚಂಡಾಳ[] ೧೮ ಜೂನ್ ೧೯೬೧ರಂದು ಯಡಹಳ್ಳಿ, ಕೋಲಾರ ಜಿಲ್ಲೆಯಲ್ಲಿ ಜನಿಸಿದರು. ತಂದೆ ವೆಂಕಟಪ್ಪ, ತಾಯಿ ವೆಂಕಟಗಿರಿಯಮ್ಮ. ೧೯೮೫ರಲ್ಲಿ ಮಂಡ್ಯದ ಪಿ.ಇ.ಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದಿ, ೧೯೯೪ರಲ್ಲಿ ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಿಂದ ಸಮಾಜಶಾಸ್ತ್ರ ಎಂ.ಎ ಮಾಡಿ, ೨೦೦೫ ರಲ್ಲಿ ಯು.ಆರ್.ಪಿ ವತಿಯಿಂದ ಎಂ.ಟೆಕ್ ವ್ಯಾಸಂಗ ಪೂರೈಸಿದ್ದಾರೆ. ಇವರು ಕನ್ನಡ, ತೆಲುಗು, ಇಂಗ್ಲೀಷ್[],[] [][] ಹಿಂದಿ ಭಾಷೆಗಳನ್ನು ಬಲ್ಲವರಾಗಿದ್ದಾರೆ.

ಸಾಮಾಜಿಕ ಸೇವೆಗಳು

ಬದಲಾಯಿಸಿ

ಕರ್ನಾಟಕ ಅಂಬೇಡ್ಕರ್ ಗ್ರಾಮ ಸಮಾಜ(ರಿ)ವತಿಯಿಂದ ಹಲವಾರು ಸಾಮಾಜಿಕ ಸೇವೆಯಲ್ಲಿ ನಿರತ. ಗೋಕಾಕ್ ಚಳುವಳಿ, ಬಂಡಾಯ ಸಾಹಿತ್ಯ ಚಳುವಳಿ, ದಲಿತ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್‍ನ ಆಜೀವ ಸದಸ್ಯರು. ೬೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಚಾರಶೀಲ ವಿಷಯ ಮಂಡನೆ. ಅಲ್ಲದೆ ೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ, ಮೈಸೂರು ದಸರಾ ಕವಿಗೋಷ್ಠಿಯಲ್ಲಿ, ಪಟ್ಟದ ಕಲ್ಲು ಉತ್ಸವ ಮತ್ತು ಬಂಡಾಯ ಸಾಹಿತ್ಯ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ.

ಕೃತಿಗಳು

ಬದಲಾಯಿಸಿ

ಕವನ ಸಂಕಲನ

ಬದಲಾಯಿಸಿ
  1. ಚಂಡಾಲರ ಕೂಗು
  2. ಟೀಚರ್ಸ ಲರ್ನಿಂಗ್ ಸ್ಕಿಲ್
  3. ಧರ್ಮದ ಹಕ್ಕಿ
  4. ಜೀವಸೆಲೆ

ವಿಚಾರ ಕೃತಿ

ಬದಲಾಯಿಸಿ
  1. ವಿವಾಹ ಒಂದು ಅಧ್ಯಯನ
  2. ಕರ್ನಾಟಕ ದಲಿತ ಚಳುವಳಿ ಮತ್ತು ಡಾ.ಅಂಬೇಡ್ಕರ್
  3. ಸಾಂಕೇತಿಕ
  4. ಚಲೋ ಉಡುಪಿ
  5. ಮಹಿಳಾ
  6. ಪ್ರಸ್ತುತ ಅಪ್ರಸ್ತುತ

ಬೆವರ ಬಸಿರ ಬೆಂಕಿ

ವ್ಯಕ್ತಿ ಚಿತ್ರ

ಬದಲಾಯಿಸಿ

ಕೋಪರ್ನಿಕಸ್

ಸಂಪಾದನೆ

ಬದಲಾಯಿಸಿ

ಮೀಸಲಾತಿ: ಒಂದು ಪ್ರಶ್ನೆ-ಒಂದು ವಿಶ್ಲೇಷಣೆ.

ಬಿರುದು/ಪ್ರಶಸ್ತಿ/ಗೌರವ/ಪುರಸ್ಕಾರಗಳು

ಬದಲಾಯಿಸಿ
  1. ಜೀವಸೆಲೆ ಕವನ ಸಂಕಲಕ್ಕೆ ಪ್ರಥಮ ಬಹುಮಾನ-ಕೋಲಾರ ಕನ್ನಡ ಸಾಹಿತ್ಯ ಪರಿಷತ್‍ ಏರ್ಪಡಿಸಿದ್ದ ಜಿಲ್ಲಾ ಕಾವ್ಯ ಸ್ಪರ್ಧೆಯಲ್ಲಿ.
  2. ೧೯೯೮ ರಲ್ಲಿ ನಾಡಚೇತನ ಎಂಬ ಬಿರುದು. ಬೆಂಗಳೂರಿನ ರಂಗಚೇತನ ಕಲಾವಿದರು ಮತ್ತು ಸಾಹಿತ್ಯ ಚಟುವಟಿಕೆಗಳಿಗಾಗಿ.
  3. ೧೯೯೯ ರಲ್ಲಿ ಡಾ.ಅಂಬೇಡ್ಕರ್ ಫೆಲೋಶಿಫ್ ರಾಷ್ಟ್ರೀಯ ಪುರಸ್ಕಾರ-ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ನವದೆಹಲಿ.

ಆಕರಗಳು

ಬದಲಾಯಿಸಿ
  1. ಮೀಸಲಾತಿ: ಒಂದು ಪ್ರಶ್ನೆ-ಒಂದು ವಿಶ್ಲೇಷಣೆ.

ಉಲ್ಲೇಖಗಳು

ಬದಲಾಯಿಸಿ