ಖೊರಾಮಾಬಾದ್
ಇರಾನ್ ಕೇಂದ್ರ ಜಿಲ್ಲೆಯ ನಗರ
ಖೊರಾಮಾಬಾದ್ ಪಶ್ಚಿಮ ಇರಾನಿನಲ್ಲಿರುವ ಒಂದು ನಗರ. ಲುರಿಸ್ತಾನ್ ಪ್ರಾಂತ್ಯದ ಮುಖ್ಯ ಪಟ್ಟಣ. ಹ್ಯಾಮಡಾನಿನ ದಕ್ಷಿಣಕ್ಕೆ 90 ಮೈ. ದೂರದಲ್ಲಿ ಲುರಿಸ್ತಾನ್ ಪರ್ವತದಲ್ಲಿರುವ ನದಿ ಕಣಿವೆಯ ಇಕ್ಕಟ್ಟಾದ ಸ್ಥಳದಲ್ಲಿದೆ. ಖೂಜಿಸ್ತಾನದಿಂದ ಡೆಜ಼್‍ಫುಲ್ ಮತ್ತು ಬೊರುಜರ್ಡ್ ಮೂಲಕ ಪ್ರಸ್ಥಭೂಮಿಗೆ ಸಾಗುವ ಮಾರ್ಗ ಇಲ್ಲಿ ಹಾಯ್ದು ಹೋಗುವುದರಿಂದ ಆ ಮಾರ್ಗದ ಮೇಲೆ ಖೊರಾಮಾಬಾದ್ ಹತೋಟಿ ಹೊಂದಿದೆ. ಜನಸಂಖ್ಯೆ 373,416 (2016).[೧] 20ನೆಯ ಶತಮಾನದ ಆದಿಯಲ್ಲಿ ಇದರ ಜನಸಂಖ್ಯೆ ಕೇವಲ 8,500 ಇತ್ತು. ಇದು ಬೆಳೆಯುತ್ತಿರುವ ನಗರ. ಈಗಲೂ ಅಲೆಮಾರಿಗಳಾಗಿರುವ ಲುರ್ ಜನರಿಗೆ ಇದು ಬೇಸಿಗೆ ಮಾರುಕಟ್ಟೆ. ಖೊರಾಮಾಬಾದಿನ ಪೇಟೆಬೀದಿಗಳು ತುಂಬ ಲವಲವಿಕೆಯಿಂದ ಕೂಡಿರುತ್ತವೆ. ಅಲ್ಲೊಂದು ಬಲವಾದ ರಕ್ಷಕ ಸೈನ್ಯವಿದೆ. ಪಟ್ಟಣಕ್ಕೂ ನದಿಗೂ ನಡುವೆ ಇರುವ ಗುಡ್ಡದ ತಲೆಯ ಮೇಲೆ ಹಿಂದಣ ಗವರ್ನರ್‌ಗಳ ನಿವಾಸವಾಗಿದ್ದ ಡೆಜ಼್-ಇ-ಸಿಯಾದ (ಕರಾಳಮಾರ್ಗ) ಅವಶೇಷಗಳಿವೆ. ಕುರ್ದಿಷ್ ಮುಖಂಡನೊಬ್ಬ 10ನೆಯ ಶತಮಾನದಲ್ಲಿ ಇದನ್ನು ಕಟ್ಟಿಸಿದ.
ಉಲ್ಲೇಖಗಳು
ಬದಲಾಯಿಸಿ- ↑ "Census of the Islamic Republic of Iran, 1395 (2016)". AMAR (in ಪರ್ಶಿಯನ್). The Statistical Center of Iran. p. 15. Archived from the original (Excel) on 12 October 2020. Retrieved 19 December 2022.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: