ಖೆಡೀವ್
ಖೆಡೀವ್ ಎನ್ನುವುದು ತುರ್ಕಿಯ ಸುಲ್ತಾನ 1867ರಲ್ಲಿ ಈಜಿಪ್ಟಿನ ಇಸ್ಮಾಯಿಲ್ ಪಾಷಾಗೆ ಕೊಟ್ಟ ಬಿರುದು.[೧] ಖೆಡೀವ್ ಎಂಬುದು ಪಾರ್ಸಿ ಭಾಷೆಯ ಶಬ್ದ. ಪ್ರಭು ಅಥವಾ ರಾಜಕುಮಾರ ಎಂದು ಇದರ ಅರ್ಥ. ಇಸ್ಮಾಯಿಲನೂ ಅವನ ಅನಂತರ ಬಂದ ಅಹಮದ್ ಟೆವ್‌ಫೀಕ್ ಮತ್ತು 2ನೆಯ ಅಬ್ಬಾಸ್ ಹಿಲ್ಮಿ ಇವರೂ ಇದನ್ನು ಧರಿಸಿದ್ದರು. ಖೆಡೀವರದು ಅಲ್ಬೇನಿಯನ್ ವಂಶ. ಈಜಿಪ್ಷಿಯನರು ಅವರನ್ನು ತುರ್ಕಿ ವಂಶದವರೆಂದೇ ಬಗೆದಿದ್ದರು. ಪಾಷಾಗಳು ತುರ್ಕಿ ಸುಲ್ತಾನನ ಮಾಂಡಲಿಕರಂತೆ ರಾಜ್ಯವಾಳುತ್ತಿದ್ದರು. 1914ರಲ್ಲಿ ಈಜಿಪ್ಟಿನ ಮೇಲೆ ತುರ್ಕಿಯ ಪ್ರಭುತ್ವ ಕೊನೆಗೊಂಡಾಗ ಖೆಡೀವ್ ಬಿರುದನ್ನು ಬ್ರಿಟಿಷರು ರದ್ದುಪಡಿಸಿದರು. ಈಜಿಪ್ಟ್ ಬ್ರಿಟನ್ನಿನ ಅರಕ್ಷಿತ ದೇಶವಾಯಿತು. ಅಲ್ಲಿಯ ದೊರೆ ಸುಲ್ತಾನ್ ಎನಿಸಿಕೊಂಡ. ಸ್ವಾತಂತ್ರ್ಯಕ್ಕಾಗಿ ಈಜಿಪ್ಟಿನ ವಾಫ್ದ್ ಪಕ್ಷ ನಡೆಸಿದ ಚಳವಳಿಯ ಫಲವಾಗಿ ಆತ 1923ರಲ್ಲಿ ಸಂವಿಧಾನಬದ್ಧ ದೊರೆಯಾದ.
ಉಲ್ಲೇಖಗಳು
ಬದಲಾಯಿಸಿವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: