ಖುಬಾನಿ ಕಾ ಮೀಠಾ ಒಣಗಿಸಿದ ಜರ್ದಾಳುಗಳಿಂದ ತಯಾರಿಸಲಾದ ಒಂದು ಭಾರತೀಯ ಸಿಹಿ ತಿಂಡಿಯಾಗಿದೆ. ಇದು ಹೈದರಾಬಾದ್‍ನಲ್ಲಿ ಹುಟ್ಟಿಕೊಂಡಿತು.[] ಇದು ಹೈದರಾಬಾದಿ ಮದುವೆಗಳಲ್ಲಿ ಸಾಮಾನ್ಯ ವೈಶಿಷ್ಟ್ಯವಾಗಿದೆ.


ಖುಬಾನಿ ಕಾ ಮೀಠಾ ಹೈದರಾಬಾದಿ ಪಾಕಪದ್ಧತಿಯಲ್ಲಿ ಬಹಳ ಜನಪ್ರಿಯ ಡಿಜ಼ರ್ಟ್ ಆಗಿದೆ.

ಈ ಖಾದ್ಯದ ತಯಾರಿಕೆಯು ಗಟ್ಟಿಯಾದ ಸೂಪ್ ಅಥವಾ ಊರಿಟ್ಟ ಹಣ್ಣಿನ ಸಾಂದ್ರತೆ ಬರುವವರೆಗೆ ಪಾಕದಲ್ಲಿ ಜರ್ದಾಳುಗಳನ್ನು ಕುದಿಸುವುದನ್ನು ಒಳಗೊಳ್ಳುತ್ತದೆ.[] ಈ ಡಿಜ಼ರ್ಟ್‌ನ ಮೇಲೆ ಬೆಳ್ಕರಿಸಿದ ಬಾದಾಮಿಗಳು ಅಥವಾ ಜರ್ದಾಳುವಿನ ಮಧ್ಯದ ಭಾಗವನ್ನು ಉದುರಿಸಲಾಗುತ್ತದೆ. ಸಾಂಪ್ರದಾಯಿಕವಾಗಿ ಮಲಾಯಿಯಿಂದ (ಹೆಚ್ಚು ಗಟ್ಟಿ ಕೆನೆ, ಸಾಧ್ಯವಾದಷ್ಟು ಎಮ್ಮೆ ಹಾಲಿನದ್ದು) ಮೇಲೆ ಅಲಂಕರಿಸಲಾಗುತ್ತದೆ, ಆದರೆ ಕಸ್ಟರ್ಡ್ ಅಥವಾ ಐಸ್ ಕ್ರೀಂನಿಂದಲೂ ಅಲಂಕರಿಸಬಹುದು.

ಉಲ್ಲೇಖಗಳು

ಬದಲಾಯಿಸಿ
  1. The Sunday Tribune - Spectrum
  2. "'Khubani Ka Meetha'".


ಹೊರಗಿನ ಕೊಂಡಿಗಳು

ಬದಲಾಯಿಸಿ