ಮಲಾಯಿ ಒಂದು ಭಾರತೀಯ ಅಡುಗೆ ಪದಾರ್ಥ. ಅದನ್ನು ಏಕರೂಪವಾಗಿಸದ ಇಡೀ ಹಾಲನ್ನು ಒಂದು ಗಂಟೆಯ ತನಕ ಸುಮಾರು ೮೦ °ಸೆಲ್ಷಿಯಸ್ ವರೆಗೆ ಕಾಯಿಸಿ ನಂತರ ತಣ್ಣಗಾಗಲು ಬಿಟ್ಟು ತಯಾರಿಸಲಾಗುತ್ತದೆ. ಮೇಲ್ಮೈ ಮೇಲೆ ರೂಪಗೊಂಡ ಕೊಬ್ಬು ಮತ್ತು ಹೆಪ್ಪುಗಟ್ಟಿದ ಪ್ರೋಟೀನ್‍ಗಳ ಒಂದು ದಟ್ಟ ಹಳದಿ ಪದರವನ್ನು ತೆಗೆಯಲಾಗುತ್ತದೆ. ಈ ಪ್ರಕ್ರಿಯೆಯನ್ನು ಸಾಮಾನ್ಯವಾಗಿ ಬಹುತೇಕ ಕೊಬ್ಬನ್ನು ತೆಗೆಯಲು ಪುನರಾವರ್ತಿಸಲಾಗುತ್ತದೆ. ಮಲಾಯಿಯಲ್ಲಿ ಸುಮಾರು ೫೫ ಪ್ರತಿಶತ ಬೆಣ್ಣೆಕೊಬ್ಬಿರುತ್ತದೆ.

"https://kn.wikipedia.org/w/index.php?title=ಮಲಾಯಿ&oldid=656047" ಇಂದ ಪಡೆಯಲ್ಪಟ್ಟಿದೆ