ಖನಕ
ಖನಕನು ವಿದುರನ ಆಪ್ತಮಿತ್ರ. ದುರ್ಯೋಧನ ವಾರಣಾವತದಲ್ಲಿ ಪಾಂಡವರಿಗಾಗಿ ಅರಗಿನ ಮನೆಯನ್ನು ಕಟ್ಟಿಸುವಾಗ ಅದರ ಮೇಲ್ವಿಚಾರಣೆಯನ್ನು ಈತನಿಗೆ ಒಪ್ಪಿಸಿದ್ದ. ಖನಕ ವಿದುರನ ಸೂಚನೆಯ ಮೇರೆಗೆ ಅಲ್ಲಿ ಒಂದು ಸುರಂಗ ಮಾರ್ಗವನ್ನು ಏರ್ಪಡಿಸಿದ. ಪಾಂಡವರು ಹಸ್ತಿನಾವತಿಯಿಂದ ವಾರಣಾವತಕ್ಕೆ ಬಂದಾಗ ಈ ವಿಚಾರವನ್ನು ವಿದುರ ಭೀಮನಿಗೆ ರಹಸ್ಯವಾಗಿ ತಿಳಿಸಿದ. ವಿದುರನು ಧರ್ಮರಾಜನಿಗೆ ಸೂಚ್ಯವಾಗಿ ಈ ವಿಷಯ ಹೇಳಿದ. ಖನಕನು ಪಾಂಡವರನ್ನು ಲಾಕ್ಷಾಗೃಹದಲ್ಲಿ ಭೇಟಿಮಾಡಿ, ದುರ್ಯೋಧನನ ಆದೇಶದಂತೆ ಪುರೋಚನನು ಕೃಷ್ಣಪಕ್ಷದ ಹದಿನಾಲ್ಕನೇ ದಿನ ಅವರ ಅರಮನೆಯ ಬಾಗಿಲಿಗೆ ಬೆಂಕಿ ಹಚ್ಚುವನು ಎಂದು ಹೇಳಿದನು.[೧] ಮುಂದೆ ಅರಮನೆಗೆ ಬೆಂಕಿಬಿದ್ದಾಗ ಭೀಮಾದಿಗಳು ಗುಪ್ತಮಾರ್ಗದಿಂದ ಪಾರಾಗಲು ಇದರಿಂದ ಅನುಕೂಲವಾಯಿತು.
ಉಲ್ಲೇಖಗಳು
ಬದಲಾಯಿಸಿ- ↑ Motilal Banarsidas. Puranic Encyclopedia By Vettam Mani Motilal Banarsidas. p. 46.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: