ಖಗೋಳೀಯ ಉಪಕರಣಗಳು ಎಂದರೆ ಖಗೋಳ ವೀಕ್ಷಣೆಗಳನ್ನು ಮತ್ತು ದತ್ತಾಂಶ ಸಂಗ್ರಹಣೆಗಳನ್ನು ಮಾಡಲು ನೆರವಾಗುವ ವಿವಿಧ ಹತ್ಯಾರುಗಳು (ಅಸ್ಟ್ರನಾಮಿಕಲ್ ಇನ್‍ಸ್ಟ್ರುಮೆಂಟ್ಸ್). ಭೌತ, ರಸಾಯನ, ಸಸ್ಯ, ಪ್ರಾಣಿ ಇವೇ ಮುಂತಾದ ವಿಜ್ಞಾನ ವಿಭಾಗಗಳಲ್ಲಿ ಜ್ಞಾನವರ್ಧನೆ ಆಗುವ ವಿವಿಧ ಹಂತಗಳಲ್ಲಿ ಪ್ರಯೋಗಮಂದಿರದ ಉದ್ದಿಷ್ಟ ಪ್ರಯೋಗಗಳೂ ಸೇರಿವೆ. ನೈಸರ್ಗಿಕ ಸನ್ನಿವೇಶವೊಂದನ್ನು (ಉದಾಹರಣೆಗೆ ನಿಸರ್ಗದಲ್ಲಿ ತೋರುವ ಮಿಂಚನ್ನು ಅನುಕರಿಸಿ ಪ್ರಯೋಗಮಂದಿರದಲ್ಲಿ ವಿದ್ಯುಚ್ಚಾಪವನ್ನು ನಿರ್ಮಿಸುವುದು) ಸಮರ್ಪಕ ಉಪಕರಣಗಳ ನೆರವಿನಿಂದ ಉಂಟುಮಾಡಿ ಆ ವಿದ್ಯಮಾನವನ್ನು ಸವಿವರವಾಗಿ ಅಭ್ಯಸಿಸುವುದು ಸಾಧ್ಯ. ಇಂಥ ಸೌಕರ್ಯವಿರುವ ವಿಜ್ಞಾನ ವಿಭಾಗಗಳನ್ನು ಪ್ರಾಯೋಗಿಕ ವಿಜ್ಞಾನಗಳು (ಎಕ್ಸ್‌ಪೆರಿಮೆಂಟಲ್ ಸೈನ್ಸಸ್) ಎಂದು ಕರೆಯುತ್ತೇವೆ. ಖಗೋಳಶಾಸ್ತ್ರ ಹೀಗಲ್ಲ. ಇಲ್ಲಿ ವಿಶ್ವವನ್ನು ಪ್ರತಿನಿಧಿಸುವ ಅಥವಾ ವಿಶ್ವದ ಪ್ರಮುಖ ಲಕ್ಷಣಗಳನ್ನು ಪ್ರತಿನಿಧಿಸುವ ಪ್ರಯೋಗಮಂದಿರದ ಪ್ರತಿಕೃತಿಯೊಂದನ್ನು (ಲ್ಯಾಬೊರೇಟರಿ ಮಾಡೆಲ್) ನಿರ್ಮಿಸುವುದು ಸಾಧ್ಯವಾಗದು. ಅಲ್ಲದೇ ವಿಶ್ವದಲ್ಲಿ ಎಲ್ಲಿಗೆ ಬೇಕಾದರೆ ಅಲ್ಲಿಗೆ ಹೋಗಿ ವಿವರಗಳನ್ನು ಅಳೆದೋ ತಿಳಿದೋ ಬರುವುದು ಕೂಡ ಸಾಧ್ಯವಾಗದು. ಆದ್ದರಿಂದ ಖಗೋಳಶಾಸ್ತ್ರದಲ್ಲಿ ಜ್ಞಾನವರ್ಧನೆಯ ಬಹ್ವಂಶ ವೀಕ್ಷಣೆಗಳ (observations) ಆಧಾರದಿಂದಲೇ ಆಗಬೇಕು. ಖಚಿತವಾಗಿ ಹೇಳುವುದಾದರೆ, ವಿಶ್ವದ ಪ್ರಸಕ್ತ ಪರಿಸ್ಥಿತಿಯನ್ನೂ, ವರ್ತನೆಯನ್ನೂ ಅವುಗಳ ಮೇಲೆ ಯಾವ ವಿಧವಾದ ಹತೋಟಿಯೂ ಇಲ್ಲದೇ, ವಿಶ್ವದ ಒಂದು ಅಂಶವಾದ ಭೂಮಿಯಿಂದ ವೀಕ್ಷಿಸಿ, ವಿಶ್ವದ ವಿದ್ಯಮಾನಗಳನ್ನು ಅರ್ಥವಿಸುವ ವಿಜ್ಞಾನ ವಿಭಾಗ ಖಗೋಳಶಾಸ್ತ್ರ. ಆದ್ದರಿಂದ ಈ ಶಾಸ್ತ್ರದಲ್ಲಿ ಉಪಕರಣಗಳ ಸ್ಥಾನ ವಿಶಿಷ್ಟವಾದದ್ದು. ಇಂಥ ಉಪಕರಣಗಳ ನೆರವಿನಿಂದ ಆಕಾಶಕಾಯಗಳನ್ನು ಅಭ್ಯಸಿಸುವ ಮಂದಿರಗಳಿಗೆ ವೀಕ್ಷಣಾಲಯಗಳೆಂದು (ಅಬ್ಸರ್ವೇಟರೀಸ್) ಹೆಸರು.

ಯಾವುದೇ ದೃಗ್ಗೋಚರ ಆಕಾಶಕಾಯವನ್ನು ಕುರಿತಂತೆ ನಾಲ್ಕು ಸಂಗತಿಗಳನ್ನು ಮಾತ್ರ ವೀಕ್ಷಿಸಿ ತಿಳಿಯಬಹುದು:

(ಒಂದು ಆಕಾಶಕಾಯ ತನ್ನ ಮೇಲ್ಮೈಯ ಏಕಮಾನ ಸಲೆಯಿಂದ ಒಂದು ನಿರ್ದಿಷ್ಟ ದಿಶೆಯಲ್ಲಿ ಉತ್ಸರ್ಜಿಸುವ ಕ್ಯಾಂಡಲ್ ಸಾಮರ್ಥ್ಯವನ್ನು ಅದರ ಪ್ರಕಾಶ ಎಂದು ಕರೆಯುತ್ತೇವೆ. ವ್ಯವಹಾರದಲ್ಲಿ ಒಂದು ಕಾಯದಿಂದ ನಮಗೆ ಲಭಿಸುವ ಬೆಳಕಿನ ಪರಿಮಾಣವನ್ನು ಅವಲಂಬಿಸಿ ಅದರ ಪ್ರಕಾಶ ಉಂಟು. ಶಕ್ತಿಯ ಅಲೆಯುದ್ದಗಳಲ್ಲಿ ನಮಗೆ ಲಭಿಸುವ ಬೆಳಕಿನ ಪರಿಮಾಣದ ಮೇಲೆ ಕಾಯದ ಬಣ್ಣ ಅವಲಂಬಿಸಿದೆ.) ಇವೆಲ್ಲ ಮಾಹಿತಿಗಳನ್ನೂ ಬರಿಗಣ್ಣಿನಿಂದ ಪಡೆಯಬಹುದಾದರೂ ಇಂಥ ವೀಕ್ಷಣೆಯ ವ್ಯಾಪ್ತಿ ಬಲು ಕಿರಿದು. ಸ್ಥಿರನಕ್ಷತ್ರಗಳನ್ನು ಕುರಿತು ಒಂದು ಗ್ರಹದ ಸ್ಥಾನವನ್ನೂ, ಅದರಲ್ಲಿ ಉಂಟಾಗುವ ಕೋನ ವ್ಯತ್ಯಾಸವನ್ನೂ ಖಚಿತವಾಗಿ ಕಣ್ಣಂದಾಜಿನಿಂದ ಹೇಳಲು ಸಾಧ್ಯವಾಗದು. ಚಂದ್ರನನ್ನುಳಿದು ಮಿಕ್ಕಾವ ಕಾಯಗಳ ಸ್ಥೂಲ ಮೇಲ್ಮೈ ಲಕ್ಷಣಗಳನ್ನೂ ಕಣ್ಣು ಗುರುತಿಸುವುದು ಅಸಾಧ್ಯ. ನಕ್ಷತ್ರಗಳ ಪ್ರಕಾಶ ಹಾಗೂ ಬಣ್ಣಗಳನ್ನು ಕುರಿತು ವೈಜ್ಞಾನಿಕ ವಿಶ್ಲೇಷಣೆ ನಡೆಸಲು ಕಣ್ಣಂದಾಜು ಸಾಕಾಗುವುದಿಲ್ಲ. ಆದ್ದರಿಂದ ಇಲ್ಲೆಲ್ಲ ಖಚಿತತೆಯ ದೃಷ್ಟಿಯಿಂದ ಶಾಸ್ತ್ರವನ್ನು ಸಮರ್ಥವಾಗಿ ಬೆಳೆಸುವ ದೃಷ್ಟಿಯಿಂದ ಖಗೋಳೀಯ ಉಪಕರಣಗಳ ನೆರವು ತೀರ ಅಗತ್ಯ. ಟೆಲಿಸ್ಕೋಪ್, ಅಂದರೆ ದೂರದರ್ಶಕ, ಇಂಥ ಉಪಕರಣಗಳಲ್ಲಿ ಮೊದಲಿನದು. ಇದರಲ್ಲಿ ಒಂದು ಬಗೆ ದೃಕ್ ದೂರದರ್ಶಕ.

ದೃಗಗೋಚರ ವಿಸರಣಾಕರಗಳು

ಬದಲಾಯಿಸಿ

ಒಂದು ಆಕಾಶಕಾಯವೆಂದರೆ ವಿವಿಧ ಅಲೆಯುದ್ದಗಳ ವಿದ್ಯುತ್ಕಾಂತ ಅಲೆಗಳನ್ನು ವಿಸರಿಸುವ ಕೇಂದ್ರ; ಎಂದರೆ ಇದೊಂದು ವಿದ್ಯುತ್ಕಾಂತ ರೋಹಿತವನ್ನೇ ಪ್ರದರ್ಶಿಸುತ್ತದೆ. ಈ ರೋಹಿತದಲ್ಲಿ ಎರಡು ಸ್ಪಷ್ಟ ಭಾಗಗಳಿವೆ-ದೃಗಗೋಚರ ಭಾಗ, ದೃಗ್ಗೋಚರ ಭಾಗ. ಇವುಗಳ ಪೈಕಿ ದೃಗ್ಗೋಚರ ಭಾಗದ ಅಗಲ ಬಲು ಕಿರಿದು: ಕೆಂಪು ಬಣ್ಣದಿಂದ ತೊಡಗಿ ನೇರಿಳೆ ಬಣ್ಣದವರೆಗಿನ ಭಾಗ. ದೃಗಗೋಚರ ಭಾಗದ ವ್ಯಾಪ್ತಿಯಾದರೋ ಕೆಂಪಿನಿಂದ ಎಡಕ್ಕೂ (ಅತಿರಕ್ತ ಭಾಗ) ನೇರಿಳೆಯಿಂದ ಬಲಕ್ಕೂ (ಅತಿನೇರಿಳೆ ಭಾಗ) ವಿಶಾಲವಾಗಿ ಹರಡಿಹೋಗಿದೆ. ಕೆಂಪಿನಿಂದ ಎಡಕ್ಕೆ ಅಲೆಯುದ್ದಗಳು ದೀರ್ಘವಾಗುತ್ತ ಹೋಗುತ್ತವೆ, ನೇರಿಳೆಯಿಂದ ಬಲಕ್ಕೆ ಅಲೆಯುದ್ದಗಳು ಹ್ರಸ್ವವಾಗುತ್ತ ಹೋಗುತ್ತದೆ. ಅಂದ ಮೇಲೆ ನಾವು ಕಣ್ಣುಗಳಿಂದ ನೋಡುವುದು ಆಕಾಶದ ಬಲು ಚಿಕ್ಕ ಅಂಶವನ್ನು ಮಾತ್ರ ಎಂಬುದು ಸ್ಪಷ್ಟ. ಆಕಾಶದ ಅತಿರಕ್ತ ಹಾಗೂ ಅತಿನೇರಿಳೆ ವಿಸರಣಾಕರಗಳ ಚಿತ್ರ ಪಡೆಯಲು ಈ ವಿಸರಣೆಗಳನ್ನು ಗ್ರಹಿಸಬಲ್ಲ ಸಮರ್ಪಕ ಉಪಕರಣಗಳು ಅವಶ್ಯ. ಇಂಥ ಒಂದು ಉಪಕರಣ ರೇಡಿಯೋ ದೂರದರ್ಶಕ.

ಆಕಾಶ ತಂತ್ರಗಳು

ಬದಲಾಯಿಸಿ

ಒಂದು ಆಕಾಶಕಾಯದಿಂದ ವಿಸರಿತವಾಗುವ ಅತಿನೇರಳೆ ಕಿರಣಗಳು ಭೂಮಿತಲವನ್ನು ತಲುಪುವುದಿಲ್ಲ. ವಾಯುಮಂಡಲದ ಓಜ಼ೋನ್ ಕವಚ ಈ ಕಿರಣಗಳನ್ನು ತಡೆಹಿಡಿಯುತ್ತದೆ. ಆದ್ದರಿಂದ ವಿಶ್ವದ ಅತಿ ನೇರಿಳೆ ಚಿತ್ರ ಪಡೆಯಲು ಓಜ಼ೋನ್ ಕವಚವನ್ನು ಉತ್ತರಿಸಿ ಹೋಗಿ ಅಲ್ಲಿ ಸಮರ್ಪಕ ಉಪಕರಣಗಳ ನೆರವನ್ನು ಪಡೆಯುವುದು ಅನಿವಾರ‍್ಯ. ಸ್ಟ್ರ್ಯಾಟೊಸ್ಕೋಪ್ ಟೆಲಿಸ್ಕೋಪುಗಳು, ಕಕ್ಷಿಸುವ ಸೌರವೀಕ್ಷಣಾಲಯಗಳು (ಆರ್ಬೈಟಿಂಗ್ ಸೋಲಾರ್ ಅಬ್ಸರ್ವೇಟರಿಸ್ (OSO)), ಕಕ್ಷಿಸುವ ಖಗೋಳೀಯ ವೀಕ್ಷಣಾಲಯಗಳು (OAO) ಇವೇ ಮುಂತಾದ ನೂತನ ತಂತ್ರಗಳು ಹಾಗೂ ಉಪಕರಣಗಳು ವಿಶ್ವದ ಅತಿನೇರಳೆ ಚಿತ್ರವನ್ನು ಪಡೆಯಲು ನೆರವಾಗುತ್ತವೆ.