ಖಗೋಳ ಮಾನ

(ಖಗೋಳಮಾನ ಇಂದ ಪುನರ್ನಿರ್ದೇಶಿತ)

ಖಗೋಳ ಮಾನ (AU ಅಥವಾ au[][][][] ಅಥವಾ ಖ.ಮಾ.) - ಒಂದು ಉದ್ದದ ಅಳತೆಯಾಗಿದ್ದು, ಇದು ಸುಮಾರು ಭೂಮಿ ಮತ್ತು ಸೂರ್ಯರ ನಡುವಿನ ದೂರಕ್ಕೆ ಸಮನಾಗಿದೆ. ಇದು ಸೌರವ್ಯೂಹದಲ್ಲಿ ಆಕಾಶಕಾಯಗಳ ದೂರಗಳನ್ನು ಅಳೆಯಲು ಉಪಯೋಗಿಸುವ ಮಾನದಂಡ (ಅಸ್ಟ್ರಾನಾಮಿಕಲ್ ಯೂನಿಟ್). ಪ್ರಸ್ತುತದಲ್ಲಿ ಒಪ್ಪಿಗೆಯಲ್ಲಿರುವ ಖ.ಮಾ.ದ ಮೌಲ್ಯವು ೧೪೯,೫೯೭,೮೭೦,೭೦೦ ಮೀಟರ್‌ಗಳು (ಸುಮಾರು ೧೫ ಕೋಟಿ ಕಿ.ಮೀ. ಅಥವಾ ೯.೩ ಕೋಟಿ ಮೈಲಿಗಳು).[] ಇದು ಖಗೋಳ ದೂರಮಾನಗಳ ಮೂರು ಮುಖ್ಯ ಮಾನದಂಡಗಳಲ್ಲಿ ಒಂದು. ಇತರೆರಡು ಮಾನದಂಡಗಳೆಂದರೆ ಜ್ಯೋತಿರ್ವರ್ಷ ಮತ್ತು ಪಾರ್ಸೆಕ್.

ಉದಾಹರಣೆಗಳು

ಬದಲಾಯಿಸಿ

ಕೆಳಗಿನ ದೂರಗಳು ಅಂದಾಜಿನ ಸರಾಸರಿ ದೂರಗಳು. ಖಗೋಳಕಾಯಗಳ ನಡುವಿನ ದೂರವು ಅವುಗಳ ಕಕ್ಷೆ ಮತ್ತಿತರ ಅಂಶಗಳ ಕಾರಣದಿಂದ, ಸಮಯದೊಂದಿಗೆ ಬದಲಾಗುತ್ತದೆ ಎಂಬುದನ್ನು ಇಲ್ಲಿ ಗಮನದಲ್ಲಿಡಬೇಕು.

ಕೆಲವು ಪರಿವರ್ತನಾ ಅಪವರ್ತನಗಳು:

  • ೧ ಖ.ಮಾ. = ೧೪೯ ೫೯೭ ೮೭೦.೬೯೧ ± ೦.೦೩೦ ಕಿ.ಮೀ. ≈ ೯೨ ೯೫೫ ೮೦೭ ಮೈಲಿಗಳು ≈ ೮.೩೧೭ ಜ್ಯೋತಿ ನಿಮಿಷಗಳು ≈ ೪೯೯ ಜ್ಯೋತಿ ಕ್ಷಣಗಳು
  • ಜ್ಯೋತಿಕ್ಷಣ ≈ ೦.೦೦೨ ಖ.ಮಾ.
  • ೧ ಗಿಗಾ ಮೀಟರ್ ≈ ೦.೦೦೭ ಖ.ಮಾ.
  • ೧ ಜ್ಯೋತಿನಿಮಿಷ ≈ ೦.೧೨೦ ಖ.ಮಾ.
  • ೧ ಮೈಕ್ರೊ ಪಾರ್ಸೆಕ್ ≈ ೦.೨೦೬ ಖ.ಮಾ.
  • ೧ ಟೆರಾ ಮೀಟರ್ ≈ ೬.೬೮೫ ಖ.ಮಾ.
  • ೧ ಜ್ಯೋತಿಘಂಟೆ ≈ ೭.೨೧೪ ಖ.ಮಾ.
  • ೧ ಜ್ಯೋತಿದಿನ ≈ ೧೭೩.೨೬೩ ಖ.ಮಾ.
  • ೧ ಮಿಲಿ ಪಾರ್ಸೆಕ್ ≈ ೨೦೬.೨೬೫ ಖ.ಮಾ.
  • ೧ ಜ್ಯೋತಿಸಪ್ತಾಹ ≈ ೧೨೧೨.೮೪ ಖ.ಮಾ.
  • ೧ ಜ್ಯೋತಿರ್ಮಾಸ ≈ ೫೧೯೭.೯ ಖ.ಮಾ.
  • ಜ್ಯೋತಿರ್ವರ್ಷ ≈ ೬೩,೨೪೧ ಖ.ಮಾ.
  • ಪಾರ್ಸೆಕ್ ≈ ೨೦೬,೨೬೫ ಖ.ಮಾ.

ಇವನ್ನೂ ನೋಡಿ

ಬದಲಾಯಿಸಿ

ಟಿಪ್ಪಣಿಗಳು

ಬದಲಾಯಿಸಿ
  1. On the re-definition of the astronomical unit of length (PDF). XXVIII General Assembly of International Astronomical Union. Beijing, China: International Astronomical Union. 31 August 2012. Resolution B2. ... recommends ... 5. that the unique symbol "au" be used for the astronomical unit.
  2. "Monthly Notices of the Royal Astronomical Society: Instructions for Authors". Oxford Journals. Archived from the original on 22 October 2012. Retrieved 20 March 2015. The units of length/distance are Å, nm, μm, mm, cm, m, km, au, light-year, pc.
  3. "Manuscript Preparation: AJ & ApJ Author Instructions". American Astronomical Society. Archived from the original on 21 February 2016. Retrieved 29 October 2016. Use standard abbreviations for ... natural units (e.g., au, pc, cm).
  4. The International System of Units (PDF) (9th ed.), International Bureau of Weights and Measures, Dec 2022, p. 145, ISBN 978-92-822-2272-0
  5. On the re-definition of the astronomical unit of length (PDF). XXVIII General Assembly of International Astronomical Union. Beijing: International Astronomical Union. 31 August 2012. Resolution B2. ... recommends [adopted] that the astronomical unit be re-defined to be a conventional unit of length equal to exactly 149,597,870,700 metres, in agreement with the value adopted in IAU 2009 Resolution B2


ಉಲ್ಲೇಖಗಳು

ಬದಲಾಯಿಸಿ