ಖಖೂಂದ ಉತ್ತರ ಪ್ರದೇಶದ ಗೋರಖಪುರ ರೈಲು ನಿಲ್ದಾಣದಿಂದ 39 ಮೈಲಿಗಳ ದೂರದಲ್ಲಿರುವ ನೋನಖಾರ ರೈಲು ನಿಲ್ದಾಣಕ್ಕೆ ಮೂರು ಮೈಲಿ ದೂರದಲ್ಲಿರುವ ಒಂದು ಸಣ್ಣ ಪಟ್ಟನ. ಇದನ್ನು ಪ್ರಾಚೀನ ಕಿಷ್ಕಿಂಧಾ ಎಂದೂ, ಇದು ಒಂಬತ್ತನೆಯ ತೀರ್ಥಂಕರನಾದ ಪುಷ್ಪದಂತನ ಜನ್ಮಭೂಮಿ ಎಂದೂ ಹೇಳಲಾಗಿದೆ. ಇಲ್ಲಿಯ ದೇವಾಲಯದಲ್ಲಿ ಈ ತೀರ್ಥಂಕರನ ಮೂರ್ತಿ ಇದೆ.

ಕಹೌಮ್ ಸ್ತಂಭದ ಮೇಲೆ ಜೈನ ತೀರ್ಥಂಕರ
ಕಹೌಮ್ ಸ್ತಂಭ (೧೯ನೇ ಶತಮಾನದ ಛಾಯಾಚಿತ್ರ)

5ನೇ ಶತಮಾನದಲ್ಲಿ ಕಹೌಮ್ ಸ್ತಂಭ ಎಂಬ ಹೆಸರಿನ 8 ಮೀಟರ್ ಉದ್ದದ ಸ್ತಂಭವನ್ನು ಸ್ಕಂದಗುಪ್ತನ ಆಳ್ವಿಕೆಯ ಕಾಲದಲ್ಲಿ ಮದ್ರ ಎಂಬವನು ನಿರ್ಮಿಸಿದನು. ಈ ಸ್ತಂಭವು ಬ್ರಾಹ್ಮಿ ಲಿಪಿಯಲ್ಲಿ ಪಾರ್ಶ್ವನಾಥ ಮತ್ತು ಇತರ ತೀರ್ಥಂಕರರ ಕೆತ್ತನೆಗಳನ್ನು ಹೊಂದಿದೆ.[]

ಉಲ್ಲೇಖಗಳು

ಬದಲಾಯಿಸಿ
  1. "Jain shrines". Uttar Pradesh Tourism. Archived from the original on 2020-09-25. Retrieved 2020-09-17.
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಖಖೂಂದ&oldid=1237223" ಇಂದ ಪಡೆಯಲ್ಪಟ್ಟಿದೆ