ಕ್ಷೇತ್ರಯ್ಯ

ತೆಲುಗು ಕವಿ

ಕ್ಷೇತ್ರಯ್ಯ

ಕ್ಷೇತ್ರಯ್ಯನವರು (ಅಥವಾ ಕ್ಷೇತ್ರಜ್ಞ) (తెలుగు:క్షేత్రయ్య, క్షేత్రజ్ఞ) (ಸಿ. 1600-1680) ತೆಲುಗು ಕವಿ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತದ ಸಂಯೋಜಕರಾಗಿದ್ದಾರೆ. ಅವರು ದಕ್ಷಿಣ ಭಾರತದ ಆಂಧ್ರಪ್ರದೇಶದಲ್ಲಿ ವಾಸಿಸುತ್ತಿದ್ದರು. ಅವರು ಹಲವಾರು ಪದಮ್ಸ್ ಮತ್ತು ಕೀರ್ತನೆಗಳನ್ನು ಸಂಯೋಜಿಸಿದ್ದಾರೆ. ಅವರು ನಾಲ್ಕು ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಸಂಯೋಜಿಸಿದ್ದಾರೆ, ಆದರೆ ಕೇವಲ ಬೆರಳೆಣಿಕೆಯಷ್ಟು ಮಾತ್ರ ಉಳಿದುಕೊಂಡಿವೆ. ಅವರು ತಮ್ಮ ಹಾಡುಗಳನ್ನು, ಅವರ ನೆಚ್ಚಿನ ದೈವ ಕೃಷ್ಣನನ್ನು ಕುರಿತು ಸಂಯೋಜಿಸುತ್ತಿದ್ದರು. ಅವರ ಸಂಯೋಜನೆಗಳು ತೆಲುಗು ಭಾಷೆಯಲ್ಲಿದೆ.

ಅವರ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚಾಗಿ ತಿಳಿದಿಲ್ಲ. ಅವರು ಆಂಧ್ರಪ್ರದೇಶದ ಒಂದು ಪುಟ್ಟಹಳ್ಳಿ, ಮೊವ್ವದಲ್ಲಿ (ಅಥವಾ ಮೂವ್ವ) ಜನಿಸಿದರು. ಅವರ ಪೋಷಕರು ಅವರನ್ನು ವರದಯ್ಯ ಎಂದು ನಾಮಕರಣ ಮಾಡಿದರು. ಅವರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸುತ್ತಾ ದೇವಸ್ಥಾನಗಳಲ್ಲಿ ಹಾಡುತ್ತಿದ್ದರಿಂದ ಅವರಿಗೆ ಕ್ಷೇತ್ರಯ್ಯ ಅಥವಾ ಕ್ಷೇತ್ರಜ್ಞ ಎಂಬ ಹೆಸರು ಬಂತು.

ಅವರ ಪದಮ್ಸ್ ಶೈಲಿಯನ್ನೇ ಇವತ್ತಿಗೂ ಸಂಗೀತಗಾರರು ಬಳಸುತ್ತಿದ್ದಾರೆ. ಅವರ ಪದಮ್ಸ್ ಅನ್ನು ಭರತನಾಟ್ಯ[], ಕೂಚುಪುಡಿ ಹಾಗು ಸಂಗೀತದಲ್ಲಿ ಬಳಸಿಕೊಳ್ಳಲಾಗಿದೆ. ಅವರ ಪದಮ್ಸ್‌ನ ಮುಖ್ಯ ಲಕ್ಷಣವೆಂದರೆ ಅನುಪಲ್ಲವಿಯನ್ನು ಮೊದಲು ಹಾಡಿ ನಂತರ ಪಲ್ಲವಿ ಹಾಡುವುದು. ಅವರ ಹಲವಾರು ಪದಮ್ಸ್ ಕೃಷ್ಣನ ಬರುವಿಕೆಗಾಗಿ ಹಾತೊರೆಯುವ ಭಕ್ತನ ಪ್ರಾರ್ಥನೆಯನ್ನು ಒಳಗೊಂಡಿದೆ.

ಅವರು ಶೃಂಗಾರ ರಸವನ್ನು ಮುಖ್ಯ ಅಂಶವನ್ನಾಗಿಟ್ಟುಕೊಂಡು ತಮ್ಮ ರಚನೆಗಳನ್ನು ರಚಿಸಿದ್ದಾರೆ. ಕ್ಷೇತ್ರಯ್ಯನವರ ರಚನೆಗಳು ದಕ್ಷಿಣ ಭಾರತನೃತ್ಯ ಹಾಗು ಸಂಗೀತದ ಮೇಲೆ ಅಪಾರ ಪ್ರಭಾವ ಬೀರಿದೆ. ಕ್ಷೇತ್ರಯ್ಯನವರು ತಮ್ಮ ಅನೇಕ ರಚನೆಗಳನ್ನು ದೇವದಾಸಿ ಮಹಿಳೆಯರ ಕುರಿತು ರಚಿಸಿದ್ದಾರೆ.

ವೀಣಾ ದನಮಾಲ್ ಮತ್ತು ಟಿ. ಬ್ರಿಂಧರವರು ಕ್ಷೇತ್ರಯ್ಯನವರ ಹಾಡುಗಳನ್ನು ಜನಪ್ರಿಯಗೊಳಿಸಿದರು. ಕ್ಷೇತ್ರಯ್ಯನವರ ಪದಮ್ಸ್ ದಕ್ಷಿಣ ಭಾರತದ ನೃತ್ಯ ಹಾಗು ಸಂಗೀತದ ಒಂದು ಮುಖ್ಯ ಅಂಶವಾಗಿದೆ.

ತೆಲುಗು ಚಿತ್ರರಂಗ

ಬದಲಾಯಿಸಿ

'ಮಹಾಕವಿ ಕ್ಷೇತ್ರಯ್ಯ' ೧೯೭೬ರಲ್ಲಿ ಬಿಡುಗಡೆಗೊಂಡ ತೆಲುಗು ಚಲನಚಿತ್ರ[]. ಈ ಚಲನಚಿತ್ರ ಅಂಜಲಿ ಪಿಚ್ಚರ್ಸ್‌ನಿಂದ ನಿರ್ಮಾಣಗೊಂಡಿದೆ.

ಕ್ಷೇತ್ರಯ್ಯನವರ ಜೀವನವನ್ನು ಬ್ಲಿಸ್ ಆಫ್ ಲೈಫ್ ಎಂಬ ಕಾದಂಬರಿಯಲ್ಲಿ ಎಂ. ವಿ. ರಾಮಶರ್ಮರವರು ವಿವರಿಸಿದ್ದಾರೆ. ಎಂ. ವಿ. ರಾಮಶರ್ಮರವರು ಇಂಗ್ಲೀಷ್ ಪ್ರಾಧ್ಯಾಪಕರಾಗಿದ್ದರು ಹಾಗು ಅವರು ಎಸ್. ವಿ. ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿದ್ದರು. ಎಸ್. ವಿ. ವಿಶ್ವವಿದ್ಯಾನಿಲಯವು ಆಂಧ್ರಪ್ರದೇಶದ ತಿರುಪತಿಯಲ್ಲಿದೆ. ಈ ಕಾದಂಬರಿಯನ್ನು ತೆಲುಗಿಗೆ ಭಾಷಾಂತರಿಸಲಾಗಿದೆ.

ಹೊರಗಿನ ಸಂಪರ್ಕಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "ಭರತನಾಟ್ಯ". Archived from the original on 2016-03-05. Retrieved 2015-11-05.
  2. "ಮಹಾಕವಿ ಕ್ಷೇತ್ರಯ್ಯ ಚಲನಚಿತ್ರ".