ಕ್ರಿಸ್ ಗಾರ್ಡ್ನರ್
ಕ್ರಿಸ್ಟೋಫರ್ ಪೌಲ್ ಗಾರ್ಡ್ನರ್ ( ವಿಸ್ಕನ್ಸಿನ್ ನ ಮಿಲ್ವೊಕೀಯಲ್ಲಿ 1954 ರ ಫೆಬ್ರವರಿ 9 ರಂದು ಜನನ) ಎಂಬುವವರು, ಅವರ ಅಂಬೆಗಾಲಿನ ಪುತ್ರ ಕ್ರಿಸ್ಟೋಫರ್ Jr ರನ್ನು ಬೆಳೆಸುವಾಗ 1980 ರ ಪೂರ್ವಾರ್ಧದಲ್ಲಿ ಆಸರೆಯಿರದೇ ಜೀವನಕ್ಕಾಗಿ ಹೋರಾಟ ನಡೆಸಿದ್ದವರಾಗಿದ್ದರು. ಆದರೀಗ ಅವರೊಬ್ಬ ಕೋಟ್ಯಾಧಿಪತಿ, ವಾಣಿಜ್ಯೋದ್ಯಮಿ,ಉತ್ತೇಜನಕಕಾರಿ, ಪ್ರೇರಕ ಭಾಷಣಕಾರ ಮತ್ತು ಲೋಕೋಪಕಾರಿ ಯಾಗಿದ್ದಾರೆ.[೧] ಗಾರ್ಡ್ನರ್ ರ ನೆನಪುಗಳ ಪುಸ್ತಕ ಮಾಲಿಕೆ ದಿ ಪರ್ಸ್ಯೂಟ್ ಆಫ್ ದಿ ಹ್ಯಾಪಿನೆಸ್ , ಅನ್ನು 2006 ರ ಮೇನಲ್ಲಿ ಪ್ರಕಟಿಸಲಾಯಿತು.[೨]
ಕ್ರಿಸ್ ಗಾರ್ಡ್ನರ್ | |
---|---|
ಜನನ | |
ವೃತ್ತಿ | ಗಾರ್ಡ್ನರ್ ರಿಚ್ ಅಂಡ್ ಕಂಪನಿಯ ಸ್ಥಾಪಕ ಮತ್ತು ಸಿಇಒ |
ಅವರು 2006 ರ ಹೊತ್ತಿಗೆ ತಮ್ಮ ಸ್ವಂತ ಸ್ಟಾಕ್ (ಶೇರು)ಮಾರಾಟ ಸಂಸ್ಥೆ ಗಾರ್ಡ್ನರ್ ರಿಚ್ ಅಂಡ್ ಕೋ ದ CEO ಆಗಿದ್ದು, ಇದು ಇಲಿನಾಯ್ಸ್ ನ ಚಿಕಾಗೋದಲ್ಲಿದೆ. ಅವರು ಟೊರಾಂಟೊದಲ್ಲಿ ವಾಸಿಸುವ ಮೊದಲು ಇಲ್ಲಿ ವಾಸವಾಗಿದ್ದರು. ಗಾರ್ಡ್ನರ್, ಅವರ ತಾಯಿ ಬೆಟ್ಟಿ ಜೀನ್ ಟ್ರಿಪ್ಲೆಟ್ , ನೀಗಾರ್ಡ್ನರ್,[೨][೩][೪] ರವರಿಂದ ಆನುವಂಶಿಕವಾಗಿ ಬಂದ "ಆಧ್ಯಾತ್ಮಿಕ ಮನೋಭಾವ" ಹಾಗು ತಮ್ಮ ಪುತ್ರ ಕ್ರಿಸ್ Jr. (1981ರಲ್ಲಿ ಜನನ) ಮತ್ತು ಪುತ್ರಿ ಜೆಸಿಂತಾ(1985ರಲ್ಲಿ ಜನನ), ಅವರ ಮೇಲೆ ಇರಿಸಿದ ಅಪಾರ ನಿರೀಕ್ಷೆ ಅವರ ದೃಢ ನಿರ್ಧಾರಕ್ಕೆ ಮತ್ತು ಯಶಸ್ಸಿಗೆ ಪ್ರಬಲ ಕಾರಣವೆನ್ನುತ್ತಾರೆ.[೧] ಗಾರ್ಡ್ನರ್, ತಂದೆಯಾಗಿ ಕರ್ತವ್ಯ ಮತ್ತು ಬಡತನವನ್ನು ನಿಭಾಯಿಸುತ್ತ ಸ್ಟಾಕ್ ಮಾರಾಟಗಾರನಾಗಲು ವೈಯಕ್ತಿಕವಾಗಿ ಪಟ್ಟ ಶ್ರಮವನ್ನು 2006 ರ ಸ್ವಯಂ ಚಲನೆಯ ಆನಿಮೇಶನ ಮಾದರಿಯ ಚಲನಚಿತ್ರ ದಿ ಪರ್ಸ್ಯೂಟ್ ಆಫ್ ಹ್ಯಾಪಿನೆಸ್ ನಲ್ಲಿ ಮನಮುಟ್ಟುವ ಹಾಗೆ ಚಿತ್ರಿಸಲಾಗಿದ್ದು , ವಿಲ್ ಸ್ಮಿತ್ ಪ್ರಧಾನ ಭೂಮಿಕೆಯಲ್ಲಿದ್ದಾರೆ.[೪][೫]
ಆರಂಭಿಕ ವರ್ಷಗಳು
ಬದಲಾಯಿಸಿಗಾರ್ಡ್ನರ್ ವಿಸ್ಕನ್ಸಿನ್ ನ ಮಿಲ್ವೊಕೀಯಲ್ಲಿ ಥಾಮಸ್ ಟರ್ನರ್ ಮತ್ತು ಬೆಟ್ಟಿ ಜೀನ್ ಗಾರ್ಡ್ನರ್ ರ ಪುತ್ರರಾಗಿ ಜನಿಸಿದರು. ಇವರು ಬೆಟ್ಟಿ ಜೀನ್ ರಿಗೆ ಜನಿಸಿದ ಎರಡನೆಯ ಪುತ್ರರಾಗಿದ್ದು, ಅವರ ಹಿರಿಯ ಮಲಸಹೋದರಿ ಒಫೆಲಿಯಾ; ಕಿರಿಯ ಸಹೋದರರಾದ ಶಾರಾನ್ ಮತ್ತು ಕಿಮ್ಬರ್ಲೆ, ಅವರ ತಾಯಿ ಮತ್ತು ಫ್ರೆಡೀ ಟ್ರಿಪ್ಲೆಟ್ ರ ವಿವಾಹ ಸಂಬಂಧದಿಂದ ಜನಿಸಿದ ಮಕ್ಕಳಾಗಿದ್ದಾರೆ.
ಗಾರ್ಡ್ನರ್ ಚಿಕ್ಕವರಿದ್ದಾಗ ಅನೇಕ ರೀತಿಯ,ಪುರುಷ ಮಾದರಿ ವ್ಯಕ್ತಿಗಳ(ತಂದೆ,ಸಹೋದರ,ಮಾವ,ಇತ್ಯಾದಿ) ಸಂಪರ್ಕ ಹೊಂದಿರಲಿಲ್ಲ. ಏಕೆಂದರೆ ಅವರ ಜನನದ ಸಮಯದಲ್ಲಿ ಅವರ ತಂದೆ ಲೂಸಿಯಾನದಲ್ಲಿ ವಾಸಿಸುತ್ತಿದ್ದರು. ಹಾಗು ಅವರ ಮಲ ತಂದೆ ಆತನ ಹೆಂಡತಿ ಮತ್ತು ಮಕ್ಕಳನ್ನು ದೈಹಿಕವಾಗಿ ಹಿಂಸಿಸುತ್ತಿದ್ದರು. ಟ್ರಿಪ್ಲೆಟ್, ಗಾರ್ಡ್ನರ್ ರ ಮೇಲೆ ಯಾವಾಗಲೂ ಕೋಪದಿಂದ ಕೂಗಾಡುತ್ತಿದ್ದರು, ಇದನ್ನು ಕಂಡ ಅವರ ಸಹೋದರಿಯರು ಸದಾ ಹೆದರುತ್ತಿದ್ದರು.[೩] ಒಂದು ಘಟನೆಯಲ್ಲಿ, ಟ್ರಿಪ್ಲೆಟ್ ಸಮಾಜ ಕಲ್ಯಾಣ ಅಭಿವೃದ್ದಿಯ ವಂಚನೆಯಡಿ ಬೆಟ್ಟಿ ಜೀನ್ ರವರ ವಿರುದ್ಧ ಅಧಿಕಾರಿಗಳಿಗೆ ಸುಳ್ಳು ದೂರು ನೀಡಿದಾಗ, ಅವರನ್ನು ತಪ್ಪು ಗ್ರಹಿಕೆಯಿಂದಾಗಿ ಸೆರೆಮನೆವಾಸಕ್ಕೆ ಗುರಿಮಾಡಲಾಯಿತು; ಆಗ ಮಕ್ಕಳನ್ನು ಅನಾಥಾಲಯಕ್ಕೆ ಬಿಡಲಾಯಿತು. ಗಾರ್ಡ್ನರ್ ಎಂಟು ವರ್ಷದವರಿದ್ದಾಗ, ಅವರು ಮತ್ತು ಅವರ ಸಹೋದರಿ ಎರಡನೆಯ ಬಾರಿ ಅನಾಥಾಲಯಕ್ಕೆ ಮರಳಿದರು. ಇದಕ್ಕೆ ಕಾರಣ ಅವರ ತಾಯಿ ಅವರಾರಿಗೂ ತಿಳಿಯದಂತೆ, ಟ್ರಿಪ್ಲೆಟ್ ಮನೆಯ ಒಳಗಿರುವಾಗ ಮನೆಗೆ ಬೆಂಕಿ ಹಚ್ಚಿ ಅವರನ್ನು ಕೊಲ್ಲಲು ಪ್ರಯತ್ನಿಸಿದ್ದರು.[೩][೬]
ಅನಾಥಾಲಯದಲ್ಲಿದ್ದಾಗ ಗಾರ್ಡ್ನರ್ ಮೊದಲು ಅವರ ತಾಯಿಯ ಮೂರು ಜನ ಸಂಬಂಧಿಗಳನ್ನು ಪರಿಚಯಿಸಿಕೊಂಡರು: ಆರ್ಚಿಬ್ಲ್ಯಾಡ, ವಿಲ್ಲೀ ಮತ್ತು ಹೆನ್ರಿ. ಗಾರ್ಡ್ನರ್ ಗೆ ತಂದೆಯ ಅಗತ್ಯವಿದ್ದಾಗ ಅವರ ಪ್ರಪಂಚವನ್ನು ಆತ ಪ್ರವೇಶಿಸುವ ಮೂಲಕ ಅವರೊಂದಿಗೆ ಸಂಭಾಷಿಸುತ್ತಿದ್ದರು. ಈ ಮೂವರೊಳಗೆ ಹೆನ್ರಿ ಗಾರ್ಡ್ನರ್ ರ ಮೇಲೆ ಅವರು ಹೆಚ್ಚು ಪ್ರಭಾವ ಬೀರಿದ್ದರು ಎನ್ನಬಹುದು. ಕ್ರಿಸ್ ಒಂಬತ್ತು ವರ್ಷದವರಿದ್ದಾಗ, ಹೆನ್ರಿ ಮಿಸಿಸಿಪ್ಪಿ ನದಿಯಲ್ಲಿ ಮುಳುಗಿ ದುರಂತ ಸಾವನಪ್ಪಿದರು.[೨] ಸೆರೆಮನೆ ಕಾವಲುಗಾರನೊಂದಿಗೆ ಗಾರ್ಡ್ನರ್ ರ ತಾಯಿ ಹೆನ್ರಿಯ ಅಂತಿಮ ಸಂಸ್ಕಾರಕ್ಕೆ ಬಂದಾಗ, ಮಕ್ಕಳಿಗೆ ತಮ್ಮ ತಾಯಿ ಸೆರೆಮನೆಯಲ್ಲಿದ್ದಾರೆ ಎಂಬುದು ತಿಳಿಯುತ್ತದೆ.[೬]
ಅಸಮಧಾನದ ವೈವಾಹಿಕ ಜೀವನ ಮತ್ತು ಅವರ ಅನುಪಸ್ಠಿತಿಯ ಹೊರತಾಗಿಯೂ ಬೆಟ್ಟಿ ಜೀನ್ ಅವರ ಪುತ್ರ ಕ್ರಿಸ್ ಗೆ ಶಕ್ತಿ ಮತ್ತು ಸ್ಫೂರ್ತಿಯ ಸೆಲೆಯಾದರು. ಅವರು ಗಾರ್ಡ್ನರ್ ಗೆ ತಮ್ಮಲ್ಲಿ ತಾವು ನಂಬಿಕೆ ಇಟ್ಟುಕೊಳ್ಳುವಂತೆ ಪ್ರೋತ್ಸಾಹಿಸಿದರು, ಅಲ್ಲದೇ ಅವರಲ್ಲಿ ಸ್ವಾಲಂಬನೆಯ ಬೀಜ ಬಿತ್ತಿದರು. ಗಾರ್ಡ್ನರ್ , "ನೀನು ನಿನ್ನ ಮೇಲೆ ಮಾತ್ರ ಅವಲಂಬಿಸಬಹುದು. ಮತ್ಯಾರನ್ನು ಅವಲಂಬಿಸದೇ ಮುಂದೆ ಸಾಗುತ್ತಿರಬೇಕು ಎಂದು ಹೇಳುವುದರೊಂದಿಗೆ ಅವರನ್ನು ಇಲ್ಲಿ ಈ ರೀತಿಯಾಗಿ ಉಲ್ಲೇಖಿಸಿದ್ದಾರೆ."[೭] ಗಾರ್ಡ್ನರ್, ತಮ್ಮ ಹಿಂದಿನ ಅನುಭವಗಳಿಂದಾದ ಕುಡಿತ, ಕಿರುಕುಳ, ಗೃಹಕೃತ್ಯಗಳಲ್ಲಿ ದೌರ್ಜನ್ಯ,ಮಕ್ಕಳ ಭಾವನೆಗಳ ದುರುಪಯೋಗ, ಅನಕ್ಷರತೆ, ಭಯ ಮತ್ತು ಬಲಹೀನತೆ ಎಲ್ಲವನ್ನು ಭವಿಷ್ಯದಲ್ಲಿ ದೂರವಿರಿಸಲು ನಿರ್ಧರಿಸಿದರು.[೩]
ಆರಂಭಿಕ ಪ್ರಾಪ್ತವಯಸ್ಕತೆ
ಬದಲಾಯಿಸಿಆಗ 1960ರ ಉತ್ತರರಾರ್ಧ ಮತ್ತು 1970 ರ ಪೂರ್ವಾರ್ಧವು ಗಾರ್ಡ್ನರ್ ಗೆ ರಾಜಕೀಯ ಮತ್ತು ಸಂಗೀತದ ಬಗ್ಗೆ ಜಾಗೃತಿ ಮೂಡಿಸಿದ ಸಮಯವಾಗಿದೆ. ಅವರು ಮಾರ್ಟೀನ್ ಲೂಥರ್ ಕಿಂಗ್ Jr., ಮ್ಯಾಲ್ಕಾಲ್ಮ್ ಮ್ಯಾಲ್ಕಾಲ್ಮ್ X ಮತ್ತು ಎಲ್ಡ್ ರಿಡ್ಜ್ ಕ್ಲೀವರ್ಸ್ ರವರ ಬರಹಗಳಿಗೆ ಹತ್ತಿರವಾಗುತ್ತ ಹೋದಂತೆ ಬ್ಲ್ಯಾಕ್ ಪ್ರೈಡ್ ನ (ಕಪ್ಪು ಜನಾಂಗದ ಬಗೆಗಿನ ತಿಳಿವಳಿಕೆ)ಬಗ್ಗೆ ಆಳವಾದ ವಿಚಾರಗಳನ್ನು ಬೆಳೆಸಿಕೊಂಡರು. ಅವರ ವಿಶ್ವದೆಡೆಗಿನ ದೃಷ್ಟಿಕೋನವು ಆಫ್ರಿಕನ್ ಅಮೇರಿಕನ್ ಅನುಭವದಾಚೆಯೂ ಬೆಳೆಯಿತು; ಅವರು ಶಾರ್ಪ್ ವಿಲ್ಲೆಯ ಹತ್ಯಾಕಾಂಡ ದಂತಹ ಐತಿಹಾಸಿಕ ಘಟನೆಗಳನ್ನು ಓದಿದರು, ಇದರ ಪರಿಣಾಮವಾಗಿ ಸೌತ್ ಆಫ್ರಿಕಾದಲ್ಲಿದ್ದ ಪ್ರತ್ಯೇಕತಾ ನೀತಿ ಮತ್ತು ಅಂತರರಾಷ್ಟ್ರೀಯ ಜನಾಂಗೀಯ ವಿವಾದಗಳ ಬಗ್ಗೆ ಜಾಗೃತಿ ಮೂಡಿತು.[೨] ಗಾರ್ಡ್ನರ್, ಟ್ರಂಪಿಟ್ ಅನ್ನು(ತುತ್ತೂರಿಯಂತಹ ವಾದ್ಯ) ಸುಮಧುರವಾಗಿ ನುಡಿಸಲು ಕಲಿತರು. ಅಲ್ಲದೇ ಸ್ಲೆ ಸ್ಟೋನ್, ಬುಡ್ದಿ ಮೈಲ್ಸ್, ಜೇಮ್ಸ್ ಬ್ರೌನ್ ಮತ್ತು ಅವರ ಸರ್ವಕಾಲಕ್ಕೂ ಮೆಚ್ಚುಗೆಯ ಮೈಲ್ಸ್ ಡೇವಿಸ್ ರವರ ಜನಪ್ರಿಯ ಸಂಗೀತ ಕೇಳುತ್ತಿದ್ದರು.
U.S. ನೌಕಾಪಡೆ ಯಲ್ಲಿ ಅವರ ಮಾವ ಹೆನ್ರಿಯ ಸಾಧನೆಗಳನ್ನು ಕಂಡು , ಗಾರ್ಡ್ನರ್ ತಮ್ಮ ಸೆಕೆಂಡರಿ ಶಿಕ್ಷಣ ಮುಗಿಸಿದ ಸಂದರ್ಭದಲ್ಲಿ ಸೈನ್ಯಕ್ಕೆ ಸೇರಲು ನಿರ್ಧರಿಸಿದರು. ಇವರನ್ನು ನಾಲ್ಕು ವರ್ಷಗಳಿಗಾಗಿ ಉತ್ತರ ಕರೋಲಿನಾ ದ ಕ್ಯಾಂಪ್ ಲೆಜುನೆಗೆ ಕಳುಹಿಸಲಾಯಿತು. ಅಲ್ಲಿ ಅವರನ್ನು ಪೋಲಿಸ್ ನೌಕರನಾಗಿ ನೇಮಿಸಲಾಗಿತ್ತು. ಅವರು ಸ್ಯಾನ್ ಫ್ರಾನ್ಸಿಸ್ಕೋದ ಬಿರುದಾಂಕಿತ ಹೃದ್ರೋಗ ತಜ್ಞರಾದ, ಡಾ. ರಾಬರ್ಟ್ ಎಲೀಸ್ ರವರನ್ನು ಪರಿಚಯಿಸಿಕೊಂಡರು. ಇವರು ಗಾರ್ಡ್ನರ್ ಗೆ ಕ್ಯಾಲಿಫೋರ್ನಿಯಾ ವೈದ್ಯಕೀಯ ಕೇಂದ್ರ ವಿಶ್ವವಿದ್ಯಾನಿಲಯದಲ್ಲಿ ಮತ್ತು ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋ ದಲ್ಲಿರುವ ಸೈನಿಕರ ಆಸ್ಪತ್ರೆಯಲ್ಲಿ ನವೀನ ಮಾದರಿ ಹುಟ್ಟುಹಾಕಲು ಪ್ರಾಯೋಗಿಕ ಸಂಶೋಧನೆಯೊಂದಿಗೆ ಅವರಿಗೆ ಸಹಾಯಕನಾಗಿರುವ ಅವಕಾಶ ನೀಡಿದರು. ಬಳಿಕ 1974 ರಲ್ಲಿ ಗಾರ್ಡ್ನರ್ ರನ್ನು ಸೈನ್ಯದಿಂದ ಹೊರಹಾಕಿದ ಮೇಲೆ ಅವರು ಸಹಾಯಕನಾಗಿ ಕಾರ್ಯನಿರ್ವಹಿಸಲು ಒಪ್ಪಿಕೊಂಡು, ಸ್ಯಾನ್ ಫ್ರಾನ್ಸಿಸ್ಕೋಗೆ ತೆರಳಿದರು. ಎರಡು ವರ್ಷಗಳಲ್ಲಿ ಅವರು ಪ್ರಯೋಗಾಲಯವನ್ನು ಹೇಗೆ ನಿರ್ವಹಿಸುವುದು ಮತ್ತು ಅನೇಕ ಶಸ್ತ್ರಚಿಕಿತ್ಸಾ ತಂತ್ರಗಳನ್ನು ಹೇಗೆ ಅಳವಡಿಸುವುದು ಎಂಬುದನ್ನು ಕಲಿತುಕೊಂಡರು. ಪ್ರಯೋಗಾಲಯದ ಸಂಪೂರ್ಣ ಹೊಣೆಗಾರಿಕೆಯನ್ನು ಇವರಿಗೆ 1976ರಲ್ಲಿ ನೀಡಲಾಯಿತು. ಅಲ್ಲದೇ ಡಾ. ಎಲೀಸ್ ರವರೊಡಗೂಡಿ ಅನೇಕ ಲೇಖನಗಳನ್ನು ಬರೆದಿದ್ದು, ಇವು ವೈದ್ಯಕೀಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು.[೨]
ವಿವಾಹ ಮತ್ತು ಕಷ್ಟಗಳು
ಬದಲಾಯಿಸಿಕ್ರಿಸ್ ಗಾರ್ಡ್ನರ್,1976 ರ ಜೂನ್ 18 ರಲ್ಲಿ ಶೆರ್ರಿ ಡೈಸನ್ ಎಂಬುವವರನ್ನು ವಿವಾಹವಾದರು. ಇವರು ಮೂಲತಃ ವರ್ಜೀನಿಯಾದವರಾಗಿದ್ದು, ಗಣಿತಶಾಸ್ತ್ರದಲ್ಲಿ ಪರಿಣತರಾಗಿದ್ದರು. ವೈದ್ಯಕೀಯ ಕ್ಷೇತ್ರದಲ್ಲಿದ್ದ ಅವರ ಜ್ಞಾನ, ಅನುಭವ ಮತ್ತು ಸಂಪರ್ಕದಿಂದಾಗಿ ಗಾರ್ಡ್ನರ್ , ಅವರ ಮುಂದೆ ವೈದ್ಯಕೀಯ ವೃತ್ತಿಜೀವನದ ಯೋಜನೆಗಳನ್ನು ಹೊಸೆಯುವಂತೆ ಕಂಡುಬಂದಿತು. ಆದರೂ ಕೂಡ ಅವರ ಮುಂದಿದ್ದ ಹತ್ತು ವರ್ಷಗಳ ವೈದ್ಯಕೀಯ ತರಬೇತಿಯೊಂದಿಗೆ ಮತ್ತು ಆರೋಗ್ಯ ಕ್ಷೇತ್ರ ದಲ್ಲಿ ಆಗಿದ್ದ ಬದಲಾವಣೆಗಳೊಂದಿಗೆ ಮುಖಾಮುಖಿಯಾದರು; ಅವರು ವೈದ್ಯಕೀಯ ವೃತ್ತಿ ಆರಂಭಿಸುವ ಸಮಯದಲ್ಲಿ ಈ ವೃತ್ತಿಯು ಅಪಾರವಾಗಿ ಬದಲಾಗಿರುತ್ತದೆ ಎಂಬುದನ್ನು ಅರಿತುಕೊಂಡರು. ಗಾರ್ಡ್ನರ್ ರವರಿಗೆ ಅತ್ಯಂತ ಲಾಭದಾಯಕವಾದ ವೃತ್ತಿಗಳನ್ನು ಆಯ್ಕೆ ಮಾಡಿಕೊಳ್ಳಲು ಸಲಹೆ ನೀಡಲಾಯಿತು; ಅವರ 26 ನೇ ಹುಟ್ಟು ಹಬ್ಬದ ಕೆಲವು ದಿನಗಳ ಮೊದಲು ಅವರ ಪತ್ನಿ ಶೆರ್ರಿಗೆ ವೈದ್ಯನಾಗಬೇಕೆಂದಿದ್ದ ಅವರ ಕನಸನ್ನು ಬಿಟ್ಟುಬಿಡುವುದಾಗಿ ತಿಳಿಸಿದರು.[೨]
ವೈದ್ಯಕೀಯ ವೃತ್ತಿಜೀವನವನ್ನು ತ್ಯಜಿಸುವ ಅವರ ನಿರ್ಧಾರದಿಂದಾಗಿ, ಮತ್ತು ಅವರ ನಡುವೆ ಉದ್ಭವಿಸಿದ್ದ ಭಿನ್ನಾಭಿಪ್ರಾಯಗಳಿಂದಾಗಿ ಶೆರ್ರಿಯೊಂದಿಗಿನ ಅವರ ಸಂಬಂಧವು ಮುರಿದುಬಿತ್ತು. ಶೆರ್ರಿಯೊಂದಿಗೆ ಇನ್ನೂ ವೈವಾಹಿಕ ಜೀವನವನ್ನು ನಡೆಸುತ್ತಿರುವಾಗಲೇ ಜ್ಯಾಕಿ ಮೆಡಿನಾ ಎಂಬ ದಂತ ವೈದ್ಯಕೀಯ ವಿದ್ಯಾರ್ಥಿನಿಯೊಂದಿಗೆ ಸಂಬಂಧವಿಟ್ಟುಕೊಂಡಿದ್ದರು. ಈ ಸಂಬಂಧದಿಂದಾಗಿ ಕೆಲವೇ ತಿಂಗಳುಗಳಲ್ಲಿ ಆಕೆ ಅವರ ಮಗುವಿನ ತಾಯಿಯೂ ಆದಳು. ಶೆರ್ರಿಯೊಂದಿಗೆ ವಿವಾಹವಾದ ಮೂರು ಮೂರುವರ್ಷಗಳ ನಂತರ , ಜ್ಯಾಕಿಯೊಂದಿಗೆ ಜೀವನ ನಡೆಸಲು ಮತ್ತು ತಂದೆಯ ಕರ್ತವ್ಯ ನೆರವೇರಿಸಲೆಂದು ಶೆರ್ರಿಯನ್ನು ತೊರೆದರು. ಒಂಭತ್ತು ವರ್ಷಗಳು ಸರಿಯುವ ಮೊದಲು 1986 ರಲ್ಲಿ ಅವರು ಮತ್ತು ಶೆರ್ರಿ ವಿವಾಹ ವಿಚ್ಛೇದನ ಪಡೆದುಕೊಂಡರು.[೨]
ಅವರ ಪುತ್ರ ಕ್ರಿಸ್ಟೋಫರ್ ಮೆಡಿನಾ ಗಾರ್ಡ್ನರ್, 1981 ರ ಜನವರಿ 28 ರಂದು ಜನಿಸಿದ. ಗಾರ್ಡ್ನರ್ UCSF ನಲ್ಲಿ ಸಂಶೋಧನಾ ಪ್ರಯೋಗಾಲಯದ ಸಹಾಯಕರಾಗಿ ಕಾರ್ಯನಿರ್ವಹಿಸಿದರು, ಹಾಗು ಅಲ್ಲಿಂದ ಹೊರಬಂದ ನಂತರ ಸೈನಿಕರ ಆಸ್ಪತ್ರೆಯಲ್ಲಿ ಸೇವೆಸಲ್ಲಿಸಿದರು. ಸಂಶೋಧನಾ ಪ್ರಯೋಗಾಲಯದ ಸಹಾಯಕ ಹುದ್ದೆಯಲ್ಲಿದ್ದಾಗ ಅವರಿಗೆ ವರ್ಷಕ್ಕೆ ಸುಮಾರು $8,000 ನಷ್ಟು ಸಂಬಳ ಮಾತ್ರ ನೀಡಲಾಗುತ್ತಿತ್ತು. ಇದು ಅವರ ಜೊತೆಗಾತಿ ಮತ್ತು ಮಗುವನ್ನು ಸಾಕುವಂತಹ ಜೀವನ ನಿರ್ವಹಣೆಗೆ ಸಾಕಾಗುತ್ತಿರಲಿಲ್ಲ. ನಾಲ್ಕು ವರ್ಷಗಳ ನಂತರ ಅವರು ಈ ಕೆಲಸ ಬಿಟ್ಟು , ವೈದ್ಯಕೀಯ ಪರಿಕರಗಳ ಮಾರಾಟಗಾರ ಉದ್ಯೋಗಕ್ಕೆ ಸೇರಿಕೊಳ್ಳುವ ಮೂಲಕ ಅವರ ಸಂಬಳವನ್ನು ದುಪ್ಪಟ್ಟುಗೊಳಿಸಿಕೊಂಡರು.[೮]
ಗಾರ್ಡ್ನರ್ ರ ಪುತ್ರ ತನ್ನ ತಂದೆಯ ಬಗ್ಗೆ ಸಂಭಾಷಣೆಯಲ್ಲಿ ಕೇಳುತ್ತಿದ್ದ ಪ್ರಶ್ನೆಗಳು, ಸ್ವತಃ ಗಾರ್ಡ್ನರ್ ಗೆ ಅವರ ತಂದೆಯನ್ನು ದೂರವಾಣಿ ಸಂವಾದದ ಮೂಲಕ ಕಂಡುಹಿಡಿಯಲು ಸಹಾಯಮಾಡಿತು. ಅವರ ಹೊಸ ಉದ್ಯೋಗದಿಂದ ದೊರೆಯುತ್ತಿದ್ದ ಅಧಿಕ ಆದಾಯದಿಂದಾಗಿ, ಗಾರ್ಡ್ನರ್ ಲೂಸಿಯಾನದ ಮೊನ್ರೆಗೆ ಪ್ರಯಾಣ ಬೆಳೆಸಲು ಹಣ ಉಳಿತಾಯ ಮಾಡಬಲ್ಲವರಾದರು. ಇದೇ ಸಂದರ್ಭದಲ್ಲೇ ಅವರು ಮತ್ತು ಅವರ ಪುತ್ರ ಟರ್ನರ್ ರನ್ನು ಮೊದಲ ಬಾರಿಗೆ ಭೇಟಿಮಾಡಿದ್ದರು.[೨]
ಗಾರ್ಡ್ನರ್ ವ್ಯವಹಾರದಲ್ಲಿ ಯಶಸ್ಸು ಗಳಿಸಲೆಂದು ಸ್ಯಾನ್ ಫ್ರಾನ್ಸಿಸ್ಕೋಗೆ ಮರಳಿದರು. ಸ್ಯಾನ್ ಫ್ರಾನ್ಸಿಸ್ಕೋ ಜನರಲ್ ಹಾಸ್ಪಿಟಲ್ (ಸ್ಯಾನ್ ಫ್ರಾನ್ಸಿಸ್ಕೋದ ಸಾರ್ವತ್ರಿಕ ಆಸ್ಪತ್ರೆ)ಗೆ ಮಾರಾಟ ಕುರಿತಾದ ಕರೆ ಬಂದ ನಂತರ, ಕೆಂಪು ಫೆರಾರಿಯಿಂದಿಳಿದ ಉತ್ತಮ ಉಡುಪು ಧರಿಸಿದ ವ್ಯಕ್ತಿಯನ್ನು ಭೇಟಿಯಾದ ನಂತರ ಅವರ ಜೀವನದಲ್ಲಿ ಅತ್ಯಂತ ಪ್ರಮುಖ ಘಟನೆ ನಡೆಯಿತು. ಕುತೂಹಲಿಯಾಗಿದ್ದ ಗಾರ್ಡ್ನರ್ ಆ ವ್ಯಕ್ತಿಯಲ್ಲಿ ತಮ್ಮ ವೃತ್ತಿಜೀವನದ ಬಗ್ಗೆ ಪ್ರಶ್ನಿಸಿದರು. ಆ ವ್ಯಕ್ತಿಯು, ನೀನು ಈ ಮೊದಲು ಸ್ಟಾಕ್ ಮಾರಾಟಗಾರನಾಗಿದ್ದೆ ಎಂದು ತಿಳಿಸಿದರು. ಆ ಕ್ಷಣದಿಂದ ಗಾರ್ಡ್ನರ್ ರ ವೃತ್ತಿಜೀನವದ ಮಾರ್ಗವನ್ನು ನಿರ್ಧರಿಸಲಾಗಿತ್ತು, ಎಂದು ಹೇಳಬಹುದು.[೭] ಅಂತಿಮವಾಗಿ ಗಾರ್ಡ್ನರ್ ಜನಪ್ರಿಯ ಬಾಸ್ಕೆಟ್ ಬಾಲ್ ಆಟಗಾರ ಮೈಕೆಲ್ ಜೊರ್ಡನ್ ರವರಿಂದ ಫೆರಾರಿಯನ್ನು ಕೊಂಡುಕೊಂಡರು.[೩] ಗಾರ್ಡ್ನರ್ ರ ಕಪ್ಪು ಫೆರಾರಿ ಇಲಿನಾಯ್ಸ್ ಲೈಸನ್ಸ್ ಪ್ಲೇಟ್ ಅನ್ನು ಹೊಂದಿದ್ದು ಅದರ ಮೇಲೆ "NOT MJ" ಎಂದು ಬರೆಯಲಾಗಿತ್ತು.
ಕೆಂಪು ಫೆರಾರಿಯಲ್ಲಿದ್ದ ಸ್ಟಾಕ್ ಮಾರಾಟಗಾರ ನ ಹೆಸರು ಬಾಬ್ ಬ್ರಿಡ್ಜಸ್. ಅವರು ಗಾರ್ಡ್ನರ್ ರನ್ನು ಭೇಟಿಮಾಡಿ, ಹಣಕಾಸಿನ ಜಗತ್ತಿಗೆ ಅವರನ್ನು ಪರಿಚಯಿಸಿದರು. ಬ್ರಿಡ್ಜಸ್ ಸ್ಟಾಕ್ (ಶೇರು)ವ್ಯಾಪಾರವನ್ನು ಮಾಡುವ ಪ್ರಮುಖ ವ್ಯಾಪಾರ ಸಂಸ್ಥೆಗಳಲ್ಲಿ ಗಾರ್ಡ್ನರ್ ಮತ್ತು ಶಾಖಾ ನಿರ್ವಾಹಕರ ನಡುವೆ ಸಂದರ್ಶಕ ಭೇಟಿಯನ್ನು ಏರ್ಪಡಿಸಿದ್ದರು- ಈ ವ್ಯಾಪಾರ ಸಂಸ್ಥೆಗಳಾದ ಮೆರಿಲ್ ಲಿಂಚ್, ಪೈನೆ ವೆಬ್ಬರ್ , ಇ, ಎಫ್ ಹಟ್ಟನ್, ಡೀನ್ ವಿಟ್ಟರ್ ರೆನಾಲ್ಡ್ಸ್ ಮತ್ತು ಸ್ಮಿತ್ ಬಾರ್ನೆ ಯಂತಹ ಕಂಪನಿಗಳು ತರಬೇತಿ ಕಾರ್ಯಕ್ರಮಗಳ ಅವಕಾಶ ನೀಡಿದವು. ಮುಂದಿನ ಎರಡು ತಿಂಗಳುಗಳಿಗೆ ಗಾರ್ಡ್ನರ್ ಅವರ ಮಾರಾಟದ ಸಂದರ್ಶಕ-ಭೇಟಿ ನಿಶ್ಚಯಗಳನ್ನು ರದ್ದುಪಡಿಸಿದರು ಅಥವಾ ಮುಂದೂಡಿದರು. ಅಲ್ಲದೇ ನಿರ್ವಾಹಕರನ್ನು ಭೇಟಿಯಾಗುವಲ್ಲಿ ಎಷ್ಟು ನಿರತದಾರರೆಂದರೆ ಅವಧಿ ಮೀರಿ ಅವರ ಕಾರನ್ನು ನಿಲ್ಲಿಸಿದ್ದಕ್ಕಾಗಿ ದಂಡವನ್ನೂ ವಿಧಿಸಲಾಗಿತ್ತು.[೨]
ಗಾರ್ಡ್ನರ್, ಇ.ಎಫ್.ಹಟ್ಟನ್ ನಲ್ಲಿ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಒಪ್ಪಿಗೆ ಪಡೆದಾಗ ಅವರ ವೃತ್ತಿಜೀವನದ "ಯಶಸ್ಸನ್ನು" ಕಂಡಿರುವಂತೆ ಅದು ಕಂಡುಬರುತ್ತದೆ. ಸ್ಟಾಕ್ ಮಾರಾಟಗಾರನ ತರಬೇತಿಯ ಕಡೆಗೆ ಅವರ ಸಂಪೂರ್ಣ ಸಮಯ ಮೀಸಲಿಡಲೆಂದು, ಅನಂತರ ಅವರ ಮಾರಾಟಗಾರ ಉದ್ಯೋಗವನ್ನೂ ಕೈಬಿಟ್ಟರು. ಅವರು ಕೆಲಸಮಾಡಲು ಸಿದ್ದರಾಗಿ ಕಾರ್ಯ ಕಚೇರಿ ಸ್ಥಳಕ್ಕೆ ಆಗಮಿಸಿದರು. ಆವರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದ ವ್ಯವಸ್ಥಾಪಕರನ್ನು ಹಿಂದಿನವಾರವಷ್ಟೇ ಕೆಲಸದಿಂದ ವಜಾಮಾಡಲಾಯಿತು ಎಂಬುದು ಅವರಿಗೆ ಆಗಲೇ ತಿಳಿದದ್ದು. ಇದೂ ಸಾಲದು ಎನ್ನುವಂತೆ, ಗಾರ್ಡ್ನರ್ ರೊಂದಿಗೆ ಜ್ಯಾಕಿಯ ಸಂಬಂಧವೂ ಹಾಳಾಗ ತೊಡಗಿತು. ಆಕೆ ತನ್ನನ್ನು ಹೊಡೆಯುತ್ತಿದ್ದರೆಂದು ಅವರನ್ನು ದೂಷಿಸಿದ್ದಾಳೆ—ಆದರೀಗ ಆ ಆಪಾದನೆಯನ್ನು ಗಾರ್ಡ್ನರ್ ನಿರಾಕರಿಸುತ್ತಾರೆ— ಆಕೆಯ ಪುತ್ರನನ್ನು ಕರೆದುಕೊಂಡು ಅವರನ್ನು ಬಿಟ್ಟು ಈಸ್ಟ್ ಕೋಸ್ಟ್ (ಪಶ್ಚಿಮ ಕರಾವಳಿಗೆ) ಗೆ ಆಕೆ ಹೊರಟು ಹೋದರು. ಪಾರ್ಕಿಂಗ್ ಟಿಕೆಟ್ಸ್ ನಲ್ಲಿ $1,200 ರನ್ನು ಪಾವತಿಸಲು ಅಸಮರ್ಥರಾದ ಕಾರಣ ಅವರನ್ನು ಬಂಧಿಸಲಾಯಿತು, ಮತ್ತು ಶಿಕ್ಷೆಯ ರೂಪದಲ್ಲಿ ಹತ್ತು ದಿನಗಳ ವರೆಗೂ ಸೆರೆಮನೆಯಲ್ಲಿರುವಂತೆ ನ್ಯಾಯಾಧೀಶರು ಆದೇಶಿಸಿದರು.[೪]
ಗಾರ್ಡ್ನರ್ ಅವರು ಸೆರೆಮನೆಯಿಂದ ಮನೆಗೆ ಮರಳಿದಾಗ ಅವರ ಮನೆ ಬರಿದಾಗಿತ್ತು. ಅವರ ಪ್ರಿಯತಮೆ ಮತ್ತು ಅವರ ಪುತ್ರ , ಅವರ ಎಲ್ಲಾ ವಸ್ತುಗಳನ್ನು ತೆಗೆದುಕೊಂಡು (ಅವರ ಸೂಟುಗಳು , ಶೂಗಳು ಮತ್ತು ವ್ಯಾಪಾರದ ಉಡುಗೆಗಳನ್ನೊಳಗೊಂಡಂತೆ) ಕಣ್ಮರೆಯಾಗಿದ್ದರು. ಗಾರ್ಡನ್ನರನ್ನು ಬಂಧಿಸಿದ್ದ ದಿನದಲ್ಲಿ ಅವರ ಬಳಿ ಯಾವ ಅನುಭವವಾಗಲೀ, ಕಾಲೇಜಿನ ಶಿಕ್ಷಣವಾಗಲೀ ಮತ್ತು ವಾಸ್ತವವಾಗಿ ಯಾವ ಸಂಪರ್ಕಗಳು ಇರಲಿಲ್ಲ; ಅವರು ಸಾಮಾನ್ಯ ಉಡುಪನ್ನು ಮಾತ್ರ ಧರಿಸಿದ್ದರು. ನಂತರ ಗಾರ್ಡ್ನರ್ ಡೀನ್ ವಿಟ್ಟರ್ ರೆನಾಲ್ಡ್ಸ್’ ಸ್ಟಾಕ್ ವ್ಯಾಪಾರ ತರಬೇತಿ ಕಾರ್ಯಕ್ರಮದಲ್ಲಿ ಸ್ಥಾನ ಗಳಿಸಿದರು. ಅವರಿಗೆ ಮಾಸಿಕ $1,೦೦೦ ನಷ್ಟು ಸ್ಟೈಪಂಡ್, ವೇತನ(ಇದು ಪ್ರಸ್ತುತ ದಿನದ $ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೨".ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೨".{Inflation} - NaN check amount: 1000 or year: 1983. ಮೊತ್ತಕ್ಕೆ ಸಮನಾಗಿದೆ) ವನ್ನು ನೀಡಲಾಗುತ್ತಿತ್ತು. ಇದರಿಂದಾಗಿ ಯಾವುದೇ ಉಳಿತಾಯ ಮಾಡಲು ಸಾಧ್ಯವಾಗದೇ ದೈನಂದಿನ ವೆಚ್ಚ ಭರಿಸುವುದೂ ಅವರಿಗೆ ಕಷ್ಟಕರವಾಯಿತು.[೭]
ಆಸರೆಯಿಲ್ಲದ ಪರಿಸ್ಥಿತಿಯ ನಡುವೆ ಪಿತೃತ್ವ
ಬದಲಾಯಿಸಿಗಾರ್ಡ್ನರ್ ಡೀನ್ ವಿಟ್ಟರ್ ರೆನಾಲ್ಡ್ಸ್ ನಲ್ಲಿ ಅಗ್ರ ಪ್ರಶಿಕ್ಷಣಾರ್ಥಿಯಾಗಲು ಶ್ರಮಪಟ್ಟರು. ಅವರು ಪ್ರತಿದಿನ ಕಛೇರಿಗೆ ನಿಗದಿತ ಅವಧಿಗೆ ಮುಂಚಿತವಾಗಿ ಹೋಗಿ,ಹೆಚ್ಚು ಕೆಲಸ ಮಾಡಲು ಅನುಕೂಲವಾಗುವಂತೆ ತಡವಾಗಿ ಕಚೇರಿ ಬಿಡುತ್ತಿದ್ದರು. ದಿನಕ್ಕೆ 200 ಕರೆಗಳಂತೆ ಗುರಿಯನ್ನಿಟ್ಟುಕೊಂಡು ನಿರೀಕ್ಷಿತ ಗ್ರಾಹಕರಿಗೆ ಸತತ ವ್ಯಾಪಾರಿ ಕರೆಗಳನ್ನು ಮಾಡುತ್ತಿದ್ದರು. ಗಾರ್ಡ್ನರ್ ಮೊದಲ ಪ್ರಯತ್ನದಲ್ಲೇ ಅವರ ಪರವಾನಿಗೆ ಪತ್ರದ (ಲೈಸನ್ಸ್ ನವೀಕರಣ)ಪರೀಕ್ಷೆಯನ್ನು 1982 ರಲ್ಲಿ ಪಾಸು ಮಾಡಿ ಸಂಸ್ಥೆಯ ಖಾಯಂ ಉದ್ಯೋಗಿಯಾದಾಗ, ಅವರ ಸತತ ಪ್ರಯತ್ನ ಫಲ ನೀಡಿತ್ತು. ಅಂತಿಮವಾಗಿ ಗಾರ್ಡ್ನರ್ ರನ್ನು ಸ್ಯಾನ್ ಫ್ರಾನ್ಸಿಸ್ಕೋದ ಬಿಯರ್ ಸ್ಟರ್ನ್ಸ್ ಅಂಡ್ ಕಂಪನಿಯಲ್ಲಿ ನೇಮಕ ಮಾಡಿಕೊಳ್ಳಲಾಯಿತು.
ಜ್ಯಾಕಿ ಅವರ ಪುತ್ರನೊಂದಿಗೆ ಕಣ್ಮರೆಯಾಗಿ ಸುಮಾರು ನಾಲ್ಕು ತಿಂಗಳ ನಂತರ ಮರಳಿ ಬಂದರು, ಮತ್ತು ಅವರ ಪುತ್ರನನ್ನು ಗಾರ್ಡ್ನರ್ ಗೆ ಒಪ್ಪಿಸಿ ಹೊರಟು ಹೋದರು. ಅ ಸಮಯದಿಂದ ಸ್ವಲ್ಪ ಪ್ರಮಾಣದ ಬಾಡಿಗೆಯನ್ನು ಮಾತ್ರ ಕೊಡಲು ಶಕ್ತರಾಗಿದ್ದ ಕಾರಣ ಅಗ್ಗದ ದರದ ವಸತಿಗೃಹ, ಫ್ಲಾಪ್ ಹೌಸ್ ನಲ್ಲಿ ಅವರು ರೂಮ್ ಮಾಡಿಕೊಂಡಿದ್ದರು. ಅವರು ಸ್ವಇಚ್ಛೆಯಿಂದ ಮಗುವನ್ನು ಅವರೊಬ್ಬರೇ ಸಾಕುವುದಾಗಿ ಒಪ್ಪಿಕೊಂಡರು; ಆದರೂ ಅವರು ರೂಮ್ ಮಾಡಿಕೊಂಡಿದ್ದ ಮನೆಯಲ್ಲಿ ಮಕ್ಕಳನ್ನು ಇಟ್ಟುಕೊಳ್ಳಲು ಅವಕಾಶ ನೀಡುತ್ತಿರಲಿಲ್ಲ. ಅವರು ಲಾಭದಾಯಕ ಉದ್ಯೋಗದಲ್ಲಿದ್ದರೂ ಕೂಡ, ಕ್ಯಾಲಿಫೋರ್ನಿಯಾದ ಬರ್ಕೆಲೆಯಲ್ಲಿ ಬಾಡಿಗೆ ಮನೆ ಕೊಳ್ಳಲು ಅವರು ಹಣ ಉಳಿಸುತ್ತಿರುವಾಗ, ಗಾರ್ಡ್ನರ್ ಮತ್ತು ಅವರ ಪುತ್ರ ಯಾರಿಗೂ ತಿಳಿಯದಂತೆ ಸೂಕ್ತ ಆಸರೆಯಿಲ್ಲದ ಸ್ಥಿತಿಯೊಂದಿಗೆ ಹೋರಾಡುತ್ತಿದ್ದರು.
ಈ ನಡುವೆ, ಸ್ಯಾನ್ ಫ್ರಾನ್ಸಿಸ್ಕೋ ಜಿಲ್ಲೆಯ ಟೆಂಡರ್ ಲೊಯಿನ್ ನಲ್ಲಿ ಗಾರ್ಡ್ನರ್ ಮತ್ತು ಅವರ ಪುತ್ರ ವಾಸಿಸಲು ಮನೆಯಿಲ್ಲದೇ ಕಷ್ಟಪಡುತ್ತಿದ್ದಾರೆ ಎಂಬುದು ಅವರ ಯಾವ ಸಹೋದ್ಯೋಗಿಗಳಿಗೂ ಸುಮಾರು ವರ್ಷದ ವರೆಗೆ ತಿಳಿದಿರಲಿಲ್ಲ. ಗಾರ್ಡ್ನರ್ ತಮ್ಮ ಪುತ್ರನನ್ನು ಶಿಶು ವಿಹಾರ ಗೆ ಸೇರಿಸಲು ಸಾಕಷ್ಟು ಬಾರಿ ಪರದಾಡಬೇಕಾಯಿತಲ್ಲದೇ ಅದಕ್ಕಾಗಿ ಪ್ರಯಾಸಟ್ಟರು. ದುರಾದೃಷ್ಟಗಳು ಅವರಿಗೆ ಸಾಲುಗಟ್ಟಿ ಬಂದವು.ಹೀಗೆ ಅವರಿಗೆ ಮತ್ತು ಅವರ ಪುತ್ರನಿಗೆ ಸುರಕ್ಷಿತ ಸ್ಥಳ ಅನ್ನಿಸಿದಲ್ಲಿ ಮಲಗುತ್ತಿದ್ದರು— ಕಛೇರಿಯ ವೇಳೆ ಮುಗಿದ ನಂತರ ಕಛೇರಿಯಲ್ಲಿ, ಫ್ಲಾಪ್ ಹೌಸ್ ನ ಕೋಣೆಯಲ್ಲಿ, ಪಾರ್ಕ್ ನಲ್ಲಿ, ಕೊಲ್ಲಿ ಪ್ರದೇಶದ ರಾಪಿಡ್ ಟ್ರಾನ್ಸಿಟ್ ನಿಲ್ದಾಣದಲ್ಲಿ, ಬೀಗ ಹಾಕಿದ ಸ್ನಾನ ಗೃಹದಲ್ಲಿಯೂ ಕೂಡ ಮಲಗುತ್ತಿದ್ದರು.[೧]
ಕ್ರಿಸ್ Jr. ರ ಆರೋಗ್ಯದ ಮೇಲಿನ ಕಾಳಜಿಯಿಂದಾಗಿ ಗಾರ್ಡ್ನರ್, ಆಸರೆಯಿಲ್ಲದ ಮಹಿಳೆಯರಿಗಾಗಿ ಇದ್ದ ಗಿಲ್ಡ್ ಮೆಮೊರಿಯಲ್ ಯುನೈಟೆಡ್ ಮೆಥಡಿಸ್ಟ್ ಚರ್ಚ್ ನ ಆಶ್ರಮದಲ್ಲಿ ವಾಸಿಸಲು ಅವಕಾಶ ನೀಡಬೇಕಾಗಿ ರೆವರೆಂಡ್ ಸೆಸಿಲ್ ವಿಲಿಯಮ್ಸ್ ರವರನ್ನು ಕೇಳಿಕೊಂಡರು. ಈಗ ಇದನ್ನು ದಿ ಸೆಸಿಲ್ ವಿಲಿಯಮ್ಸ್ ಗಿಲ್ಡ್ ಕಮ್ಯೂನಿಟಿ ಹೌಸ್ Archived 2008-05-11 ವೇಬ್ಯಾಕ್ ಮೆಷಿನ್ ನಲ್ಲಿ. ಎಂದು ಕರೆಯಲಾಗುತ್ತದೆ. ವಿಲಿಯಮ್ಸ್ ಯಾವುದೇ ಅಡತಡೆ ಇಲ್ಲದೇ ಅನುಮತಿ ನೀಡಿದರು.[೨] ಆಸರೆಯಿಲ್ಲದ ಪರಿಸ್ಥಿತಿಯ ಬಗ್ಗೆ ಇಂದು ಏನನ್ನು ನೆನಪಿಸಿಕೊಳ್ಳಲು ಬಯಸುತ್ತೀರಿ ಎಂದು ಪ್ರಶ್ನಿಸಿದಾಗ , ಕ್ರಿಸ್ಟೋಫರ್ ಗಾರ್ಡ್ನರ್, Jr. , "ನಮಗೆ ಆಸರೆಯಿರಲಿಲ್ಲ ಎಂಬುದಕ್ಕಿಂತ ಹೆಚ್ಚಾಗಿ ನಾನು ಒಂದು ಕಡೆ ನಿಲ್ಲುವಂತಿರದೇ ಬೇರೆಡೆಗೆ ಹೋಗಲೇಬೇಕೆಂಬುದು ಮಾತ್ರ ನಮಗೆ ಗೊತ್ತಿತ್ತು. ಆದ್ದರಿಂದ, ಎಲ್ಲೂ ನಿಲ್ಲದೆ ಮುಂದೆ ಸಾಗುತ್ತಲೇ ಇರಬೇಕಿತ್ತು" ಎಂಬುದನ್ನು ಮಾತ್ರ ನಾನು ನೆನಪಿಸಿಕೊಳ್ಳುತ್ತೇನೆ, ಎಂದು ತಿಳಿಸಿದ್ದಾರೆ.[೩]
ವ್ಯವಹಾರದ ಸಾಹಸೋದ್ಯಮಗಳು
ಬದಲಾಯಿಸಿಕ್ರಿಸ್ ಗಾರ್ಡ್ನರ್, ಇಲಿನಾಯ್ಸ್ ನ ಚಿಕಾಗೋದಲ್ಲಿ , ಗಾರ್ಡ್ನರ್ ರಿಚ್ ಅಂಡ್ ಕೋ ಎಂಬ ಸಂಸ್ಥೆಯನ್ನು 1987 ರಲ್ಲಿ ಆರಂಭಿಸಿದರು. ಇದು "ಸಾಂಸ್ಥಿಕ ವ್ಯಾಪಾರ ಸಂಸ್ಥೆಯಾಗಿದ್ದು, ರಾಷ್ಟ್ರದ ಕೆಲವೊಂದು ದೊಡ್ಡ ಸಂಸ್ಥೆಗಳಿಗಾಗಿ ಸಾರ್ವಜನಿಕ ಪಿಂಚಣಿ ಯೋಜನೆಗಳು ಮತ್ತು ಒಕ್ಕೂಟಗಳಿಗಾಗಿ " ಸಾಲ, ಇಕ್ವಿಟಿ ಶೇರು ವಹಿವಾಟಿನ ಸ್ಟಾಕ್ ಮತ್ತು ಹಣಕಾಸಿನ ಉತ್ಪನ್ನಗಳ ವ್ಯವಹಾರ ನಿರ್ವಹಣೆಯಲ್ಲಿ ತೊಡಗಿದೆ.[೪] ಸುಮಾರು $10,000 ಬಂಡವಾಳದೊಂದಿಗೆ ಅವರ ಹೊಸ ಕಂಪನಿ ಆರಂಭವಾಯಿತು, ಮತ್ತು ಒಂದೇ ಒಂದು ಮೇಜಿನೊಂದಿಗೆ ಅವರ ಸಣ್ಣ ಪ್ರೆಸಿಡೆನ್ಷಿಯಲ್ ಟವರ್ ಅಪಾರ್ಟ್ಮೆಂಟ್ ನಲ್ಲಿ(ಮನೆಯಲ್ಲಿ) ಶುರುವಾದದ್ದು: ಕುಟುಂಬದ ಊಟದ ಮೇಜಿನಂತಿರುವ ದುಪ್ಪಟ್ಟು ಗಾತ್ರದ ಮರದ ಮೇಜುವಿನ ಮೇಲೆ ಇದರ ಉಗಮವಾಯಿತು.[೯] ಅಂದರೆ ಗಾರ್ಡ್ನರ್ ಅವರ ಸ್ಟಾಕ್ ಮಾರಾಟ ಉದ್ಯಮದ 75 ಪ್ರತಿಶದಷ್ಟು ಪಾಲು ಗಾರ್ಡ್ನರ್ ದಾಗಿರುತ್ತದೆ. ಉಳಿದದ್ದು ಕಾಯ್ದಿರಿಸಿದ ತುರ್ತು ನಿಧಿ ಗೆ ಸೇರಿರುತ್ತದೆ.[ಸೂಕ್ತ ಉಲ್ಲೇಖನ ಬೇಕು] ಅವರ ಕಂಪನಿಗೆ "ಗಾರ್ಡ್ನರ್ ರಿಚ್" ಎಂಬ ಹೆಸರನ್ನು ಏಕೆ ಆಯ್ಕೆ ಮಾಡಿಕೊಂಡರೆಂದರೆ, ಅವರು ಮಾರ್ಕ್ ರಿಚ್ , ಇತರ ಸರಕುಗಳ ವ್ಯಾಪಾರಿಯಾಗಿದ್ದರಲ್ಲದೇ,ಅವರು 2001 ರಲ್ಲಿ ಮಾಜಿ ಅಧ್ಯಕ್ಷ ಬಿಕ್ ಕ್ಲಿಂಟನ್ ರವರಿಂದ ಹಾರೈಕೆ ಪಡೆದಿದ್ದರು" . ಇವರನ್ನು ಭವಿಷ್ಯದ ಅತ್ಯಂತ ಯಶಸ್ವಿ ವ್ಯಾಪಾರಿಗಳಲ್ಲಿ ಒಬ್ಬನೆಂದು" ಅವರು ಪರಿಗಣಿಸುತ್ತಿದ್ದರು.[೭]
ಗಾರ್ಡ್ನರ್ ರಿಚ್ ನಲ್ಲಿದ್ದ ಅವರ ಸಣ್ಣ ಪಾಲನ್ನು 2006 ರಲ್ಲಿ ಬಹು ಮಿಲಿಯನ್ ಮೊತ್ತದಲ್ಲಿ ಮಾರಿದ ನಂತರ ಗಾರ್ಡ್ನರ್, ನ್ಯೂಯಾರ್ಕ್ , ಚಿಕಾಗೋ ಮತ್ತು ಸ್ಯಾನ್ ಫ್ರಾನ್ಸಿಸ್ಕೋಗಳಲ್ಲಿ ಕಛೇರಿಗಳನ್ನು ಹೊಂದುವುದರೊಂದಿಗೆ ಕ್ರಿಸ್ಟೋಫರ್ ಗಾರ್ಡ್ನರ್ ಇಂಟರ್ನ್ಯಾಷನಲ್ ಹೋಲ್ಡಿಂಗ್ಸ್ ನ ಸಂಸ್ಥಾಪಕರಾದರಲ್ಲದೇ ಇದರ CEO ಆದರು.[೪] ಪ್ರತ್ಯೇಕತಾ ನೀತಿ ಅಂತ್ಯದ 10 ನೇ ವಾರ್ಷಿಕೋತ್ಸವದ ಸಮಯದಲ್ಲಿ ನಡೆಯುತ್ತಿದ್ದ, ಚುನಾವಣೆಗಳನ್ನು ವೀಕ್ಷಿಸಲು ದಕ್ಷಿಣ ಆಫ್ರಿಕಾಕ್ಕೆ ಭೇಟಿನೀಡಿದ ಸಂದರ್ಭದಲ್ಲಿ, ಅವರು ದಕ್ಷಿಣ ಆಫ್ರಿಕಾದ ಅಭಿವೃದ್ಧಿ ಹೊಂದುತ್ತಿರುವ ಮಾರುಕಟ್ಟೆಗಳಲ್ಲಿ ಸಂಭನೀಯ ಬಂಡವಾಳ ಹೂಡಿಕೆಯ ಬಗ್ಗೆ ಚರ್ಚಿಸಲೆಂದು ನೆಲ್ಸನ್ ಮಂಡೇಲಾ ರವರನ್ನು ಭೇಟಿಮಾಡಿದ್ದರೆಂದು ಅವರ 2006 ರ ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಿದ್ದಾರೆ. ಒಂದು ಅಂದಾಜಿನಂತೆ ಗಾರ್ಡ್ನರ್ ದಕ್ಷಿಣ ಆಫ್ರಿಕಾದೊಂದಿಗೆ ತನ್ನ ಬಂಡವಾಳ ಉದ್ಯಮವನ್ನು ಅಭಿವೃದ್ಧಿಪಡಿಸುತ್ತಿದ್ದು, ಅದು ನೂರಾರು ಉದ್ಯೋಗಗಳನ್ನು ಸೃಷ್ಟಿಸಲಿದೆ, ಮತ್ತು ರಾಷ್ಟ್ರಕ್ಕೆ ದಶಲಕ್ಷ ಡಾಲರ್ ಗಳಷ್ಟು ವಿದೇಶಿ ಹೂಡಿಕೆಯನ್ನು ತರುವ ಸಾಧ್ಯತೆ ಇದೆ. ಶೇರು ವ್ಯವಹಾರ ಸಂಬಂಧಿತ ಕಾನೂನಿನ ಉಲ್ಲಂಘನೆಯಾಗಬಾರದೆಂದು ಯೋಜನೆಯ ವಿವರಗಳನ್ನು ಬಹಿರಂಗ ಪಡಿಸಲು ಗಾರ್ಡ್ನರ್ ನಿರಾಕರಿಸಿದರು.[೧೦]
ಲೋಕೋಪಕಾರದಲ್ಲಿ ತೊಡಗಿರುವುದು
ಬದಲಾಯಿಸಿಕ್ರಿಸ್ ಗಾರ್ಡ್ನರ್ ಲೋಕೋಪಕಾರಿಯಾಗಿದ್ದು, ಅನೇಕ ದತ್ತಿ ಸಂಸ್ಥೆಗಳಿಗೆ ಪ್ರಾಯೋಜಕರಾಗಿದ್ದಾರೆ. ವಿಶೇಷವಾಗಿ ಪರೋಪಕಾರಿ [೧೧] ಕಾರಾ ಪ್ರೋಗ್ರಾಂ ಮತ್ತು ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಗಿಲ್ಡ್ ಮೆಮೊರಿಯಲ್ ಯುನೈಟೆಡ್ ಮೆತಡಿಸ್ಟ್ ಚರ್ಚ್ ನ ಪ್ರಾಯೋಜಕರಾಗಿದ್ದಾರೆ. ಇಲ್ಲಿ ಅವರಿಗೆ ಮತ್ತು ಅವರ ಪುತ್ರನಿಗೆ ಕಷ್ಟದ ಸಮಯದಲ್ಲಿ ಆಸರೆ ನೀಡಲಾಗಿತ್ತು.[೪] ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಕಡಿಮೆ ಆದಾಯದವರಿಗೆ ವಸತಿ ಸೌಕರ್ಯದ ವ್ಯವಸ್ಥೆಯನ್ನು ಸೃಷ್ಟಿಸುವ ಮತ್ತು ಅವರು ಆಸರೆಯಿಲ್ಲದೆ ಅಲೆದಾಡುತ್ತಿದ್ದ ನಗರದ ಪ್ರದೇಶದಲ್ಲಿ ಉದ್ಯೋಗ ದ ಅವಕಾಶವನ್ನು ಒದಗಿಸುವ, US$50 ಮಿಲಿಯನ್ ಮೊತ್ತದ ಯೋಜನೆಗೆ ಹಣ ಒದಗಿಸಲು ಅವರು ನಿಧಿ ಸಹಾಯ ಮಾಡಿದರು.[೧] ಗಾರ್ಡ್ನರ್ ಹಣಕಾಸಿನ ಸಹಾಯ ಮಾಡುವುದರೊಂದಿಗೆ ಬಟ್ಟೆ ಮತ್ತು ಪಾದರಕ್ಷೆಗಳನ್ನು ಕೂಡ ಕೊಡುಗೆಯಾಗಿ ನೀಡಿದರು. ಅವರು ಚಿಕಾಗೋದಲ್ಲಿರುವ ಆಸರೆಯಿಲ್ಲದ ಜನರಿಗೆ ಮತ್ತು ಅಪಾಯದಲ್ಲಿರುವ ಸಮುದಾಯಗಳಿಗೆ, ಖಚಿತ,ಶಾಶ್ವತ ಉದ್ಯೋಗ ಒದಗಿಸುವಿಕೆ, ಇದಕ್ಕಾಗಿ ಜನರು ವೃತ್ತಿ ಜೀವನದ ಮಾರ್ಗದರ್ಶನ ಮತ್ತು ಸಮಗ್ರ ಉದ್ಯೋಗ ತರಬೇತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ.[೪]
ತಂದೆಯ ಕರ್ತವ್ಯವನ್ನು ಉತ್ತಮವಾಗಿ ನಿರ್ವಹಿಸುವ ಮೂಲಕ ಮಕ್ಕಳ ಯೋಗಕ್ಷೇಮದ ಕಡೆಗೆ ತಮ್ಮ ಜೀವನವನ್ನು ಮೀಸಲಿರಿಸಿದ್ದಕ್ಕಾಗಿ , ಗಾರ್ಡ್ನರ್, ನ್ಯಾಷನಲ್ ಫಾದರ್ ಹುಡ್ ಇನಿಷಿಯೇಟಿವ್ (NFI) ಮಂಡಳಿಯಲ್ಲಿ ಸೇವೆಸಲ್ಲಿಸುತ್ತಿದ್ದಾರೆ .[೪] ಇವರು ನ್ಯಾಷನಲ್ ಎಜ್ಯುಕೇಶನ್ ಫೌಂಡೇಷನ್ ಮಂಡಳಿಯ ಸದಸ್ಯರಾಗಿದ್ದಾರೆ, ಹಾಗು ಎರಡು ವಾರ್ಷಿಕ ಶೈಕ್ಷಣಿಕ ಪ್ರಶಸ್ತಿಗಳ ಪ್ರಾಯೋಜಕರಾಗಿದ್ದಾರೆ: ನ್ಯಾಷನಲ್ ಎಜ್ಯುಕೇಶನ್ ಅಸೋಸಿಯೇಷನ್ಸ್ ನ್ಯಾಷನಲ್ ಎಜ್ಯುಕೇಶನಲ್ ಸಪೋರ್ಟ್ ಪರ್ಸನೆಲ್ ಪ್ರಶಸ್ತಿ ಮತ್ತು ಅಮೇರಿಕನ್ ಫೆಡರೇಷನ್ ಆಫ್ ಟೀಚರ್ಸ್ ಪ್ಯಾರಫ್ರೋಫೇಷನಲ್ಸ್ ಅಂಡ್ ಸ್ಕೂಲ್ ರಿಲೇಟೆಡ್ ಪರ್ಸನೆಲ್ ಪ್ರಶಸ್ತಿ .[೪]
ಹೀಗೆ 2002ರಲ್ಲಿ ಗಾರ್ಡ್ನರ್ NFI ಯಿಂದ ವರ್ಷದ ತಂದೆ/ಪಾಲಕ ಪ್ರಶಸ್ತಿ ಪಡೆದುಕೊಂಡರು. ಅಲ್ಲಿಂದ ಗಾರ್ಡ್ನರ್ 25 ನೇ ವಾರ್ಷಿಕ ಮಾನವಹಿತಕಾರಿ ಪ್ರಶಸ್ತಿ , ಮತ್ತು ಲಾಸ್ ಏಂಜಲ್ಸ್ ಕಮಿಷನ್ ಅಸಾಲ್ಟ್ಸ್ ಅಗ್ಯೇನ್ಸ್ಟ್ ವುಮೆನ್ (LACAAW), ಮತ್ತು ಕಾಂಟಿನೆಂಟಲ್ ಆಫ್ರಿಕಾ ಚೆಂಬರ್ ಆಫ್ ಕಾಮರ್ಸ್ ಅನುಕ್ರಮವಾಗಿ ನೀಡಿದಂತಹ ,2006 ರ ಫ್ರೆಂಡ್ ಆಫ್ ಆಫ್ರಿಕಾ ಪ್ರಶಸ್ತಿ ಯನ್ನು ಪಡೆದುಕೊಂಡ ಗೌರವಕ್ಕೂ ಪಾತ್ರರಾಗಿದ್ದಾರೆ.[೪]
ಆಗ 2008 ರಲ್ಲಿ ಹ್ಯಾಂಪ್ಟನ್ ವಿಶ್ವವಿದ್ಯಾನಿಲಯದಿಂದ ಅವರ ಪುತ್ರಿ ಪದವಿಗಳಿಸಿದ ಸಮಾರಂಭದ ಸಂದರ್ಭದಲ್ಲಿ ಮಾತನಾಡಿದರು.
ಜನಪ್ರಿಯ ಸಂಸ್ಕೃತಿಯಲ್ಲಿ
ಬದಲಾಯಿಸಿದಿ ಪರ್ಸ್ಯೂಟ್ ಆಫ್ ಹ್ಯಾಪಿನೆಸ್ (ಸಂತಸದ ಅನ್ವೇಷಣೆಯಲ್ಲಿ)
ಬದಲಾಯಿಸಿಗಾರ್ಡ್ನರ್ 2002 ರ ಜನವರಿಯಲ್ಲಿ 20/20 ಯೊಂದಿಗೆ ನೀಡಿದ ಸಂದರ್ಶಕ್ಕೆ ದೊರೆತ ಅಗಾಧ ರಾಷ್ಟ್ರೀಯ ಪ್ರತಿಕ್ರಿಯೆಯಿಂದ್ದಾಗಿ ಅವರ ಕಥೆ ಹಾಲಿವುಡ್ ನಲ್ಲಿ ಚಿತ್ರವಾಗಬಲ್ಲದು ಎಂಬುದನ್ನು ಅರಿತುಕೊಂಡರು.[೧೨] ಪ್ರಮುಖ ಚಲನಚಿತ್ರ ದಿ ಪರ್ಸ್ಯೂಟ್ ಆಫ್ ಹ್ಯಾಪಿನೆಸ್ ನ ಸಹಾಯ ನಿರ್ಮಾಪಕರಾಗುವ ಮೊದಲು, 2006 ರ ಮೇ 23 ರಂದು ಅವರ ಆತ್ಮಚರಿತ್ರೆ ಪ್ರಕಟಿಸಿದರು. ಇದನ್ನು ಗ್ಯಾಬ್ರಿಲೆ ಮ್ಯೂಸಿನೊ ನಿರ್ದೇಶಿಸಿದ್ದು, ಕೊಲಂಬಿಯಾ ಪಿಕ್ಚರ್ಸ್ 2006 ರ ಡಿಸೆಂಬರ್ 15 ರಂದು ಬಿಡುಗಡೆ ಮಾಡಿತು.[೪] ಚಲನಚಿತ್ರದ ಶೀರ್ಷಿಕೆಯ ವಿಚಿತ್ರವಾದ ಕಾಗುಣಿತಗಳು ಗಾರ್ಡ್ನರ್ ಆಸರೆಯಿಲ್ಲದಿದ್ದಾಗ ಗಮನಿಸಿದ ಸಂಕೇತವನ್ನು ಆಧರಿಸಿವೆ. ಚಲನಚಿತ್ರದಲ್ಲಿ ಗಾರ್ಡ್ನರ್ ರ ಪುತ್ರ ಹೋಗುತ್ತಿದ್ದಂತಹ ಡೇ ಕೇರ್ ನ ಹೊರಗೆ "happiness" ("happyness" )ಪದವನ್ನು ತಪ್ಪಾಗಿ ಬರೆಯಲಾಗಿದೆ.
ಈ ಚಲಚಿತ್ರದಲ್ಲಿ ವಿಲ್ ಸ್ಮಿತ್, ದ್ಯಾನ್ ಡೈ ನ್ಯೂಟನ್ ಮತ್ತು ಸ್ಮಿತ್ ರ ಪುತ್ರ ಜೇಡನ್ ಸ್ಮಿತ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಅಲ್ಲದೇ ಈ ಚಿತ್ರವು ಒಂದು ವರ್ಷಗಳ ಕಾಲ ಗಾರ್ಡ್ನರ್ ಆಸರೆಯಿಲ್ಲದೆ ಅಲೆದಾಡುತ್ತಿದ್ದ ಪರಿಸ್ಥಿತಿಯನ್ನು ಚಿತ್ರಿಸಿದೆ. ಚಲನಚಿತ್ರವು ಗಲ್ಲಾ ಪೆಟ್ಟಿಗೆಯಲ್ಲಿ $163 ಮಿಲಿಯನ್ ಅನ್ನು ಮತ್ತು ಪ್ರಪಂಚದಾದ್ಯಂತ $300 ಮಿಲಿಯನ್ ಅನ್ನು ಗಳಿಸುವ ಮೂಲಕ , ಇದು ವಿಲಿಯಂ ಸ್ಮಿತ್ ರ ಅನುಕ್ರಮಣೀಯ $100 ಮಿಲಿಯನ್ ಗಳಿಸಿದ ಚಿತ್ರಗಳಲ್ಲಿ ಒಂದಾಗಿದೆ. ಚಲನಚಿತ್ರವು ಗಾರ್ಡ್ನರ್ ನಿಜ ಜೀವನದ ಕಥಾನಕದೊಂದಿಗೆ ಕೆಲವೊಂದು ಕಾಲ್ಪನಿಕ ಪ್ರಸಂಗಗಳನ್ನು ಒಳಗೊಂಡಿತು. ಅನೇಕ ವರ್ಷಗಳವರೆಗೆ ನಡೆದಂತಹ ಕೆಲವೊಂದು ಘಟನೆಗಳನ್ನು ಮತ್ತು ಮಾಹಿತಿಯನ್ನು ಅಲ್ಪ ಕಾಲಕ್ಕೆ ಸಂಕ್ಷೇಪಿಸಲಾಗಿದೆ. ಅಲ್ಲದೇ ಎಂಟು ವರ್ಷದ ಜೇಡನ್ ರನ್ನು ಐದು ವರ್ಷದ Jr. ಆಗಿ ಚಿತ್ರಿಸಲಾಗಿದೆ. ಗಾರ್ಡ್ನರ್ ರ ಮಗ ಆ ಸಮಯದಲ್ಲಿ ಅಂಬೆಗಾಲಿಡುವ ಮಗುವಾಗಿದ್ದರು. ದೊರೆತ ಮಾಹಿತಿ ಪ್ರಕಾರ ಕ್ರಿಸ್ ಗಾರ್ಡ್ನರ್ ಸ್ಮಿತ್ ರವರನ್ನು ಸಾಹಸಮಯ ಚಿತ್ರಗಳಿಗೆ ಹೆಸರುವಾಸಿಯಾದ ನಟನೆಂದು ಭಾವಿಸಿದ್ದರು,—ಆದರೆ ಇವರು ಅವರ ಪಾತ್ರವನ್ನು ಮಾಡಲು ಸೂಕ್ತ ವ್ಯಕ್ತಿಯಾಗಿರಲಿಲ್ಲ. ಆದರೂ, ಅವರ ಪುತ್ರಿ ಜೆಸಿಂತಾ, "ಸ್ಮಿತ್ ಮೊಹಮದ್ ಅಲಿಯ ಪಾತ್ರ ಮಾಡಬಲ್ಲರೆಂದ ಮೇಲೆ, ನಿಮ್ಮ ಪಾತ್ರವನ್ನು ಅಭಿನಯಿಸಬಲ್ಲರು!" ಎಂದು ಹೇಳುವ ಮೂಲಕ "ಅವರ ಗೊಂದಲವನ್ನು ದೂರಮಾಡಿದರು" ಎಂದು ಗಾರ್ಡ್ನರ್ ತಿಳಿಸಿದ್ದಾರೆ.[೧೩] ಗಾರ್ಡ್ನರ್ , ಚಲನಚಿತ್ರದಲ್ಲಿ ಕ್ಯಾಮಿಯೋ ಅಪಿಯರೆನ್ಸ್ ಅನ್ನು ನೀಡಿದ್ದಾರೆ. ಅಂತಿಮ ದೃಶ್ಯದಲ್ಲಿ ವಿಲ್ ಮತ್ತ್ ಜೇಡನ್ ನಿಂತಿದ್ದಾಗ, ಗಾರ್ಡ್ನರ್ ಹಿನ್ನೆಲೆಯಲ್ಲಿ ನಡೆದುಹೋಗುವುದನ್ನು ತೋರಿಸಲಾಗಿದೆ. ಗಾರ್ಡ್ನರ್ ಮತ್ತು ವಿಲ್ ಪರಸ್ಪರ ಸಂಕ್ಷಿಪ್ತವಾಗಿ ಅಭಿನಂದಿಸುತ್ತಾರೆ; ವಿಲ್ ರ ಪುತ್ರ ನಾಕ್ ನಾಕ್ ಜೋಕ್ ಗಳನ್ನು ಹೇಳುವಾಗ ವಿಲ್ ಹಿಂದೆ ತಿರುಗಿ ನಡೆದುಹೋಗುತ್ತಿರುವ ಗಾರ್ಡ್ನರ್ ರತ್ತ ದೃಷ್ಟಿಹಾಯಿಸುತ್ತಾರೆ.
ಟೆನ್ನೆಸಿಯ ಚ್ಯಾಟ್ಟನೂಗ ನಾಗರಿಕರಿಗೆ, ಹಣಕಾಸಿನ ಅಭಿವೃದ್ಧಿ ಸಾಧಿಸಲು ಮತ್ತು ಅವರ ಕುಟುಂಬಗಳ ಕ್ಷೇಮಾಭಿವೃದ್ಧಿಗಾಗಿ ಹೊಣೆಗಾರಿಕೆಯನ್ನು ಹೊರಲು, ಗಾರ್ಡ್ನರ್ ರ ಕಥೆ ಸ್ಫೂರ್ತಿ ತುಂಬ ಬಹುದು ಎಂಬ ಭರವಸೆಯಲ್ಲಿ ಚ್ಯಾಟ್ಟನೂಗದ ಮೇಯರ್ ನಗರದಲ್ಲಿ ಮನೆಯಿಲ್ಲದೆ ಅಲೆದಾಡುತ್ತಿರುವವರಿಗಾಗಿ ಚಿತ್ರದ ಪ್ರದರ್ಶನವನ್ನು ಏರ್ಪಡಿಸಿದ್ದರು.[೧೪] ಗಾರ್ಡ್ನರ್, ಅವರ ಕಥೆಯನ್ನು ಬಹುವ್ಯಾಪಕವಾದ ಸಾಮಾಜಿಕ ವಿಷಯವಾಗಿಸುವುದರ ಸಲುವಾಗಿ ಅದನ್ನು ಸಮಾಜದೊಂದಿಗೆ ಹಂಚಿಕೊಳ್ಳುವುದು ಅನಿವಾರ್ಯವಾಗಿದೆ, ಎಂದು ಸ್ವತಃ ಭಾವಿಸುತ್ತಾರೆ. "ನಾನು ಕುಟುಂಬದಲ್ಲಿ ಕುಡಿತದ , ಮನೆಯಲ್ಲಿ ಹಿಂಸೆ, ಮಕ್ಕಳ ಮೇಲಿನ ದೌರ್ಜನ್ಯ, ಅನಕ್ಷರತೆ ಮತ್ತು ಆ ಎಲ್ಲಾ ಸಮಸ್ಯೆಗಳ ಬಗ್ಗೆ ಮಾತನಾಡಿದಾಗ—ಅವುಗಳು ಸಾರ್ವತ್ರಿಕ ಸಮಸ್ಯೆಗಳಾಗಿವೆ; ಇವುಗಳನ್ನು ಕೇವಲ ZIP ಸಂಕೇತ ಗಳನ್ನು ಮಾತ್ರ ಸ್ವೀಕರಿಸುವುದಿಲ್ಲ," ಎಂದು ಹೇಳಿದ್ದಾರೆ.[೧]
ಗಾರ್ಡ್ನರ್ 2006 ರ ಡಿಸೆಂಬರ್ 15 ರಂದು ನಡೆದ ಚಲನಚಿತ್ರದ ಮೊದಲ ಪ್ರದರ್ಶನದಲ್ಲಿ ಗೈರುಹಾಜರಾಗಿದ್ದರು. ಬದಲಿಗೆ ಅವರು, ವಿಸ್ಕಾನ್ಸಿನ್ ನ ಕೆನೊಶಾದಲ್ಲಿ ನಡೆದ JHT ಹೋಲ್ಡಿಂಗ್ಸ್, Inc., ಗಾಗಿ ಏರ್ಪಡಿಸಲಾದ ಕ್ರಿಸ್ ಮಸ್ ಜೌತಣಕೂಟದಲ್ಲಿ ಪ್ರೇರಕ ಭಾಷಣಕಾರ ಅತಿಥಿಯಾಗಿದ್ದರು.[೧೫]
ಇತರ ಪಾತ್ರಾಭಿನಯಗಳು
ಬದಲಾಯಿಸಿಗಾರ್ಡ್ನರ್ ರವರನ್ನು ಕೆನಡಿಯನ್ ಸಾಕ್ಷ್ಯಚಿತ್ರ ಕಮ್ ಆನ್ ಡೌನ್: ಸರ್ಚಿಂಗ್ ಫಾರ್ ದಿ ಅಮೇರಿಕನ್ ಡ್ರೀಮ್ (2004) ನಲ್ಲಿ ಚಿತ್ರಿಸಲಾಗಿದೆ,[೧೬]. ಈ ಚಿತ್ರದಲ್ಲಿ ಅವರು ಚಿಕಾಗೋದಲ್ಲಿರುವ ಅವರ ಕಛೇರಿಯಲ್ಲಿ ಅಮೇರಿಕನ್ ಡ್ರೀಮ್ ನ ಕುರಿತು ಮಾತನಾಡಿದ್ದಾರೆ. ಸಾಕ್ಷ್ಯಾಚಿತ್ರವು ಬಾಬ್ ಬಾರ್ಕರ್ ಮತ್ತು ಹಂಟರ್ S. ಥಾಂಪ್ಸನ್ ರನ್ನು ಒಳಗೊಂಡಿದೆ.
ಗಾರ್ಡ್ನರ್ 2008 ರ ಹಾಸ್ಯ ಪ್ರಧಾನ ಚಲನಚಿತ್ರ ದಿ ಪ್ರಮೋಷನ್ ನಲ್ಲೂ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಅವರು ಸಮುದಾಯದ ನಾಯಕನ ಪಾತ್ರದಲ್ಲಿ ಅಭಿನಯಿಸಿದ್ದಾರೆ.[೧೭]
ಇವನ್ನೂ ಗಮನಿಸಿ
ಬದಲಾಯಿಸಿ- ರಾಗ್ಸ್ ಟು ರಿಚ್ಚಸ್
ಟಿಪ್ಪಣಿಗಳು
ಬದಲಾಯಿಸಿ- ↑ ೧.೦ ೧.೧ ೧.೨ ೧.೩ ೧.೪ Gandossy, Taylor (January 16, 1222). "From sleeping on the streets to Wall Street". CNN. Archived from the original on 2007-01-01. Retrieved 2010-07-14.
- ↑ ೨.೦೦ ೨.೦೧ ೨.೦೨ ೨.೦೩ ೨.೦೪ ೨.೦೫ ೨.೦೬ ೨.೦೭ ೨.೦೮ ೨.೦೯ Gardner, Chris (2006). The Pursuit of Happyness. Amistad. ISBN 978-0-06-074487-8.
- ↑ ೩.೦ ೩.೧ ೩.೨ ೩.೩ ೩.೪ ೩.೫ Oprah Winfrey (2006-12-14). The Oprah Winfrey Show (TV Show). Chicago, Il.
- ↑ ೪.೦೦ ೪.೦೧ ೪.೦೨ ೪.೦೩ ೪.೦೪ ೪.೦೫ ೪.೦೬ ೪.೦೭ ೪.೦೮ ೪.೦೯ ೪.೧೦ "Christopher Gardner: The Official Site". Archived from the original on 2012-03-14. Retrieved 2010-07-14.
- ↑ "The Pursuit of Happyness". Sony. December 2006. Archived from the original on 2010-07-01. Retrieved 2010-07-14.
- ↑ ೬.೦ ೬.೧ Barber, Andrew (2006-12/2007-1). "Christopher Gardner". aTrader. Archived from the original on 2013-08-09. Retrieved 2007-10-20.
{{cite news}}
: Check date values in:|date=
(help) - ↑ ೭.೦ ೭.೧ ೭.೨ ೭.೩ Yang, Jia Lynn (2006-09-15). "'Happiness' for sale: He's gone from homeless single dad to successful stockbroker". CNN Money. Retrieved 2010-07-14.
- ↑ ಕ್ರಿಸ್ ಗಾರ್ಡ್ನರ್ ಹ್ಯಾಸ್ ಪರ್ಸೂಡ್ ಹ್ಯಾಪಿನೆಸ್, ಫ್ರಮ್ ದಿ ಗಿಲ್ಡ್ ಸೂಪ್ ಕಿಚಬ್ ಟು ದಿ ಬಿಗ್ ಸ್ಕ್ರೀನ್
- ↑ Konkol, Mark J. (2006-12-15). "'Jesus loves me. He only likes you'". Chicago Sun-Times. Archived from the original on 2008-03-01. Retrieved 2010-07-14.
- ↑ Costantinou, Marianne (2005-10-10). "Chris Gardner has pursued happiness, from the Glide soup kitchen to the big screen". San Francisco Chronicle. Retrieved 2010-07-14.
- ↑ "Christopher Gardner Biography". Keppler Speakers. Archived from the original on 2011-02-05. Retrieved 2011-03-18.
- ↑ Zwecker, Bill (2003-07-17). "There's a Way—and Maybe a Will—for Gardner Story". Chicago Sun-Times. p. Pg. 36.
{{cite news}}
:|page=
has extra text (help) - ↑ "Christopher Gardner unimpressed with Will Smith". Newswire. HT Media Ltd. 2006-12-14. pp. 102 words.
{{cite news}}
: Unknown parameter|coauthors=
ignored (|author=
suggested) (help) - ↑ "News briefs from around Tennessee". AP Newswire. 2006-12-15. pp. 788 words.
{{cite news}}
: Unknown parameter|coauthors=
ignored (|author=
suggested) (help) - ↑ AP staff (December 24, 2006). "Man Who Inspired B.O. Hit Skips Opening". Associated Press. Archived from the original on 2009-01-21. Retrieved 2010-07-14.
- ↑ ಮ್ಯಾನಿಫೆಸ್ಟೇಷನ್ ಟೆಲಿವಿಷನ್ ಇಂಕ್
- ↑ "ಕ್ರಿಸ್ ಗಾರ್ಡ್ನರ್ ಮೀಡಿಯ- ವಿಡಿಯೋಸ್". Archived from the original on 2009-04-04. Retrieved 2011-03-18.
ಬಾಹ್ಯ ಕೊಂಡಿಗಳು
ಬದಲಾಯಿಸಿ- ಕ್ರಿಸ್ ಗಾರ್ಡ್ನರ್ ಅಫೀಷಿಯಲ್ ವೆಬ್ ಸೈಟ್Archived 2012-03-02 ವೇಬ್ಯಾಕ್ ಮೆಷಿನ್ ನಲ್ಲಿ.
- ಬಯೋಗ್ರಫಿಕಲ್ ಆರ್ಟಿಕಲ್ ಅಬೌಟ್ ಕ್ರಿಸ್ ಗಾರ್ಡ್ನರ್ Archived 2013-08-09 ವೇಬ್ಯಾಕ್ ಮೆಷಿನ್ ನಲ್ಲಿ.
- ಕ್ರಿಸ್ ಗಾರ್ಡ್ನರ್ ಇಂಟರ್ವ್ಯೂ
- ಗಾರ್ಡ್ನರ್ ರಿಚ್ ಅಫೀಷಿಯಲ್ ವೆಬ್ ಸೈಟ್ Archived 2007-04-05 ವೇಬ್ಯಾಕ್ ಮೆಷಿನ್ ನಲ್ಲಿ.
- ಇಂಟರ್ವ್ಯೂ ವಿತ್ ಕ್ರಿಸ್ ಆನ್ ದಿ ಬಿಸ್ನೆಸ್ ಮೇಕರ್ಸ್ ರೇಡಿಯೋ ಶೋ Archived 2011-01-13 ವೇಬ್ಯಾಕ್ ಮೆಷಿನ್ ನಲ್ಲಿ.
- ಆಫೀಷಿಯಲ್ ಪಬ್ಲೀಷರ್ ವೆಬ್ ಸೈಟ್ Archived 2012-10-19 ವೇಬ್ಯಾಕ್ ಮೆಷಿನ್ ನಲ್ಲಿ.
- ದಿ ಪರ್ಸ್ಯೂಟ್ ಆಫ್ ಹ್ಯಾಪಿನೆಸ್ ಮೋಷನ್ ಪಿಕ್ಚರ್ ಅಫೀಷಿಯಲ್ ವೆಬ್ ಸೈಟ್ Archived 2012-06-15 ವೇಬ್ಯಾಕ್ ಮೆಷಿನ್ ನಲ್ಲಿ.