ಕ್ರಿಸ್ಟಿಯಾನೋ ರೊನಾಲ್ಡೊ

(ಕ್ರಿಸ್ಟಿಯಾನೊ ರೊನಾಲ್ಡೊ ಇಂದ ಪುನರ್ನಿರ್ದೇಶಿತ)

ಕ್ರಿಸ್ಟಿಯಾನೋ ರೊನಾಲ್ಡೊ ಡಾಸ್ಸ್ಯಾಂಟೋಸ್ ಅವೇರೊ [](ಜನನ ೦೫ ಫೆಬ್ರವರಿ ೧೯೮೫) ಒಬ್ಬ ಫ್ರಸಿದ್ದ ಪೋರ್ಚುಗೀಸ್ ಫುಟ್ಬಾಲ್[] ಆಟಗಾರ. ಸ್ಪ್ಯಾನಿಷ್ ಲೀಗಿನ ರಿಯಲ್ ಮ್ಯಾಡ್ರಿಡ್[] ಮತ್ತು ಪೋರ್ಚುಗಲ್[] ಲಿನ ರಾಷ್ಟ್ರೀಯತಂಡಕ್ಕೆ ಆಟವಾಡುತ್ತಾನೆ. ಅವರು ಫಾರ್ವಡ್ ಮತ್ತು ಪೋರ್ಚುಗಲಿನ ನಾಯಕನನ್ನಾಗಿ ಕಾರ್ಯನಿರ್ವಹಿಸುತ್ತದೆ.೨೦೦೮ ರಲ್ಲಿ, ತನ್ನ ಮೊದಲ ಬ್ಯಾಲನ್ ಡಿ'ಓರ್ ಮತ್ತು ವರ್ಷದ ಅತ್ಯತ್ತಮ ಫಿಫಾ ವಿಶ್ವ ಆಟಗಾರ ಪ್ರಶಸ್ತಿ ದೊರಕಿದ .ನಂತರ ೨೦೧೩ ಮತ್ತು ೨೦೧೪ ರಲ್ಲಿ ಫಿಫಾ ಬ್ಯಾಲನ್ ಡಿ'ಓರ್ ಸಾಧಿಸಿದೆ.೨೦೧೫ ರಲ್ಲಿ ರೊನಾಲ್ಡೊ ಕ್ಲಬ್ ಮತ್ತು ದೇಶಕ್ಕೆ ತನ್ನ 500 ನೇ ಗೋಲನ್ನು ಒಡೆದ.

ಕ್ರಿಸ್ಟಿಯಾನೋ ರೊನಾಲ್ಡೊ
ಕ್ರಿಸ್ಟಿಯಾನೋ ರೊನಾಲ್ಡೊ
Born
ಕ್ರಿಸ್ಟಿಯಾನೋ ರೊನಾಲ್ಡೊ ಡಾಸ್ಸ್ಯಾಂಟೋಸ್ ಅವೇರೊ

೦೫ ಫೆಬ್ರವರಿ ೧೯೮೫
Nationalityಪೋರ್ಚುಗೀಸ್
Occupationಅಂತರಾಷ್ಟ್ರಿಯ ಫುಟ್ಬಾಲ್ ಆಟಗಾರ
Known forಫುಟ್ಬಾಲ್ ಆಟಗಾರ

ಸಾಮಾನ್ಯವಾಗಿ ಅತ್ಯುತ್ತಮ ಆಟಗಾರ ಎಂದು ಗುರುತಿಸಪಟ್ಟಿರುವ ರೊನಾಲ್ಡೊ ೨೦೧೫ ರಲ್ಲಿ ಪೋರ್ಚುಗೀಸಿನ ೧೦೦ ನೇ ವಾರ್ಷಿಕೋತ್ಸವವನ್ನು ಉತ್ಸವಾಚರಣೆಯ ಸಮಯದಲ್ಲಿ , ಪೋರ್ಚುಗೀಸ್ ಫುಟ್ಬಾಲ್ ಫೆಡರೇಷನವರು ಸಾರ್ವಕಾಲಿಕ ಅತ್ಯುತ್ತಮ ಪೋರ್ಚುಗೀಸ್ ಆಟಗಾರನೆಂದು ರೊನಾಲ್ದೊನನ್ನು ಹೆಸರಿಸಿದರು . ಅವರು ನಾಲ್ಕು ಯುರೋಪಿಯನ್ ಗೋಲ್ಡನ್ ಷೂಟ್ ಪ್ರಶಸ್ತಿ ಪಡೆದಿರುವ ಏಕೈಕ ಆಟಗಾರ . ಜೂನ್ ೨೦೧೬ ರಲ್ಲಿ , ಇಎಸ್ಪಿಎನ್ ಅವರನ್ನು ವಿಶ್ವದ ಅತ್ಯಂತ ಪ್ರಸಿದ್ಧ ಕ್ರೀಡಾಪಟು ಸ್ಥಾನ ನೀಡಿತು. ಕ್ರೀಡೆಯಲ್ಲಿ ಅತ್ಯಂತ ಮಾರುಕಟ್ಟೆ ಕ್ರೀಡಾವಾದ ಫುಟ್ಬಾಲಿನಲ್ಲಿ , ೨೦೧೬ ರಲ್ಲಿ ಫೋರ್ಬ್ಸ್ ಮಾಗಸೀನ್ ರೊನಾಲ್ಡೊನನ್ನು ವಿಶ್ವದ ಅತ್ಯುತ್ತಮ ಹಣ ಕ್ರೀಡಾಪಟು ಎಂದು ಪ್ರಚರಿಸಿತು.

೧೮ ವಯಸ್ಸಿನ ರೊನಾಲ್ಡೊ ,೨೦೦೩ ರಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್[] ಗೆ ಸೇರುವ ಮೊದಲು, ಸ್ಪೋರ್ಟಿಂಗ್ ಸಿ.ಪಿ. ಎಂಬುವ ಕ್ಲಬ್ಬಿನಲ್ಲಿ ಆಡಲು ಆರಂಭಿಸಿದರು. ಸ್ಪೇನ್ನಲ್ಲಿ, ಅವರು ಒಂದು ಲಾಲೀಗಾ ಪ್ರಶಸ್ತಿಯನ್ನು ,ಎರಡು ಕೊಪಾಸ್ಡೆಲ್ರೇ ,ಎರಡು ಚಾಂಪಿಯನ್ಸ್ಲೀಗ್ಪ್ರಶಸ್ತಿಗಳು, ಮತ್ತು ಕ್ಲಬ್ಬಿಗೆ ವಿಶ್ವ ಕಪ್ಪನ್ನು ಗೆದ್ದ .ರೊನಾಲ್ಡೊ ೨೦೧೩-೧೪ ಕಾಲದಲ್ಲಿ ೧೭ ಗೋಲುಗಳನ್ನು ಗಳಿಸಿ ಯು.ಇ.ಫ಼್.ಎ ಚಾಂಪಿಯನ್ಸ್ಲೀಗಿನ್ನಲ್ಲಿ ಹೆಚ್ಚು ಗೋಲುಗಳನ್ನು ಹೊಡೆದ ಮೊದಲನೆಯ ವ್ಯಕ್ತಿ ಎಂಬ ಹೆಸರಾಗಿದ. ೨೧೧೪ ರಲ್ಲಿ ರೊನಾಲ್ಡೊ ತನ್ನ ೧೭೮ ನೇ ಲಾ ಲಿಗಾ ಪಂದ್ಯದಲ್ಲಿ ೨೦೦ ಗೋಲುಗಳನ್ನು ವೇಗವಾಗಿ ಗಳಿಸಿದ ಮೊದಲನೆಯ ಆಟಗಾರನೆಂದು ಹೆಸರುಗೊಂಡ. ೨೦೧೫ ರಲ್ಲಿ ರೊನಾಲ್ಡೊ , ಯು.ಇ.ಫ಼್.ಎ ಚಾಂಪಿಯನ್ಸ್ ಲೀಗ್ನಲ್ಲಿ ಸಾರ್ವಕಾಲಿಕ ಅಗ್ರ ಗೋಲು ಹೊಡೆದ ಆಟಗಾರನಾದನು.ಅವರು ರಿಯಲ್ ಮ್ಯಾಡ್ರಿಡಿನ ಪ್ರಮುಕ ಗೋಲ್ ಸ್ಚೋರರ್ ಕೊಡ ಆಗಿದ್ದರು.ತನ್ನ ಗ್ರಹಿಸಿದ ವೃತ್ತಿ ಪ್ರತಿಸ್ಪರ್ಧಿ ಲಿಯೋನೆಲ್ ಮೆಸ್ಸಿ ಹಿಂದೆ ಲಾ ಲಿಗಾ ಇತಿಹಾಸದಲ್ಲೇ ಎರಡನೇ ಅತ್ಯಧಿಕ ಗೋಲ್ ಸ್ಚೋರರ್ ಆಗಿದ್ದಾನೆ.

೨೦೦೩ ರ ಆಗಸ್ಟ್ನಲ್ಲಿ ೧೮ ನೇ ವಯಸ್ಸಿನ [[ರೊನಾಲ್ಡೊ ಪೋರ್ಚುಗಲಿನಲ್ಲಿ ತನ್ನ ಅಂತಾರಾಷ್ಟ್ರೀಯ ಚೊಚ್ಚಲ ಮಾಡಿದ .ಲೂಯಿಸ್ ಫಿಗೊ ಜೊತೆಗೆ, ಅವರು ಸಾರ್ವಕಾಲಿಕ ಪೋರ್ಚುಗಲ್ ಅತ್ಯಂತ ಮುಚ್ಚಿದ ಆಟಗಾರ. ಅದರ ನಂತರ 100 ಪ್ರದರ್ಶನಗಳನ್ನು ಮಾಡಿದೆ ಏಳು ಪ್ರಮುಖ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದಾರೆ : ನಾಲ್ಕು ಯು.ಇ.ಫ಼್.ಎ ಯುರೋಪ್ಯನ್ ಚಾಂಪಿಯನ್ಷಿಪ್ (೨೦೦೪ , ೨೦೦೮, ೨೦೧೨ ಮತ್ತು ೨೦೧೬ ) ಹಾಗೂ ಮೂರು ಫಿಫಾ ವಿಶ್ವಕಪ್ (೨೦೦೬, ೨೦೧೦ ಮತ್ತು ೨೦೧೪) . ಅವರು ಯುರೋ ೨೦೦೪ ನಲ್ಲಿ ತಮ್ಮ ಪ್ರಥಮ ಅಂತಾರಾಷ್ಟ್ರೀಯ ಗೋಲ್ ಗಳಿಸಿ ಪೋರ್ಚುಗಲನ್ನು ಫೈನಲ್ ಸ್ಥಾನಕ್ಕೆ ಬರಲು ಸಹಾಯ ಮಾಡಿದನು. ಅವರು ಜುಲೈ ೨೦೦೮ ರಲ್ಲಿ ಪೋರ್ಚುಗಲಿನ ನಾಯಕನ ಸ್ಥಾನವನ್ನು ಸ್ವೀಕರಿಸಿದ. ೨೦೧೨ ನಲ್ಲಿ ಯುರೋ ಸ್ಪರ್ಧೆಯಲ್ಲಿ ನಾಯನಾಗಿ ಪೋರ್ಚುಗಲನ್ನು ಸೆಮಿ ಫೈನಲಿಗೆ ಬರವುದಾಗಿ ಮಾದಿದರು. ಜಂಟಿ ಟಾಪ್ ಸ್ಕೋರರ್ ಸ್ಥಾನವನ್ನೊ ಗೆಲ್ಲಿದರು. ನವೆಂಬರ್ ೨೦೧೪ ರಲ್ಲಿ ರೊನಾಲ್ಡೊ ೨೩ ಗೋಲುಗಳನ್ನು ಗಳಸಿ ಜೊತೆಗೆ ಯು.ಇ.ಫ಼್.ಎ ಯ ಯೂರೋಪಿಯನ್ ಚಾಂಪಿಯನ್ಷಿಪಿನ ಸಾರ್ವಕಾಲಿಕ ಅಗ್ರ ಆಟಗಾರನಾದ.

ಆರಂಭಿಕ ಜೀವನ

ಬದಲಾಯಿಸಿ

ರೊನಾಲ್ಡೊ ಸ್ಯಾಂಟೋ ಆಂಟೊನಿಯೋ ,ಮಡೈರಾದಲ್ಲಿ ಜನಿಸಿದರು.ಅವರು ಮಾರಿಯಾ ಡೊಲೊರೆಸ್ ಡಾಸ್ ಸ್ಯಾಂಟೋಸ್ ಅವೇರೊ ಮತ್ತು ಜೋಸ್ ಡಿನಿಸ್ ಅವೇರೊರವರಿಗೆ ಜನಿಸಿದ ಕಿರಿಯ ಮಗ. ತಾಯಿ ಒಬ್ಬಳು ಬಾಣಸಿಗ ಹಾಗು ತಂದೆ ಒಬ್ಬ ಪುರಸಭೆಯ ಮಾಲಿ. ಅವರ ಅಣ್ಣನ ಹೆಸರು ಯುಗೊ, ತಂಗಿಯರ ಇಬ್ಬರ ಹೆಸರುಗಳು ಎಲ್ಮ ಮತ್ತು ಲಿಲ್ಯಾನ ಕಾಶ್ಯ. ಕುಟುಂಬ ವಿಶ್ವಾಸಯೋಗ್ಯ ಕ್ಯಾಥಲಿಕ್ ಆಗಿದ್ದಳು.ಬಡ ಕುಟುಂಬಕ್ಕರಾದ ರೊನಾಲ್ಡೊ ನಂತರ ತನ್ನ ಸಹೋದರ ಮತ್ತು ಸಹೋದರಿಯರುನೊಂದಿಗೆ ಕೊಠಡಿ ಹಂಚಿ ಕೊಂಡು ಬಡತನದಲ್ಲಿ ಬೆಳೆದ್ದಿದಾರೆ ಎಂದು ಒಮ್ಮೆ ಹೇಳಿದರು. ಮಗುವಾಗಿದ್ದಾಗ, ರೊನಾಲ್ಡೊ ಹವ್ಯಾಸಿ ತಂಡದ ಆಂಡೋರಿನ ಕ್ಲಬ್ಬಿಗೆ ಆಡಿದನು. ಅಲ್ಲಿ ಅವರ ತಂದೆ ಕಿಟ್ ಮಾನ್ ಆಗಿ ಕೆಲಸ ಮಾಡುತ್ತಿದರು. ೧೯೯೭ ರಲ್ಲಿ, ೧೨ ನೇ ವಯಸ್ಸಿನಲ್ಲಿ ,ಒಂದು ಮೂರು ದಿನದ ಪ್ರಯೋಗಕ್ಕೆ ಸ್ಪೋರ್ಟಿಂಗ್ ಸಿ.ಪಿ. ಕ್ಲಬ್ ಅವರನ್ನು £ ೧,೫೦೦ ಶುಲ್ಕಕೆ ಸೇರಿಸಿದರು. ಆ ನಂತರ ಕ್ಲಬಿನ ಇತರ ಯುವ ಆಟಗಾರರ ಜೊತೆ ಸೇರಲು ಅಲ್ಕೊಷೆತಟಿಗೆ ತೆರಳಿದರು. ೧೪ನೇ ವಯಸ್ಸಿನಲ್ಲಿ ರೊನಾಲ್ಡೊ ಅವರು ಅರೆ ವೃತ್ತಿಪರವಾಗಿ ಆಡಲು ಸಾಮರ್ಥ್ಯವನ್ನು ಹೊಂದಿತ್ತು ಎಂದು ನಂಬಲಾಗಿದೆ, ಮತ್ತು ಫುಟ್ಬಾಲ್ ಸಂಪೂರ್ಣವಾಗಿ ಗಮನ ಸಲುವಾಗಿ ತನ್ನ ಶಿಕ್ಷಣ ನಿಲ್ಲಿಸಲು ತನ್ನ ತಾಯಿ ಒಪ್ಪಿಕೊಂಡರು. ಅವರು ಶಾಲೆಯ ಪ್ರಸಿದ್ಧ ಮಕ್ಕಳಲ್ಲಿ ಒಬ್ಬರಾಗಿದ್ದರು. ತನ್ನ ಶಿಕ್ಷಕರು ಒಮ್ಮೆ ಅವನನ್ನು ಅವಮಾನಿಸಿದ್ದಾಗ ಒಂದು ಕುರ್ಚಿಯನ್ನು ಅವರ ಮೇಲೆ ಎಸೆದ. ಅದರ ನಂತರ ಶಾಲೆಯಿಂದ ಹೊರಹಾಕಲಾಯಿತು. ಒಂದು ವರ್ಷದ ನಂತರ ಅವರಿಗೆ ರೇಸಿಂಗ್ಹೃದಯ ಸಮಸ್ಯೆ ಉಂಟಾಯಿತು , ಅವನಿಗೆ ಫುಟ್ಬಾಲ್ ಆಡುವುದು ಬಿಡಲು ಬಲವಂತವಾದ ಒಂದು ಸ್ಥಿತಿ ಗುರುತಿಸಲಾಯಿತು. ಅವರು ಗುಣಪಡಿಸಲು ಒಂದು ಲೇಸರ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ; ಸ್ವಲ್ಪ ದಿನಗಲ ಕಾಲ ಅವರು ಆಸ್ಪತ್ರೆಯಲ್ಲಿ ಕಳೆದರು. ಕೆಲವೇ ದಿನಗಳ ನಂತರ ತರಬೇತಿ ಮುಂದುವರಿಸಲಾಯಿತು.

ಕ್ಲಬ್ ವೃತ್ತಿಜೀವ

ಬದಲಾಯಿಸಿ

ಸ್ಪೋರ್ಟಿಂಗ್ ಸಿ.ಪಿ

ಬದಲಾಯಿಸಿ

೧೬ನೇ ವಯಸ್ಸಿನಲ್ಲಿ , ರೊನಾಲ್ಡೊವಿನ ಡ್ರಿಬ್ಲಿಂಗ್ ಕೌಶಲ್ಯದಿಒದ ಪ್ರಭಾವಿತರಾಗಿ ಅಂದಿನ ಮೊದಲ ತಂಡ ವ್ಯವಸ್ಥಾಪಕರಾದ ಲಾಸಲ್ ಬೊವನಿ ಅವರನ್ನು ಸ್ಪೋರ್ಟಿಂಗ್ ಯುವ ತಂಡದಿಂದ ಬಡ್ತಿ ನೀಡಿದರು.ರೊನಾಲ್ಡೊ ,ಆಗಸ್ಟ್ 2003 ರಲ್ಲಿ ಸ್ಪೋರ್ಟಿಂಗ್ ಕ್ಲಬ್ಬಿನ್ನಲ್ಲಿದ್ದು ಮ್ಯಾಂಚೆಸ್ಟರ್ ಯುನೈಟೆಡ್ ೩-೧ಕ್ಕೆ ಸೋಲಿಸಿದರು. ಅವಗ ರೊನಾಲ್ಡೊ ಮ್ಯಾಂಚೆಸ್ಟರ್ ಯುನೈಟೆಡ್ ನಿರ್ವಾಹಕ ಸರ್ ಅಲೆಕ್ಸ್ ಫರ್ಗುಸನಿನ ಗಮನಕ್ಕೆ ಬಂದಿತು. ಅವನ ಪ್ರದರ್ಶನ ಮ್ಯಾಂಚೆಸ್ಟರ್ ಯುನೈಟೆಡ್ ಆಟಗಾರರನ್ನು ಪ್ರಭಾವಿಸಿತು.ಸ್ವತಃ ಫರ್ಗುಸನ್ ತಾವು ಕಂಡಿರುವ ೧೮ ವರ್ಷದ " ಒಬ್ಬ ರೋಚಕ ಯುವ ಆಟಗಾರ " ಎಂದು ಪರಿಗಣಿಸಿದ್ದಾರೆ. ಒಂದು ದಶಕದ ನಂತರ ,ಏಪ್ರಿಲ್ 2013 ರಲ್ಲಿ, ಅವರ ಕ್ಲಬ್ನಿಂದ ನಿರ್ಗಮನಾದಾಗ ಸ್ಪೋರ್ಟಿಂಗ್ ರೊನಾಲ್ಡೊ ತಮ್ಮ ೧೦,೦೦೦ ನೇ ಸದಸ್ಯರಾಗಲು ಅವನನ್ನು ಆಯ್ಕೆ ಮಾಡಿ ಗೌರವಿಸಿದರು.

ಮ್ಯಾಂಚೆಸ್ಟರ್ ಯುನೈಟೆಡ್: ೨೦೦೩-೦೬ :ಅಭಿವೃದ್ಧಿ ಮತ್ತು ಪ್ರಗತಿ :

ರೊನಾಲ್ಡೊ ,೨೦೦೩-೦೪ ಋತುವಿನಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ಮೊದಲನೆಯ ಪೋರ್ಚುಗೀಸ್ ಆಟಗಾರರನ್ನಾಗಿದ್ದನು. ಆ ಸಮಯದಲ್ಲಿ £ ೧೨.೨೪ ಮಿಲಿಯನ್ ಅವರ ವರ್ಗಾವಣೆ ಶುಲ್ಕ , ಅವರನ್ನು ಇಂಗ್ಲೀಷ್ ಫುಟ್ಬಾಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರನಾಗಿಸಿತ್ತು. ಅಲ್ಲಿ ಅವರಿಗೆ ೦೭ ಸಂಖ್ಯೆಯ ಜರ್ಸಿ ದೊರಯಿತು. ಮ್ಯಾಂಚೆಸ್ಟರ್ ಯುನೈಟೆಡಿನಲ್ಲಿ ಬರಿ ಪ್ರಖ್ಯಾತ ವ್ಯಕ್ತಿಗಳು ಧರಿಸುವ ಸಂಖ್ಯೆಯಾಹಗಿತ್ತು . ಅದು ರಾವರಿಗೆ ಪ್ರೇರಣೆ ಹೆಚ್ಚುವರಿ ಮೂಲವಾಗಿತ್ತು.ಮುಂದಿನ ಮೂರು ವರ್ಷಗಳಲ್ಲಿ ವಿಶ್ವದ ಅತ್ಯುತ್ತಮ ಆಟಗಾರರಲ್ಲಿ ಒಬ್ಬನಾದ.ಇಂಗ್ಲೆಂಡ್ ತಾನ್ನಿದ ವೇಳೆಯಲ್ಲಿ ತನ್ನ ಬೆಳವಣಿಗೆಯಲ್ಲಿ ಒಂದು ಪ್ರಮುಖ ಅಂಶವಾಗಿ ಪರಿಣಮಿಸಿದು ಅವರ ವ್ಯವಸ್ಥಾಪಕನಾದ ಅಲೆಕ್ಸ್ ಫರ್ಗುಸನ್[]. ಒಮ್ಮೆ ರೊನಾಲ್ಡೊ ಅವರ ಬಗ್ಗೆ ಹೆಮ್ಮೆಯಿಂದ "ಅವರು ಕ್ರೀಡೆಯಲ್ಲಿ ನನ್ನ ತಂದೆಯಂತೆ" ಹಾಗು "ನನ್ನ ವೃತ್ತಿಜೀವನದಲ್ಲಿ ಪ್ರಮುಖ ಮತ್ತು ಪ್ರಭಾವಶಾಲಿಯಾದ ಒಬ್ಬರು ಅವರು " ಎಂದು ಹೇಳಿದ್ದಾರೆ"

ಸಾಧನೆಗಳು

ಬದಲಾಯಿಸಿ

೨೦೧೪ರಲ್ಲಿ ರೊನಾಲ್ಡೊ ಅವರ ೪೦೦ನೇ ಗೋಲನ್ನು ಹೊಡೆದರು[]. ಅವರು ೭ ಎಂದು ಹೊಂದಿರುವ ಟ್-ಶರ್ಟನ್ನು ಹಾಕುತ್ತಾರೆ. ೨೦೦೨-೨೦೦೩ ಸೀಸನ್ ನಂತರ ರೊನಾಲ್ಡೊ ಮ್ಯಾಂಚೆಸ್ಟರ್ ಯುನೈಟೆಡಿನ ಮೊದಲನೇ ಪೋರ್ಚುಗೀಸ್ ಆಟಗಾರನಾದನು. ಅವರ ಹಿಂದಿನ ಆಟಗಾರರಾದ ಡೇವಿಡ್ ಬೆಕಾಂ, ಜಾನಿ ಬೆರಿ, ಜಾರ್ಜ್ ಬೆಸ್ಟ್ ಅವರೆಲ್ಲರು ಹಾಕಿಕೊಂಡ ಶರ್ಟ್ ನಂಬರ್ ೭. ಆ ಶರ್ಟನ್ನು ಹಾಕಿಕೊಂಡಾಗ ಅವರುಗಳಂತೆಯೇ ಆಟವಾಡ ಬೇಕು ಎಂಬ ಮಾನಸೀಕ ಒತ್ತಡವಿತ್ತು. ಆ ಒತ್ತಡ ಅವರಿಗೆ ಬೇಕಾಗಿರಲಿಲ್ಲ. ಆದುದರಿಂದ ಅವರು ೨೮ ನಂಬರ್ ಟಿ-ಶರ್ಟನ್ನು ಹಾಕಿಕೊಳ್ಳಲ್ಲು ಬಯಸಿದರು. ಆದರೆ ಅವರನ ಗುರುವಿನ ಮಾತನ್ನು ಕೇಳಿ ೭ ಟಿ- ಶರ್ಟನ್ನು ಹಾಕಿಕೊಳ್ಳಲ್ಲು ಪ್ರಾರಂಭಿಸಿದರು. ರೊನಾಲ್ಡೊ ಅವರ ಮೊದಲ ಆಟದಲ್ಲಿ ೬೦ ನಿಮಿಷಗಳ ನಂತರ ಸಬ್ಸ್ಟಿಟ್ಯುಟಾಗಿ ಆಡಿ ೪-೦ ಅಂಕದಲ್ಲಿ ಬಾಲ್ಟನ್ ವಾಂಡರರ್ಸ್ ಮೇಲೆ ಗೆದ್ದರು. ಅವರು ೧ ನವಂಬರ್ ೨೦೦೩ರಲ್ಲಿ ಅವರ ಮೊದಲನೇ ಗೋಲನ್ನು ಮ್ಯಾಂಚೆಸ್ಟರ್ ಯುನೈಟೆಡ್ ಗಾಗಿ ಪೊರ್ಟ್ಸ್ ಮೌತ್ ಮೇಲೆ ಹೊಡೆದರು. ಇವರು ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ೧೦೦೦ನೇ ಗೋಲನ್ನು ೨೯ ಅಕ್ಟೋಬರ್ ೨೦೦೫ರಲ್ಲಿ ಮಿಡಿಲ್ಸ್ ಬ್ರೊ ತಂಡದ ಎದುರು ಆಡುವಾಗ ಹೊಡೆದರು[]. ೨೦೦೬-೨೦೦೭ ಸೀಸನ್ ಅವರ ವೃತ್ತಿ ಜೀವನದಲ್ಲಿ ಮುಖ್ಯಸ್ಥಾನ ಪಡೆಯಿತು. ಏಕೆಂದರೆ ಅವರು ೨೦ ಗೋಲ್ ತಡೆಯನ್ನು ಮುರಿದು ತನ್ನ ಪ್ರಥಮ ಲೀಗ್ ಟೈಟಲನ್ನು ಮ್ಯಾಂಚೆಸ್ಟರ್ ಯುನೈಟೆಡ್ ತಂಡಕ್ಕಾಗಿ ಪಡೆದರು. ಡೆನ್ನಿಸ್ ಬೆರ್ಗ್ಕಾಂಪ್ ಮತ್ತು ರಾಬಿ ಪೌಲರ್ ನಂತರ ೨೦೦೬ ನವಂಬರ್ ಮತ್ತು ಡಿಸಂಬರ್ ನಲ್ಲಿ ಬರ್ಕ್ಲೆಸ್ ತಿಂಗಳ ಆಟಗಾರ ಎಂಬ ಗೌರವವನ್ನು ಪಡೆದ ಮೂರನೆಯವರು ರೊನಾಲ್ಡೊ. ೫ ಮೇ ೨೦೦೭ರಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ೫೦ನೇ ಗೋಲನ್ನು ಮ್ಯಾಂಚೆಸ್ಟರ್ ಸಿಟಿ ತಂಡದ ವಿರುದ್ಧ ಆಡುವಾಗ ಹೊಡೆದು ಮ್ಯಾಂಚೆಸ್ಟರ್ ಯುನೈಟೆಡಿಗೆ ೪ ವರ್ಷಗಳಲ್ಲಿ ಮೊದಲನೇ ಪ್ರಿಮಿಯರ್ ಲೀಗ್ ಟೈಟಲ್ ಗೆಲ್ಲಲು ಸಹಾಯಮಾಡಿದರು.

ಅವರಿಗೆ ಫ್.ಐ.ಫ್ ಪ್ರೊ ಸ್ಪೆಷಲ್ ಯಂಗ್ ಪ್ಲೆಯರ್ ಆಫ್ ದ ಇಯರ್ ಪ್ರಶಸ್ತಿ ೨೦೦೭ರಲ್ಲಿ ಕೊಡಲಾಯಿತು. ೨೦೦೭ರಲ್ಲಿ ರೊನಾಲ್ಡೊ ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಜೊತೆ ೫ ವರ್ಷದ ಒಪ್ಪಂದ ಮಾಡಿ ವಾರಕ್ಕೆ ೧೨೦೦೦೦ಯುರೋಸ್ ಎಂಬ ಸಂಬಳವನ್ನು ಪಡೆದು ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಇತಿಹಾಸದಲ್ಲಿ ಹೆಚ್ಚು ಸಂಪಾದಿಸುವ ಆಟಗಾರರಾದರು. ೨೦೦೭ಸೀಸನ್ನಲ್ಲಿ ಇವರಿಗೆ ಪ್ಲೆಯರ್ಸ್ ಪ್ಲೆಯರ್ ಆಫ್ ದ ಇಯರ್ ಮತ್ತು ಪಿ.ಎಫ್.ಎ ಯಂಗ್ ಪ್ಲೆಯರ್ ಆಫ್ ದ ಇಯರ್ ಒಂದೇ ವರ್ಷದಲ್ಲಿ ದೊರಕಿತು. ರೊನಾಲ್ಡೊ ವಿಶ್ವದಲ್ಲಿ ಈ ಸಾಧನೆಯನ್ನು ಮಾಡುವ ಎರಡನೇಯವರು. ರೊನಾಲ್ಡೊವಿಗೆ ಫುಟ್ಬಾಲ್ ರೈಟರ್ಸ್ ಅಸ್ಸೊಸಿಯೆಷನ್ ಫುಟ್ಬಾಲರ್ ಆಫ್ ದ ಇಯರ್ ಪ್ರಶಸ್ತಿಯೂ ದೊರಕಿತು.

ರೊನಾಲ್ಡೊ ತಮ್ಮ ಮೊದಲನೆಯ ಹಾಟ್ರಿಕ್ ಮ್ಯಾಂಚೆಸ್ಟರ್ ಯುನೈಟೆಡ್ ತಂಡಕ್ಕಾಗಿ ನ್ಯು ಕಾಸಲ್ ಯುನೈಟೆಡ್ ವಿರುದ್ಧ ಆಡುವಾಗ ಪಡೆದರು. ೨೦೦೭-೨೦೦೮ ಚಾಂಪಿಯನ್ಸ್ ಲೀಗ್ ಕಡೆಯ ಆಟದಲ್ಲಿ ಇವರಿಗೆ ಯು.ಇ.ಎಫ.ಎ ಅಭಿಮಾನಿಗಳ ಮ್ಯಾನ್ ಆಫ್ ದ ಮ್ಯಾಟ್ಚ್ ಎಂಬ ಗೌರವ ಕೊಟ್ಟರು. ಈ ಸೀಸನ್ನಲ್ಲಿ ಅವರ ವ್ರುತ್ತಿ ಜೀವನದ ಅತ್ಯಂತ ಗೋಲುಗಳನ್ನು (೪೨) ಹೊಡೆದಿದ್ದರು. ೨೦೦೯ರಲ್ಲಿ ಫಿಫ ವರ್ಲ್ಡ್ ಪ್ಲೆಯರ್ ಆಫ್ ದ ಇಯರ್ ಎಂಬ ಗೌರವವನ್ನು ಪಡೆಯುವ ಮೊದಲನೇ ಪ್ರಿಮಿಯರ್ ಲೀಗ್ ಆಟಗಾರ ಮತ್ತು ಎರಡನೇಯ ಪೋರ್ಚುಗಲ್ ಆಟಗಾರ ಎಂಬ ಗೌರವ ಪಡೆದರು. ಜೂನ್ ೨೦೦೯ರಲ್ಲಿ ಇವರು ಮ್ಯಾಂಚೆಸ್ಟರ್ ಯುನೈಟೆಡ್ ತಂಡದಿಂದ ರಿಯಲ್ ಮ್ಯಾಡ್ರಿಡ್ ತಂಡಕ್ಕೆ ವರ್ಗಾವಣೆ ಮಾಡಿಕೊಂಡರು. ಅವರು ಆಲೆಕ್ಸ್ ಫರ್ಗ್ಯುಸನ್ ಗೆ ತಮ್ಮ ಕೃತಜ್ಞತೆಯನ್ನು ಹೇಳಿಕೊಂಡು ಮ್ಯಾಂಚೆಸ್ಟರ್ ಯುನೈಟೆಡ್ ತಂಡವನ್ನು ಬಿಟ್ಟು ಹೋದರು[].

ಅವರು ೨೦೧೪ರ ವರೆಗು ರಿಯಲ್ ಮ್ಯಾಡ್ರಿಡ್ ತಂಡಕ್ಕಾಗಿ ಆಡುತ್ತಿದ್ದಾರೆ. ಇವರ ಈ ಎಲ್ಲಾ ಸಾಧನೆಗಳಿಗಾಗಿ ಇವರನ್ನು ಇವರ ಕಾಲದ ಸ್ರೇಷ್ಟ ಕಾಲ್ಚೆಂಡು ಆಟಗಾರರೆಂಬ ಹೆಸರು ಪಡೆದಿದ್ದಾರೆ.

ಉಲ್ಲೇಖಗಳು

ಬದಲಾಯಿಸಿ